360 ರೂ. ವೆಚ್ಚದಲ್ಲಿ 330 ಕಿ.ಮೀ ಓಡುವ ಬಡವರ ಬಂಡಿ ಈಗ ನಿಮ್ಮೂರಿನಲ್ಲೂ ಲಭ್ಯ!

ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ಕಂಪನಿಯಾದ ಬಜಾಜ್ ಆಟೋ ಲಿಮಿಟೆಡ್, ತನ್ನ ವಿಶ್ವದ ಮೊದಲ ಸಿಎನ್‌ಜಿ ಮೋಟಾರ್‌ಸೈಕಲ್ ಫ್ರೀಡಮ್ 125 ಅನ್ನು ಬಿಡುಗಡೆ ಮಾಡಿ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ದೇಶಾದ್ಯಂತ ಭಾರೀ ಬೇಡಿಕೆಯಿರುವ ಈ ಮೋಟಾರ್‌ಸೈಕಲ್ ಅನ್ನು ಸೀಮಿತ ನಗರಗಳಲ್ಲಿ ಮಾತ್ರ ಸದ್ಯ ಡೆಲಿವರಿ ನೀಡಲಾಗುತ್ತಿದೆ. ಇದೀಗ ಭಾರತದ 77 ಪಟ್ಟಣಗಳಲ್ಲಿ ಆಗಸ್ಟ್ 15ರ ಮೊದಲು ಹೊರತರುವುದಾಗಿ ಕಂಪನಿ ಘೋಷಿಸಿದೆ. ಬಿಡುಗಡೆಯಾದ ಮೊದಲ ವಾರದಲ್ಲಿಯೇ 30,000ಕ್ಕೂ ಹೆಚ್ಚು ವಿಚಾರಣೆಗಳು ಹರಿದುಬರುವುದರೊಂದಿಗೆ, ಬಜಾಜ್ ರಾಷ್ಟ್ರವ್ಯಾಪಿ ಡೆಲಿವರಿಗಾಗಿ ತನ್ನ ಯೋಜನೆಗಳನ್ನು ವೇಗಗೊಳಿಸಲು ನಿರ್ಧರಿಸಿದೆ.

ಮೊದಲು ಗುಜರಾತ್ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಈ ಬೈಕ್‌ಗಾಗಿ ಬುಕಿಂಗ್‌ಗಳನ್ನು ತೆರೆಯಲಾಗಿತ್ತು. ಈಗಾಗಲೇ ಈ ಎರಡೂ ರಾಜ್ಯಗಳಲ್ಲಿ ಡೆಲಿವರಿಗಳು ಆರಂಭವಾಗಿವೆ. ಆದ್ರೆ ಇತರ ರಾಜ್ಯಗಳಲ್ಲಿ ಹಂತ ಹಂತವಾಗಿ ಬುಕಿಂಗ್ ಸ್ವೀಕರಿಸಿ ಡೆಲಿವರಿಗಳನ್ನು ನೀಡುವುದಾಗಿ ಹೇಳಿಕೊಂಡಿತ್ತು. ಇದೀಗ ಆ ಸಮಯ ಬಂದಿದ್ದು, ಆಗಸ್ಟ್ 15ರ ವೇಳೆಗೆ ಸಿಎನ್‌ಜಿ ಮೋಟಾರ್‌ಸೈಕಲ್ ಇತರ ರಾಜ್ಯಗಳ 77 ಪಟ್ಟಣಗಳಲ್ಲಿ ಲಭ್ಯವಾಗಲಿದೆ ಎಂದು ಕಂಪನಿ ಹೇಳಿದೆ.

bajaj-freedom-125-cng-bike-to-be-available-across-77-towns-details

ಈ ಬೈಕ್ ಅನ್ನು ಖರೀದಿಸಲು ರೂ. 1,000 ಟೋಕನ್ ಮೊತ್ತವನ್ನು ಪಾವತಿಸುವ ಮೂಲಕ ಬುಕ್ ಮಾಡಬಹುದು. ಈ ಹೊಸ ಬಜಾಜ್ ಫ್ರೀಡಮ್ ಸಿಎನ್‌ಜಿ ಬೈಕಿನ ಬೆಲೆಯು ರೂ. 95,000 ದಿಂದ ಆರಂಭವಾಗಿ ಟಾಪ್ ಎಂಡ್ ರೂಪಾಂತರದ ಬೆಲೆಯು ರೂ. 1.10 ಲಕ್ಷದವರೆಗೆ ಇದೆ. ಈ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ.

ಏಕೆ ಖರೀದಿಸಬೇಕು?: ಪೆಟ್ರೋಲ್ ಮೋಟಾರ್‌ಸೈಕಲ್‌ಗಳಿಗೆ ಹೋಲಿಸಿದರೆ ಬಜಾಜ್ ಫ್ರೀಡಂ 125 ಗ್ರಾಹಕರಿಗೆ ಶೇ50 ರಷ್ಟು ಕಡಿಮೆ ನಿರ್ವಹಣಾ ವೆಚ್ಚವನ್ನು ನೀಡುತ್ತದೆ. 2 ಕೆ.ಜಿ CNG ತುಂಬಿಸಿದರೆ 200 ಕಿ.ಮೀ ಮೈಲೇಜ್, 2-ಲೀಟರ್ ಪೆಟ್ರೋಲ್ ತುಂಬಿಸಿದರೆ 130 ಕಿ.ಮೀ ಮೈಲೇಜ್ ಸೇರಿ ಒಮ್ಮೆ ಎರಡೂ ಟ್ಯಾಂಕ್ ತುಂಬಿಸಿದರೆ 330 ಕಿ.ಮೀಗೆ ಓಡಿಸಬಹುದು.

