ಎಥರ್ ಗ್ರಾಹಕರೇ... ನಿಮಗಾಗಿ ಮೂರು ಆಕರ್ಷಕ ಸೇವಾ ಪ್ಲಾನ್‌ಗಳನ್ನು ಪರಿಚಯಿಸಿದೆ ಕಂಪನಿ!
ಭಾರತದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕರಾಗಿರುವ ಎಥರ್ ಎನರ್ಜಿ ತನ್ನ ಗ್ರಾಹಕರಿಗೆ ಎಥರ್ ಕೇರ್ ಸೇವಾ ಯೋಜನೆಗಳನ್ನು (Ather care service plans) ಪರಿಚಯಿಸಿದೆ. ಈ ಎಥರ್ ಕೇರ್ ಯೋಜನೆಗಳು ಉಚಿತ ಆವರ್ತಕ ನಿರ್ವಹಣೆಯನ್ನು ಒಳಗೊಂಡಿರುವುದರ ಜೊತೆಗೆ ಬಿಡಿ ಭಾಗಗಳ ಬದಲಿಗಳ ಮೇಲೆ ರಿಯಾಯಿತಿಗಳನ್ನು ಕೂಡ ನೀಡುತ್ತದೆ. ಇದು ಮಾತ್ರವಲ್ಲದೆ ಮೌಲ್ಯವರ್ಧಿತ ಸೇವೆಗಳ ಜೊತೆಗೆ ಗ್ರಾಹಕರ ಖರ್ಚುಗಳನ್ನು ನಿಯಂತ್ರಣದಲ್ಲಿಡುವಂತಹ ಎಕ್ಸ್‌ಪ್ರೆಸ್ ಕೇರ್ ಹಾಗೂ ಪಾಲಿಶಿಂಗ್‌ನಂತಹ ಸೇವೆಗಳನ್ನು ಈ ಎಥರ್ ಕೇರ್ ಸೇವಾ ಯೋಜನೆಗಳಲ್ಲಿ ಪಡೆಯಬಹುದಾಗಿದೆ ಎಂದು ಕಂಪನಿ ಹೇಳಿದೆ.
ಆರಂಭಿಕವಾಗಿ ನೀಡಲಾಗುವ 3 ವರ್ಷಗಳ ವಾರಂಟಿಯಿಂದಾಗಿ ಹೆಚ್ಚಿನ ಗ್ರಾಹಕರು ಪರಿವರ್ತನೆಗೊಳ್ಳುವುದು ಸೇರಿದಂತೆ ನಿರ್ವಹಣಾ ವೆಚ್ಚದ ಬಗ್ಗೆ ಅವರಿಗಿರುವ ಅಸ್ಪಷ್ಟತೆಯನ್ನು ಕಂಪನಿ ಈಗ ಗುರುತಿಸಿದೆ. ಈ ಅಸ್ಪಷ್ಟತೆಯನ್ನು ಕಡಿಮೆ ಮಾಡಲು ಎಥರ್ ಮುಂದಾಗಿದ್ದು, ಇದಕ್ಕಾಗಿ ಎಥರ್ ಕೇರ್, ಎಥರ್ ಕೇರ್ ಪ್ಲಸ್ ಮತ್ತು ಎಥರ್ ಕೇರ್ ಮ್ಯಾಕ್ಸ್ ಎಂಬ ಮೂರು ಆರೈಕೆ ಯೋಜನೆಗಳನ್ನು ನೀಡುತ್ತಿದೆ.

ಇವುಗಳಲ್ಲಿ ಗ್ರಾಹಕರು ತಮ್ಮ ಅಗತ್ಯಗಳಿಗೆ ಸರಿಹೊಂದುವ ಯೋಜನೆಯನ್ನು ಆಯ್ಕೆ ಮಾಡಬಹುದಾಗಿದೆ. ಎಲ್ಲಾ ಮೂರು ಎಥರ್ ಕೇರ್ ಯೋಜನೆಗಳು 1 ವರ್ಷ ಅಥವಾ 10,000 ಕಿ.ಮೀಗಳ ಅವಧಿಯನ್ನು ಒಳಗೊಂಡಿರುತ್ತವೆ. ಯಾವುದು ಮೊದಲು ಬರುತ್ತದೆಯೋ ಅದು ಎಥರ್ ಮಾಲೀಕರಿಗೆ ಸಮಗ್ರ ನಿರ್ವಹಣೆ ಆಯ್ಕೆಗಳನ್ನು ಖಾತ್ರಿಪಡಿಸುತ್ತದೆ ಎಂದು ಕಂಪನಿ ತಿಳಿಸಿದೆ.
