ಜಿಂಕೆಯಂತೆ ಮುನ್ನುಗ್ಗುತ್ತಿದೆ ಏಥರ್ ಎಲೆಕ್ಟ್ರಿಕ್: ಇಷ್ಟೊಂದು ಮಾರಾಟವಾಗಲು ಕಾರಣವೇನು?
ದಿನಕಳೆದಂತೆ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟ ದಿನೇ ದಿನೇ ಹೆಚ್ಚಾಗುತ್ತಿದೆ. ಅದರಲ್ಲೂ ಜನರು ಹೆಚ್ಚಾಗಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ಅದಕ್ಕೆ ಪ್ರಮುಖ ಉದಾಹರಣೆ, ಇತ್ತೀಚೆಗೆ ಎಲೆಕ್ಟ್ರಿಕ್ ಸ್ಕೂಟರ್‌ಗಳು ಮಾರಾಟವಾಗುತ್ತಿರು ಅಂಕಿ ಅಂಶಗಳು. ಅದರಲ್ಲೂ ಬೆಂಗಳೂರು ಮೂಲದ ಎಲೆಕ್ಟ್ರಿಕ್ ಸ್ಕೂಟರ್ ತಯಾರಿಕಾ ಕಂಪನಿಯಾದ ಏಥರ್ ಅತ್ಯುತ್ತಮ ಮಟ್ಟದಲ್ಲಿ ತನ್ನ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದೆ. ಇಂದಿನ ಈ ಲೇಖನದಲ್ಲಿ ನಾವು ಆ ಕುರಿತಾಗಿ ನೋಡೋಣ.
ಅಥರ್ ತನ್ನ ಮೊದಲ ತಿಂಗಳಿನಲ್ಲಿ ಅತ್ಯುತ್ತಮ ಮಾರಾಟವನ್ನು ಸಾಧಿಸಿದೆ. ಸೆಪ್ಟೆಂಬರ್‌ನಲ್ಲಿ ಕಂಪನಿಯು, ಬರೋಬ್ಬರಿ12,579 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಇದು ಕಳೆದ ವರ್ಷದ ಇದೇ ತಿಂಗಳ ಮಾರಾಟಕ್ಕೆ ಹೋಲಿಕೆ ಮಾಡಿ ನೋಡಿದರೆ ಸುಮಾರು 75% ಅಧಿಕ. ಜೊತೆಗೆ ಸುಮಾರು 14% ಮಾರುಕಟ್ಟೆ ಪಾಲನ್ನು ಸಹ ಪಡೆದುಕೊಂಡಿದೆ.

ಇದೇ ವರ್ಷದ ಜನವರಿ ತಿಂಗಳಲ್ಲಿ ಏಥರ್ (Ather) ಸುಮಾರು 9347 ಸ್ಕೂಟರ್‌ಗಳನ್ನು ಮಾರಾಟ ಮಾಡಿತ್ತು. ಮೇ ತಿಂಗಳಲ್ಲಿ ಈ ಕಂಪನಿ ಅತೀ ಕಡಿಮೆ, ಅಂದರೆ 4123 ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡಿತ್ತು. ಇಲ್ಲಿಯವರೆಗೆ ಈ ವರ್ಷದಲ್ಲಿ ಕಂಪನಿಯು ಒಟ್ಟು 85817 ಸ್ಕೂಟರ್‌ಗಳನ್ನು ಮಾರಾಟ ಮಾಡಿದೆ. ಬಹುತೇಕ ಮಾದರಿಗಳಿಗೆ ಆಫರ್ ಅನ್ನು ಸಹ ಕಂಪನಿ ನೀಡುತ್ತಿದ್ದು, ದೊಡ್ಡ ಮಟ್ಟದ ಮಾರಾಟಕ್ಕೆ ಇದೂ ಸಹ ಕಾರಣ ಎಂದರೆ ತಪ್ಪಾಗಲಾರದು.
ಏಥರ್‌ನ ಪ್ರಮುಖ ಬೈಕ್ ಮಾದರಿಯಾದ, ರಿಜ್ಟಾ ಮಾರುಕಟ್ಟೆಗೆ ಬರುವ ವರೆಗೆ, ಏಥರ್ ಸ್ಕೂಟರ್‌ಗಳೆಂದರೆ ಗಾತ್ರದಲ್ಲಿ ಚಿಕ್ಕದು ಎಂಬ ರೀತಿಯಲ್ಲಿತ್ತು. ಆದರೆ ರಿಜ್ಟಾ ಸ್ಕೂಟರ್ ಮಾರುಕಟ್ಟೆಗೆ ಲಾಂಚ್ ಆಗುವ ಮೂಲಕ ಈ ಮಾತಿಗೆ ತೆರೆ ಬಿದ್ದಿದೆ. ಈ ಬಾರಿ ಏಥರ್ ತನ್ನ ರಿಜ್ಟಾ ಸ್ಕೂಟರ್ ಅನ್ನು ತನ್ನ 450 ಸರಣಿಯ ಸ್ಕೂಟರ್‌ಗಳಿಗಿಂತಲೂ ದೊಡ್ಡದಾಗಿ ನಿರ್ಮಿಸಿದ್ದು, ಹೆಚ್ಚು ಆರಾಮದಾಯಕ ಪ್ರಯಾಣಕ್ಕಾಗಿ ಸೆಗ್ಮೆಂಟ್‌ನಲ್ಲಿಯೇ ದೊಡ್ಡದಾದ ಸೀಟ್‌ಗಳನ್ನು ನೀಡಿದೆ.

