ರಸ್ತೆಗಿಳಿದ ಬಜಾಜ್ ಸಿಎನ್‌ಜಿ ಬೈಕ್: CNG ತುಂಬುವಾಗ ನೋಡಲು ಮುಗಿಬಿದ್ದ ಜನ! ವಿಡಿಯೋ

ಬಜಾಜ್ ಆಟೋ ವಿಶ್ವದ ಮೊದಲ ಸಿಎನ್‌ಜಿ ಬೈಕ್ ಅನ್ನು ಬಿಡುಗಡೆ ಮಾಡಿದೆ. ಈ ಬೈಕ್ ರಸ್ತೆಗೆ ಯಾವಾಗ ಇಳಿಯಲಿದೆ ಎಂದು ಜನ ತುಂಬಾ ಆಸಕ್ತಿಯಿಂದ ಕಾಯುತ್ತಿದ್ದಾರೆ. ಇತ್ತೀಚೆಗೆ ಪ್ರಮುಖ ಆಟೋ ವೆಬ್‌ಸೈಟ್ ಆಗಿರುವ 'ರಷ್‌ಲೇನ್' ಅವರು ಈ ಬೈಕ್ ಅನ್ನು ಬಜಾಜ್ ಕಂಪನಿಯಿಂದ ಪಡೆದು ಸಾರ್ವಜನಿಕ ರಸ್ತೆಯಲ್ಲಿ ಓಡಿಸಿದ್ದಾರೆ. ಹಾಗೆಯೇ ಇದಕ್ಕೆ ಸಿಎನ್‌ಜಿ ತುಂಬಲು ಬಂಕ್‌ಗೆ ಕೊಂಡೊಯ್ದಾಗ ಜನ ಆಸಕ್ತಿಯಿಂದ ಮುಗಿಬಿದ್ದು ನೋಡಿದ್ದಾರೆ. ಸಿಎನ್‌ಜಿ ಇಂಧನ ಕೇಂದ್ರದಲ್ಲಿ ಸಾರ್ವಜನಿಕ ಪ್ರತಿಕ್ರಿಯೆ ಕುರಿತು ಈ ಲೇಖನದಲ್ಲಿ ನೋಡೋಣ.

ಬಜಾಜ್ ಫ್ರೀಡಂ 125 ಬೈಕ್ ಸಿಎನ್‌ಜಿ ಮತ್ತು ಪೆಟ್ರೋಲ್ ಇಂಧನಗಳಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ. ಕಂಪನಿಯು ಎಡ ಸ್ವಿಚ್ ಗೇರ್‌ನಲ್ಲಿ ಟಾಗಲ್ ಅನ್ನು ಅಳವಡಿಸಿದ್ದು, ಸಿಎನ್‌ಜಿ ಮತ್ತು ಪೆಟ್ರೋಲ್ ನಡುವೆ ತಡೆರಹಿತವಾಗಿ ಬದಲಾಗುತ್ತದೆ. ಇದು ಬಹಳ ಅಚ್ಚುಕಟ್ಟಾದ ವೈಶಿಷ್ಟ್ಯವಾಗಿದ್ದು, ಖರೀದಿದಾರರಿಗೆ ಅನುಕೂಲಕರ ಆಯ್ಕೆಯಾಗಲಿದೆ ಎಂದು ಹೇಳುವುದರಲ್ಲಿ ಯಾವುದೇ ಅನುಮಾನವಿಲ್ಲ.

bajaj-cng-bike-refilling-public-reaction-video

ರಷ್‌ಲೇನ್ ಅವರ ಪ್ರಕಾರ, ಬಜಾಜ್ ಫ್ರೀಡಂ ಬೈಕ್ ಅನ್ನು ಪುಣೆಯಲ್ಲಿ ಓಡಿಸಲಾಗಿದೆ. ಇಲ್ಲಿ ಸಿಎನ್‌ಜಿ ತುಂಬಲು ಮುಂದಾದಾಗ ಸಿಎನ್‌ಜಿ ಬಂಕ್‌ಗಳು ಅಷ್ಟು ಸುಲಭವಾಗಿ ಸಿಗಲಿಲ್ಲ. ಪುಣೆಯಂತಹ ದೊಡ್ಡ ನಗರಗಳಲ್ಲಿ ಸಿಎನ್‌ಜಿ ವಾಹನಗಳ ಸಂಖ್ಯೆ ಹೆಚ್ಚಿದ್ದರೂ, ಕಡಿಮೆ ಸಿಎನ್‌ಜಿ ಬಂಕ್‌ಗಳು ಇವೆ. ಪರಿಣಾಮವಾಗಿ ಆಟೋಗಳು, ಕ್ಯಾಬ್‌ಗಳಿಂದ ಬಂಕ್‌ನಲ್ಲಿ ವ್ಯಾಪಕ ಸರತಿ ಸಾಲುಗಳು ಇದ್ದವು.

ಹೊಸ ಬೈಕ್ ಆಗಿದ್ದರಿಂದ ಸರತಿ ಸಾಲಿನಲ್ಲಿ ನಿಲ್ಲುವುದಕ್ಕಿಂತ ಈ ಬೈಕ್‌ಗೆ ಸಿಎನ್‌ಜಿ ಹೇಗೆ ತುಂಬುತ್ತಾರೆ ಎಂಬ ಕುತೂಹಲ ಅಲ್ಲಿನವರಲ್ಲಿ ಇದ್ದರಿಂದ ಬೈಕ್‌ಗೆ ದಾರಿಮಾಡಿಕೊಟ್ಟಿದ್ದಾರೆ. ಬಳಿಕ ಸಿಎನ್‌ಜಿ ತುಂಬುವಾಗ ಯಾವುದೇ ತೊಂದರೆಗಳನ್ನು ಎದುರಿಸಲಿಲ್ಲ, ಪ್ರಕ್ರಿಯೆಯು ಸುಗಮವಾಗಿ ನಡೆದಿದ್ದು, ಸಿಎನ್‌ಜಿ ತುಂಬುವಾಗ ಜನ ಮುಗಿಬಿದ್ದು ನೋಡಿದರು.

bajaj-cng-bike-refilling-public-reaction-video

ಫ್ಯಾಬ್ರಿಕ್ ಸೀಟ್‌ಗಳಿಂದ ಸ್ಥಿರ ವಿದ್ಯುತ್ ನಿರ್ಮಾಣ ಮತ್ತು ಎಲ್ಲಾ ವಿಂಡೋಗಳನ್ನು ಮುಚ್ಚಿದ ಕಾರಿನಲ್ಲಿ ಸಿಎನ್‌ಜಿ ವಾಸನೆಯ ಅಪಾಯಗಳು, ಬಜಾಜ್ ಫ್ರೀಡಂ 125 ಸಿಎನ್‌ಜಿ ಬೈಕ್‌ಗೆ ಅನ್ವಯಿಸುವುದಿಲ್ಲ. ಏಕೆಂದರೆ ಬಜಾಜ್ ಫ್ರೀಡಂ 125 ನಲ್ಲಿ ವ್ಯಾಪಕವಾದ ಸುರಕ್ಷತಾ ಪರೀಕ್ಷೆಗಳನ್ನು ಮಾಡಲಾಗಿದೆ. ಯಾವುದೇ ಅಪಾಯಗಳಿಲ್ಲದೆ ದೃಢವಾದ ವ್ಯವಸ್ಥೆಯನ್ನು ಒಳಗೊಂಡಿದೆ ಎಂದು ಕಂಪನಿ ಭರವಸೆ ನೀಡಿದೆ.

