Bajaj: ಬಜಾಜ್ ಬೊಂಬಾಟ್ ಆಫರ್: 10,000 ಬೆಲೆ ಇಳಿಕೆ... ಈಗಲೆ ಖರೀದಿಸಿ, ಮತ್ತೇ ಸಿಗೋದಿಲ್ಲ!
ಬಜಾಜ್ (Bajaj) ಆಟೋ ಕಂಪನಿಯು ಭಾರತದಲ್ಲಿ ವಿಶ್ವದ ಮೊದಲ ಸಿಎನ್‌ಜಿ ಬೈಕ್ ಅನ್ನು ಬಿಡುಗಡೆ ಮಾಡುವ ಮೂಲಕ ಹೊಸ ಅಲೆ ಎಬ್ಬಿಸಿತ್ತು. ಸಾಮಾನ್ಯ ಪೆಟ್ರೋಲ್ ಚಾಲಿತ ಮೋಟಾರ್‌ಸೈಕಲ್‌ಗಳಿಗೆ ಸ್ವಚ್ಛ, ಪರಿಸರ ಸ್ನೇಹಿ ಪರ್ಯಾಯವಾಗಿ ಬಜಾಜ್ ಫ್ರೀಡಂ ಸಿಎನ್‌ಜಿ ಬೈಕ್ (Bajaj Freedom CNG bike) ಅನ್ನು ಪರಿಚಯಿಸಲಾಗಿದೆ. ಈ ಹೈಬ್ರಿಡ್ ಬೈಕ್‌ನಲ್ಲಿ ಸಿಎನ್‌ಜಿಗೆ 2 ಕೆ.ಜಿ ಮತ್ತು ಪೆಟ್ರೋಲ್‌ಗೆ 2 ಲೀಟರ್ ಹಿಡಿಸುವ ಎರಡು ಟ್ಯಾಂಕ್‌ಗಳನ್ನು ನೀಡಲಾಗಿದೆ. ಪ್ರಯಾಣಿಕರಿಗೆ ಎಲ್ಲವು ಅನುಕೂಲವಾಗುವಂತೆ ಬೈಕ್ ವಿನ್ಯಾಸಗೊಳಿಸಲಾಗಿದೆ. ಇದೀಗ ಈ ಬೈಕ್‌ನ ಮಾರಾಟವನ್ನು ಹೆಚ್ಚಿಸಲು ಕಂಪನಿಯು ಬೆಲೆ ಇಳಿಕೆಯನ್ನು ಘೋಷಿಸಿದೆ.
ಹೌದು, ಬಜಾಜ್ ಕಂಪನಿಯು ಈ ಬೈಕ್ ಬಿಡುಗಡೆ ಮಾಡಿದ ಆರು ತಿಂಗಳ ಬಳಿಕ ಬೆಲೆಯನ್ನು ಕಡಿಮೆ ಮಾಡಿದ್ದು, ಖರೀದಿದಾರರಿಗೆ ಈಗ ಇನ್ನಷ್ಟು ಕೈಗೆಟುಕುವಂತೆ ಮಾಡಿದೆ. ಮೂಲ ಡ್ರಮ್ ರೂಪಾಂತರವು (ಬೇಸ್ ವೇರಿಯೆಂಟ್) ಈಗ 5,000 ರೂ.ಗಳ ಕಡಿತದ ನಂತರ 89,997 ರೂ.ಗೆ (ಎಕ್ಸ್ ಶೋರೂಂ) ಖರೀದಿಗೆ ಸಿಗಲಿದೆ.