ಎಥರ್ ಕೇರ್ ಯೋಜನೆಗಳ ವಿವರಗಳು: ಅಥರ್ ಕೇರ್: 2 ಉಚಿತ ಆವರ್ತಕ ನಿರ್ವಹಣೆ, ವರ್ಷಕ್ಕೊಮ್ಮೆ ವೇರ್ ಮತ್ತು ಟಿಯರ್ ಪಾರ್ಟ್‌ಗಳ ಮೇಲೆ ಶೇ10 ರಷ್ಟು ರಿಯಾಯಿತಿ ಜೊತೆಗೆ ವರ್ಷಕ್ಕೊಮ್ಮೆ ವೇರ್ ಮತ್ತು ಟಿಯರ್ ರಿಪ್ಲೇಸ್‌ಮೆಂಟ್‌ಗಾಗಿ ಲೇಬರ್ ಚಾರ್ಜ್ ಮೇಲೆ ಶೇ10 ರಷ್ಟು ರಿಯಾಯಿತಿಯನ್ನು ಒಳಗೊಂಡಿರುತ್ತದೆ.
ಎಥರ್ ಕೇರ್ ಪ್ಲಸ್: 2 ಉಚಿತ ಆವರ್ತಕ ನಿರ್ವಹಣೆ, 1 ಉಚಿತ ಪಾಲಿಷಿಂಗ್, 1 ಉಚಿತ ವಾಷಿಂಗ್, ವೇರ್ ಮತ್ತು ಟಿಯರ್ ಪಾರ್ಟ್ ಭಾಗಗಳ ಮೇಲೆ ಶೇ10 ರಷ್ಟು ರಿಯಾಯಿತಿ (ವರ್ಷಕ್ಕೆ ಎರಡು ಬಾರಿ), ವೇರ್ ಮತ್ತು ಟಿಯರ್ ಪಾರ್ಟ್‌ಗಳ ಬದಲಿಗಾಗಿ ಲೇಬರ್ ಚಾರ್ಜ್ ಮೇಲೆ ಶೇ15 ರಷ್ಟು ರಿಯಾಯಿತಿ (ವರ್ಷಕ್ಕೆ ಎರಡು ಬಾರಿ) ನೀಡಲಾಗುವುದು.
ಎಥರ್ ಕೇರ್ ಮ್ಯಾಕ್ಸ್: 2ಉಚಿತ ಆವರ್ತಕ ನಿರ್ವಹಣೆಗಳು, 2ಉಚಿತ ಬ್ರೇಕ್ ಪ್ಯಾಡ್ ಬದಲಿಗಳು, 2ಉಚಿತ ವಾಷ್‌ಗಳು, 2ಉಚಿತ ಎಕ್ಸ್‌ಪ್ರೆಸ್‌ಕೇರ್ ಸೇವೆಗಳು, 2ಉಚಿತ ಪಾಲಿಶಿಂಗ್, ಉಚಿತ ಬೆಲ್ಟ್ ಲೂಬ್ರಿಕೇಶನ್, ವೇರ್ ಮತ್ತು ಟಿಯರ್ ಪಾರ್ಟ್‌ಗಳ ಮೇಲೆ ಶೇ10 ರಿಯಾಯಿತಿ (ಎರಡು ಬಾರಿ)ಮತ್ತು ವೇರ್ ಮತ್ತು ಟಿಯರ್ ಪಾರ್ಟ್‌ಗಳ ಬದಲಿಯ ಲೇಬರ್ ಚಾರ್ಜ್ ಮೇಲೆ ಶೇ15 ರಿಯಾಯಿತಿ (ವರ್ಷಕ್ಕೆ ಎರಡು ಬಾರಿ)ನೀಡಲಾಗುವುದು.
ಗ್ರಾಹಕರು ಸೆಪ್ಟೆಂಬರ್ 30, 2024 ರಂತೆ ಯಾವುದೇ ಎಥರ್‌ನ ಅಧಿಕೃತ ಸೇವಾ ಕೇಂದ್ರಗಳು ಅಥವಾ ಅನುಭವ ಕೇಂದ್ರಗಳಲ್ಲಿ ಈ ಯೋಜನೆಯನ್ನು ಖರೀದಿಸಬಹದು. ಅವರು ಯೋಜನೆಯನ್ನು ಖರೀದಿಸುವ ಡೀಲರ್‌ಶಿಪ್‌ನಲ್ಲಿ ಪ್ರತ್ಯೇಕವಾಗಿ ತಮ್ಮ Ather Care ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎಂದು ಎಥರ್ ಎನರ್ಜಿ ಕಂಪನಿ ತಿಳಿಸಿದೆ.
ಪ್ಲಾನ್‌ಗಳ ಬೆಲೆಗಳು ರೂ.1,130 ರಿಂದ ರೂ.2,400 ವರೆಗೆ ಇರುತ್ತದೆ. ಇದು ಖರೀದಿಸಿದ ಯೋಜನೆ ಮತ್ತು ನಗರವನ್ನು ಅವಲಂಬಿಸಿ ರೂ.5,900 ವರೆಗೆ ಪ್ರಯೋಜನಗಳನ್ನು ನೀಡುತ್ತದೆ ಎಂದು ಕಂಪನಿ ಹೇಳಿದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ.


Click it and Unblock the Notifications








