ಬೆಂಗಳೂರಿನಲ್ಲಿ ಬಜಾಜ್ ಫ್ರೀಡಂ 125 ಸಿಎನ್‌ಜಿ ಬೈಕ್ ವಿತರಣೆ.. ಖುಷಿಯಲ್ಲಿ ಗ್ರಾಹಕ, 330 Km ಮೈಲೇಜ್.. 95,000 ಬೆಲೆ
ಬಜಾಜ್ ಆಟೋ (Bajaj Auto) ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ದೇಶೀಯ ಮಾರುಕಟ್ಟೆಯಲ್ಲಿ ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಹೊಂದಿರುವ ವಿವಿಧ ಸ್ಕೂಟರ್ ಮತ್ತು ಬೈಕ್‍ಗಳನ್ನು ಮಾರಾಟ ಮಾಡುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಕೂಡ ಇಷ್ಟಪಟ್ಟು ತೆಗೆದುಕೊಳ್ಳುತ್ತಿದ್ದಾರೆ. ಜುಲೈ 5ರಂದು ವಿಶ್ವದ ಮೊದಲ ಸಿಎನ್‌ಜಿ ಮೋಟಾರ್‌ಸೈಕಲ್ 'ಫ್ರೀಡಂ 125'ನ್ನು ಬಿಡುಗಡೆಗೊಳಿಸಿತ್ತು. ಇದು ಭಾರಿ ಮೈಲೇಜ್ ನೀಡಲಿದ್ದು, ದಿನನಿತ್ಯದ ಬಳಕೆಗೆ ಹೆಚ್ಚು ಸೂಕ್ತವಾಗಿದೆ.
ಬೆಂಗಳೂರಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಅದ್ದೂರಿ ಸಮಾರಂಭದಲ್ಲಿ ಮೊದಲ ಬ್ಯಾಚ್‌ನ ಬಜಾಜ್ ಫ್ರೀಡಂ 125 (Bajaj Freedom 125) ಬೈಕ್‍ಗಳನ್ನು ವಿತರಿಸಲಾಗಿದೆ. ಖರೀದಿದಾರರು ಸಹ ಸಂಭ್ರಮದಿಂದ ನೂತನ ಮೋಟಾರ್‌ಸೈಕಲ್‌ನ್ನು ಕೀಯನ್ನು ಪಡೆದರು. ಈಗಾಗಲೇ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿಯೂ ಈ ಬೈಕ್‍ನ ವಿತರಣೆಗಳು ಶುರುವಾಗಿದೆ.

ದೇಶೀಯ ಮಾರುಕಟ್ಟೆಯಲ್ಲಿ ಬಜಾಜ್ ಫ್ರೀಡಂ 125 ಸಿಎನ್‌ಜಿ ಮೋಟಾರ್‌ಸೈಕಲ್, ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. ರೂ.95,000 ದಿಂದ ರೂ.1.10 ಲಕ್ಷ (ಎಕ್ಸ್ ಶೋರೂಂ) ದರವನ್ನು ಹೊಂದಿದೆ. ಡ್ರಮ್, ಡ್ರಮ್ ಎಲ್ಇಡಿ ಮತ್ತು ಡಿಸ್ಕ್ ಎಲ್ಇಡಿ ಎಂಬ ಮೂರು ರೂಪಾಂತರಗಳನ್ನು (ವೇರಿಯೆಂಟ್) ಪಡೆದಿದೆ.
ಹೊಚ್ಚ ಹೊಸ ಬಜಾಜ್ ಫ್ರೀಡಂ 125 (Bajaj Freedom 125) ಬೈಕ್, 125 ಸಿಸಿ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಒಳಗೊಂಡಿದೆ. 9.4 ಪಿಎಸ್ ಗರಿಷ್ಠ ಶಕ್ತಿ (ಪವರ್) ಮತ್ತು 9.7 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಪಡೆದಿದೆ. ತಲಾ 2 ಲೀಟರ್/ ಕೆಜಿ ಸಾಮರ್ಥ್ಯದ ಪೆಟ್ರೋಲ್ ಹಾಗೂ ಸಿಎನ್‌ಜಿ ಇಂಧನ (ಫ್ಯುಯೆಲ್) ಟ್ಯಾಂಕ್‌ನ್ನು ಹೊಂದಿದೆ.