ಈ ಸ್ಕೂಟರ್‌ನ ಹಿಂಬಾಗಕ್ಕೆ ಬಂದಾಗ ಮುಂಭಾಗದಲ್ಲಿ ಇರುವ ಹೆಡ್ ಲ್ಯಾಂಪ್ ವಿನ್ಯಾಸದ ಟೇಲ್ ಲ್ಯಾಂಪ್ ಹಾಗೂ ಅದರ ಜೊತೆ ಇಂಡಿಕೇಟರ್‌ಗಳನ್ನು ಕಾಣಬಹುದು. ವಿಶಾಲವಾದ ಸೀಟ್‌ಗೆ ಬ್ಯಾಕ್ ರೆಸ್ಟ್‌ಗಳನ್ನು ಅಳವಡಿಸಲಾಗಿದ್ದು, ಇದರ ಸಹಾಯದಿಂದ ಹಿಂಬದಿ ಸವಾರರು ಆರಾಮದಾಯಕ ರೈಡ್ ಅನ್ನು ಪಡೆಯಬಹುದು. ಹಲವಾರು ಸಂಧರ್ಭಗಳಲ್ಲಿ ಈ ಬ್ಯಾಕ್ ರೆಸ್ಟ್ ಹಿಂಬದಿ ಸವಾರರ ಉಪಯೋಗಕ್ಕೆ ಬರುತ್ತವೆ.
ರಿಜ್ಟಾ ಫ್ಯಾಮಿಲಿ ಸ್ಕೂಟರ್ ಆಗಿದ್ದರೂ, ಏಥರ್ ಈ ಸ್ಕೂಟರ್‌ನಲ್ಲಿ ಅತ್ಯಾಧುನಿಕ ಫೀಚರ್‌ಗಳನ್ನು ಅಳವಡಿಸಿದ್ದಾರೆ. ಹಲವು ಟೆಕ್‌ಗಳಿಂದ ಕೂಡಿರುವ ರಿಜ್ಟಾದ ಪ್ರಮುಖ ಫೀಚರ್ ಎಂದರೆ 7 ಇಂಚ್ ಅಳತೆಯಲ್ಲಿರುವ ಇದರ ಟಿಎಫ್‌ಟಿ ಪರದೆ. ಏಥರ್ ರಿಜ್ಟಾ ಎಸ್ ಆವೃತ್ತಿಯಲ್ಲಿ 450S ನಿಂದ ಎರವಲು ಪಡೆದ ಡೀಪ್ ವ್ಯೂವ್ ಎಲ್‌ಸಿಡಿ ಪರದೆಯನ್ನು ಬಳಸಲಾಗಿದೆ.
ಈ ಸ್ಕೂಟರ್ ನಲ್ಲಿ ಸೌಕರ್ಯ, ಅನುಕೂಲತೆ ಮತ್ತು ಸುರಕ್ಷತೆಗೆ ಆದ್ಯತೆ ನೀಡಿದೆ. ಈ ಸ್ಕೂಟರ್ ಡ್ಯಾಶ್‌ಬೋರ್ಡ್‌ನಲ್ಲಿ SkidControl ಟೆಕ್ನಾಲಜಿಯನ್ನು ಅಳವಡಿಸಲಾಗಿದೆ. ನಿಮ್ಮ ಸ್ಕೂಟರ್‌ನ ಚಕ್ರಗಳು ಯಾವ ವೇಗದಲ್ಲಿ ತಿರುಗುತ್ತಿದೆ ಎಂಬುದರ ಆಧಾರದ ಮೇಲೆ ಇದು ಕಾರ್ಯ ನಿರ್ವಹಿಸುತ್ತದೆ. ಇದು ಮಾತ್ರವಲ್ಲದೇ ಸ್ಕೂಟರ್ ಏನಾದರೂ ಬಿದ್ದರೆ ತನ್ನ ಟೇಲ್ ಲೈಟ್ ವೇಗವಾಗಿ ಬ್ಲಿಂಕ್ ಆಗುವ ಮೂಲಕ ಹಿಂಬದಿ ವಾಹನ ಸವಾರರಿಗೆ ಎಚ್ಚರಿಕೆ ರವಾನಿಸುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








