ಗುಡ್ಡಗಾಡಿನಲ್ಲೂ ನುಗ್ಗುವ ಕಲ್ಲುಬಂಡೆಯಂತಹ ಹೊಸ ಬೈಕ್ ಅನಾವರಣ

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಡುಕಾಟಿಯು ಜಾಗತಿಕ ಮಾರುಕಟ್ಟೆಯಲ್ಲಿ ಡೆಸರ್ಟ್‌ಎಕ್ಸ್‌ನ ಹೊಸ ಆವೃತ್ತಿಯನ್ನು ಅನಾವರಣಗೊಳಿಸಿದೆ. ಇದನ್ನು ಡುಕಾಟಿ ಡೆಸರ್ಟ್‌ಎಕ್ಸ್ ಡಿಸ್ಕವರಿ ( Ducati DesertX Discovery) ಎಂದು ಕರೆಯಲಾಗುತ್ತದೆ. ಈ ಹೊಸ ಮಾದರಿಯು ಸ್ಟ್ಯಾಂಡರ್ಡ್ ಡೆಸರ್ಟ್‌ಎಕ್ಸ್ ಮತ್ತು ಡೆಸರ್ಟ್‌ಎಕ್ಸ್ ರ್ಯಾಲಿ ನಂತರ ಜಾಗತಿಕ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಡೆಸರ್ಟ್‌ಎಕ್ಸ್‌ನ ಮೂರನೇ ಆವೃತ್ತಿಯಾಗಿದೆ. ಈ ಹೊಸ ಡುಕಾಟಿ ಡೆಸರ್ಟ್‌ಎಕ್ಸ್ ಡಿಸ್ಕವರಿ ಕಾಸ್ಮೆಟಿಕ್ ಬದಲಾವಣೆಗಳು ಮತ್ತು ವೈಶಿಷ್ಟ್ಯಗಳ ಸೇರ್ಪಡೆಗಳೊಂದಿಗೆ ಬರುತ್ತದೆ. ಈ ಆಕರ್ಷಕ ಬೈಕಿನ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಈ ಡುಕಾಟಿ ಡೆಸರ್ಟ್‌ಎಕ್ಸ್ ಡಿಸ್ಕವರಿ ಬ್ಲ್ಯಾಕ್ ಮತ್ತು ಡುಕಾಟಿ ರೆಡ್‌ನೊಂದಿಗೆ ಹೊಸ ಲೈವರಿಯನ್ನು ಹೊಸ ಡಿಕಾಲ್‌ಗಳೊಂದಿಗೆ ಪಡೆಯುತ್ತದೆ. ಈ ಬೈಕ್ ಟೂರಿಂಗ್ ವಿಂಡ್‌ಸ್ಕ್ರೀನ್‌ನಂತಹ ಕೆಲವು ಇತರ ಬದಲಾವಣೆಗಳು ಏರ್ ಬ್ಲಾಸ್ಟ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಸವಾರನಿಗೆ ಆಯಾಸವನ್ನು ಕಡಿಮೆ ಮಾಡುತ್ತದೆ. ಇದು ಐದು ವರ್ಷಗಳವರೆಗೆ ಮಾನ್ಯವಾಗಿರುವ ಪರವಾನಗಿಯೊಂದಿಗೆ ಟರ್ನ್-ಬೈ-ಟರ್ನ್ ನ್ಯಾವಿಗೇಷನ್‌ನೊಂದಿಗೆ ಬರುತ್ತದೆ.

Ducati DesertX Discovery

ಡುಕಾಟಿ ಡೆಸರ್ಟ್‌ಎಕ್ಸ್ ಡಿಸ್ಕವರಿ ಬೈಕ್ ಬಿದ್ದರೆ ಫ್ಯೂಯಲ್ ಟ್ಯಾಂಕ್ ಮತ್ತು ನೀರಿನ ಪಂಪ್ ಅನ್ನು ರಕ್ಷಿಸಲು ಬುಲ್ ಬಾರ್ ಕೂಡ ಇದೆ. ಆಫ್-ರೋಡಿಂಗ್ ಸಮಯದಲ್ಲಿ ಕಲ್ಲಿನಿಂದ ರಕ್ಷಿಸುವ ರೇಡಿಯೇಟರ್ ಗಾರ್ಡ್ ಸಹ ಇದೆ. ಎಂಜಿನ್ ಅನ್ನು ರಕ್ಷಿಸಲು ಡುಕಾಟಿಯು ಡಿಸ್ಕವರಿ ರೂಪಾಂತರವನ್ನು ಬ್ಯಾಷ್ ಪ್ಲೇಟ್‌ನೊಂದಿಗೆ ಸಜ್ಜುಗೊಳಿಸಿದೆ.

