ಫ್ಯಾಮಿಲಿಗೆ ಬೇಕಾದ ಎಲ್ಲವೂ ಇದರಲ್ಲಿದೆ: ಏಥರ್ ರಿಜ್ಟಾ ಎಲೆಕ್ಟ್ರಿಕ್ ಟಾಪ್ ಫೀಚರ್ಸ್
ನಿಮಗೆಲ್ಲಾ ತಿಳಿದಿರುಬಂತೆ ಭಾರತೀಯ ಪ್ರಖ್ಯಾತ ಎಲೆಕ್ಟ್ರಿಕ್ ದ್ವಿಚಕ್ರ ನಿರ್ಮಾಣ ಕಂಪನಿಯಾದ ಏಥರ್ ತನ್ನ ಹೊಸ ಸ್ಕೂಟರ್ ರಿಜ್ಟಾವನ್ನು ಮಾರುಕಟ್ಟೆಗೆ ತಂದಿದೆ. ಭಾರತೀಯ ಕುಟುಂಬಗಳನ್ನು ಗುರಿಯಾಗಿಸಿಕೊಂಡು ಕಂಪನಿ ಈ ಸ್ಕೂಟರ್ ಅನ್ನು ಮಾರುಕಟ್ಟೆಗೆ ಬಿಟ್ಟಿದ್ದು, ಇಂದಿನ ಈ ಲೇಖನದಲ್ಲಿ ಏಥರ್ ರಿಜ್ಟಾ ಸ್ಕೂಟರ್‌ನ ಟಾಪ್ ಪೀಚರ್‌ಗಳನ್ನು ನೋಡಲಿದ್ದೇವೆ.
ವಿನ್ಯಾಸ: ರಿಜ್ಟಾ (Ather Rizta) ಮಾರುಕಟ್ಟೆಗೆ ಬರುವ ವರೆಗೆ, ಏಥರ್ ಸ್ಕೂಟರ್‌ಗಳೆಂದರೆ ಗಾತ್ರದಲ್ಲಿ ಚಿಕ್ಕದು ಎಂಬ ರೀತಿಯಲ್ಲಿತ್ತು. ಆದರೆ ರಿಜ್ಟಾ ಸ್ಕೂಟರ್ ಮಾರುಕಟ್ಟೆಗೆ ಲಾಂಚ್ ಆಗುವ ಮೂಲಕ ಈ ಮಾತಿಗೆ ತೆರೆ ಬಿದ್ದಿದೆ. ಈ ಬಾರಿ ಏಥರ್ ತನ್ನ ರಿಜ್ಟಾ ಸ್ಕೂಟರ್ ಅನ್ನು ತನ್ನ 450 ಸರಣಿಯ ಸ್ಕೂಟರ್‌ಗಳಿಗಿಂತಲೂ ದೊಡ್ಡದಾಗಿ ನಿರ್ಮಿಸಿದ್ದು, ಹೆಚ್ಚು ಆರಾಮದಾಯಕ ಪ್ರಯಾಣಕ್ಕಾಗಿ ಸೆಗ್ಮೆಂಟ್‌ನಲ್ಲಿಯೇ ದೊಡ್ಡದಾದಾ ಸೀಟ್‌ಗಳನ್ನು ನೀಡಿದೆ.

ಸ್ಕೂಟರ್‌ನ ಮುಂಭಾಗದಲ್ಲಿ ಅಗಲವಾದ ಎಲ್‌ಇಡಿ ಹೆಡ್ ಲ್ಯಾಂಪ್ ಇರುವುದನ್ನು ಕಾಣಬಹುದಾಗಿದೆ. ಹೆಡ್‌ಲೈಟ್‌ನ ಕೊಂಚ ಮೇಲ್ಬಾಗದಲ್ಲಿ ಏಥರ್ ಎಂಬ ಬ್ರಾಂಡಿಂಗ್ ಅನ್ನು ಕಾಣಬಹುದಾಗಿದ್ದು ಇದು ವಿಭಿನ್ನ ಲುಕ್ ನೀಡುತ್ತದೆ. ಹೆಡ್ ಲ್ಯಾಂಪ್ ಜೊತೆಯಲ್ಲಿಯೇ ಇಂಟಿಗ್ರೇಟೆಡ್ ಡಿಆರ್‌ಎಲ್ ಮತ್ತು ಇಂಡಿಕೇಟರ್‌ಗಳನ್ನು ನೀಡಲಾಗಿದೆ. ಇವಿಷ್ಟು ಈ ಸ್ಕೂಟರ್‌ನ ಮುಂಭಾಗವನ್ನು ಅಂದಗಾಣಿಸುತ್ತದೆ.
ಫೀಚರ್‌ಗಳು: ರಿಜ್ಟಾ ಫ್ಯಾಮಿಲಿ ಸ್ಕೂಟರ್ ಆಗಿದ್ದರೂ, ಏಥರ್ ಈ ಸ್ಕೂಟರ್‌ನಲ್ಲಿ ಅತ್ಯಾಧುನಿಕ ಫೀಚರ್‌ಗಳನ್ನು ಅಳವಡಿಸಿದ್ದಾರೆ. ಹಲವು ಟೆಕ್‌ಗಳಿಂದ ಕೂಡಿರುವ ರಿಜ್ಟಾದ ಪ್ರಮುಖ ಫೀಚರ್ ಎಂದರೆ 7 ಇಂಚ್ ಅಳತೆಯಲ್ಲಿರುವ ಇದರ ಟಿಎಫ್‌ಟಿ ಪರದೆ. ಏಥರ್ ರಿಜ್ಟಾ ಎಸ್ ಆವೃತ್ತಿಯಲ್ಲಿ 450S ನಿಂದ ಎರವಲು ಪಡೆದ ಡೀಪ್ ವ್ಯೂವ್ ಎಲ್‌ಸಿಡಿ ಪರದೆಯನ್ನು ಬಳಸಲಾಗಿದೆ.