ಮಧ್ಯಮ ಡ್ರಮ್ ಎಲ್ಇಡಿ ರೂಪಾಂತರವು (ಮಿಡ್ ವೇರಿಯೆಂಟ್) 10,000 ರೂ.ಗಳ ಕಡಿತವಾಗಿದ್ದು, ಈಗ 95,002 ರೂ.ಗೆ ಖರೀದಿಗೆ ಸಿಗಲಿದೆ. ಟಾಪ್-ಸ್ಪೆಕ್ ಡಿಸ್ಕ್ ಎಲ್ಇಡಿ ರೂಪಾಂತರವು 1.10 ಲಕ್ಷ ರೂ. ಬೆಲೆಯಿದ್ದು, ಇದಕ್ಕೆ ಯಾವುದೇ ಬೆಲೆ ಕಡಿತವಾಗಿಲ್ಲ. ಈ ಕ್ರಮವು ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಫ್ರೀಡಂ ಸಿಎನ್‌ಜಿ ಬೈಕ್ ಮಾರಾಟವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.
ಬೈಕ್ ವಿಶೇಷತೆಗಳು: ಅತ್ಯಧಿಕ ಮೈಲೇಜ್ ಹಾಗೂ ಆಧುನಿಕ ವೈಶಿಷ್ಟ್ಯಗಳನ್ನು ಹೊಂದಿರುವ ಬೈಕ್ ಖರೀದಿಸಲು ಬಯಸುತ್ತಿದ್ದರೆ, ಬಜಾಜ್ ಸಿಎನ್‌ಜಿ ಬೈಕ್ ಅನ್ನು ನೋಡಬಹುದು. ಇದು ಇತರ ಪೆಟ್ರೋಲ್ ಚಾಲಿತ ಬೈಕ್‌ಗಳಿಗೆ ಹೋಲಿಸಿದರೆ, ಹೆಚ್ಚಿನ ಮೈಲೇಜ್ ಹಾಗೂ ನಿರ್ವಹಣಾ ವೆಚ್ಚವನ್ನು ಗಣನೀಯವಾಗಿ ತಗ್ಗಿಸುತ್ತದೆ. ಹಾಗೆಯೇ ಡಿಸೈನ್‌ನಲ್ಲಿಯೂ ಸ್ಪೋರ್ಟಿ ಲುಕ್ ಹೊಂದಿದೆ.

ಕಂಪನಿಯ ಪ್ರಕಾರ, ಪ್ರತಿ ಕೆ.ಜಿ ಸಿಎನ್‌ಜಿಗೆ 102 ಕಿ.ಮೀ ಮತ್ತು 1ಲೀ. ಪೆಟ್ರೋಲ್‌ಗೆ 65 ಕಿ.ಮೀ ಮೈಲೇಜ್ ನೀಡುತ್ತದೆ. ಅಂದರೆ ಎರಡೂ ಟ್ಯಾಂಕ್‌ಗಳಲ್ಲಿ ಸುಮಾರು 330 ಕಿ.ಮೀ (ಕ್ಲೈಮ್) ಮೈಲೇಜ್ ಒದಗಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಹಾಗೆಯೇ ಬಜಾಜ್ ಸಿಎನ್‌ಜಿ ಬೈಕ್, ಪ್ರತಿ ಕಿ.ಮೀಗೆ ಸುಮಾರು 80 ಪೈಸೆಯಿಂದ 1 ರೂ. ಖರ್ಚು ಬೀಳುತ್ತದೆ. ಇದು ಪೆಟ್ರೋಲ್ ಚಾಲಿತ ಬೈಕ್ ಗಳಿಗಿಂತ ಅಗ್ಗವಾಗಿದೆ.
ಬೈಕ್‌ನಲ್ಲಿ ಸಿಎನ್‌ಜಿ ಖಾಲಿಯಾದರೆ ಪೆಟ್ರೋಲ್ ಅನ್ನು ಸಹಾಯಕ ಇಂಧನವಾಗಿ ಬಳಸಬಹುದು. ಅಲ್ಲಿಗೆ ವಾಸ್ತವಿಕವಾಗಿ ಈ ಬೈಕ್ ಸುಮಾರು 200 ಕಿ.ಮೀ ಮಾತ್ರ ಸಿಎನ್‌ಜಿ ಮೂಲಕ ಮೈಲೇಜ್ ಪಡೆಯಬಹುದು. ಹಾಗೆಯೇ 2 ಲೀಟರ್ ಪೆಟ್ರೋಲ್‌ನಿಂದ 130 ಕಿ.ಮೀ ಮೈಲೇಜ್ ಪಡೆಯಬಹುದು ಎಂಬುದನ್ನು ಗಮನಿಸಬೇಕು.

ಇದನ್ನು ಎಲೆಕ್ಟ್ರಿಕ್ ವಾಹನಗಳಿಗೆ ಹೋಲಿಸಿದರೆ 5-6 ವರ್ಷಗಳ ನಂತರ, ಎಲೆಕ್ಟ್ರಿಕ್ ಬೈಕ್ ಬ್ಯಾಟರಿಗಳು ಕ್ಷೀಣಿಸುತ್ತವೆ. ಅವುಗಳ ಚಾರ್ಜ್ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತವೆ. ಆದರೆ ಬಜಾಜ್ ಸಿಎನ್‌ಜಿ ಬೈಕ್ ಹಾಗಲ್ಲ ಸಾಮಾನ್ಯ ಇಂಧನ ಚಾಲಿತ ಬೈಕ್‌ಗಳಂತಯೇ ಉತ್ತಮ ನಿರ್ವಹಣಾ ವೆಚ್ಚವನ್ನು ಹೊಂದಿರುತ್ತವೆ ಎಂದು ಕಂಪನಿ ಹೇಳಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








