2024ರ ಹೊಸ ಹೀರೋ ಡೆಸ್ಟಿನಿ 125 ಸ್ಕೂಟರ್ ಬಿಡುಗಡೆ ಮುನ್ನವೇ ಚಿತ್ರಗಳು ಸೋರಿಕೆ!

ದೇಶದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೀರೋ, ತನ್ನ ಡೆಸ್ಟಿನಿ 125 ಸ್ಕೂಟರ್ ಅನ್ನು 2018 ರಲ್ಲಿ ಬಿಡುಗಡೆ ಮಾಡಿತ್ತು. ಇದು ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದಿದ್ದು, ಇಂದಿಗೂ ಉತ್ತಮ ಮಾರಾಟ ಕಾಣುತ್ತಿದೆ. ಇದನ್ನು ಅಪ್‌ಡೇಟ್‌ಗಳೊಂದಿಗೆ ಮುಂಬರುವ ದಿನಗಳಲ್ಲಿ ಬಿಡುಗಡೆ ಮಾಡಲು ಹೀರೋ ಸಜ್ಜಾಗಿದೆ. ಆದರೆ ಅಧಿಕೃತ ಬಿಡುಗಡೆ ಮುನ್ನವೇ ಹೀರೋ ಡೆಸ್ಟಿನಿ 125 ನ ನವೀಕರಿಸಿದ ಆವೃತ್ತಿಯ ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ಸೋರಿಕೆಯಾಗಿದ್ದು, ಮುಂಬರುವ ಹೊಸ ಮಾದರಿಯ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳು ಬಹಿರಂಗವಾಗಿವೆ.

ಹೀರೋ ಕ್ಸೂಮ್ 110 ಕಾಂಬ್ಯಾಟ್ ಎಡಿಷನ್ ಬಿಡುಗಡೆಯ ನಂತರ, ಹೀರೋ ಮೋಟೊಕಾರ್ಪ್ ಶೀಘ್ರದಲ್ಲೇ ಹೊಚ್ಚ ಹೊಸ ಡೆಸ್ಟಿನಿ 125 ಸ್ಕೂಟರ್ ಅನ್ನು ಪರಿಚಯಿಸಲು ತಯಾರಿ ನಡೆಸುತ್ತಿದೆ. ಇದು ಕಾಸ್ಮೆಟಿಕ್ ಪರಿಷ್ಕರಣೆಗಳನ್ನು ಪಡೆಯಲಿದೆ, ಜೊತೆಗೆ ವೈಶಿಷ್ಟ್ಯಗಳ ಪಟ್ಟಿಯನ್ನು ಸಹ ನವೀಕರಿಸಲಾಗುವುದು, ಆದರೆ ಯಾವುದೇ ಪ್ರಮುಖ ಯಾಂತ್ರಿಕ ನವೀಕರಣಗಳನ್ನು ಪಡೆಯುವ ಸಾಧ್ಯತೆಗಳಿಲ್ಲ ಎಂದು ಈಗಾಗಲೇ ತಿಳಿದಿದೆ.

2024-new-hero-destiny-125-scooter-images-leaked-before-launch

ಇದೀಗ ಸೋರಿಕೆಯಾದ ಹೊಸ ಚಿತ್ರಗಳ ಪ್ರಕಾರ, ಅಪ್‌ಡೇಟೆಡ್ ಇಂಡಿಕೇಟರ್‌ಗಳು ಈಗ ಎಲ್ಇಡಿ ಘಟಕಗಳಾಗಿವೆ. ಹೆಚ್ಚುವರಿಯಾಗಿ, ಬಾಡಿ ಪ್ಯಾನೆಲ್‌ಗಳನ್ನು ಮರುನಿರ್ಮಾಣ ಮಾಡಲಾಗಿದೆ. ಹಳೆಯ ಸ್ಕೂಟರ್‌ಗೆ ಹೋಲಿಸಿದರೆ ಹೆಚ್ಚು ಸೊಗಸಾಗಿ ಕಾಣುತ್ತದೆ. ಡ್ಯುಯಲ್-ಸ್ಪೋಕ್ ಬ್ಲಾಕ್ ಅಲಾಯ್ ಚಕ್ರಗಳು ನವೀಕರಿಸಿದ ಡೆಸ್ಟಿನಿ 125 ನ ಸ್ಪೋರ್ಟಿನೆಸ್ ಅನ್ನು ಹೆಚ್ಚಿಸಿದೆ.

