Bajaj Chetak: ಗೇಮ್ ಚೇಂಜರ್ ಆಗುತ್ತಿದೆ ಬಜಾಜ್ ಚೇತಕ್.. 2 ಲಕ್ಷ ಯುನಿಟ್ ಮಾರಾಟ, ರೂ.95,998 ಬೆಲೆ

ಭಾರತದ ವಿಶ್ವಾಸಾರ್ಹ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿ ಬಜಾಜ್ ಆಟೋ (Bajaj Auto) ಮನೆ ಮಾತಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಕಂಪನಿಯು ಮಾರಾಟಗೊಳಿಸುವ ಚೇತಕ್ (Chetak) ಗೇಮ್ ಚೇಂಜರ್ ಎಲೆಕ್ಟ್ರಿಕ್ ಸ್ಕೂಟರ್‌ ಆಗಿ ಹೊರಹೊಮ್ಮಿದೆ. ಇದು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯ ಹೊಂದಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಸದ್ಯ, ಈ ಸ್ಕೂಟರ್ ಮಾರಾಟದಲ್ಲಿ 'ಬಜಾಜ್' ಹೊಸ ಇತಿಹಾಸ ನಿರ್ಮಿಸಿದ್ದು, ಜನಪ್ರಿಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಉತ್ಪಾದನಾ ಕಂಪನಿಗಳಾದ ಓಲಾ, ಎಥರ್, ಟಿವಿಎಸ್ ಹಾಗೂ ಹೀರೋಗೆ ಪ್ರಬಲವಾದ ಸ್ಪರ್ಧೆಯೊಡ್ಡುತ್ತಿದೆ. ಬನ್ನಿ.. ಆ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ.

ಜನವರಿ 2020ರಲ್ಲಿ ಬಜಾಜ್ ಚೇತಕ್ (Bajaj Chetak) ಎಲೆಕ್ಟ್ರಿಕ್ ಸ್ಕೂಟರ್‌ನ್ನು ಅದ್ದೂರಿಯಾಗಿ ಬಿಡುಗಡೆ ಮಾಡಲಾಗಿತ್ತು. ಅಂದಿನಿಂದ ಜೂನ್ 2024ರವರೆಗೆ ಸರಿ ಸುಮಾರು 2 ಲಕ್ಷ ಯುನಿಟ್ ಚೇತಕ್ ಸ್ಕೂಟರ್‌ಗಳನ್ನು ಮಾರಾಟಗೊಳಿಸುವ ಮೂಲಕ ಕಂಪನಿಯು ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸಿದೆ. ಆದಾಗ್ಯೂ ಈ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕೂಡ ಕಂಡಿದೆ.

Bajaj Chetak Electric Scooter Crosses 2 Lakh Sales Milestone Rs 95 998 Starting Price

ನೂತನ ಬಜಾಜ್ ಚೇತಕ್ ಮಾರುಕಟ್ಟೆಗೆ ಬಂದ ಎರಡೇ ತಿಂಗಳಲ್ಲಿ ಆರಂಭವಾದ ಕೋವಿಡ್‌ನಿಂದ ಮಾರಾಟ ಸಂಖ್ಯೆ ಭಾರೀ ಪ್ರಮಾಣದಲ್ಲಿ ಕುಸಿತವಾಯಿತು. ಮೊದಲ 15 ತಿಂಗಳು ಕೇವಲ 1,587 ಯುನಿಟ್‌ಗಳು ಮಾರಲಾಗಿತ್ತು. 2022ರ ಹಣಕಾಸು ವರ್ಷದಲ್ಲಿ ಕೊಂಚ ಚೇತರಿಸಿಕೊಂಡು 8,187 ಯುನಿಟ್‌ ಹಾಗೂ 2023ರ ಹಣಕಾಸು ವರ್ಷದಲ್ಲಿ 36,260 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು.

