ನಿನ್ನೆಯಷ್ಟೇ ಬಿಡುಗಡೆ: ನೂತನ ಬಜಾಜ್ ಚೇತಕ್ 35 ಸೀರೀಸ್ ಇ-ಸ್ಕೂಟರ್‌ಗಳ ಕುರಿತ ಪ್ರಮುಖಾಂಶಗಳು.. ಯಾರು ಹೇಳಲ್ಲ!

ಬಜಾಜ್ ಆಟೋ (Bajaj Auto) ವಿಶ್ವಾಸಾರ್ಹತೆಗೆ ಹೆಸರುವಾಸಿಯಾಗಿದೆ. ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಹೊಂದಿರುವ ವಿವಿಧ ದ್ವಿಚಕ್ರ ವಾಹನಗಳನ್ನು ಮಾರಾಟಗೊಳಿಸುತ್ತಿದೆ. ಅದರಲ್ಲೂ ಕಂಪನಿಯ 'ಚೇತಕ್' ಜನಪ್ರಿಯ ಎಲೆಕ್ಟ್ರಿಕ್ ಸ್ಕೂಟರ್ ಆಗಿ ಹೊರಹೊಮ್ಮಿದೆ. ಬಜಾಜ್ ಶುಕ್ರವಾರ ಹೊಚ್ಚ ಹೊಸ 'ಚೇತಕ್ 35 ಸೀರೀಸ್' ಇ-ಸ್ಕೂಟರ್‌ಗಳನ್ನು ಪರಿಚಯಿಸಿದೆ. ಬನ್ನಿ.. ಈ ನೂತನ ಎಲೆಕ್ಟ್ರಿಕ್ ಸ್ಕೂಟರ್‌ಗಳ ವಿಶೇಷತೆ ಕುರಿತಂತೆ ಪ್ರಮುಖಾಂಶಗಳನ್ನು ತಿಳಿಯೋಣ.

ಬೆಲೆ & ರೂಪಾಂತರಗಳು (Price & Variants): ನೂತನ ಬಜಾಜ್ ಚೇತಕ್ 35 ಸೀರೀಸ್ (Bajaj Chetak 35 Series) ಎಲೆಕ್ಟ್ರಿಕ್ ಸ್ಕೂಟರ್‌ಗಳು, ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಲಭ್ಯವಿವೆ. ರೂ.1.20 ಲಕ್ಷದಿಂದ ರೂ.1.27 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಒಳಗೊಂಡಿವೆ. 3501 ಹಾಗೂ 3502 ಎಂಬ ರೂಪಾಂತರಗಳ (ವೇರಿಯೆಂಟ್) ಆಯ್ಕೆಯನ್ನು ಹೊಂದಿವೆ.

Bajaj Chetak 35 Series Electric Scooters Top Things You Should Need to Know

ವಿನ್ಯಾಸ (Design): ಹೊಸ ಚೇತಕ್ 35 ಸೀರೀಸ್ ಇ-ಸ್ಕೂಟರ್‌ಗಳು ಹೊರಭಾಗದಲ್ಲಿ ಆಕರ್ಷಕ ವಿನ್ಯಾಸವನ್ನು ಪಡೆದಿವೆ. ಉತ್ತಮವಾಗಿರುವ ಎಲ್ಇಡಿ ಹೆಡ್‌ಲೈಟ್, ಕರ್ವಿ ಬಾಡಿ ಪ್ಯಾನೆಲ್‌ಗಳು ಹಾಗೂ ಟೈಲ್ ಲ್ಯಾಂಪ್‌ಗಳನ್ನು ಪಡೆದಿವೆ. ಜೊತೆಗೆ ಬ್ರೂಕ್ಲಿನ್ ಬ್ಲ್ಯಾಕ್, ಹ್ಯಾಝೆಲ್ ನಟ್, ಮ್ಯಾಟ್ ರೆಡ್ ಮತ್ತು ಇಂಡಿಗೋ ಮೆಟಾಲಿಕ್ ಬ್ಲೂ ಸೇರಿದಂತೆ ವಿವಿಧ ಬಣ್ಣಗಳೊಂದಿಗೂ ಸಿಗುತ್ತವೆ.

