ಹೊಸ ಬಜಾಜ್ ಚೇತಕ್ 35 ಸೀರೀಸ್ ಇ-ಸ್ಕೂಟರ್‌ಗಳು ಬಿಡುಗಡೆ.. ಕಡಿಮೆ ಬೆಲೆ, ನಿರೀಕ್ಷೆಗೂ ಮೀರಿದ ವೈಶಿಷ್ಟ್ಯಗಳು!

ಬಜಾಜ್ ಆಟೋ (Bajaj Auto) ಪ್ರಖ್ಯಾತ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಹೆಸರುವಾಸಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಕಂಪನಿ ಮಾರಾಟಗೊಳಿಸುವ ಏಕೈಕ ಎಲೆಕ್ಟ್ರಿಕ್ ಸ್ಕೂಟರ್ 'ಚೇತಕ್' ಗೇಮ್ ಚೇಂಜರ್ ಆಗಿ ಹೊರಹೊಮ್ಮಿದ್ದು, ಉತ್ತಮ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಈ ನವೆಂಬರ್‌ನಲ್ಲಿ 26,163 ಯುನಿಟ್ ಚೇತಕ್ ಇ-ಸ್ಕೂಟರ್‌ಗಳು ಯಶಸ್ವಿಯಾಗಿ ಮಾರಾಟಗೊಂಡಿವೆ. ಶುಕ್ರವಾರ ಕಂಪನಿಯು 'ಚೇತಕ್ 35 ಸೀರೀಸ್' ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸಿದೆ.

ನೂತನ ಬಜಾಜ್ ಚೇತಕ್ 35 ಸೀರೀಸ್ (Bajaj Chetak 35 Series) ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಅತಿ ಕಡಿಮೆ ಬೆಲೆಗೆ ಪರಿಚಯಿಸಿದೆ. ಇವುಗಳು 3501 ಮತ್ತು 3502 ಎಂಬ ಎರಡು ವಿಧದಲ್ಲಿ ಖರೀದಿಗೆ ಲಭ್ಯವಾಗಲಿವೆ. '3502' ಮಾಡೆಲ್ ರೂ.1.20 ಲಕ್ಷ ಹಾಗೂ '3501' ಮಾಡೆಲ್ ರೂ.1.27 ಲಕ್ಷ (ಎಕ್ಸ್ ಶೋರೂಂ - ಬೆಂಗಳೂರು) ದರವನ್ನು ಪಡೆದಿವೆ.

Bajaj Chetak 35 Series Electric Scooters Launched In India Rs 1 20 Lakh Starting Price

ಹೊಚ್ಚ ಹೊಸ ಚೇತಕ್ 35 ಸೀರೀಸ್ ಇ-ಸ್ಕೂಟರ್‌ನ 3501 & 3502 ಮಾಡೆಲ್‌ಗಳು, ಒಂದೇ ರೀತಿಯ ಶಕ್ತಿಯುತವಾದ 3.5 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಆಯ್ಕೆಯನ್ನು ಹೊಂದಿವೆ. ಸಂಪೂರ್ಣ ಚಾರ್ಜ್‌ನಲ್ಲಿ 150 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡಲಿವೆ. 73 ಟಾಪ್ ಸ್ಪೀಡ್‌ನ್ನು ಪಡೆದಿವೆ. ಇವುಗಳಲ್ಲಿ ಬಳಕೆ ಮಾಡಿರುವ ಬ್ಯಾಟರಿಯು ಕೇವಲ 3 ಗಂಟೆಗಳಲ್ಲಿ 0-80% ಚಾರ್ಜ್ ಆಗುತ್ತದೆ.

ಈ ಬಜಾಜ್ ಚೇತಕ್ 35 ಸೀರೀಸ್ ಎಲೆಕ್ಟ್ಟ್ರಿಕ್ ಸ್ಕೂಟರ್‌ಗಳು, ಹಳೆಯ ರೆಟ್ರೋ ಶೈಲಿಯ ವಿನ್ಯಾಸ (ಡಿಸೈನ್) ಹೊಂದಿದ್ದು, ಇದು ನೋಡುಗರನ್ನು ಸೆಳೆಯಬಲ್ಲದು. ಆಕರ್ಷಕವಾದ ಎಲ್ಇಡಿ ಹೆಡ್‌ಲೈಟ್, ಕರ್ವಿ ಬಾಡಿ ಪ್ಯಾನೆಲ್‌ಗಳು ಮತ್ತು ಟೈಲ್ ಲ್ಯಾಂಪ್‌ಗಳನ್ನು ಹೊಂದಿವೆ. ಜೊತೆಗೆ ದೊಡ್ಡದಾದ 35-ಲೀಟರ್‌ನ ಬೂಟ್ ಸ್ಪೇಸ್‌ನ್ನು ಪಡೆದಿವೆ. ಸೀಟ್ 80 ಎಂಎಂ ಉದ್ದವಿದೆ.

Bajaj Chetak 35 Series Electric Scooters Launched In India Rs 1 20 Lakh Starting Price

ನೂತನ ಚೇತಕ್ 35 ಸೀರೀಸ್ ಎಲೆಕ್ಟ್ಟ್ರಿಕ್ ಸ್ಕೂಟರ್‌ಗಳು ಹತ್ತಾರು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿವೆ. ಪ್ರಮುಖವಾಗಿ 5-ಇಂಚಿನ ಟಿಎಎಫ್‌ಟಿ ಟಚ್‌ಸ್ಕ್ರೀನ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ, ಮ್ಯೂಸಿಕ್ ಕಂಟ್ರೋಲ್, ಆನ್‌ಬೋರ್ಡ್ ಚಾರ್ಜಿಂಗ್ ಮತ್ತು ಇಂಟಿಗ್ರೇಟೆಡ್ ಮ್ಯಾಪ್ಸ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿವೆ.

ಈ ಚೇತಕ್ 35 ಸೀರೀಸ್ ಎಲೆಕ್ಟ್ಟ್ರಿಕ್ ಸ್ಕೂಟರ್‌ಗಳು ಸುರಕ್ಷತೆಗೂ ಹೆಸರುವಾಗಿವೆ. ಸವಾರರ ರಕ್ಷಣೆಗಾಗಿ ಮೊನೊಶಾಕ್ ಸೆಟಪ್, ಮುಂಭಾಗ (ಫ್ರಂಟ್) ಡಿಸ್ಕ್ ಹಾಗೂ ಹಿಂಭಾಗ (ರೇರ್) ಡ್ರಮ್ ಬ್ರೇಕ್ ಆಯ್ಕೆಯನ್ನು ಹೊಂದಿವೆ. ಇದರೊಟ್ಟಿಗೆ ಜಿಯೋ ಫೆನ್ಸ್, ಥೆಫ್ಟ್ ಅಲರ್ಟ್ ಮತ್ತು ಆಕ್ಸಿಡೆಂಟ್ ಡಿಟೆಕ್ಷನ್ ಸೇರಿದಂತೆ ವಿವಿಧ ರಕ್ಷಣಾತ್ಮಕ ವೈಶಿಷ್ಟ್ಯಗಳನ್ನು ಪಡೆದಿವೆ.

Bajaj Chetak 35 Series Electric Scooters Launched In India Rs 1 20 Lakh Starting Price

ಆಸಕ್ತ ಗ್ರಾಹಕರು, ಹೊಸ ಬಜಾಜ್ ಚೇತಕ್ 35 ಸೀರೀಸ್ ಎಲೆಕ್ಟ್ಟ್ರಿಕ್ ಸ್ಕೂಟರ್‌ಗಳಿಗಾಗಿ ಸಮೀಪದ ಡೀಲರ್‌ಶಿಪ್‌ಗಳು ಅಥವಾ ಆನ್‌ಲೈನ್‌ನಲ್ಲಿ ಬುಕ್ಕಿಂಗ್ ಮಾಡಬಹುದು. '3501' ಮಾಡೆಲ್ ವಿತರಣೆ ಡಿಸೆಂಬರ್ ಅಂತ್ಯದಲ್ಲಿ ಆರಂಭವಾಗಲಿದೆ. ಅದೇ ರೀತಿಯಲ್ಲಿ '3502' ಮಾಡೆಲ್ ಜನವರಿಯಲ್ಲಿ ಗ್ರಾಹಕರ ಮನೆ ಸೇರುವ ನಿರೀಕ್ಷೆಯಿದೆ.

ಇನ್ನು, ನೂತನ ಬಜಾಜ್ ಚೇತಕ್ 35 ಸೀರೀಸ್ ಇ-ಸ್ಕೂಟರ್‌ಗಳ ಮೇಲೆ ಗ್ರಾಹಕರು ಕೂಡ ದೊಡ್ಡಮಟ್ಟದ ಭರವಸೆಗಳನ್ನು ಇಟ್ಟುಕೊಂಡಿದ್ದಾರೆ. ಇವು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿರುವುದರಿಂದ ಉತ್ತಮ ಸಂಖ್ಯೆಯಲ್ಲಿ ಮಾರಾಟವಾಗಬಹುದು ಎಂದು ಕಂಪನಿಯು ಅಂದಾಜಿಸಿದೆ. ವಿತರಣೆಗಳು ಪ್ರಾರಂಭವಾದ ಮೇಲೆ ದೇಶೀಯ ಗ್ರಾಹಕರಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, December 20, 2024, 13:23 [IST]
English summary
Bajaj chetak 35 series electric scooters launched in india rs 1 20 lakh starting price details
Read more on bajaj auto india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+