ನಂತರ ಮೋಟಾರ್ಸೈಕಲ್ ಅನ್ನು ಸುರಕ್ಷಿತವಾಗಿ ನಿಲ್ಲಿಸಲು ಮತ್ತು ಪಂಕ್ಚರ್ ಅನ್ನು ಸರಿಪಡಿಸಲು ಸೂಕ್ತವಾಗಿ ಬರಬಹುದಾದ ಸೆಂಟರ್ ಸ್ಟ್ಯಾಂಡ್ ಇದೆ. ಈ ಬೈಕ್ ಅನ್ನು ಟೂರಿಂಗ್ ಗಾಗಿ ಮಾಡಲಾಗಿರುವುದರಿಂದ, ಇದು ಅಲ್ಯೂಮಿನಿಯಂ ಕೇಸ್‌ಗಳು ಮತ್ತು ಸಬ್‌ಫ್ರೇಮ್‌ನೊಂದಿಗೆ ಬರುತ್ತದೆ. ಚಳಿಗಾಲದಲ್ಲಿ ಬೈಕ್ ರೈಡ್ ಮಾಡುವಾಗ ಸೂಕ್ತವಾಗಿ ಬರುವಂತಹ ಹಿಟೆಡ್ ಹ್ಯಾಂಡಲ್ ಗಳನ್ನು ಇವೆ.

Ducati DesertX Discovery

ಹೊಸ ಡುಕಾಟಿ ಡೆಸರ್ಟ್‌ಎಕ್ಸ್ ಡಿಸ್ಕವರಿ ಬೈಕಿನ ಎಂಜಿನ್ ಬಗ್ಗೆ ಹೇಳುವುದಾದರೆ, ಈ ಬೈಕಿನಲ್ಲಿ ಅದೇ 937 ಸಿಸಿ ಟೆಸ್ಟಾಸ್ಟ್ರೆಟ್ಟಾ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 9,250 ಆರ್‌ಪಿಎಂನಲ್ಲಿ 108 ಬಿಎಚ್‌ಪಿ ಪವರ್ ಮತ್ತು 6,500 ಆರ್‌ಪಿಎಂನಲ್ಲಿ 92 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಡುಕಾಟಿ ಕ್ವಿಕ್ ಶಿಫ್ಟ್‌ನೊಂದಿಗೆ ಸಂಯೋಜಿಸಲ್ಪಟ್ಟಿ

ಈ ಬೈಕಿನಲ್ಲಿ ಅಪ್-ಅಂಡ್-ಡೌನ್ ಕ್ವಿಕ್‌ಶಿಫ್ಟರ್ ಮತ್ತು ಸ್ಲಿಪ್ಪರ್ ಕ್ಲಚ್ ಆಗಿದೆ. ಇನ್ನು ಸರ್ವಿಸ್ ಮಧ್ಯಂತರಗಳನ್ನು 15,000 ಕಿಮೀ ಅಥವಾ 24 ತಿಂಗಳುಗಳಲ್ಲಿ ಯಾವುದು ಮೊದಲು ಹೊಂದಿಸಲಾಗಿದೆ. ಈ 2025ರ ಡುಕಾಟಿ ಡೆಸರ್ಟ್‌ಎಕ್ಸ್ ಡಿಸ್ಕವರಿಯು ಅಡ್ವೆಂಚರ್ ಬೈಕ್ ಮತ್ತು ಸುಸಜ್ಜಿತ ರಸ್ತೆಗಳೆರಡರಲ್ಲೂ ಉತ್ತಮವಾದ ಮೋಟಾರ್‌ಸೈಕಲ್ ಅನ್ನು ಹುಡುಕುವ ಒಂದು ಉತ್ತಮ ಆಯ್ಕೆಯಾಗಿದೆ.

Ducati DesertX Discovery

ಈ ಹೊಸ ಡುಕಾಟಿ ಡೆಸರ್ಟ್‌ಎಕ್ಸ್ ಡಿಸ್ಕವರಿ ಬೈಕ್ ಭಾರತೀಯ ಮಾರುಕಟ್ಟೆಗೆ ಅಧಿಕೃತ ಬಿಡುಗಡೆ ದಿನಾಂಕ ಮತ್ತು ಬೆಲೆಯನ್ನು ಇನ್ನೂ ಘೋಷಿಸಲಾಗಿಲ್ಲವಾದರೂ, ಡುಕಾಟಿ ಅಭಿಮಾನಿಗಳು ಡಿಸ್ಕವರಿ ರೂಪಾಂತರವು ಸ್ಟ್ಯಾಂಡರ್ಡ್ ಡೆಸರ್ಟ್‌ಎಕ್ಸ್ ಜೊತೆಗೆ ಆಗಮಿಸುತ್ತದೆ ಎಂದು ನಿರೀಕ್ಷಿಸಬಹುದು. ಅದರ ಹೆಚ್ಚುವರಿ ವೈಶಿಷ್ಟ್ಯಗಳೊಂದಿಗೆ ಹೆಚ್ಚು ಟೂರಿಂಗ್-ಆಧಾರಿತ ಆಯ್ಕೆಯನ್ನು ನೀಡುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, June 28, 2024, 17:16 [IST]
English summary
2025 ducati desertx discovery motorcycle details
Read more on ducati india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+