2024ರ ಹಣಕಾಸು ವರ್ಷದಲ್ಲಿ 1,15,702 ಯುನಿಟ್ ಮತ್ತು 2025ರ ಹಣಕಾಸು ವರ್ಷದಲ್ಲಿ (ಜನವರಿ - ಜೂನ್ 2024ರ ಅವಧಿ) 40,854 ಯುನಿಟ್ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಲಾಗಿದೆ. ಒಟ್ಟು ಅಂಕಿಸಂಖ್ಯೆ 2,02,590 ಯುನಿಟ್‌ಗೆ ಬಂದು ನಿಂತಿದೆ. ಪ್ರಸ್ತುತ ದೇಶೀಯವಾಗಿ ಈ ಚೇತಕ್ ವಿವಿಧ ರೂಪಾಂತರ (ವೇರಿಯೆಂಟ್)ಗಳ ಆಯ್ಕೆಯಲ್ಲಿ ಸಿಗುತ್ತದೆ. ಅವುಗಳೆಂದರೆ ಚೇತಕ್ 2901, ಅರ್ಬೇನ್ ಮತ್ತು ಪ್ರೀಮಿಯಂ.

Bajaj Chetak Electric Scooter Crosses 2 Lakh Sales Milestone Rs 95 998 Starting Price

ಬಜಾಜ್ ಚೇತಕ್ 2901 ಎಲೆಕ್ಟ್ರಿಕ್ ಸ್ಕೂಟರ್ ರೂ.95,998 ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. 2.88 ಕೆಡಬ್ಲ್ಯೂಹೆಚ್ ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಒಳಗೊಂಡಿದ್ದು, ಭರ್ತಿ ಚಾರ್ಜ್‌ನಲ್ಲಿ 123 ಕಿ.ಮೀ ರೇಂಜ್ (ಮೈಲೇಜ್) ಕೊಡುತ್ತದೆ. 63 ಕೆಎಂಪಿಹೆಚ್ ಟಾಪ್ ಸ್ಪೀಡ್ ಸಹ ಹೊಂದಿದೆ. ಕಲರ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಹೊಚ್ಚ ಹೊಸ ಬಜಾಜ್ ಚೇತಕ್ ಪ್ರೀಮಿಯಂ ಮಾದರಿಯು ರೂ.1.47 ಲಕ್ಷ (ಎಕ್ಸ್ ಶೋರೂಂ) ಬೆಲೆಯನ್ನು ಹೊಂದಿದೆ. 3.2 ಕೆಡಬ್ಲ್ಯೂಹೆಚ್ ಸಾಮರ್ಥ್ಯದ ಬ್ಯಾಟರಿಯನ್ನು ಪಡೆದಿದ್ದು, ಸಂಪೂರ್ಣ ಚಾರ್ಜ್‌ನಲ್ಲಿ 127 ಕಿ.ಮೀ ಕ್ರಮಿಸುತ್ತದೆ. 73 ಕೆಎಂಪಿಹೆಚ್ ಟಾಪ್ ಸ್ಪೀಡ್ ಹೊಂದಿದೆ. ಇದರ ಬ್ಯಾಟರಿ ಪ್ಯಾಕ್ 3.15 ಗಂಟೆಯಲ್ಲಿ ಶೇಕಡ 0-80% ಚಾರ್ಜ್ ಆಗುತ್ತದೆ.

Bajaj Chetak Electric Scooter Crosses 2 Lakh Sales Milestone Rs 95 998 Starting Price

ಬಜಾಜ್ ಚೇತಕ್ ಅರ್ಬೇನ್ ರೂಪಾಂತರವು ರೂ.1.23 ಲಕ್ಷ ಎಕ್ಸ್ ಶೋರೂಂ ದರವನ್ನು ಪಡೆದಿದೆ. 2.9 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ಒಳಗೊಂಡಿದ್ದು, ಪೂರ್ತಿ ಚಾರ್ಜ್‌ನಲ್ಲಿ 113 ರಿಂದ 127 ಕಿ.ಮೀ ಓಡುತ್ತದೆ. ಇದರಲ್ಲಿರುವ ಬ್ಯಾಟರಿಯು ಶೇಕಡ 0-80% ಚಾರ್ಜ್ ಆಗಲು ಸುಮಾರು 3.15 ಗಂಟೆ ತೆಗೆದುಕೊಳ್ಳುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, July 23, 2024, 17:57 [IST]
English summary
Bajaj chetak electric scooter crosses 2 lakh sales milestone rs 95998 starting price
Read more on bajaj auto india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+