ಕಾಶ್ಮೀರ ಟು ಕನ್ಯಾಕುಮಾರಿ ಟ್ರಿಪ್ ಮುಗಿಸಿದ ಎಲೆಕ್ಟ್ರಿಕ್ ಸ್ಕೂಟರ್: ಗೇಮ್ ಚೇಂಜರ್ ಅಖಾಡಕ್ಕೆ
ಆಂಪಿಯರ್ ಕಂಪನಿಯು ತನ್ನ ಮುಂಬರಲಿರುವ ಆಂಪಿಯರ್ ನೆಕ್ಸಸ್ ಸ್ಕೂಟರ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರ ಅಪ್‌ಡೇಟ್ ಅನ್ನು ನೀಡುತ್ತಲೇ ಇದೆ. ಆಂಪಿಯರ್ ನೆಕ್ಸಸ್ ಸ್ಕೂಟರ್ ಅನ್ನು ಲಾಂಚ್ ಮಾಡುವುದಕ್ಕೂ ಮುನ್ನ ಕಂಪನಿ ಆಯೋಜಿಸಿದ್ದ ಕಾಶ್ಮೀರ್ ಟು ಕನ್ಯಾಕುಮಾರಿ ಟ್ರಿಪ್ ಅನ್ನು ಕೊನೆಗೂ ಪೂರ್ಣಗೊಳಿಸಿದೆ.
ಕಳೆದ ಬಾರಿಯ ಆಟೋ ಎಕ್ಸ್ಪೋದಲ್ಲಿ ಆಂಪಿಯರ್ ತನ್ನ ನೆಕ್ಸಸ್ (Ampere Nexus) ಸ್ಕೂಟರ್‌ನ ಪ್ರೊಡಕ್ಷನ್ ಸ್ಪೆಕ್ ಕಾನ್ಸೆಪ್ಟ್ ಅನ್ನು ಪ್ರದರ್ಶನಕ್ಕೆ ಇಟ್ಟಿತ್ತು. ಈ ವರ್ಷದ ಆರಂಭದಲ್ಲಿ ಅಂದರೆ ಜನವರಿ 16 ರಿಂದ ಆಂಪಿಯರ್ ಕಾಶ್ಮೀರದ ಸಲಾಲ್ ದಾಮ್ ಇಂದ ತಮಿಳುನಾಡಿನ ಕನ್ಯಾಕುಮಾರಿ ವರೆಗಿನ ಪ್ರವಾಸವನ್ನು ಕೈಗೊಂಡಿತ್ತು. ಇದೀಗ ಆಂಪಿಯರ್ ನೆಕ್ಸಸ್ ಈ 10000 ಕಿಮೀನ ಪ್ರವಾಸವನ್ನು ಪೂರ್ಣಗೊಳಿಸಿದ್ದು, ಕಂಪನಿ ಅತಿ ಶೀಘ್ರದಲ್ಲೇ ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮಾರುಕಟ್ಟೆಗೆ ಲಾಂಚ್ ಮಾಡಲಿದೆ ಎಂದು ತಿಳಿದು ಬಂದಿದೆ.

ಮಾಹಿತಿಗಳ ಪ್ರಕಾರ ಹೊಸ ಆಂಪಿಯರ್ ನೆಕ್ಸಸ್‌ನಲ್ಲಿ ಇದೇ ಕಂಪನಿಯ ಇತರ ಸ್ಕೂಟರ್‌ಗಳಿಗಿಂತ ದೊಡ್ಡದಾದ ಡಿಸ್ಪ್ಲೇ ಇರಲಿದೆ ಎಂದು ತಿಳಿದು ಬಂದಿದೆ. ಇದರ ಜೊತೆಗೆ ಈ ಸ್ಕೂಟರ್‌ನಲ್ಲಿ ನಾಲ್ಕಯ ರೈಡಿಗ್ ಮೋಡ್‌ಗಳು ಸಹ ಇರಲಿದೆ. ಇದು ಸವಾರಿ ಮಾಡುವವರ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಬಹುದಾಗಿದೆ. ಇನ್ನು ಆಂಪಿಯರ್ ನೆಕ್ಸ್ ಕೆ೨ಕೆ ಎಡಿಷನ್‌ಲ್ಲೂ ಲಭ್ಯವಿರಲಿದ್ದು, ಇದನ್ನು ಈಗಲೇ ಗ್ರಾಹಕರು ರೂ.499 ಕೊಟ್ಟು ಬುಕ್ ಸಹ ಮಾಡಬಹುದಾಗಿದೆ.
ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ವಿಭಾಗವು ವೇಗವಾಗಿ ಬೆಳೆಯುತ್ತಿದ್ದು, ಸ್ಟಾರ್ಟ್ ಅಪ್ ಕಂಪನಿಗಳು ಹೆಚ್ಚಾಗಿ ಮಾರುಕಟ್ಟೆಯಲ್ಲಿ ಲಾಭ ಗಳಿಸುತ್ತಿವೆ. ಇದರಲ್ಲಿ ಆಂಪಿಯರ್ ಇ-ಸ್ಕೂಟರ್‌ಗಳು ಕೂಡ ಇದ್ದು, ಇದೀಗ ಹೊಸ ಆಂಪಿಯರ್ ನೆಕ್ಸಸ್ ಸ್ಕೂಟರ್ ಅನ್ನು ಕಂಪನಿ ಬಿಡುಗಡೆ ಮಾಡಲಿದೆ. ಗ್ರೀವ್ಸ್ ಎಲೆಕ್ಟ್ರಿಕ್ ಮೊಬಿಲಿಟಿ ಅಡಿಯಲ್ಲಿ ಬರುವ ಈ ಬ್ರಾಂಡ್‌ನ ಹೊಸ ಆಂಪಿಯರ್ ನೆಕ್ಸಸ್, ಗ್ರಾಹಕರ ನೆಚ್ಚಿನ ಎಲೆಕ್ಟ್ರಿಕ್ ಸ್ಕೂಟರ್ ಆಗಿರಲಿದೆ ಎಂಬುದು ಎಲ್ಲರ ಅಭಿಪ್ರಾಯ.

