330 Km ಓಡುವ ಬಜಾಜ್ ಫ್ರೀಡಂ ಸಿಎನ್‌ಜಿ ಬೈಕ್‌ನ್ನು ತೆಗೆದುಕೊಳ್ಳಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?

ಭಾರತದ ಜನಪ್ರಿಯ ವಾಹನ ತಯಾರಕ ಸಂಸ್ಥೆಯಾಗಿ ಬಜಾಜ್ ಆಟೋ (Bajaj Auto) ಗುರುತಿಸಿಕೊಂಡಿದೆ. ಕಂಪನಿಯು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯವನ್ನು ಹೊಂದಿರುವ ವಿವಿಧ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡುತ್ತಿದ್ದು, ದೊಡ್ಡ ಸಂಖ್ಯೆಯಲ್ಲಿ ಯುವ ಗ್ರಾಹಕರು ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಇತ್ತೀಚೆಗೆ, ಬಜಾಜ್ ವಿಶ್ವದ ಮೊದಲ ಸಿಎನ್‌ಜಿ ಬೈಕ್ 'ಫ್ರೀಡಂ 125'ನ್ನು ದೇಶೀಯ ಮಾರುಕಟ್ಟೆಯಲ್ಲಿ ಅದ್ದೂರಿಯಾಗಿ ಬಿಡುಗಡೆಗೊಳಿಸಿದೆ. ಇದು ಪ್ರಚಂಡ ಮೈಲೇಜ್ ನೀಡಲಿದ್ದು, ದಿನಬಳಕೆಗೆ ಹೆಚ್ಚು ಸೂಕ್ತವಾಗಿದೆ. ನೀವು ಈ ಮೋಟಾರ್‌ಸೈಕಲ್ ತೆಗೆದುಕೊಳ್ಳಲು ಆಲೋಚಿಸಿದ್ದೀರಾ.. ನಾವಿಲ್ಲಿ ಬೆಂಗಳೂರಿನ ನಿರೀಕ್ಷಿತ ಆನ್-ರೋಡ್ ಬೆಲೆ ಹಾಗೂ ಇಎಂಐ ಆಯ್ಕೆಯ ಬಗ್ಗೆ ಸಂಪೂರ್ಣವಾಗಿ ವಿವರಿಸಿದ್ದೇವೆ.

ನೂತನ ಬಜಾಜ್ ಫ್ರೀಡಂ 125 ಬೈಕ್ ಡ್ರಮ್, ಡ್ರಮ್ ಎಲ್ಇಡಿ ಹಾಗೂ ಡಿಸ್ಕ್ ಎಲ್ಇಡಿ ಎಂಬ ಮೂರು ರೂಪಾಂತರ (ವೇರಿಯೆಂಟ್)ಗಳ ಆಯ್ಕೆಯಲ್ಲಿ ಲಭ್ಯವಿದೆ. ಇದರ 'ಡ್ರಮ್' ಮಾದರಿಯು ರೂ.1,09,167 ಆನ್-ರೋಡ್ ಬೆಲೆಯನ್ನು ಹೊಂದಿದೆ. ರೂ.20,000 ಡೌನ್ ಪೇಮೆಂಟ್ ಪಾವತಿಸಿ ಈ ಮೋಟಾರ್‌ಸೈಕಲ್‌ನ್ನು ಖರೀದಿಸಿದರೆ, ರೂ.89,167 ಸಾಲದ ಮೊತ್ತಕ್ಕೆ ಶೇಕಡ 9.7% ಬಡ್ಡಿ ದರದಲ್ಲಿ ಮೂರು ವರ್ಷದ ಅವಧಿಗೆ (36 ತಿಂಗಳು) ಮಾಸಿಕ ರೂ.2,865 ಇಎಂಐ ಕಟ್ಟಬೇಕು.

Bajaj Freedom 125 Cng Bike On Road Price And Emi Details

ಬಜಾಜ್ ಫ್ರೀಡಂ 125 ಮೋಟಾರ್‌ಸೈಕಲ್‌ನ ಡ್ರಮ್ ಎಲ್ಇಡಿ ರೂಪಾಂತರವು ರೂ.1,20,180 ಆನ್-ರೋಡ್ (On-Road) ದರವನ್ನು ಪಡೆದಿದೆ. ನೀವು ರೂ.20,000 ಡೌನ್ ಪೇಮೆಂಟ್ (Down Payment) ಕಟ್ಟಿ ಈ ಬೈಕ್‌ನ್ನು ತೆಗೆದುಕೊಂಡರೆ, ರೂ.1,00,180 ಸಾಲದ ಹಣಕ್ಕೆ ಶೇಕಡ 9.7% ಬಡ್ಡಿಯನ್ನು ಹಾಕಿ ಮೂರು ವರ್ಷಕ್ಕೆ ತಿಂಗಳಿಗೆ ರೂ.3,218 ಇಎಂಐ (EMI) ಪಾವತಿಸಬೇಕು.