ಕಾರ್ಯಕ್ಷಮತೆ (Performance): ಈ ಬಜಾಜ್ ಚೇತಕ್ 35 ಸೀರೀಸ್ ಎಲೆಕ್ಟ್ರಿಕ್ ಸ್ಕೂಟರ್‌ಗಳು, 3.5 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ಅನ್ನು ಪಡೆದಿವೆ. ಭರ್ತಿ ಚಾರ್ಜ್‌ನಲ್ಲಿ 150 ಕಿಲೋಮೀಟರ್ ಓಡುತ್ತವೆ. 73 - ಟಾಪ್ ಸ್ಪೀಡ್‌ನ್ನು ಹೊಂದಿವೆ. ಇವುಗಳಲ್ಲಿ ಉಪಯೋಗಿಸಿರುವ ಬ್ಯಾಟರಿಯು ಕೇವಲ 3 ಗಂಟೆಗಳಲ್ಲಿ ಶೇಕಡ 0 ರಿಂದ 80% ಚಾರ್ಜ್ ಆಗಿ ಬಿಡುತ್ತದೆ.

Bajaj Chetak 35 Series Electric Scooters Top Things You Should Need to Know

ವೈಶಿಷ್ಟ್ಯಗಳು (Features): ನೂತನ ಇ-ಸ್ಕೂಟರ್‌ಗಳು ಹಲವು ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿವೆ. ಟಿಎಎಫ್‌ಟಿ ಟಚ್‌ಸ್ಕ್ರೀನ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ, ಮ್ಯೂಸಿಕ್ ಕಂಟ್ರೋಲ್, ಆನ್‌ಬೋರ್ಡ್ ಚಾರ್ಜಿಂಗ್ ಮತ್ತು ಇಂಟಿಗ್ರೇಟೆಡ್ ಮ್ಯಾಪ್ಸ್ ಒಳಗೊಂಡನಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿವೆ. ಇದರೊಟ್ಟಿಗೆ ಬೃಹತ್ ಗಾತ್ರದ 35-ಲೀಟರ್‌ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಹೊಂದಿವೆ.

ಸುರಕ್ಷತಾ ವೈಶಿಷ್ಟ್ಯಗಳು (Safety Features): ಹೊಸ ಚೇತಕ್ 35 ಸೀರೀಸ್ ಎಲೆಕ್ಟ್ರಿಕ್ ಸ್ಕೂಟರ್‌ಗಳು, ಸವಾರರಿಗೆ ಹೆಚ್ಚಿನ ರಕ್ಷಣೆ ಒದಗಿಸಲು ಡಿಸ್ಕ್ ಹಾಗೂ ಡ್ರಮ್ ಬ್ರೇಕ್‌ಗಳನ್ನು ಹೊಂದಿವೆ. ಹಾಗೆಯೇ ಮೊನೊಶಾಕ್ - ಸಸ್ಪೆನ್ಷನ್ ಸೆಟಪ್, ಜಿಯೋ ಫೆನ್ಸ್, ಥೆಫ್ಟ್ ಅಲರ್ಟ್ ಹಾಗೂ ಆಕ್ಸಿಡೆಂಟ್ ಡಿಟೆಕ್ಷನ್ ಸೇರಿದಂತೆ ವಿವಿಧ ಸುರಕ್ಷತಾ ವೈಶಿಷ್ಟ್ಯಗಳನ್ನು ಪಡೆದಿವೆ.

Bajaj Chetak 35 Series Electric Scooters Top Things You Should Need to Know

ಒಟ್ಟಾರೆಯಾಗಿ, ನೂತನ ಇ-ಸ್ಕೂಟರ್‌ಗಳು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಇಷ್ಟಪಟ್ಟು ಖರೀದಿ ಮಾಡಬಹುದು. ಆಸಕ್ತರು ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಹತ್ತಿರದ ಡೀಲರ್‌ಶಿಪ್‌ಗಳು ಅಥವಾ ಆನ್‌ಲೈನ್‌ನಲ್ಲಿ ಬುಕ್ಕಿಂಗ್ ಮಾಡಲು ಸಾಧ್ಯವಾಗಲಿವೆ. '3501' ಮಾಡೆಲ್ ಡಿಸೆಂಬರ್ ಕೊನೆಯ ಭಾಗ ಮತ್ತು '3502' ಮಾಡೆಲ್ ಜನವರಿಯಲ್ಲಿ ವಿತರಣೆಯಾಗಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, December 21, 2024, 11:00 [IST]
English summary
Bajaj chetak 35 series electric scooters top things you should need to know
Read more on bajaj auto india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+