ಯುವಕರಿಗೆ ಸಿಹಿಸುದ್ದಿ: ಕೈಗೆಟುಕುವ ಬೆಲೆಯಲ್ಲಿ ಬರಲಿದೆ ಹೊಸ ಬಜಾಜ್‌ ಪಲ್ಸರ್ ಬೈಕ್

ಭಾರತದ ರಸ್ತೆಗಳಲ್ಲಿ ಒಂದು ಕಾಲದಲ್ಲಿ ಬಜಾಜ್ ಪಲ್ಸರ್ ಬೈಕ್‌ಗಳು ಭಾರತೀಯ ಮಾರುಕಟ್ಟೆಯಲ್ಲಿ ಪಾರುಪತ್ಯ ಸಾಧಿಸುತ್ತಿತ್ತು. ಆ ಕಾಲದಲ್ಲಿ ಯುವಕರಿಗೆ ನಿಮ್ಮ ಫೆವರೇಟ್ ಬೈಕ್ ಯಾವುದೆಂದು ಕೇಳಿದ ತಕ್ಷಣ ಸಿಗುವ ಉತ್ತರ ಅದುವೇ ಪಲ್ಸರ್ ಬೈಕ್ ಎಂದು. ಬಜಾಜ್ ಪಲ್ಸರ್ ಹೆಚ್ಚಿನ ಯುವಕರ ಕನಸಿನ ಬೈಕ್ ಆಗಿತ್ತು. ಎರಡು ದಶಕಗಳಿಗೂ ಹೆಚ್ಚು ಕಾಲ ಭಾರತೀಯ ಮಾರುಕಟ್ಟೆಯಲ್ಲಿ ಪಲ್ಸರ್ ಬೈಕ್‌ಗಳು ತನ್ನ ಜನಪ್ರಿಯತೆಯಿಂದ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯನ್ನು ಕಂಡಿತು. ಆದರೆ ಹೊಸ ಬೈಕುಗಳ ಆಗಮನಗಳ ಬಳಿಕ ಅದರ ಜೊತೆ ಪೈಪೋಟಿ ನೀಡುವಲ್ಲಿ ಹಿಂದುಳಿದಿದೆ.

ಇದೀಗ ಬಜಾಜ್ ಆಟೋ ತನ್ನ ಮುಂಬರುವ ಫೇರ್ಡ್ ಪಲ್ಸರ್ (Pulsar) ಬೈಕ್ ಗಾಗಿ ಹೊಸ ಟೀಸರ್ ಅನ್ನು ಬಿಡುಗಡೆಗೊಳಿಸಿದೆ. ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಟೀಸರ್ "The sound is enough" ಶೀರ್ಷಿಕೆಯನ್ನು ಒಳಗೊಂಡಿದೆ. ಇದು ಏನು ಎಂದು ನಿಮಗೆ ಈಗಾಗಲೇ ತಿಳಿದಿದೆ.. ಅಥವಾ ನಿಮಗೆ?" ಮತ್ತು #BajajPulsar ಮತ್ತು #DefinitelyDaring ನಂತಹ ಹ್ಯಾಶ್‌ಟ್ಯಾಗ್‌ಗಳನ್ನು ಬಳಿಸಿದ್ದಾರೆ.

New Pulsar Model

ನವೀಕರಿಸಿದ ಬಜಾಜ್ ಪಲ್ಸರ್ ಆರ್ಎಸ್ 200 ಅಥವಾ ಹೊಸ ಪಲ್ಸರ್ ಆರ್ಎಸ್ 400 ಎಂಬುದರ ಕುರಿತು ಊಹಾಪೋಹಗಳು ಹರಡಿದೆ. ಪಲ್ಸರ್ ಆರ್‌ಎಸ್ 200 ನವೀಕರಣಕ್ಕಾಗಿ ಕಾಯುತ್ತಿದೆ, ಅದರ ರೇಂಜ್ ನಲ್ಲಿ ಇನ್ನೂ ನವೀಕರಣ ಸ್ವೀಕರಿಸದ ಏಕೈಕ ಮಾದರಿಯಾಗಿದೆ. 2024ರ ಆವೃತ್ತಿಯ ನಿರೀಕ್ಷಿತ ಬದಲಾವಣೆಗಳು ಬ್ಲೂಟೂತ್ ಕನೆಕ್ಟಿವಿಟಿನೊಂದಿಗೆ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್, ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಎಲ್ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ತಾಜಾ ಬಣ್ಣದ ಆಯ್ಕೆಗಳನ್ನು ಒಳಗೊಂಡಿವೆ.

ಈ ನವೀಕರಣಗಳ ಹೊರತಾಗಿಯೂ, 24.1bhp ಮತ್ತು 18.7Nm ಟಾರ್ಕ್ ಅನ್ನು ಉತ್ಪಾದಿಸುವ ಅದರ 199.5cc ಎಂಜಿನ್ ಬದಲಾಗದೆ ಉಳಿಯುತ್ತದೆ. ಪರ್ಯಾಯವಾಗಿ ಬಜಾಜ್ ಕಂಪನಿಯು ಹೊಸ ಟೀಸರ್ ಅನ್ನು ಬಿಡುಗಡೆಗೊಳಿಸಲಾಗಿದೆ. ಇದು ಪಲ್ಸರ್ RS 400 ಎಂದು ಕೂಡ ಹೇಳಲಾಗುತ್ತಿದೆ. ಇದು RS 200 ಮಾದರಿಗಿಂತ ದೊಡ್ಡ ಮತ್ತು ಹೆಚ್ಚು ಶಕ್ತಿಯುತ ಪ್ರತಿರೂಪವಾಗಿದೆ.

New Pulsar Model

ಹೊಸ ಬಜಾಜ್ ಪಲ್ಸರ್ RS 400 ಬೈಕ್ ಮಾದರಿಯು ಅಗ್ರೇಸಿವ್ ಸ್ಟೈಲ್, ಏರೋಡೈನಾಮಿಕ್ ಫೇರಿಂಗ್ ಮತ್ತು ಸುಧಾರಿತ ತಂತ್ರಜ್ಞಾನವನ್ನು ಒಳಗೊಂಡಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಇನ್ನು ಈ ಹೊಸ ಬೈಕಿನ ಮುಖ್ಯಾಂಶಗಳು ಬ್ಲೂಟೂತ್-ಸಕ್ರಿಯಗೊಳಿಸಿದ ಡಿಜಿಟಲ್ ಕನ್ಸೋಲ್, ಎಲ್ಲಾ-LED ಲೈಟಿಂಗ್ ಮತ್ತು ಟ್ರ್ಯಾಕ್ ಕಾರ್ಯಕ್ಷಮತೆಗಾಗಿ ವಿನ್ಯಾಸಗೊಳಿಸಲಾದ ರೈಡಿಂಗ್ ಮೋಡ್‌ಗಳನ್ನು ಒಳಗೊಂಡಿರಬಹುದು.

RS 400 ಅನ್ನು ಡೊಮಿನಾರ್ 400 ಮತ್ತು ಪಲ್ಸರ್ NS400 ನಿಂದ 373.27cc ಲಿಕ್ವಿಡ್-ಕೂಲ್ಡ್ ಎಂಜಿನ್‌ ನೊಂದಿಗೆ ಬರಬಹುದು ಎಂದು ನಿರೀಕ್ಷಿಸಲಾಗಿದೆ. ಇದು ಸುಮಾರು 38bhp ಮತ್ತು 35Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು 6-ಸ್ಪೀಡ್ ಗೇರ್‌ಬಾಕ್ಸ್, ಸ್ಲಿಪ್ಪರ್ ಕ್ಲಚ್ ಮತ್ತು ವರ್ಧಿತ ಕಾರ್ಯಕ್ಷಮತೆಗಾಗಿ ಟ್ರ್ಯಾಕ್ಷನ್ ಕಂಟ್ರೋಲ್ ಅನ್ನು ಹೊಂದಿರುತ್ತದೆ.

ಹೊಸ ಬಜಾಜ್ ಪಲ್ಸರ್ 400 ಬೈಕ್ ಸಸ್ಪೆಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಗೋಲ್ಡನ್ ಫಿನಿಶ್‌ನಿಂದ ಹೈಲೈಟ್ ಮಾಡಲಾದ 43 ಎಂಎಂ ಯುಎಸ್‌ಡಿ ಮತ್ತು ಹಿಂಭಾಗದಲ್ಲಿ ಪ್ರಿ-ಲೋಡ್ ಹೊಂದಾಣಿಕೆ ಮೊನೊಶಾಕ್‌ನೊಂದಿಗೆ ಬರುತ್ತದೆ. ಇನ್ನು ಈ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗ 320 ಎಂಎಂ ಮತ್ತು 230 ಎಂಎಂ ಹಿಂಭಾಗದ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, December 31, 2024, 12:00 [IST]
English summary
Bajaj auto teases new pulsar model details
Read more on bajaj auto india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+