ಫ್ರೀಡಂ 125 ಬೈಕ್‌ನ ಡಿಸ್ಕ್ ಎಲ್ಇಡಿ ಮಾದರಿಯು ರೂ.1,25,687 ಆನ್-ರೋಡ್ ದರದಲ್ಲಿ ಸಿಗುತ್ತದೆ. ಈ ಮೋಟಾರ್‌ಸೈಕಲ್‌ನ್ನು ರೂ.ರೂ.20,000 ಡೌನ್ ಪೇಮೆಂಟ್ ಪಾವತಿಸಿ ಮನೆಗೆ ತಂದರೆ, ಉಳಿದ ರೂ.1,05,687 ಸಾಲದ ಮೊತ್ತಕ್ಕೆ ಶೇಕಡ 9.7% ಬಡ್ಡಿ ದರದಲ್ಲಿ ಮೂರು ವರ್ಷದ ಅವಧಿಗೆ ಮಾಸಿಕ ರೂ.3,395 ಇಎಂಐ ಕಟ್ಟಬೇಕು.

Bajaj Freedom 125 Cng Bike On Road Price And Emi Details

ಹೊಚ್ಚ ಹೊಸ ಬಜಾಜ್ ಫ್ರೀಡಂ 125 (Bajaj Freedom 125) ಮೋಟಾರ್‌ಸೈಕಲ್‌ 125 ಸಿಸಿ ಏರ್-ಕೂಲ್ಡ್ ಸಿಂಗಲ್-ಸಿಲಿಂಡರ್ ಎಂಜಿನ್‌ ಹೊಂದಿದೆ. 9.4 ಪಿಎಸ್ ಗರಿಷ್ಠ ಶಕ್ತಿ (ಪವರ್) ಹಾಗೂ 9.7 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸಲಿದ್ದು, 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. ತಲಾ 2 ಲೀಟರ್/ಕೆಜಿ ಸಾಮರ್ಥ್ಯದ ಪೆಟ್ರೋಲ್ ಮತ್ತು ಸಿಎನ್‌ಜಿ ಇಂಧನ (ಫ್ಯುಯೆಲ್) ಟ್ಯಾಂಕ್‌ನ್ನು ಹೊಂದಿದೆ.

ಈ ಬೈಕ್ ಸಿಎನ್‌ಜಿ ಮೋಡ್‌ನಲ್ಲಿ 200 ಕಿ.ಮೀ ಹಾಗೂ ಪೆಟ್ರೋಲ್ ಮೋಡ್‌ನಲ್ಲಿ 130 ಕಿ.ಮೀ ಮೈಲೇಜ್ ನೀಡುತ್ತದೆ. ಒಟ್ಟಿಗೆ 330 ಕಿ.ಮೀ ಓಡುತ್ತದೆ. ಸಿಎನ್‌ಜಿ ಇಂಧನ ದಹನವು ಪೆಟ್ರೋಲ್‌ಗಿಂತ ಸರಿಸುಮಾರು ಶೇಕಡ 26.7% ಕಡಿಮೆ ಇಂಗಾಲದ ಡೈಆಕ್ಸೈಡ್ (CO2) ಅನ್ನು ಹೊರಸೂಸುತ್ತದೆ. ಪೆಟ್ರೋಲ್/ ಸಿಎನ್‌ಜಿ ಮೋಡ್‌ಗೆ ಬದಲಾಯಿಸಲು ಎಡ (ಲೆಫ್ಟ್) ಹ್ಯಾಂಡಲ್‌ಬಾರ್‌ನಲ್ಲಿ ಸ್ವಿಚ್ ಕೂಡ ಇದೆ.

Bajaj Freedom 125 Cng Bike On Road Price And Emi Details

ಬಜಾಜ್ ಫ್ರೀಡಂ 125 ಮೋಟಾರ್‌ಸೈಕಲ್‌ ಆಕರ್ಷಕವಾದ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಒಳಗೊಂಡಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಈಗಾಗಲೇ ಬುಕ್ಕಿಂಗ್ ಶುರುವಾಗಿದ್ದು, ಮೊದಲಿಗೆ ಮಹಾರಾಷ್ಟ್ರ, ಗುಜರಾತ್‌ನಲ್ಲಿ ವಿತರಣೆಗಳು ಪ್ರಾರಂಭವಾಗಲಿವೆ. ಆ ಬಳಿಕ, ಕರ್ನಾಟಕ ಸೇರಿದಂತೆ ಇತರೆ ರಾಜ್ಯಗಳಲ್ಲಿಯೂ ಹಂತ ಹಂತವಾಗಿ ಶುರುವಾಗಲಿದೆ. ನಿಮ್ಮ ಗಮನಕ್ಕೆ.. ಈ ಬೈಕ್ ಆನ್-ರೋಡ್ ಬೆಲೆ ಹಾಗೂ ಸಾಲದ ಆಯ್ಕೆಗಳು ಪ್ರಮುಖ ನಗರಗಳ ಡೀಲರ್‌ಶಿಪ್‌ಗಳಿಗೆ ಅನುಗುಣವಾಗಿ ಬೇರೆಯಾಗಲಿದ್ದು, ಹೆಚ್ಚಿನ ಮಾಹಿತಿಗೆ ಸಮೀಪದ ಶೋರೂಂಗೆ ಭೇಟಿ ನೀಡಿರಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, July 9, 2024, 13:14 [IST]
English summary
Bajaj freedom 125 cng bike on road price and emi details
Read more on bajaj auto india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+