ಪೆಟ್ರೋಲ್ ಬೇಕಿಲ್ಲ, ಬಜಾಜ್ ಎಥೆನಾಲ್ ಬೈಕ್ ಬಿಡುಗಡೆಗೆ ಸಜ್ಜಾಗುತ್ತಿದೆ: ವಿಶೇಷತೆಗಳೇನು?
ಭಾರತವನ್ನು ಕಾರ್ಬನ್ ಮುಕ್ತವಾಗಿಸಲು ಕೇಂದ್ರ ಸರ್ಕಾರದ ಒತ್ತಡದೊಂದಿಗೆ, ದ್ವಿಚಕ್ರ ವಾಹನ ತಯಾರಕರು ಸಿಎನ್‌ಜಿ ಮತ್ತು ಎಥೆನಾಲ್‌ನಂತಹ ಪರ್ಯಾಯ ಇಂಧನಗಳತ್ತ ಗಮನ ಹರಿಸುತ್ತಿದ್ದಾರೆ. ಈಗಾಗಲೇ ಬಜಾಜ್ ಕಂಪನಿಯು ತಮ್ಮ ಮೊದಲ ಸಿಎನ್‌ಜಿ ಬೈಕ್ ಅನ್ನು ಬಿಡುಗಡೆ ಮಾಡಿ ಮಾರುಕಟ್ಟೆಯಲ್ಲಿ ಹೊಸ ಅಲೆ ಎಬ್ಬಿಸಿದೆ. ಈ ಬೈಕ್‌ಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿದೆ. ಇದೀಗ ಬಜಾಜ್ ತನ್ನ ಮೊದಲ ಎಥೆನಾಲ್ ಮೋಟಾರ್ ಸೈಕಲ್‌ನೊಂದಿಗೆ ಎಥೆನಾಲ್ ಕ್ಷೇತ್ರಕ್ಕೆ ಧುಮುಕಲು ಸಜ್ಜಾಗಿದೆ. ಈ ಹೊಸ ಎಥೆನಾಲ್ ಬೈಕ್ ಕುರಿತು ಹೆಚ್ಚಿನ ಮಾಹಿತಿಯನ್ನು ಇಲ್ಲಿ ತಿಳಿಯೋಣ.
ಬಜಾಜ್ ಆಟೋ ಕಂಪನಿಯು ಭಾರತದಲ್ಲಿ ಹೊಸ ಮಾದರಿಗಳೊಂದಿಗೆ ಪ್ರತಿಸ್ಪರ್ಧಿ ಕಂಪನಿಗಳಿಗೆ ನಡುಕ ಹುಟ್ಟಿಸುತ್ತಿದೆ. ಏಕೆಂದರೆ ಅಗ್ಗದ ಬೆಲೆಯಲ್ಲಿ ಈಗಾಗಲೇ ಸಿಎನ್‌ಜಿ ಬೈಕ್ ಪರಿಚಯಿಸಿದ್ದು, ಇದು ಒಂದು ಕೆ.ಜಿ ಸಿಎನ್‌ಜಿಗೆ 100 ಕಿ.ಮೀ ಮೈಲೇಜ್ ನೀಡುತ್ತದೆ. ಪೆಟ್ರೋಲ್ ಬಂಕ್‌ಗಳಂತೆ ಸಿಎನ್‌ಜಿ ಬಂಕ್‌ಗಳು ಲಭ್ಯವಾದಲ್ಲಿ ಹೊಸ ಫ್ರೀಡಂ ಸಿಎನ್‌ಜಿ ಬೈಕ್ ಮಾರಟವು ಗಗನಕ್ಕೇರಲಿದೆ.

ಇದು ಹೀಗಿದ್ದರೇ ಹೊಸ ಎಥೆನಾಲ್ ಬೈಕ್ ಕೂಡ ಮುಂಬರುವ ದಿನಗಳಲ್ಲಿ ಹೊಸ ಅಲೆ ಎಬ್ಬಿಸುವ ಎಲ್ಲಾ ಸಾಧ್ಯತೆಗಳು ಇವೆ. ಹೊಸ ಬೈಕ್ ಅನ್ನು ಬಜಾಜಜ್, ಸೆಪ್ಟೆಂಬರ್ 2024 ರಲ್ಲಿ ಅನಾವರಣಗೊಳಿಸುವ ನಿರೀಕ್ಷೆಯಿದೆ. ಮುಂದಿನ ಎಪ್ರಿಲ್ ಒಳಗೆ ಭಾರತದಲ್ಲಿ ಬಿಡುಗಡೆ ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಮುಂಬರುವ ಬಜಾಜ್ ಎಥೆನಾಲ್ ಬೈಕ್ ಯಾವುದು ಎಂಬುದರ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಹೊಸ ಡಿಸೈನ್‌ನಲ್ಲಿ ಬರಲಿದೆಯೇ ಅಥವಾ ಬಜಾಜ್ ಕಂಪನಿಯ ಈಗಿರುವ ಬೈಕ್‌ಗಳಲ್ಲಿ ಒಂದನ್ನು ಎಥೆನಾಲ್ ಬೈಕ್‌ಗಾಗಿ ಬಳಸಲಿದ್ದಾರೆಯೇ ಎಂಬುದರ ಬಗ್ಗೆ ಮಾಹಿತಿ ಹೊರಬರಬೇಕಿದೆ. ಕೆಲವು ಮೂಲಗಳ ಪ್ರಕಾರ, ಮೊದಲ ಬಜಾಜ್ ಎಥೆನಾಲ್ ಬೈಕ್ 'ಪಲ್ಸರ್' ಆಗಿರಬಹುದು ಎನ್ನಲಾಗುತ್ತಿದೆ.

ಪಲ್ಸರ್ ಬೈಕ್ ಖರೀದಿದಾರರಲ್ಲಿ ಸಾಕಷ್ಟು ಜನಪ್ರಿಯವಾಗಿರುವ ಕಾರಣ ಎಥೆನಾಲ್‌ನಲ್ಲಿ ಬಿಡುಗಡೆ ಮಾಡಿದ್ರೆ ಉತ್ತಮ ಬೇಡಿಕೆ ಬರುವ ಸಾಧ್ಯತೆಗಳು ಇವೆ. ಭಾರತದಲ್ಲಿ ಈ ಹಿಂದೆ ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ e100 (ಸಂಪೂರ್ಣ ಎಥೆನಾಲ್‌ನಲ್ಲಿ ಚಲಿಸುವ ವಾಹನ) ಬೈಕ್ ಹೊರತುಪಡಿಸಿ, ಯಾವುದೇ ತಯಾರಕರು ಭಾರತದಲ್ಲಿ ಇ100 ಬೈಕ್ ಅನ್ನು ಬಿಡುಗಡೆ ಮಾಡಿಲ್ಲ. ಕಾರಣಾಂತರಗಳಿಂದ ಟಿವಿಎಸ್ ಇದನ್ನು ಸದ್ಯ ಸ್ಥಗಿತಗೊಳಿಸಿದೆ.
ಇ 100 ಎಥೆನಾಲ್ ಬೈಕುಗಳು ಶೇಕಡಾ 100 ರಷ್ಟು ಎಥೆನಾಲ್ ಇಂಧನಗಳಿಂದ ಚಲಿಸುತ್ತವೆ. ಕಡಿಮೆ ಚಾಲನೆಯ ವೆಚ್ಚವನ್ನು ನೀಡುತ್ತವೆ. ಹಾಗೆಯೇ ಪೆಟ್ರೋಲ್‌ಗೆ ಹೋಲಿಸಿದರೆ, ಎಥೆನಾಲ್ ನಾಶಕಾರಿ ಸ್ವಭಾವವು ಕಾಲಾನಂತರದಲ್ಲಿ ಕೆಲವು ಪ್ಲಾಸ್ಟಿಕ್ ಮತ್ತು ರಬ್ಬರ್ ಎಂಜಿನ್ ಭಾಗಗಳನ್ನು ಕ್ಷೀಣಿಸುತ್ತದೆ. ಆದ್ದರಿಂದ, ಈ ಸಮಸ್ಯೆಗಳನ್ನು ಎದುರಿಸಲು ತಯಾರಕರ ಕಡೆಯಿಂದ ಗಮನಾರ್ಹವಾದ ಮರು-ಎಂಜಿನಿಯರಿಂಗ್ ಅಗತ್ಯವಿರುತ್ತದೆ.

ಪ್ರಸ್ತುತ e20 (ಶೇ20 ರಷ್ಟು ಎಥೆನಾಲ್ ಮಿಶ್ರಿತ ಪೆಟ್ರೋಲ್) ವಾಹನಗಳು ಬಳಕೆಯಲ್ಲಿದ್ದು, ಕೆಲವು ಪೆಟ್ರೋಲ್ ಬಂಕ್‌ಗಳು ಶೇ40 ಎಥೆನಾಲ್ ಮಿಶ್ರಿತ ಪೆಟ್ರೋಲ್ ಸೇವೆಯನ್ನು ಸಹ ಒದಗಿಸುತ್ತಿವೆ. ಮುಂಬರುವ ದಿನಗಳಲ್ಲಿ ಎಥೆನಾಲ್ ಬಳಕೆ ಹೆಚ್ಚಾಗಲಿದೆ. ಪೆಟ್ರೋಲ್‌ಗೆ ಪರ್ಯಾಯವಾಗಿ ಕಡಿಮೆ ಬೆಲೆಯಲ್ಲಿ ಸಿಗುವುದರಿಂದ ಎಥೆನಾಲ್ ವಾಹನಗಳಿಗೆ ಬೇಡಿಕೆ ಹೆಚ್ಚಾಗಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