ಹೊಸ ಸೈಡ್ ಮಿರರ್‌ಗಳು, ಟೈಲ್ ಲ್ಯಾಂಪ್‌ಗಳು, ಸೈಡ್ ಬಾಡಿವರ್ಕ್ ಇತ್ಯಾದಿಗಳಲ್ಲಿ ಕಂಡುಬರುವ ಅನೇಕ ತಾಮ್ರದ ಉಚ್ಚಾರಣೆಗಳು (Copper accents) ಹೆಚ್ಚು ವಿಶಿಷ್ಟವಾದ ನಿಲುವನ್ನು ನೀಡುತ್ತವೆ. ಸೋರಿಕೆಯಾದ ಚಿತ್ರದಲ್ಲಿ ನೀವು ಪಿಲಿಯನ್ ಬ್ಯಾಕ್ ರೆಸ್ಟ್ ಅನ್ನು ಸಹ ನೋಡಬಹುದು. ಇದು ಹಿಂಬದಿ ಪ್ರಯಾಣಿಕರಿಗೆ ಉತ್ತಮ ಪ್ರಯಾಣ ಅನುಭವ ನೀಡುತ್ತದೆ.

2024-new-hero-destiny-125-scooter-images-leaked-before-launch

ಪ್ರಸ್ತುತ, ಇದು ಚೆಸ್ಟ್ನಟ್ ಬ್ರೋನ್ಜ್, ನೊಬೆಲ್ ರೆಡ್, ಪರ್ಲ್ ಸಿಲ್ವರ್ ವೈಟ್, ಪ್ಯಾಂಥರ್ ಬ್ಲ್ಯಾಕ್, ಮ್ಯಾಟ್ ಗ್ರೇ ಸಿಲ್ವರ್, ಕ್ಯಾಂಡಿ ಬ್ಲೇಜಿಂಗ್ ರೆಡ್, ಲಿಮಿಟೆಡ್ ಎಡಿಷನ್ ಮತ್ತು ಮ್ಯಾಟ್ ಬ್ಲ್ಯಾಕ್ ಎಂಬ ಎಂಟು ಬಣ್ಣಗಳಲ್ಲಿ ಲಭ್ಯವಿದೆ. ಸೋರಿಕೆಯಾದ ಬ್ಲ್ಯಾಕ್ ಪರ್ಲ್ ಸೇರಿದಂತೆ ಹೀರೋ ಹೊಸ ಬಣ್ಣಗಳನ್ನು ಸಹ ನಾವು ನಿರೀಕ್ಷಿಸಬಹುದು.

ಸೋರಿಕೆಯಾದ ಚಿತ್ರಗಳು ಎಲ್ಇಡಿ ಹೆಡ್ ಲ್ಯಾಂಪ್, ಹೀಟ್ ಶೀಲ್ಡ್ಡ್ ಎಕ್ಸಾಸ್ಟ್ ಮತ್ತು ಹೊಸ ಎಲ್ಇಡಿ ಡಿಆರ್ಎಲ್ ಘಟಕವನ್ನು ತೋರಿಸುತ್ತಿದೆ. ಸಸ್ಪೆಂಷನ್ ಹಾರ್ಡ್ ವೇರ್ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಹೈಡ್ರಾಲಿಕ್ ಶಾಕ್ ಅಬ್ಸಾರ್ಬರ್ ಮತ್ತು ಹಿಂಭಾಗದಲ್ಲಿ ಸ್ಪ್ರಿಂಗ್-ಲೋಡ್ ಹೈಡ್ರಾಲಿಕ್ ಡ್ಯಾಂಪರ್ ಆಗಿ ಮುಂದುವರಿಯುವ ಸಾಧ್ಯತೆ ಇದೆ.

ಪರ್ಫಾಮೆನ್ಸ್ ಬಗ್ಗೆ ಹೇಳುವುದಾದರೆ, ಪರಿಚಿತ 124.6 ಸಿಸಿ ಸಿಂಗಲ್ ಸಿಲಿಂಡರ್ ಏರ್-ಕೂಲ್ಡ್ ಫ್ಯೂಯಲ್ ಇಂಜೆಕ್ಟೆಡ್ ಎಂಜಿನ್ ಅನ್ನು ಹೊಂದಿರಲಿದೆ. ಈ ಎಂಜಿನ್ 7,000 ಆರ್‌ಪಿಎಂನಲ್ಲಿ 9 ಬಿಹೆಚ್‌ಪಿ ಪವರ್ ಮತ್ತು 5,500 ಆರ್‌ಪಿಎಂನಲ್ಲಿ 10.4 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದನ್ನು ಸಿವಿಟಿ ಟ್ರಾನ್ಸ್ ಮಿಷನ್‌ಗೆ ಜೋಡಿಸಲಾಗುವುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, June 19, 2024, 16:22 [IST]
English summary
2024 new hero destiny 125 scooter images leaked before launch
Read more on hero motocorp india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+