ಈ ಬೈಕ್ ಸಿಎನ್‌ಜಿ ಮೋಡ್‌ನಲ್ಲಿ 200 ಕಿಲೋಮೀಟರ್ ಮತ್ತು ಪೆಟ್ರೋಲ್ ಮೋಡ್‌ನಲ್ಲಿ 130 ಕಿಲೋಮೀಟರ್ ಮೈಲೇಜ್ ಕೊಡುತ್ತದೆ. ಒಟ್ಟಿಗೆ 330 ಕಿಲೋಮೀಟರ್ ಕ್ರಮಿಸುತ್ತದೆ. ಸಿಎನ್‌ಜಿ ಇಂಧನ ದಹನವು ಪೆಟ್ರೋಲ್‌ಗಿಂತ ಸುಮಾರು ಶೇಕಡ 26.7% ಕಡಿಮೆ ಇಂಗಾಲದ ಡೈ ಆಕ್ಸೈಡ್ (CO2) ಅನ್ನು ಹೊರಸೂಸುತ್ತದೆ. ಪೆಟ್ರೋಲ್‌ನಿಂದ ಸಿಎನ್‌ಜಿ ಮೋಡ್‌ಗೆ ಬದಲಾಯಿಸಲು ಎಡ (ಲೆಫ್ಟ್) ಹ್ಯಾಂಡಲ್‌ಬಾರ್‌ನಲ್ಲಿ ಸ್ವಿಚ್ ಇದೆ.
ನೂತನ ಬಜಾಜ್ ಫ್ರೀಡಂ 125 ಮೋಟಾರ್‌ಸೈಕಲ್ ಕೆರಿಬಿಯನ್ ಬ್ಲೂ, ಎಬೊನಿ ಬ್ಲಾಕ್ - ಗ್ರೇ, ಪ್ಯೂಟರ್ ಗ್ರೇ - ಬ್ಲಾಕ್, ರೇಸಿಂಗ್ ರೆಡ್ ಮತ್ತು ಸೈಬರ್ ವೈಟ್ ಬಣ್ಣಗಳ (ಕಲರ್) ಆಯ್ಕೆಯನ್ನು ಹೊಂದಿದೆ. ಎಲ್ಇಡಿ ಹೆಡ್‌ಲೈಟ್, ಬ್ಲೂಟೂತ್ ಕನೆಕ್ಟಿವಿಟಿ ಹಾಗೂ ಎಲ್‌ಸಿಡಿ ಡಿಸ್ಪ್ಲೇ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಜೊತೆಗೆ 147.8 ಕೆಜಿ ತೂಕವಿದೆ.

ಈ ಬೈಕ್ ರೂಪಾಂತರಗಳಿಗೆ ಅನುಗುಣವಾಗಿ ಡಿಸ್ಕ್ ಮತ್ತು ಡ್ರಮ್ ಬ್ರೇಕ್‌ನ್ನು ಹೊಂದಿದೆ. ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂಭಾಗ (ರೇರ್) ಲಿಂಕ್ಡ್ ಮೊನೊಶಾಕ್ ಸಸ್ಪೆನ್ಷನ್ ಸೆಟಪ್ ಪಡೆದಿದೆ. ಮುಂದೆ 17-ಇಂಚು ಹಾಗೂ ಹಿಂದೆ 16-ಇಂಚಿನ ವೀಲ್‌ಗಳನ್ನು ಒಳಗೊಂಡಿದೆ. ಟೈಯರ್‌ಗಳು ಸಹ ಅತ್ಯುತ್ತಮವಾಗಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್ ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications