ಕಡಿಮೆ ಬೆಲೆಯ ಎಥರ್‌ನ ಫ್ಯಾಮಿಲಿ ಎಲೆಕ್ಟ್ರಿಕ್ ಸ್ಕೂಟರ್ EMI, ಆನ್ ರೋಡ್ ಬೆಲೆ ಎಷ್ಟು?

ಬೆಂಗಳೂರು ಮೂಲದ ಎಥರ್ ಎನರ್ಜಿ (Ather Energy) ತನ್ನ 450 ಸರಣಿ ಎಲೆಕ್ಟ್ರಿಕ್ ಮಾರಾಟದೊಂದಿಗೆ ದೇಶಾದ್ಯಂತ ಖ್ಯಾತಿ ಗಳಿಸಿದೆ. ಇದೀಗ, ಮತ್ತಷ್ಟು ಹೊಸ ಗ್ರಾಹಕರನ್ನು ಆಕರ್ಷಿಸಲು ವಿವಿಧ ಮಾದರಿ ಹೊಸ ಸ್ಕೂಟರ್‌ಗಳನ್ನು ಅಭಿವೃದ್ಧಿಪಡಿಸುತ್ತಿದೆ. ಎಥರ್‌ ಎನರ್ಜಿ ಆಕರ್ಷಕ 450 ಸರಣಿ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ದೇಶೀಯ ಮಾರುಕಟ್ಟೆಯಲ್ಲಿ ಮಾರಾಟಗೊಳಿಸುತ್ತಿದೆ.

ಇತ್ತೀಚೆಗೆ ಎಥರ್ ಕಂಪನಿಯು ರಿಜ್ಟಾ ಎಂಬ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಈ ಎಥರ್ ರಿಜ್ಟಾ (Ather Rizta) ಎಲೆಕ್ಟ್ರಿಕ್ ಸ್ಕೂಟರ್ 450X ಗಿಂತ ಹೆಚ್ಚು ಪ್ರಾಯೋಗಿಕವಾಗಿ ವಿನ್ಯಾಸಗೊಳಿಸಲಾಗಿದೆ. ಈ ಸ್ಕೂಟರ್ ನಲ್ಲಿ ಸೌಕರ್ಯ, ಅನುಕೂಲತೆ ಮತ್ತು ಸುರಕ್ಷತೆಗೆ ಆದ್ಯತೆ ನೀಡಿದೆ. ಇಂದಿನ ಲೇಖನದಲ್ಲಿ ಈ ಎಲೆಕ್ಟ್ರಿಕ್ ಸ್ಕೂಟರ್ ಇಎಂಐ ಮತ್ತು ಡೌನ್‌ಪೇಮೆಂಟ್‌ಗಳ ಕುರಿತಾಗಿ ನೋಡೋಣ ಬನ್ನಿ.

Ather Rizta

ಎಥರ್ ರಿಜ್ಟಾ ಎಲೆಕ್ಟ್ರಿಕ್ ಸ್ಕೂಟರ್ ಆರಂಭಿಕೆ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1,09,999 ಆದರೆ ಆನ್ ರೋಡ್ ಬೆಲೆಯು ರೂ.1,17,779 ಆಗಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಲೋ ವೆರಿಯೆಂಟ್ ಮಾದರಿಗೆ 1,07,444 ಸಾಲದ ಮೊತ್ತಕ್ಕೆ 36 ತಿಂಗಳ ಅವಧಿಯಲ್ಲಿ 9.7% ಬಡ್ಡಿ ದರದಲ್ಲಿ EMI ತಿಂಗಳಿಗೆ 3,450 ರೂ.ಗಳಿಂದ ಪ್ರಾರಂಭವಾಗುತ್ತದೆ. ಇದನ್ನು ದೆಹಲಿ ಆನ್ ರೋಡ್ ಬೆಲೆಯಲ್ಲಿ ಲೆಕ್ಕ ಹಾಕಲಾಗಿದೆ. ಇನ್ನು ಈ ಮಾದರಿಗೆ ಡೌನ್‌ಪೇಮೆಂಟ್ ರೂ.11,938 ಆಗಿದೆ.

