ಡ್ಯುಯಲ್-ಚಾನೆಲ್ ABS ಹೊಂದಿರುವ ಕಡಿಮೆ ಬೆಲೆಯ ಸುರಕ್ಷಿತ ಬೈಕ್‌ಗಳು!
ದ್ವಿಚಕ್ರ ವಾಹನಗಳಲ್ಲಿ ABS ಎಂಬುದು ಅತಿದೊಡ್ಡ ಸುರಕ್ಷತಾ ವೈಶಿಷ್ಟ್ಯವಾಗಿದೆ. ಪ್ಯಾನಿಕ್ ಬ್ರೇಕಿಂಗ್ ಸಂದರ್ಭದಲ್ಲಿ ಚಕ್ರಗಳನ್ನು ಸಂಪೂರ್ಣವಾಗಿ ಲಾಕ್ ಮಾಡುವುದನ್ನು ತಡೆಯುತ್ತದೆ, ಇಲ್ಲದಿದ್ದರೆ ವಾಹನವು ನಿಯಂತ್ರಣ ಕಳೆದುಕೊಳ್ಳುತ್ತದೆ. ಭಾರತದಂತಹ ದೇಶದಲ್ಲಿ ಸಾಮಾನ್ಯ ಜನರಿಗೆ ದ್ವಿಚಕ್ರ ವಾಹನಗಳೇ ಮೂಲಾಧಾರವಾಗಿದ್ದು, ಬೈಕ್ - ಸ್ಕೂಟರ್‌ಗಳನ್ನು ನಂಬಿಕೊಂಡು ಜೀವನ ನಡೆಸುವ ಹಲವು ಕುಟುಂಬಗಳಿವೆ. ಹಾಗಾಗಿಯೇ ದೇಶದಲ್ಲಿ ನಿತ್ಯ ಸಾವಿರಾರು ಬೈಕ್, ಸ್ಕೂಟರ್‌ಗಳು ಮಾರಾಟವಾಗುತ್ತವೆ. ನೀವು ಕೂಡ ಅಗ್ಗದ ಸುರಕ್ಷಿತ ಮೋಟಾರ್‌ಸೈಕಲ್ ಖರೀದಿಸುವ ಯೋಜನೆಯಿದ್ದರೇ ಭಾರತದಲ್ಲಿ ಡ್ಯುಯಲ್-ಚಾನೆಲ್ ಎಬಿಎಸ್ ಹೊಂದಿರುವ ಟಾಪ್-5 ಮೋಟಾರ್ ಸೈಕಲ್‌ಗಳನ್ನು ಇಲ್ಲಿ ನೋಡೋಣ.
ಟಿವಿಎಸ್ ಅಪಾಚೆ RTR 200 4v: ಟಿವಿಎಸ್ ಅಪಾಚೆ RTR 200 4v ಬೈಕ್ ಡ್ಯುಯಲ್ ಚಾನೆಲ್ ಎಬಿಎಸ್ ವೇರಿಯೆಂಟ್ ಅನ್ನು ಹೊಂದಿದ್ದು, ಬೆಲೆಯು ರೂ.1.49 (ಎಕ್ಸ್ ಶೋರೂಂ) ಲಕ್ಷಗಳಾಗಿದೆ. ಈ ಬೈಕ್ 20.2 ಬಿಹೆಚ್‌ಪಿ ಪವರ್ ಮತ್ತು 16.8 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ 197.75 ಸಿಸಿ ಸಿಂಗಲ್ ಸಿಲಿಂಡರ್, 4 ವಾಲ್ವ್, ಆಯಿಲ್ ಕೂಲ್ಡ್ ಎಂಜಿನ್ ಹೊಂದಿದೆ.

