ಹೊಸ ಪವರ್‌ಫುಲ್ ಕವಾಸಕಿ Z900 ಬೈಕ್ ವಿಶೇಷತೆಗಳು
ಜಪಾನ್ ಮೂಲದ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಕವಾಸಕಿ (Kawasaki) ತನ್ನ ನವೀಕರಿಸಿದ ಕವಾಸಕಿ Z900 ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತು. ಈ ಹೊಸ ಕವಾಸಕಿ Z900 (Kawasaki Z900) ಬೈಕಿನ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 9.29 ಲಕ್ಷವಾಗಿದೆ.
ಈ ಹೊಸ ಕವಾಸಕಿ Z900 ಬೈಕಿನ ಬೆಲೆಯನ್ನು ಇದತ ಹಿಂದಿನ ಮಾದರಿಗೆ ಹೋಲಿಸಿದರೆ ರೂ.9,000 ವರೆಗೆ ಹೆಚ್ಚಾಗಿದೆ. ಹೊಸ ಕವಾಸಕಿ Z900 ಬೈಕ್ ಮೆಟಾಲಿಕ್ ಸ್ಪಾರ್ಕ್ ಬ್ಲಾಕ್ ಮತ್ತು ಮೆಟಾಲಿಕ್ ಮ್ಯಾಟ್ ಗ್ರ್ಯಾಫೀನ್ ಸ್ಟೀಲ್ ಗ್ರೇ ಎಂಬ ಎರಡು ಬಣ್ಣಗಳಲ್ಲಿ ಲಭ್ಯವಿದೆ. ಈ ಹೊಸ ಕವಾಸಕಿ Z900 ಬೈಕ್ ಆಕರ್ಷಕ ವಿನ್ಯಾಸ, ಅತ್ಯಾಧುನಿಕ ಫೀಚರ್ಸ್ ಮತ್ತು ಭರ್ಜರಿ ಪರ್ಫಾಮೆನ್ಸ್ ನೀಡುವ ಬೈಕ್ ಆಗಿದೆ.

ವಿನ್ಯಾಸ: ಹೊಸ ಕವಾಸಕಿ Z900 ಬೈಕ್ ವಿನ್ಯಾಸದ ಬಗ್ಗೆ ಹೇಳುವುದಾದರೆ, ಇದರ ಸಿಂಗಲ್-ಪಾಡ್ ಎಲ್‌ಇಡಿ ಹೆಡ್‌ಲೈಟ್, ಸ್ನಾಯು ಇಂಧನ ಟ್ಯಾಂಕ್, ಸ್ಪ್ಲಿಟ್ ಸೀಟ್‌ಗಳು ಮತ್ತು ಒಟ್ಟಾರೆಯಾಗಿ ಅಗ್ರೇಸಿವ್ ಬಾಡಿವರ್ಕ್ ಅನ್ನು ಒಳಗೊಂಡಿದೆ. ಈ ಕವಾಸಕಿ Z900 ಬೈಕ್ ಸಾಕಷ್ಟು ಆಕರ್ಷಕವಾಗಿ ಕಾಣುತ್ತದೆ ಮತ್ತು ಸಾಕಷ್ಟು ರಸ್ತೆ ಉಪಸ್ಥಿತಿಯೊಂದಿಗೆ ಬಂದಿದೆ. ಈ ಬೈಕ್ 17-ಇಂಚಿನ ಅಲಾಯ್ ವ್ಹೀಲ್ ಗಳೊಂದಿಗೆ ಹೊಸ ಡನ್‌ಲಪ್ ಸ್ಪೋರ್ಟ್‌ಮ್ಯಾಕ್ಸ್ ರೋಡ್‌ಸ್ಪೋರ್ಟ್ 2 ಟೈರ್‌ಗಳನ್ನು ಪಡೆಯುತ್ತದೆ.
ಎಂಜಿನ್: ಈ ಹೊಸ ಬೈಕಿನಲ್ಲಿ 948cc, ಇನ್‌ಲೈನ್ ನಾಲ್ಕು ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 9,500rpm ನಲ್ಲಿ 123.6bhp ಮತ್ತು 7,700rpm ನಲ್ಲಿ 98.6Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಫೀಡ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಸಸ್ಪೆಕ್ಷನ್ ಸೆಟಪ್: ಹೊಸ ಕವಾಸಕಿ Z900 ಬೈಕಿನ ಸಸ್ಪೆಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ USD ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಟ್ರೆಲ್ಲಿಸ್ ಫ್ರೇಮ್‌ನಲ್ಲಿ ಇರಿಸಲಾಗಿದೆ. ಈ ಬೈಕ್ 17-ಇಂಚಿನ ಅಲಾಯ್ ವ್ಹೀಲ್ ಗಳೊಂದಿಗೆ ಹೊಸ ಡನ್‌ಲಪ್ ಸ್ಪೋರ್ಟ್‌ಮ್ಯಾಕ್ಸ್ ರೋಡ್‌ಸ್ಪೋರ್ಟ್ 2 ಟೈರ್‌ಗಳನ್ನು ಪಡೆಯುತ್ತದೆ.
ಬ್ರೇಕಿಂಗ್ ಸಿಸ್ಟಂ: ಸುರಕ್ಷತೆ ವಿಭಾಗದಲ್ಲಿ ಬ್ರೇಕಿಂಗ್ ಸಿಸ್ಟಂ ಪ್ರಮುಖ ಪಾತ್ರವಹಿಸುತ್ತದೆ. ಈ ಹೊಸ ಕವಾಸಕಿ Z900 ಬೈಕ್ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಈ ಬೈಕಿನ ಮುಂಭಾಗದಲ್ಲಿ ಡ್ಯುಯಲ್ 300 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 250 ಎಂಎಂ ಡಿಸ್ಕ್ ಬ್ರೇಕ್ ಅನ್ನು ನೀಡಲಾಗುತ್ತದೆ. ಇದರೊಂದಿಗೆ ಹೆಚ್ಚಿನ ಸುರಕ್ಷತೆಗೆ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ನೀಡಲಾಗಿದೆ.

