ಬೈಕನ್ನು ಬಾಕ್ಸ್‌ನಲ್ಲಿ ಮನೆಗೆ ಪಾರ್ಸೆಲ್ ಮಾಡಿದ ಕಂಪನಿ: ವಿಡಿಯೋ ನೋಡಿ ನೆಟ್ಟಿಗರು ಹೇಳಿದ್ದೇನು ನೋಡಿ!
ವಾಹನ ಜಗತ್ತು ವಿಪರೀತ ವೇಗದಲ್ಲಿ ಮುಂದುವರೆಯುತ್ತಿದೆ. ಊಹೆಗೂ ನಿಲುಕದ ಬೆಳವಣಿಗೆಗಳು ವಾಹನ ಕ್ಷೇತ್ರದಲ್ಲಿ ನಡೆಯುತ್ತಿದೆ ಎಂದರೆ ತಪ್ಪಾಗಲಾರದು. ದುಬಾರಿ ಕಾರು ಮತ್ತು ಬೈಕ್ ಬ್ರಾಂಡ್ಗಳು ತಮ್ಮ ಗ್ರಾಹಕರ ಅನುಭವವನ್ನು ಮತ್ತಷ್ಟು ಹೆಚ್ಚಿಸುವುದಕ್ಕಾಗಿ ಹೊಸ ಬೈಕ್ ಮತ್ತು ಕಾರುಗಳ ಹೋಮ್ ಡೆಲಿವರಿಯನ್ನು ಸಹ ಮಾಡುತ್ತಿದೆ.
ಇದೀಗ ಈ ಸಾಲಿಗೆ ಎಪ್ರಿಲಿಯಾ 457 (Aprilia RS 457) ಸಹ ಸೇರಿದೆ. ಹೌದು, ಭಾರತದಲ್ಲಿ ಇಟಾಲಿಯನ್ ಬೈಕ್ ನಿರ್ಮಾಣ ಕಂಪನಿಯಾದ ಎಪ್ರಿಲಿಯಾ ಕೆಲವು ತಿಂಗಳ ಹಿಂದೆ ಎಪ್ರಿಲಿಯಾ ಆರ್‌ಎಸ್ 457 ಎಂಬ ಬೈಕ್ ಒಂದನ್ನು ಬಿಡುಗಡೆ ಮಾಡಿತ್ತು. ಈಗಾಗಲೇ ಕಂಪನಿ ಈ ಬೈಕ್‌ನ ಡೆಲಿವರಿ ಆರಂಭಿಸಿದ್ದು, ಇದೀಗ ಹೋಮ್ ಡೆಲಿವರಿಯೂ ಶುರು ಮಾಡಿದೆ. ಇಲ್ಲೊಂದು ಕಡೆ ಆ ಕುರಿತಾದ ವಿಡಿಯೋ ವೈರಲ್ ಆಗಿದ್ದು ಎಲ್ಲರ ಗಮನ ಸೆಳೆಯುತ್ತಿದೆ.

ಹೌದು, ವಿಡಿಯೋದಲ್ಲಿ ಕಾಣುವಂತೆ ಹೊಸ ಎಪ್ರಿಲಿಯಾ ಆರ್‌ಎಸ್ 457 ಬೈಕ್ ಅನ್ನು ಟ್ರಕ್ ಒಂದರಲ್ಲಿ ಮನೆ ಬಾಗಿಲಿಗೆ ಕಂಪನಿ ಕಳಿಸಿದೆ. ಅದರಲ್ಲಿ ಬೈಕ್ ಅನ್ನು ಭಧ್ರವಾಗಿ ಬಾಕ್ಸ್‌ನಲ್ಲಿ ಪ್ಯಾಕ್ ಮಾಡಿ ಗ್ರಾಹಕರ ಮನಗೆ ಕಳಿಸಲಾಗಿದ್ದುದೆ. ಬಾಕ್ಸ್ ಒಳಗೆ ಕಬ್ಬಿಣದ ಪಟ್ಟಿಗಳನ್ನು ಇಟ್ಟು ಸಾಕಷ್ಟು ಸುರಕ್ಷಿತವಾಗಿ ಈ ಬೈಕ್‌ನ ಡೆಲಿವರಿಯನ್ನು ಮಾಡಲಾಗಿದ್ದು ನೋಡಲು ಆಕರ್ಷಕವಾಗಿದೆ.
