ಸೂಪರ್ ಬೈಕ್‌ಗಳ ಮೇಲೆ 30,000 ರೂ. ವರೆಗೆ ವಿಶೇಷ ಕೊಡುಗೆಗಳ ಘೋಷಣೆ

ಭಾರತದ ಪ್ರಮುಖ ಸೂಪರ್‌ ಬೈಕ್ ಬ್ರಾಂಡ್‌ಗಳಲ್ಲಿ ಒಂದಾಗಿರುವ ಆದೀಶ್ವರ್ ಆಟೋ ರೈಡ್ ಇಂಡಿಯಾ ಪ್ರೈ. Ltd. (AARI), ಭಾರತದಲ್ಲಿ ಬೆನೆಲ್ಲಿ ಮತ್ತು ಜೊಂಟೆಸ್ ಸೂಪರ್‌ಬೈಕ್‌ಗಳ ಖರೀದಿಯಲ್ಲಿ ವಿಶೇಷ ಸೇವಾ ಪ್ರಯೋಜನಗಳನ್ನು ಘೋಷಿಸಿದೆ. ಅಡ್ವೆಂಚರ್ ಬಯಸುವವರಿಗೆ, ಈ ಹಬ್ಬದ ಸೀಸನ್‌ನಲ್ಲಿ ರೂ. 30,000 ಮೌಲ್ಯದ 2 ವರ್ಷಗಳ ಕಾಂಪ್ಲಿಮೆಂಟರಿ ಸೇವೆಯೊಂದಿಗೆ ಬೆನೆಲ್ಲಿಯ ಐಕಾನಿಕ್ TRK ಮಾದರಿ ಶ್ರೇಣಿಯನ್ನು ನೀಡುತ್ತಿರುವುದಾಗಿ ಕಂಪನಿ ತಿಳಿಸಿದೆ. ಇದರ ಬೆಲೆಗಳು ರೂ. 5.85 ಲಕ್ಷದಿಂದ (ಎಕ್ಸ್‌ ಶೋರೂಂ) ರಿಂದ ಪ್ರಾರಂಭವಾಗುತ್ತವೆ.

ಹಾಗಯೇ ಹೊಸ ಡಿಸೈನ್ ಮತ್ತು ಉನ್ನತ ವೈಶಿಷ್ಟ್ಯಗಳನ್ನು ನೀಡುವ ಝೊಂಟೆಸ್‌ನ 350R, 350X, GK350, 350T, ಮತ್ತು 350T ADV ಸೇರಿದಂತೆ Zontes ನ 350cc ಮಾಡೆಲ್ ಶ್ರೇಣಿಯ ಖರೀದಿಯಲ್ಲಿ ಗ್ರಾಹಕರು ಈಗ ರೂ. 20,000 ಮೌಲ್ಯದ 2 ವರ್ಷಗಳ ಪೂರಕ ಸೇವೆಯನ್ನು ಪಡೆಯಬಹುದು. ಈ ಮಾಡಲ್‌ ಬೆಲೆಗಳು ರೂ. 2.79 ಲಕ್ಷ(ಎಕ್ಸ್‌ ಶೋರೂಂ) ದಿಂದ ಪ್ರಾರಂಭವಾಗುತ್ತವೆ.

adishwar-auto-ride-announces-special-offers-on-benelli-and-zontes-bikes

ನಿಮ್ಮ ಹತ್ತಿರದ ಅಧಿಕೃತ ಡೀಲರ್‌ಶಿಪ್‌ಗೆ ಭೇಟಿ ನೀಡುವ ಮೂಲಕ ಈ ಉತ್ತೇಜಕ ಕೊಡುಗೆಗಳಿಂದ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು. ದೇಶದ ಪ್ರಮುಖ ಆಟೋಮೊಬೈಲ್ ಡೀಲರ್‌ಗಳಲ್ಲಿ ಒಬ್ಬರಾದ ಮಹಾವೀರ್ ಗ್ರೂಪ್‌ (Mahavir Group)ನ ನಿರ್ದೇಶಕ ವಿಕಾಸ್ ಜಬಾಖ್ ಅವರು ಭಾರತದಲ್ಲಿ ಬೆನೆಲ್ಲಿಯ ಕಾರ್ಯಾಚರಣೆಯನ್ನು ಮುನ್ನಡೆಸುತ್ತಿದ್ದಾರೆ.

ಏನಿದು ಆದೀಶ್ವರ್ ಆಟೋ ರೈಡ್ ಇಂಡಿಯಾ?: ಇದು ತೆಲಂಗಾಣದ ಹೈದರಾಬಾದ್‌ನಲ್ಲಿರುವ ಕಂಪನಿಯಾಗಿದ್ದು, 2018 ರಿಂದ ಆಟೋಮೊಬೈಲ್ ಉದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದು ಪ್ರಮುಖವಾಗಿ ಭಾರತೀಯ ಸೂಪರ್‌ ಬೈಕ್ ಉದ್ಯಮದಲ್ಲಿ ಜನಪ್ರಿಯತೆ ಪಡೆದಿದೆ. ಕಂಪನಿಯು ರೆಟ್ರೊ ಮತ್ತು ಆಧುನಿಕ ವೈಶಿಷ್ಟ್ಯಗಳ ಮಿಶ್ರಣದೊಂದಿಗೆ ಪ್ರೀಮಿಯಂ ಮೋಟಾರ್‌ಸೈಕಲ್‌ಗಳನ್ನು ಒದಗಿಸುತ್ತದೆ.

adishwar-auto-ride-announces-special-offers-on-benelli-and-zontes-bikes

ಆದೀಶ್ವರ್ ಆಟೋ ರೈಡ್ ಇಂಡಿಯಾ (Adishwar Auto Ride India) ಮೂಲಕ ಮೋಟೋ ವಾಲ್ಟ್ ಬೈಕ್‌ಗಳನ್ನು ಸಹ ಮಾರಾಟ ಮಾಡಲಾಗುತ್ತಿದೆ. ಈ ಬ್ರ್ಯಾಂಡ್‌ಗಳು 60 ಕ್ಕೂ ಹೆಚ್ಚು ಡೀಲರ್‌ಶಿಪ್‌ಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, 20,000 ಕ್ಕೂ ಹೆಚ್ಚು ಗ್ರಾಹಕರನ್ನು ಹೊಂದಿರುವುದಾಗಿ ಕಂಪನಿ ಹೇಳಿಕೊಂಡಿದೆ.

ಬೆನೆಲ್ಲಿ: ಬೆನೆಲ್ಲಿ ಬಗ್ಗೆ ವಿಶೇಷ ಪರಿಚಯದ ಅಗತ್ಯವಿಲ್ಲ, ವಿಶ್ವ ದ್ವಿಚಕ್ರ ಆಟೋ ಉದ್ಯಮದಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿರುವ ಸೂಪರ್ ಬೈಕ್ ಕಂಪನಿಯಾಗಿದೆ. ಇದರ ಪರಂಪರೆಯು 100 ವರ್ಷಗಳಿಗಿಂತ ಹಳೆಯದಾಗಿದ್ದು, ಅದ್ಭುತ ಮಾದರಿಗಳು, ಸುಧಾರಿತ ತಂತ್ರಜ್ಞಾನ, ವಿಶ್ವ-ಪ್ರಸಿದ್ಧ ರೈಡರ್‌ಗಳೊಂದಿಗೆ ತನ್ನದೇ ಆದ ವಿಶೇಷತೆಯನ್ನು ಹೊಂದಿದೆ.

adishwar-auto-ride-announces-special-offers-on-benelli-and-zontes-bikes

ಮೋಟೋ ವಾಲ್ಟ್: ಮೋಟೋ ವಾಲ್ಟ್ ಎಂಬುದು ಆದಿಶ್ವರ್ ಆಟೋ ರೈಡ್ ಇಂಡಿಯಾದ ಇತ್ತೀಚಿನ ವೆಂಚರ್ ಆಗಿದೆ. ಇಟಾಲಿಯನ್ ಐಕಾನ್ ಮೋಟೋ ಮೊರಿನಿ, ಜೊಂಟೆಸ್ ಮತ್ತು ಕ್ಯೂಜೆ ಮೋಟಾರ್‌ನಂತಹ ಬ್ರ್ಯಾಂಡ್‌ಗಳನ್ನು ಒಳಗೊಂಡಿರುವ ಬಹು-ಬ್ರಾಂಡ್ ಸೂಪರ್‌ಬೈಕ್ ಫ್ರಾಂಚೈಸ್ ಆಗಿದೆ. ಅಂದರೆ ಒಂದೇ ಸೂರಿನಡಿ ಎಲ್ಲಾ ಮೋಟಾರಿಂಗ್ ಅಗತ್ಯಗಳಿಗಾಗಿ ಸ್ಥಾಪಿಸಲಾದ ಒಂದು ನಿಲುಗಡೆ ಅಂಗಡಿ ಎಂದು ಹೇಳಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, September 16, 2024, 12:51 [IST]
English summary
Adishwar auto ride announces special offers on benelli and zontes bikes
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+