ಫೀಚರ್ಸ್: ಇನ್ನು ಫೀಚರ್ಸ್ ಬಗ್ಗೆ ಹೇಳುವುದಾದರೆ, ಇದರಲ್ಲಿ ಮೂರು ಸ್ಟ್ಯಾಂಡರ್ಡ್ ರೈಡಿಂಗ್ ಮೋಡ್‌ಗಳು (ಸ್ಪೋರ್ಟ್. ರೋಡ್ ಮತ್ತು ರೈನ್) ಹೆಚ್ಚುವರಿ, ಸಂಪೂರ್ಣ ಕಸ್ಟಮೈಸ್ ರೈಡರ್ ಮೋಡ್ ಜೊತೆಗೆ ಲಭ್ಯವಿದೆ. ಇದರೊಂದಿಗೆ ಟ್ರ್ಯಾಕ್ಷನ್ ಕಂಟ್ರೋಲ್. ABS, ಫುಲ್ LED ಲೈಟಿಂಗ್ ಮತ್ತು ಬ್ಲೂಟೂತ್-ಕನೆಕ್ಟಿವಿಟಿಯೊಂದಿಗೆ ಕಲರ್ TFT ಡಿಸ್ ಪ್ಲೇಯನ್ನು ಒಳಗೊಂಡಿರುತ್ತದೆ.
ಈ ಹೊಸ ಕವಾಸಕಿ Z900 ಭಾರತೀಯ ಮಾರುಕಟ್ಟೆಯಲ್ಲಿ ಡುಕಾಟಿ ಮಾನ್ಸ್ಟರ್ , BMW F900R ಮತ್ತು ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಬೈಕ್ ಗಳಿಗೆ ಪೈಪೋಟಿ ನೀಡುತ್ತದೆ. ಬೈಕಿನ 120/70 ಮುಂಭಾಗದಲ್ಲಿ ಮತ್ತು 180/55 ಹಿಂಭಾಗದ ಡನ್‌ಲಪ್ ಟೈರ್ ಗಳನ್ನು ಹೊಂದಿವೆ. ಇನ್ನು ಕವಾಸಕಿ ತನ್ನ ಕವಾಸಕಿ Z650RS ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಸಿತು. ಕವಾಸಕಿ Z650RS ಮಾದರಿಯು ನಿಯೋ-ರೆಟ್ರೋ ಮಿಡ್ ಬೈಕ್ ಆಗಿದೆ.
1970ರ ದಶಕದ ಮೂಲ ಕವಾಸಕಿ Z650-B1 ನಿಂದ ಸಾಕಷ್ಟು ವಿನ್ಯಾಸ ಅಂಶಗಳನ್ನು ಪಡೆದುಕೊಂಡಿದೆ. ಈ ಹೊಸ ಕವಾಸಕಿ Z650RS ಮಾದರಿಯು ಕವಾಸಕಿ Z650 ಅನ್ನು ಆಧರಿಸಿದೆ. ನಿಯೋ-ರೆಟ್ರೋ ಬೈಕ್ ಆಗಿದ್ದರೂ, ಇದು ಸಾಕಷ್ಟು ಆಧುನಿಕ ಅಂಶಗಳೊಂದಿಗೆ ಬರುತ್ತದೆ, ಇದು ಒಟ್ಟಾರೆ ದೃಶ್ಯ ಆಕರ್ಷಣೆಯನ್ನು ಸುಧಾರಿಸಿದೆ. ಕವಾಸಕಿ Z650Rs ಬೈಕ್ ಟ್ರೆಲ್ಲಿಸ್ ಫ್ರೇಮ್ ಚಾಸಿಸ್ ಮತ್ತು 650cc ಲಿಕ್ವಿಡ್-ಕೂಲ್ಡ್ ಪ್ಯಾರಲಲ್-ಟ್ವಿನ್ ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ.


Click it and Unblock the Notifications