ವಿಡಿಯೋದಲ್ಲಿ ಈ ಮೇಲೆ ತಿಳಿಸಿದಂತೆ ಬೈಕ್ ಅನ್ನು ಸಾಕಷ್ಟು ಸುರಕ್ಷಿತವಾಗಿ ಪ್ಯಾಕ್ ಮಾಡಿ ಕಳಿಸಲಾಗಿದೆ. ಕಬ್ಬಿಣದ ಪಟ್ಟಿಗಳಿಗೆ ಬೆಲ್ಟ್ ರೀತಿಯ ಸ್ಟ್ರಾಪ್‌ಗಳನ್ನು ಬಳಸಿ ಬಿಗಿಗೊಳಿಸಲಾಗಿದ್ದು ಇದು ಬೈಕ್ ಅನಾವಶ್ಯಕವಾಗಿ ಅಲುಗಾಡುವುದನ್ನು ತಪ್ಪಿಸಲು ನೆರವಾಗುತ್ತದೆ. ಇನ್ನು ಬೈಕ್ ಜೊತೆ ಬಂದಿದ್ದ ಟ್ರಕ್‌ನಲ್ಲಿ ಇದ್ದ ಒಬ್ಬ, ಈ ಡೆಲಿವರಿಯ ವಿಡಿಯೋವನ್ನು ಮಾಡಿ ಡೀಲರ್‌ಗಳಿಗೆ ಕಳುಹಿಸುತ್ತಿರುವುದನ್ನು ನಾವು ಕಾಣಬಹುದಾಗಿದೆ.

ಎಪ್ರಿಲಿಯಾ RS 457 ಬೈಕಿನಲ್ಲಿ 457cc, ಲಿಕ್ವಿಡ್-ಕೂಲ್ಡ್, ಪ್ಯಾರಲಲ್ ಟ್ವಿನ್ ಎಂಜಿನ್ ಅನ್ನು ಹೊಂದಿದೆ. ಈ DOHC ಎಂಜಿನ್ ಅನ್ನು ಆರು-ವೇಗದ ಗೇರ್‌ಬಾಕ್ಸ್‌ನೊಂದಿಗೆ ಸ್ಲಿಪ್ ಮತ್ತು ಅಸಿಸ್ಟ್ ಕ್ಲಚ್‌ನೊಂದಿಗೆ ಜೋಡಿಸಲಾಗಿದೆ. ಈ ಎಂಜಿನ್ 9,400 rpm ನಲ್ಲಿ 46 bhp ಪವರ್ ಮತ್ತು 6,700 rpm ನಲ್ಲಿ 43.5 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಹೊಸ ಎಪ್ರಿಲಿಯಾ RS 457 ಬೈಕ್ ಸಸ್ಪೆಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರಲ್ಲಿ ಟ್ವಿನ್-ಸ್ಪಾರ್ ಅಲ್ಯೂಮಿನಿಯಂ ಫ್ರೇಮ್ ಅನ್ನು ಮುಂಭಾಗದಲ್ಲಿ 41mm ಇನ್ವರ್ಟಡ್ ಸಸ್ಪೆಕ್ಷನ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಅನ್ನು ಹೊಂದಿದ್ದು, ಇವೆರಡೂ ಪ್ರಿಲೋಡ್ ಹೊಂದಾಣಿಕೆಯನ್ನು ನೀಡುತ್ತವೆ. ಇದರ ಮುಂಭಾಗವು 120 ಎಂಎಂ ಟ್ರ್ಯಾವೆಲ್ ನೊಂದಿಗೆ ನೀಡುತ್ತದೆ ಮತ್ತು ಹಿಂಭಾಗವು 130 ಎಂಎಂ ವ್ಹೀಲ್ ಟ್ರಾವೆಲ್ ನೊಂದಿಗೆ ಬರುತ್ತದೆ.
ಎಪ್ರಿಲಿಯಾದಿಂದ ಹೊಸ RS 457 ಫುಲ್ LED ಲೈಟಿಂಗ್ ಸಿಸ್ಟಮ್ ಜೊತೆಗೆ ಆಯ್ಕೆಯ ಬ್ಲೂಟೂತ್ ಕನೆಕ್ಟಿವಿಟಿಯೊಂದಿಗೆ 5-ಇಂಚಿನ TFT ಡಿಸ್ ಪ್ಲೇಯನ್ನು ಹೊಂದಿದೆ. ಹೊಸ ಎಪ್ರಿಲಿಯಾ RS 457 ಬೈಕ್ ಪ್ರಿಸ್ಮಾಟಿಕ್ ಡಾರ್ಕ್, ಓಪಲೆಸೆಂಟ್ ಲೈಟ್ ಮತ್ತು ರೇಸಿಂಗ್ ಸ್ಟ್ರೈಪ್ಸ್ ಎಂಬ ಮೂರು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