bajaj-freedom-125-cng-bike-to-be-available-across-77-towns-details

ಬೆಂಗಳೂರಿನಲ್ಲಿ ಪ್ರಸ್ತುತ ಸಿಎನ್‌ಜಿ ಬೆಲೆಯು ಪ್ರತಿ ಕೆ.ಜಿ.ಗೆ 82.5 ರೂ. ಇದ್ದು, ಪ್ರತಿ ಕೆ.ಜಿ.ಗೆ 102 ಕಿ.ಮೀ ಮೈಲೇಜ್ ಪರಿಗಣಿಸಿದರೆ, ಚಾಲನೆಯ ವೆಚ್ಚವು ಪ್ರತಿ ಕಿ.ಮೀ.ಗೆ ಸುಮಾರು 78 ಪೈಸೆ ಬೀಳುತ್ತದೆ. ನಿಮ್ಮ ಸರಾಸರಿ ಮಾಸಿಕ ಓಡಾಟವು 1000 ಕಿ.ಮೀ ಆಗಿದ್ದರೆ, ಪ್ರತಿ ತಿಂಗಳು ಸಿಎನ್‌ಜಿಗಾಗಿ ನಿಮಗೆ 780 ರೂ. ಖರ್ಚಾಗಬಹುದು.

ಫ್ರೀಡಂ 125 ಮೋಟಾರ್‌ಸೈಕಲ್ ಮೊನೊ-ಲಿಂಕ್ಡ್ ಸಸ್ಪೆನ್ಷನ್, ಉದ್ದನೆಯ ಕ್ವಿಲ್ಟೆಡ್ ಸೀಟ್, ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಡಿಜಿಟಲ್ ಸ್ಪೀಡೋಮೀಟರ್ ಮತ್ತು ಬ್ಲೂಟೂತ್ ಸಂಪರ್ಕವನ್ನು ಹೊಂದಿದೆ. CNG ಟ್ಯಾಂಕ್ ಮತ್ತು ಕಿಟ್ ಅನ್ನು ಸುರಕ್ಷಿತವಾಗಿ ಇರಿಸಲಾಗಿದ್ದು, ಸುರಕ್ಷತೆಗಾಗಿ ಕಟ್ಟುನಿಟ್ಟಾಗಿ ಪರೀಕ್ಷಿಸಲಾಗಿದೆ ಎಂದು ಬಜಾಜ್ ಆಟೋ ಹೇಳಿದೆ.

bajaj-freedom-125-cng-bike-to-be-available-across-77-towns-details

ಫ್ರೀಡಂ 125ನ ವ್ಯಾಪಕ ಬಿಡುಗಡೆಯ ಕುರಿತು ಮಾತನಾಡಿದ ಬಜಾಜ್ ಆಟೋ ಲಿಮಿಟೆಡ್‌ನ ಅಧ್ಯಕ್ಷ ಸಾರಂಗ್ ಕಾನಡೆ, "ವಿಶ್ವದ ಮೊದಲ ಸಿಎನ್‌ಜಿ ಮೋಟಾರ್‌ಸೈಕಲ್ ಫ್ರೀಡಮ್ 125 ಬಿಡುಗಡೆಯು ಭಾರತದಾದ್ಯಂತ ಅಭೂತಪೂರ್ವ ಆಸಕ್ತಿಯನ್ನು ಹುಟ್ಟುಹಾಕಿದೆ. ದೇಶದಲ್ಲಿ ಪ್ರಸ್ತುತವಿರುವ ಮೈಲೇಜ್ ಬೈಕ್‌ಗಳಿಗೆ ಹೋಲಿಸಿದರೆ ಫ್ರೀಡಂ 125 ಬೆಸ್ಟ್‌ ಆಯ್ಕೆಯಾಗಿದೆ ಎಂದರು.

ಭಾರತದ 77 ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲು ಸಾಧ್ಯವಾದಷ್ಟು ಹೆಚ್ಚು ಭಾರತೀಯರಿಗೆ ಫ್ರೀಡಮ್ 125 ಅನ್ನು ಖರೀದಿಸಲು ಅನುವು ಮಾಡಿಕೊಡಲಾಗಿದೆ. ನಾವು 77 ಪಟ್ಟಣಗಳಿಗೆ ಲಭ್ಯತೆಯನ್ನು ವಿಸ್ತರಿಸುತ್ತಿದ್ದೇವೆ, ಫ್ರೀಡಮ್ 125ನ ಪ್ರಯೋಜನಗಳನ್ನು ದೇಶದ ಮೂಲೆ ಮೂಲೆಗೆ ತರಲು ಭಾರತದ ಬೆಳೆಯುತ್ತಿರುವ CNG ಮೂಲಸೌಕರ್ಯವನ್ನು ಬಳಸಿಕೊಳ್ಳುವುದು ನಮ್ಮ ಗುರಿಯಾಗಿದೆ ಎಂದರು.

More from DriveSpark

Article Published On: Tuesday, July 30, 2024, 17:26 [IST]
English summary
Bajaj freedom 125 cng bike to be available across 77 towns details
Read more on bajaj auto india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+