ಎಥರ್ ರಿಜ್ಟಾ ಎಲೆಕ್ಟ್ರಿಕ್ ಸ್ಕೂಟರ್ ಡ್ಯಾಶ್‌ಬೋರ್ಡ್‌ನಲ್ಲಿ SkidControl TM ಮತ್ತು WhatsApp ನಂತಹ ವೈಶಿಷ್ಟ್ಯಗಳನ್ನು ಒಳಗೊಂಡಂತೆ ಸವಾರಿ ಅನುಭವವನ್ನು ಹೆಚ್ಚಿಸಲುಇದು ಹೊಸ ಕನೆಕ್ಟಿವಿಟಿ ಫೀಚರ್ಸ್ ಗಳೊಂದಿಗೆ ಬಂದಿದೆ. ಹೊಸ ಎಥರ್ ರಿಜ್ಟಾ ಎಂಬುವುದು ಫ್ಯಾಮಿಲಿ ಸ್ಕೂಟರ್ ಆಗಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ಭಾರತೀಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯನ್ನು ಪಡೆದುಕೊಳ್ಳುತ್ತಿರುವಾಗ ಈ ಹೊಸ ಸ್ಕೂಟರ್ ಎಂಟ್ರಿ ಆಗಿದೆ.

Ather Rizta

ಎಥರ್ ರಿಜ್ಟಾ ಎಲೆಕ್ಟ್ರಿಕ್ ಸ್ಕೂಟರ್ ರಿಜ್ಟಾ ಎಸ್, ರಿಜ್ಟಾ ಝಡ್ ಮತ್ತು ರಿಜ್ಟಾ ಝಡ್ (ಲಾಂಗ್ ರೇಂಜ್) ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿದೆ. ಇದರಲ್ಲಿ ಬೇಸ್ ರಿಜ್ಟಾ S ರೂಪಾಂತರವು 2.9kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಇದು 2.9kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ . ಈ ಮಾದರಿಯು 123 ಕಿ.ಮೀ ರೇಂಜ್ ನೀಡುತ್ತದೆ. ಈ ಮಾದರಿಯು 80 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

ಈ ರೂಪಾಂತರವು ಪ್ಯಾಂಗೊಂಗ್ ಬ್ಲೂ, ಡೆಕ್ಕನ್ ಗ್ರೇ ಮತ್ತು ಸಿಯಾಚಿನ್ ವೈಟ್ ಎಂಬ ಮೂರೂ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ 7-ಇಂಚಿನ ಸೆಗ್ಮೆಂಟ್ ಡಿಸ್ಪ್ಲೇ ಮತ್ತು ಟರ್ನ್-ಬೈ-ಟರ್ನ್ ನ್ಯಾವಿಗೇಷನ್‌ನಂತಹ ಫೀಚರ್ಸ್ ಗಳನ್ನು ಹೊಂದಿವೆ. ಎಥರ್ ರಿಜ್ಟಾ ಎಸ್ ರೂಪಾಂತರ 0-80 ರಿಂದ ಚಾರ್ಜ್ ಮಾಡಲು 6 ಗಂಟೆ 40 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.

Ather Rizta

ಇನ್ನು ಈ ಎಥರ್ ರಿಜ್ಟಾ ಝಡ್ ರೂಪಾಂತರದ ಬಗ್ಗೆ ಹೇಳುವುದಾದರೆ, ಇದರ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1.25 ಲಕ್ಷವಾಗಿದೆ. ಈ ರೂಪಾಂತರದ ಕಾರ್ಯಕ್ಷಮತೆ, ರೇಂಜ್ ಮತ್ತು ಚಾರ್ಜಿಂಗ್ ರಿಜ್ಟಾ S ಗೆ ಹೋಲುತ್ತದೆ, ಆದರೆ ಇದು 7 ಬಣ್ಣ್ಣಗಳ ಆಯ್ಕೆಗಳಲ್ಲ್ಲಿ ಲಭ್ಯವಿರುತ್ತದೆ. ಅಲದೇ ಈ ಮಾದರಿಯು 7-ಇಂಚಿನ LCD ಡಿಸ್ಪ್ಲೇ ಮತ್ತು ಪ್ರೊ ಪ್ಯಾಕ್ ಸ್ಟ್ಯಾಂಡರ್ಡ್ ಆಗಿ ಬರುತ್ತದೆ.