ಬಜಾಜ್ ಪಲ್ಸರ್ N160: ಬಜಾಜ್ ಪಲ್ಸರ್ N160 ಕೂಡ ಡ್ಯುಯಲ್ ಚಾನೆಲ್ ಎಬಿಎಸ್ ಹೊಂದಿದೆ. ಇದು 164.82 ಸಿಸಿ ಏರ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ. ಇದರ ಬೆಲೆಯು ರೂ.1.32 (ಎಕ್ಸ್ ಶೋರೂಂ) ಲಕ್ಷಗಳಾಗಿದೆ. 15.7 ಬಿಹೆಚ್‌ಪಿ ಪವರ್ ಮತ್ತು 14.65 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.
ಬಜಾಜ್ ಪಲ್ಸರ್ N250/F250: ಪಲ್ಸರ್ N250 ಮತ್ತು F250 ಬೈಕ್‌ಗಳು 249 ಸಿಸಿ ಸಿಂಗಲ್ ಸಿಲಿಂಡರ್ ಆಯಿಲ್ ಕೂಲ್ಡ್ ಎಂಜಿನ್ ಹೊಂದಿದ್ದು, ಡ್ಯುಯಲ್ ಚಾನಲ್ ಎಬಿಎಸ್ ಜೊತೆಗೆ ಬರುತ್ತವೆ. 24.1 ಬಿಹೆಚ್‌ಪಿ ಪವರ್ ಮತ್ತು 21.5 ಎನ್ಎಂ ಟಾರ್ಕ್ ಉತ್ಪಾದಿಸುತ್ತವೆ. ಈ ಬೈಕುಗಳನ್ನು ರೂ.1.51 ಲಕ್ಷ (ಎಕ್ಸ್ ಶೋರೂಂ) ಬೆಲೆಯಲ್ಲಿ ನೀಡಲಾಗುತ್ತದೆ.

ಬಜಾಜ್ ಪಲ್ಸರ್ NS200: ಬಜಾಜ್ ಪಲ್ಸರ್ NS200 ಬೆಲೆಯು ರೂ.150 (ಎಕ್ಸ್ ಶೋರೂಂ) ಲಕ್ಷಗಳಾಗಿದೆ. ಪಲ್ಸರ್ NS200 ಬೈಕಿನಲ್ಲಿ 199 ಸಿಸಿ ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 6 ಸ್ಪೀಡ್‌ಗೇರ್ ಬಾಕ್ಸ್‌ನೊಂದಿಗೆ ಸ್ಲಿಪ್ ಮತ್ತು ಅಸಿಸ್ಟ್ ಕ್ಲಚ್ ಅನ್ನು ನೀಡಲಾಗಿದೆ. ಈ ಎಂಜಿನ್ 24.13 ಬಿಹೆಚ್‌ಪಿ ಪವರ್ ಮತ್ತು 18.74 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.
ಬಜಾಜ್ ಪಲ್ಸರ್ NS160: ಬಜಾಜ್ ಪಲ್ಸರ್ NS160 ಬೈಕ್ 160 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 17.03 ಬಿಹೆಚ್‌ಪಿ ಪವರ್ ಮತ್ತು 14.6 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಬೈಕ್ 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಬರುತ್ತದೆ. ಇದು ಡ್ಯುಯಲ್ ಚಾನೆಲ್ ಎಬಿಎಸ್ ಹೊಂದಿರುವ ಅತ್ಯಂತ ಕೈಗೆಟುಕುವ ಬೈಕ್, ಇದರ ಬೆಲೆಯು ರೂ.1.37 (ಎಕ್ಸ್ ಶೂರೂಂ) ಲಕ್ಷಗಳಾಗಿದೆ.

ಮೇಲೆ ತಿಳಿಸಲಾದ ಮೋಟಾರ್‌ಸೈಕಲ್‌ಗಳು ಭಾರತದಲ್ಲಿ ಅಗ್ಗದ ಬೆಲೆಗೆ ಲಭ್ಯವಿರುವ ಸುರಕ್ಷಿತ ಬೈಕ್‌ಗಳು. ಇವೆಲ್ಲವು ಡ್ಯುಯಲ್ ಚಾನಲ್ ಎಬಿಎಸ್‌ನೊಂದಿಗೆ ಸವಾರಿಯನ್ನು ಇನ್ನಷ್ಟು ಸುರಕ್ಷಿತಗೊಳಿಸುತ್ತವೆ. ಇಂದಿನ ರಸ್ತೆ ಪರಿಸ್ಥಿತಿಗಳಿಗೆ ಇಂತಹ ಬೈಕ್‌ಗಳ ಅವಶ್ಯಕತೆ ತುಂಬಾ ಇದೆ. ಮೇಲೆ ತಿಳಿಸಲಾದ ಮೋಟಾರ್‌ಸೈಕಲ್‌ಗಳಲ್ಲಿ ನಿಮ್ಮ ಆಯ್ಕೆ ಯಾವುದು ಎಂಬುದನ್ನು ಕಮೆಂಟ್‌ನಲ್ಲಿ ತಿಳಿಸಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications