ಮನೆಗೆ ತನ್ನಿ ಈ ಬಜಾಜ್ ಬೈಕ್.. 70 ಕಿ.ಮೀ ಮೈಲೇಜ್, ಅತಿ ಕಡಿಮೆ EMI.. ಎಷ್ಟು ಗೊತ್ತಾ?

ಭಾರತದ ವಿಶ್ವಾಸಾರ್ಹ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿ ಬಜಾಜ್ ಆಟೋ (Bajaj Auto) ಗುರುತಿಸಿಕೊಂಡಿದೆ. ಕಂಪನಿಯು ಮಾರಾಟಗೊಳಿಸುವ ಪ್ಲಾಟಿನಾ 100 (Platina 100) ಬೈಕ್ ಅತ್ಯಂತ ಕಡಿಮೆ ಬೆಲೆಗೆ ಲಭ್ಯವಿದ್ದು, ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಇಲ್ಲಿ ಈ ಮೋಟಾರ್‌ಸೈಕಲ್‌ನ ಆನ್-ರೋಡ್ ಬೆಲೆ ಹಾಗೂ ಇಎಂಐ ಆಯ್ಕೆಯ ಬಗ್ಗೆ ವಿವರಿಸಿದ್ದೇವೆ.

ಬೆಂಗಳೂರಿನಲ್ಲಿ ಬಜಾಜ್ ಪ್ಲಾಟಿನಾ 100 (Bajaj Platina 100) ಬೈಕ್, ರೂ.89,544 ಆನ್-ರೋಡ್ ಬೆಲೆಯನ್ನು ಹೊಂದಿದೆ. ನೀವು ರೂ.10,000 ಡೌನ್ ಪೇಮೆಂಟ್ (Down Payment) ಪಾವತಿಸಿ ಈ ಮೋಟಾರ್‌ಸೈಕಲ್‌ನ್ನು ಕೊಂಡುಕೊಂಡರೆ, ರೂ.79,544 ಸಾಲದ ಮೊತ್ತಕ್ಕೆ 3 ವರ್ಷದ (36 ತಿಂಗಳು) ಅವಧಿಗೆ ಶೇಕಡ 9.7% ಬಡ್ಡಿ ದರದಲ್ಲಿ ಮಾಸಿಕ ರೂ.2,555 ಇಎಂಐ (EMI) ಕಟ್ಟಬೇಕು.

Bajaj Platina 100 Bike On Road Price And Emi Details

ನೂತನ ಬಜಾಜ್ ಪ್ಲಾಟಿನಾ 100 ಮೋಟಾರ್‌ಸೈಕಲ್‌ 102 - ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೋಲ್ಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 7.9 ಪಿಎಸ್ ಗರಿಷ್ಠ ಪವರ್ (ಶಕ್ತಿ) ಹಾಗೂ 8.3 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿದೆ. ಜೊತೆಗೆ 4 - ಸ್ಪೀಡ್ ಗೇರ್‌ಬಾಕ್ಸ್‌ ಆಯ್ಕೆಯನ್ನು ಒಳಗೊಂಡಿದ್ದು, 90 ಕೆಎಂಪಿಹೆಚ್ ಟಾಪ್ ಸ್ಪೀಡ್ ಅನ್ನು ಹೊಂದಿದೆ.

ಹೊಚ್ಚ ಹೊಸ ಪ್ಲಾಟಿನಾ 100 ಬೈಕ್ ಉತ್ತಮ ರೀತಿಯಲ್ಲಿ ಇಂಧನ ದಕ್ಷತೆ (Fuel Efficiency)ಯನ್ನು ಪಡೆದಿದ್ದು, 70 ಕೆಎಂಪಿಎಲ್ ಮೈಲೇಜ್ ನೀಡುತ್ತದೆ. ಇದರಿಂದಾಗಿ ದಿನಬಳಕೆಗೆ ಹೆಚ್ಚು ಸೂಕ್ತವಾಗಿದ್ದು, ಸುಲಭವಾಗಿ ಕಚೇರಿಗಳಿಗೆ ತೆರಳಬಹುದು. 117 ಕೆಜಿ ತೂಕವಿರುವ ಈ ಮೋಟಾರ್‌ಸೈಕಲ್‌, 11 ಲೀಟರ್ ಸಾಮರ್ಥ್ಯದ ಫ್ಯುಯೆಲ್ (ಇಂಧನ) ಟ್ಯಾಂಕ್‌ನ್ನು ಒಳಗೊಂಡಿದೆ.

Bajaj Platina 100 Bike On Road Price And Emi Details

ಈ ಮೋಟಾರ್‌ಸೈಕಲ್‌ ಬ್ಲ್ಯಾಕ್ & ರೆಡ್, ಬ್ಲ್ಯಾಕ್ & ಸಿಲ್ವರ್, ಬ್ಲ್ಯಾಕ್ & ಗೋಲ್ಡ್ ಸೇರಿದಂತೆ ವಿವಿಧ ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿಯೂ ಲಭ್ಯವಿದೆ. ಹ್ಯಾಲೊಜೆನ್ ಹೆಡ್‌ಲೈಟ್, ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್‌ಗಳು (DRLs), ಸಿಂಗಲ್ ಪೀಸ್ ಸೀಟ್, ಅನಲಾಗ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಒಳಗೊಂಡಂತೆ ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ.

ಬಜಾಜ್ ಪ್ಲಾಟಿನಾ 100 ಬೈಕ್ ಹೊಂದಿರುವ ಸಸ್ಪೆಷನ್ ಸೆಟಪ್ ಬಗ್ಗೆ ಮಾತನಾಡುವುದಾದರೆ, ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್, ಹಿಂಭಾಗ (ರೇರ್) ಟ್ವಿನ್ ಶಾಕ್ ಸಸ್ಪೆಷನ್ ಸೆಟಪ್ ಪಡೆದಿದೆ. ಬ್ರೇಕಿಂಗ್ ವಿಚಾರವಾಗಿ ಹೇಳುವುದಾದರೆ, ಮುಂದೆ 130 ಎಂಎಂ ಮತ್ತು ಹಿಂದೆ 110 ಎಂಎಂ ಡ್ರಮ್ ಬ್ರೇಕ್ ಆಯ್ಕೆಯನ್ನು ಹೊಂದಿದ್ದು, (CBS) ಕಂಬೈನ್ಡ್ ಬ್ರೇಕಿಂಗ್ ಸಿಸ್ಟಮ್‍ನ್ನು ಒಳಗೊಂಡಿದೆ.

ಈ ಮೋಟಾರ್‌ಸೈಕಲ್‌ಗೆ ಹೀರೋ ಸ್ಪ್ಲೆಂಡರ್ ಪ್ಲಸ್, ಹೀರೋ ಹೆಚ್ಎಫ್ ಡಿಲಕ್ಸ್ ಮತ್ತು ಹೋಂಡಾ ಶೈನ್ 100 ಪ್ರಬಲ ಪ್ರತಿಸ್ಪರ್ಧಿಯಾಗಿವೆ. ನಿಮ್ಮ ಗಮನಕ್ಕೆ.. ಬಜಾಜ್ ಪ್ಲಾಟಿನಾ 100 ಬೈಕ್‌ನ ಆನ್-ರೋಡ್ ಬೆಲೆಗಳು ಹಾಗೂ ಸಾಲದ ಆಯ್ಕೆಗಳು ರಾಜ್ಯದಿಂದ ರಾಜ್ಯಕ್ಕೆ ಬೇರೆಯಿರಲಿದ್ದು, ಹೆಚ್ಚಿನ ಮಾಹಿತಿಗೆ ಸಮೀಪದ ಶೋರೂಂಗೆ ಭೇಟಿ ನೀಡಿರಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, May 21, 2024, 17:39 [IST]
English summary
Bajaj platina 100 on road price and emi details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+