ಪ್ರೊ ಪ್ಯಾಕ್‌ನ ಸ್ಟ್ಯಾಂಡರ್ಡ್ ಫಿಟ್‌ಮೆಂಟ್ ಅಥರ್ ರಿಜ್ಟಾ ಎಸ್‌ನಲ್ಲಿ ಕಾಣೆಯಾಗಿರುವ ಮೇಲಿನ ಎಲ್ಲಾ ವೈಶಿಷ್ಟ್ಯಗಳನ್ನು ರಿಜ್ಟಾ ಝಡ್ ರೂಪಾಂತರದಲ್ಲಿ ಸೇರಿಸುತ್ತದೆ ಮತ್ತು ಸ್ಮಾರ್ಟ್‌ಇಕೋ ಮೋಡ್, ಬ್ಲೂಟೂತ್ ಕಾಲ್ ಮತ್ತು ಮ್ಯೂಸಿಕ್ ಕಂಟ್ರೋಲ್, ಆಟೋ ಹೋಲ್ಡ್, ಫಾಲ್ ಸೇಫ್, ಆಟೋ ಇಂಡಿಕೇಟರ್ ಕಟ್-ಆಫ್, ಇಎಸ್‌ಎಸ್, ಮುಂತಾದ ಇನ್ನಷ್ಟು ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಗೂಗಲ್ ಮ್ಯಾಪ್, ಲೈವ್- ಚಾರ್ಜಿಂಗ್ ಸ್ಥಿತಿ, ಅಲೆಕ್ಸಾ ಮತ್ತು ಇನ್ನಷ್ಟುವುಗಳನ್ನು ಹೊಂದಿವೆ.

Ather Rizta

ಕೊನೆಯದಾಗಿ ಇದರ ಎಥರ್ ರಿಜ್ಟಾ ಝಡ್ (ಲಾಂಗ್ ರೇಂಜ್) ರೂಪಾಂತರವು 3.7kWh ಬ್ಯಾಟರಿ ಪ್ಯಾಕ್‌ನೊಂದಿಗೆ ಬಂದಿದೆ. ಇದು 160 ಕಿ.ಮೀ ರೇಂಜ್ ಅನು ನೀಡುತ್ತದೆ. ಈ ಮಾದರಿಯು 80 ಪ್ರತಿಶತದಷ್ಟು ಚಾರ್ಜ್ ಆಗಲು ಈಗ ದೊಡ್ಡ ಬ್ಯಾಟರಿ ಪ್ಯಾಕ್ ಹೊರತಾಗಿಯೂ ಕೇವಲ 4 ಗಂಟೆ ಮತ್ತು 30 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.

ಈ ಟಾಪ್ ರಿಜ್ಟಾ ಝಡ್ (ಲಾಂಗ್ ರೇಂಜ್) ರೂಪಾಂತರದ ಬೆಲೆಯು ರೂ.1.45 ಲಕ್ಷ (ಎಕ್ಸ್-ಶೋ ರೂಂ) ಆಗಿದೆ. ಅಲ್ಲದೆ, ಎಲ್ಲಾ ರೂಪಾಂತರಗಳು 3-ವರ್ಷ/30,000km ಸ್ಕೂಟರ್ ಮತ್ತು ಬ್ಯಾಟರಿ ವಾರಂಟಿಯೊಂದಿಗೆ ಬರುತ್ತವೆ. ಎಥರ್ ಬ್ಯಾಟರಿ ಪ್ರೊಟೆಕ್ಟ್‌ನೊಂದಿಗೆ ಗ್ರಾಹಕರು ತಮ್ಮ ಬ್ಯಾಟರಿ ವಾರಂಟಿಯನ್ನು 5-ವರ್ಷ/60,000km ಗೆ ಹೆಚ್ಚಿಸಬಹುದು.

More from DriveSpark

Article Published On: Saturday, May 25, 2024, 17:04 [IST]
English summary
Ather rizta electric scooter on road price emi details
Read more on ather energy india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+