ಸದ್ಯಕ್ಕೆ ಮಾರುಕಟ್ಟೆಯಲ್ಲಿ ಆಂಪಿಯರ್‌ನ ಹಲವು ಎಲೆಕ್ಟ್ರಿಕ್ ಸ್ಕೂಟರ್ ಮಾದರಿಗಳು ಇದ್ದು, ಅದರಲ್ಲಿ ಪ್ರೈಮಸ್ ಪ್ರಮುಖವಾದುದು. ಈ ಮಾದರಿಯ ಎಕ್ಸ್ ಶೋ ರೂಂ ಬೆಲೆ 1,09,900 ರೂ. ಇದ್ದು, 'ಮೇಕ್-ಇನ್-ಇಂಡಿಯಾ' ನೀತಿಯನ್ನು ಬ್ರಾಂಡ್ ಆಧರಿಸಿದೆ. ದೇಶೀಯವಾಗಿ ಉತ್ಪಾದಿಸುವ ಘಟಕಗಳೊಂದಿಗೆ ಹೆಚ್ಚಿನ ಸ್ಥಳೀಕರಣವನ್ನು ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ.
ಆಂಪಿಯರ್ ಪ್ರೈಮಸ್ LFP ಬ್ಯಾಟರಿ ಪ್ಯಾಕ್, PMS ಮೋಟಾರ್, ಬೆಲ್ಟ್ ಡ್ರೈವ್ ಮತ್ತು ಇನ್ಸ್ಟ್ರುಮೆಂಟ್ ಕ್ಲಸ್ಟರ್ ಜೊತೆಗೆ ಸಂಪರ್ಕಿತ ತಂತ್ರಜ್ಞಾನ ಮತ್ತು ನ್ಯಾವಿಗೇಶನ್‌ನೊಂದಿಗೆ ಬಂದಿದ್ದು, ವಿಶೇಷ ಫೋನ್ ಅಪ್ಲಿಕೇಶನ್ ಸಹ ಕೊಡುಗೆಯಲ್ಲಿದೆ, ಇದು ಸಾಕಷ್ಟು ಪ್ರಭಾವಶಾಲಿಯಾಗಿದೆ. Ampere Primus ಎಲೆಕ್ಟ್ರಿಕ್ ಸ್ಕೂಟರ್ ಗರಿಷ್ಠ 77 kmph ವೇಗವನ್ನು ತಲುಪುತ್ತದೆ. ಎಲೆಕ್ಟ್ರಿಕ್ ಮೋಟಾರ್ 4 kW ವರೆಗೆ ಟಾರ್ಕ್ ಔಟ್ಪುಟ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಆಂಪಿಯರ್ ಪ್ರೈಮಸ್‌ನ ಮತ್ತೊಂದು ಪ್ರಮುಖವಾದ ಅಂಶವೇನೆಂದು ನೊಡುವುದಾದರೆ, ಹೊಸ EV ಪವರ್ ಮೋಡ್‌ನಲ್ಲಿ ಪೂರ್ಣ ಚಾರ್ಜ್‌ನಲ್ಲಿ 100 ಕಿಮೀಗಿಂತ ಹೆಚ್ಚಿನ ವ್ಯಾಪ್ತಿಯನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಆಂಪಿಯರ್ ಹೇಳುತ್ತಿದೆ. ಇದು ನೈಜ ಪರಿಸ್ಥಿತಿಗಳಲ್ಲಿ ಪಡೆದ ಶ್ರೇಣಿ ಎಂದು ಕಂಪನಿ ಹೇಳುತ್ತಿದೆ. ಕವನ್ನು ಹೊಂದಿದೆ.
ಆಫರ್‌ನಲ್ಲಿ ಇಕೋ ಮೋಡ್ ಕೂಡ ಇದ್ದು, ಗರಿಷ್ಠ ರೈಡಿಂಗ್ ಶ್ರೇಣಿಯನ್ನು ನೀಡುತ್ತದೆ. ಸಿಟಿ ಮತ್ತು ರಿವರ್ಸ್ ಮೋಡ್ ಸಹ ಎಲೆಕ್ಟ್ರಿಕ್ ಸ್ಕೂಟರ್‌ನ ಭಾಗವಾಗಿದೆ. ಹೈ ಸ್ಪೀಡ್ ಮಾದರಿಯ ಬ್ಯಾಟರಿ ಪ್ಯಾಕ್ ಸ್ಮಾರ್ಟ್ BMS ನೊಂದಿಗೆ 3 kWh ಘಟಕವನ್ನು ಇದು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications