Chetak: ಬಜಾಜ್ ಚೇತಕ್ ಇ-ಸ್ಕೂಟರ್‌ನ ಹೊಸ ರೂಪಾಂತರ ಬಿಡುಗಡೆ.. ರೂ.95,998 ಬೆಲೆ, ವಿಶೇಷತೆಗಳೇನು?

ಭಾರತದ ವಿಶ್ವಾಸಾರ್ಹ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿ ಬಜಾಜ್ (Bajaj) ಗುರುತಿಸಿಕೊಂಡಿದೆ. ದೇಶೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಸಂಖ್ಯೆಯ ಯುವ ಗ್ರಾಹಕರನ್ನು ತನ್ನತ್ತ ಸೆಳೆಯಲು ಕೆಲವೇ ವರ್ಷಗಳ ಹಿಂದೆ, ಚೇತಕ್ (Chetak) ಎಲೆಕ್ಟ್ರಿಕ್ ಸ್ಕೂಟರ್‌ನ್ನು ಪರಿಚಯಿಸಿತ್ತು. ಶುಕ್ರವಾರ ಕಂಪನಿಯು ಅತ್ಯಂತ ಕೈಗೆಟುಕುವ ಬೆಲೆಗೆ ದೊರೆಯುವ 'ಚೇತಕ್ 2901' ಹೆಸರಿನ ಹೊಸ ಮಾದರಿಯನ್ನು ಬಿಡುಗಡೆಗೊಳಿಸಿದೆ. ಇದು ಎದುರಾಳಿ ಕಂಪನಿಗಳ ಇ-ಸ್ಕೂಟರ್‌ಗಳಿಗೆ ಪ್ರಬಲ ಪೈಪೋಟಿ ನೀಡುವಷ್ಟು ಭರಪೂರ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ನೂತನ ಬಜಾಜ್ ಚೇತಕ್ 2901 (Bajaj Chetak 2901) ಎಲೆಕ್ಟ್ರಿಕ್ ಸ್ಕೂಟರ್, ರೂ.95,998 ಎಕ್ಸ್ ಶೋರೂಂ ದರವನ್ನು (ಬೆಂಗಳೂರು) ಹೊಂದಿದೆ. ಇದು ಚೇತಕ್‌ನ 'ಅರ್ಬೇನ್' ಮತ್ತು 'ಪ್ರೀಮಿಯಂ' ರೂಪಾಂತರ (ವೇರಿಯೆಂಟ್)ಗಳಿಗಿಂತ ತುಂಬಾ ಕಡಿಮೆ ಬೆಲೆಯಾಗಿದೆ. ಹೊಸ ಆವೃತ್ತಿಯು 2.88 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಪಡೆದಿದ್ದು, ಸಂಪೂರ್ಣ ಚಾರ್ಜ್ ನಲ್ಲಿ 123 ಕಿ.ಮೀ ರೇಂಜ್ (ಮೈಲೇಜ್) ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

Bajaj Chetak 2901 Electric Scooter Launched In India Rs 95 998 Price

ಈ ಬಜಾಜ್ ಚೇತಕ್ 2901 ಎಲೆಕ್ಟ್ರಿಕ್ ಸ್ಕೂಟರ್, 63 ಕೆಎಂಪಿಹೆಚ್ ಟಾಪ್ ಸ್ಪೀಡ್ ಹೊಂದಿದ್ದು, ಹಲವು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಬ್ಲೂಟೂತ್ ಕನೆಕ್ಟಿವಿಟಿಯೊಂದಿಗೆ ಕಲರ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನ್ನು ಪಡೆದಿದೆ. ವಿಶೇಷವಾಗಿ ಟೆಕ್‌ಪ್ಯಾಕ್‌ನೊಂದಿಗೆ ಲಭ್ಯವಿದ್ದು, ಇದು ಹಿಲ್ ಹೋಲ್ಡ್, ಕಾಲ್, ಮ್ಯೂಸಿಕ್ ಕಂಟ್ರೋಲ್ & ಫಾಲೋ ಮಿ ಹೋಮ್ ಲೈಟ್‌ಗಳನ್ನು ಸಕ್ರಿಯಗೊಳಿಸಲು ನೆರವಾಗುತ್ತದೆ.

ಹೊಚ್ಚ ಹೊಸ ಬಜಾಜ್ ಚೇತಕ್ 2901 ಇ-ಸ್ಕೂಟರ್ ರೆಡ್, ಸೈಬರ್ ವೈಟ್, ಲೈಮ್ ಯೆಲ್ಲೋ ಸೇರಿದಂತೆ ವಿವಿಧ ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ. ದೇಶಾದ್ಯಂತವಿರುವ 500 ಶೋರೂಂಗಳಲ್ಲಿ ಈ ಚೇತಕ್ 2901 ಎಲೆಕ್ಟ್ರಿಕ್ ಸ್ಕೂಟರ್ ಬುಕ್ಕಿಂಗ್ ಆರಂಭವಾಗಿದ್ದು, ಆಸಕ್ತ ಗ್ರಾಹಕರು ಕಾಯ್ದಿರಿಸಬಹುದು. ಜೂನ್ 15ರಿಂದ ವಿತರಣೆಗಳು ಶುರುವಾಗಲಿದೆ ಎಂದು ವರದಿಯಾಗಿದೆ.

Bajaj Chetak 2901 Electric Scooter Launched In India Rs 95 998 Price

ಪ್ರಸ್ತುತ ಬಜಾಜ್ ಕಂಪನಿ ಮಾರಾಟಗೊಳಿಸುತ್ತಿರುವ ಚೇತಕ್‌ನ ಪ್ರೀಮಿಯಂ ಹಾಗೂ ಅರ್ಬೇನ್ ರೂಪಾಂತರಗಳ ಬಗ್ಗೆ ಹೇಳುವುದಾದರೆ, ಪ್ರೀಮಿಯಂ (ಟೆಕ್‌ಪ್ಯಾಕ್‌) ಆವೃತ್ತಿ ರೂ.1.15 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 3.2 ಕೆಡಬ್ಲ್ಯೂಹೆಚ್ ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಒಳಗೊಂಡಿದ್ದು, ಭರ್ತಿ ಚಾರ್ಜ್ ನಲ್ಲಿ 127 ಕಿ.ಮೀ ಓಡುತ್ತದೆ. ಜೊತೆಗೆ 73 ಕೆಎಂಪಿಹೆಚ್ ಟಾಪ್ ಸ್ಪೀಡ್ ಪಡೆದಿದೆ. ಇದರ ಬ್ಯಾಟರಿಯು 3.15 ಗಂಟೆಯಲ್ಲಿ ಶೇಕಡ 0-80% ಚಾರ್ಜ್ ಆಗುತ್ತದೆ

ಈ ಪ್ರೀಮಿಯಂ ಮಾದರಿ ಬ್ರೂಕ್ಲಿನ್ ಬ್ಲಾಕ್, ಹ್ಯಾಝೆಲ್ ನಟ್, ಇಂಡಿಗೋ ಮೆಟಾಲಿಕ್ ಬಣ್ಣಗಳೊಂದಿಗೂ ಲಭ್ಯವಿದೆ. ಕಲರ್ ಟಿಎಫ್‌ಟಿ ಸ್ಕ್ರೀನ್‌ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದ್ದು, ಇಕೋ & ಸ್ಪೋರ್ಟ್ಸ್ ಎಂಬ ರೈಡಿಂಗ್ ಮೋಡ್‌ನ್ನು ಒಳಗೊಂಡಿದೆ. ಪ್ರಯಾಣಿಕರ ಸುರಕ್ಷತೆಗಾಗಿ ಡಿಸ್ಕ್ ಬ್ರೇಕ್ ಅನ್ನು ಪಡೆದಿದೆ.

Bajaj Chetak 2901 Electric Scooter Launched In India Rs 95 998 Price

ಬಜಾಜ್ ಚೇತಕ್ ಅರ್ಬೇನ್ (ಟೆಕ್‌ಪ್ಯಾಕ್‌) ಆವೃತ್ತಿ ರೂ.1.23 ಲಕ್ಷ ಎಕ್ಸ್ ಶೋರೂಂ ದರವನ್ನು ಹೊಂದಿದೆ. 2.9 ಕೆಡಬ್ಲ್ಯೂಹೆಚ್ ಬ್ಯಾಟರಿಯನ್ನು ಒಳಗೊಂಡಿದ್ದು, ಪೂರ್ತಿ ಚಾರ್ಜ್ ನಲ್ಲಿ 113 ರಿಂದ 127 ಕಿ.ಮೀ ಕ್ರಮಿಸುತ್ತದೆ. ಇದರೊಳಗಿರುವ ಬ್ಯಾಟರಿ ಪ್ಯಾಕ್ ಕೂಡ ಶೇಕಡ 0-80% ಚಾರ್ಜ್ ಆಗಲು 3.15 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, June 7, 2024, 13:31 [IST]
English summary
Bajaj chetak 2901 electric scooter launched in india rs 95998 price
Read more on bajaj auto india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+