ಸುರಕ್ಷತೆ: ಈ ಸ್ಕೂಟರ್ ನಲ್ಲಿ ಸೌಕರ್ಯ, ಅನುಕೂಲತೆ ಮತ್ತು ಸುರಕ್ಷತೆಗೆ ಆದ್ಯತೆ ನೀಡಿದೆ. ಈ ಸ್ಕೂಟರ್ ಡ್ಯಾಶ್‌ಬೋರ್ಡ್‌ನಲ್ಲಿ SkidControl ಟೆಕ್ನಾಲಜಿಯನ್ನು ಅಳವಡಿಸಲಾಗಿದೆ. ನಿಮ್ಮ ಸ್ಕೂಟರ್‌ನ ಚಕ್ರಗಳು ಯಾವ ವೇಗದಲ್ಲಿ ತಿರುಗುತ್ತಿದೆ ಎಂಬುದರ ಆಧಾರದ ಮೇಲೆ ಇದು ಕಾರ್ಯ ನಿರ್ವಹಿಸುತ್ತದೆ. ಇದು ಮಾತ್ರವಲ್ಲದೇ ಸ್ಕೂಟರ್ ಏನಾದರೂ ಬಿದ್ದರೆ ತನ್ನ ಟೇಲ್ ಲೈಟ್ ವೇಗವಾಗಿ ಬ್ಲಿಂಕ್ ಆಗುವ ಮೂಲಕ ಹಿಂಬದಿ ವಾಹನ ಸವಾರರಿಗೆ ಎಚ್ಚರಿಕೆ ರವಾನಿಸುತ್ತದೆ.
ರೈಡಿಂಗ್ ಮೋಡ್: ಏಥರ್ ಈ ಸ್ಕೂಟರ್‌ನಲ್ಲಿ ಇಕೊ ಮತ್ತು ಝಿಪ್ ಎಂಬ ಎರಡು ರೈಡಿಂಗ್ ಮೋಡ್‌ಗಳನ್ನು ನೀಡಿದೆ. ಈ ಸ್ಕೂಟರ್‌ನ ಸಂಪೂರ್ಣ ಶಕ್ತಿ ಮತ್ತು ಥ್ರಿಲ್ಲಿಂಗ್ ಅನುಭವಕ್ಕಾಗಿ ನೀವು ಝಿಪ್ ಮೋಡ್ ಅನ್ನು ಅವಲಂಬಿಸಬೇಕಾಗುತ್ತದೆ. ಇಕೋ ಮೋಡ್‌ನಲ್ಲಿ ನೀವು ಸ್ಕೂಟರ್ ಅನ್ನು ರೈಡ್ ಮಾಡಿದರೆ ಈ ಸ್ಕೂಟರ್‌ನ ಸಂಪೂರ್ಣ ರೇಂಜ್ ಅನ್ನು ಪಡೆಯಬಹುದಾಗಿದೆ. ನಗರ ಪ್ರದೇಶದಲ್ಲಿ ದಿನಂಪ್ರತಿ ಬಳಕೆಗೆ ಇದು ಹೇಳಿ ಮಾಡಿಸಿದ ಸ್ಕೂಟರ್ ಆಗಿದೆ.

ಬ್ಯಾಟರಿ ಮತ್ತು ರೇಂಜ್: ಏಥರ್ ರಿಜ್ಟಾ ಸ್ಕೂಟರ್ ಪ್ರಮುಖವಾಗಿ ಎರಡು ಬ್ಯಾರಿ ಆಯ್ಕೆಗಳನ್ನು ನೀಡುತ್ತದೆ. ಈ ಎಲೆಕ್ಟ್ರಿಕ್ ಸ್ಕೂಟರ್‌ನ ಬೇಸ್ ರಿಜ್ಟಾ S ಮತ್ತು Z ರೂಪಾಂತರವು 2.9 kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಈ ಮಾದರಿಯು 123 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಈ ಮಾದರಿಯು 80 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.
ಇದರ ಎರಡನೇ ಬ್ಯಾಟರಿ ಆಯ್ಕೆಯನ್ನು ನೋಡುವುದಾದರೆ, ಎಥರ್ ರಿಜ್ಟಾ ಝಡ್ (ಲಾಂಗ್ ರೇಂಜ್) ರೂಪಾಂತರವು 3.7kWh ಬ್ಯಾಟರಿ ಪ್ಯಾಕ್‌ನೊಂದಿಗೆ ಬಂದಿದೆ. ಇದು 159 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಈ ಮಾದರಿಯು 80 ಪ್ರತಿಶತದಷ್ಟು ಚಾರ್ಜ್ ಆಗಲು ಈಗ ದೊಡ್ಡ ಬ್ಯಾಟರಿ ಪ್ಯಾಕ್ ಹೊರತಾಗಿಯೂ ಕೇವಲ 4 ಗಂಟೆ ಮತ್ತು 30 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