ಸಾರ್ವಜನಿಕರ ಪ್ರತಿಕ್ರಿಯೆ: ಪುಣೆ ನಗರದಲ್ಲಿ ಬಜಾಜ್ ಫ್ರೀಡಂ 125 ಸವಾರಿ ಮಾಡುವಾಗ ಸಾಕಷ್ಟು ಗಮನ ಸೆಳೆದಿದೆ. ಏಕೆಂದರೆ ಇದು ಭಾರತದ ಅತ್ಯಂತ ನಿರೀಕ್ಷಿತ ಬೈಕ್, ಹೆದ್ದಾರಿಯಲ್ಲಿ ಕೆಲವು ಸವಾರರು ಬೈಕ್ ಅನ್ನು ಓವರ್‌ಟೇಕ್ ಮಾಡಿ ನಿಲ್ಲಿಸುವಂತೆ ವಿನಂತಿಸಿದ್ದಾರೆ. ಈ ಮೋಟಾರ್‌ಸೈಕಲ್ ಬಗ್ಗೆ ವಿಚಾರಿಸಿದ್ದಾರೆ ಎಂದು ಹೇಳಲಾಗಿದೆ.

ಎಲ್ಲರೂ ಕೂಡ ಬೈಕ್ ನೋಡಿ 'ಮೈಲೇಜ್ ಎಷ್ಟು' 'ಬೆಲೆ ಎಷ್ಟು' 'ಸಿಎನ್‌ಜಿ ಕಿಟ್ ಎಲ್ಲಿದೆ' ಎಂಬ ಆಸಕ್ತಿಕರ ಪ್ರಶ್ನೆಗಳನ್ನು ಕೇಳಿದ್ದಾರೆ. ಆದರೆ ಯಾರೊಬ್ಬರು ಕೂಡ ಬೈಕ್ ಪರ್ಫಾಮೆನ್ಸ್ ಬಗ್ಗೆ ಕೇಳಿಲ್ಲ. ಫ್ರೀಡಂ 125ನ ಕಡಿಮೆ ನಿರ್ವಹಣಾ ವೆಚ್ಚ ಮತ್ತು ಅದರ ಕಡಿಮೆ ಬೆಲೆಗಳನ್ನು ಕೇಳುತ್ತಿದ್ದಂತೆ ಜನರ ಮುಖಗಳು ಬೆಳಗುತ್ತಿದ್ದವು. ಸಿಎನ್‌ಜಿಯಲ್ಲಿ ಪ್ರಾರಂಭವಾಗಿ ಪೆಟ್ರೋಲ್‌ಗೆ ಬದಲಾಯಿಸುವಂತಹ ಅಂಶಗಳ ಬಗ್ಗೆ ಕೆಲವರು ಆಸಕ್ತಿ ಹೊಂದಿದ್ದರು.

ಜನರ ಈ ಪ್ರತಿಕ್ರಿಯೆಯನ್ನು ನೋಡಿದ್ರೆ ಬಜಾಜ್ ಫ್ರೀಡಂ 125 ಭಾರೀ ಯಶಸ್ಸು ಕಾಣುವುದು ಖಚಿತ. ಮುಂಬರುವ ದಿನಗಳಲ್ಲಿ ಬಜಾಜ್ ಸಿಎನ್‌ಜಿ ಬೈಕ್‌ಗಳು ಹೆಚ್ಚಾಗಲಿದ್ದು, ಸಿಎನ್‌ಜಿ ಬಂಕ್‌ಗಳನ್ನು ತ್ವರಿತವಾಗಿ ವಿಸ್ತರಿಸುವ ಅವಶ್ಯಕತೆಯಿದೆ. ಜೊತೆಗೆ ಸಿಎನ್‌ಜಿ ಸ್ಟೇಷನ್ ಸಿಬ್ಬಂದಿ ಮತ್ತು ಸಿಎನ್‌ಜಿ ಮೋಟಾರ್ ಸೈಕಲ್ ಖರೀದಿದಾರರಿಗೆ ಸುರಕ್ಷತಾ ಮುನ್ನೆಚ್ಚರಿಕೆಗಳ ಬಗ್ಗೆ ಅರಿವು ಮೂಡಿಸುವ ಅಗತ್ಯವೂ ಇದೆ.

Source: Rushlane
Link: https://www.rushlane.com/bajaj-freedom-cng-tank-filling-experience-public-reactions-caught-on-cam-12501099.html

More from DriveSpark

Article Published On: Friday, July 12, 2024, 13:03 [IST]
English summary
Bajaj cng bike refilling public reaction video
Read more on bajaj auto india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+