Bajaj: ಕಡಿಮೆ ಬೆಲೆ.. ನಾಳೆ ಬಜಾಜ್ ಪಲ್ಸರ್ ಎನ್125 ಬೈಕ್ ಬಿಡುಗಡೆ.. ಟೀಸರ್ ಸೃಷ್ಟಿಸುತ್ತಿದೆ ಹಲ್‌ಚಲ್‌!

ಪುಣೆ ಮೂಲದ ಬಜಾಜ್ ಆಟೋ (Bajaj Auto), ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿದೆ. ದೇಶೀಯವಾಗಿ ಮಾರುಕಟ್ಟೆಯಲ್ಲಿ ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಹೊಂದಿರುವ ವಿವಿಧ ಬೈಕ್‌ಗಳನ್ನು ಮಾರಾಟಗೊಳಿಸುತ್ತಿದೆ. ನೂತನ ಪಲ್ಸರ್ ಎನ್125 (Pulsar N125) ಮೋಟಾರ್‌ಸೈಕಲ್‌ನ್ನು ಪರಿಚಯಿಸಲು ಕೂಡ ಸಿದ್ಧತೆ ನಡೆಸುತ್ತಿದೆ. ನಾಳೆ (ಅಕ್ಟೋಬರ್ 17) ಹೊಸ ಬೈಕ್‌ನ್ನು ಮಾರಾಟಕ್ಕೆ ತರಲಿದೆ. ಸದ್ಯ ಕಂಪನಿಯು ಅಧಿಕೃತ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಈ 'ಪಲ್ಸರ್ ಎನ್125' ಕುರಿತಂತೆ ಟೀಸರ್‌ನ್ನು ಹಂಚಿಕೊಂಡಿದೆ.

ಟೀಸರ್‌ನಲ್ಲಿ ಏನಿದೆ: ಬಜಾಜ್ ಆಟೋ ಬಿಡುಗಡೆಗೊಳಿಸಿರುವ ಟೀಸರ್‌ ವಿಡಿಯೋದಲ್ಲಿ 'ಪಲ್ಸರ್ ಎನ್125' ಬೈಕ್ ವಿನ್ಯಾಸ (ಡಿಸೈನ್) ಸಂಬಂಧ ಹಲವಾರು ವಿಚಾರಗಳು ಬಹಿರಂಗಗೊಂಡಿವೆ. ಈ ಮೋಟಾರ್‌ಸೈಕಲ್‌ ಪರ್ಪಲ್ ಬಣ್ಣದ (ಕಲರ್) ಆಯ್ಕೆಯಲ್ಲಿ ಮಾರಾಟಕ್ಕೆ ಬರುವುದು ಖಚಿತವಾಗಿದೆ. ಇದರೊಟ್ಟಿಗೆ ಫ್ಯುಯೆಲ್ (ಇಂಧನ) ಟ್ಯಾಂಕ್ ಹೊಸದಾಗಿರುವ ಗ್ರಾಫಿಕ್ ಪಡೆದುಕೊಂಡಿರುವುದನ್ನು ನೋಡಬಹುದು.

Bajaj Pulsar N125 Launch Tomorrow Official Teaser Out Expected Price Details

ವಿನ್ಯಾಸ: ಈ ಹಿಂದೆ, ನೂತನ ಬಜಾಜ್ ಪಲ್ಸರ್ ಎನ್125 ಬೈಕ್ ಪರೀಕ್ಷಾರ್ಥ ಸಂಚಾರ ನಡೆಸುವಾಗ ಹಲವು ಸ್ಪೈ (ಪತ್ತೇದಾರಿ) ಫೋಟೋಗಳನ್ನು ಸೆರೆಹಿಡಿಯಲಾಗಿತ್ತು. ಅದರಲ್ಲಿ ಪಲ್ಸರ್ ಎನ್125, ಎಲ್ಇಡಿ ಹೆಡ್‌ಲ್ಯಾಂಪ್, ಹ್ಯಾಲೊಜೆನ್ ಟರ್ನ್ ಸಿಗ್ನಲ್‌ಗಳು, ಶಾರ್ಪ್ ಬಾಡಿ ಪ್ಯಾನೆಲ್‌ಗಳು ಬ್ಲ್ಯಾಕ್ ಅಲಾಯ್ ವೀಲ್‌ಗಳು, ಸ್ಪ್ಲಿಟ್ ಗ್ರ್ಯಾಬ್ ರೈಲ್‌ಗಳು & ಸ್ಪ್ಲಿಟ್ ಸೀಟ್‌ಗಳನ್ನು ಹೊಂದಿರುವುದನ್ನು ಕಾಣಬಹುದಾಗಿತ್ತು.

ಕಾರ್ಯಕ್ಷಮತೆ ಹಾಗೂ ವೈಶಿಷ್ಟ್ಯಗಳು: ಹೊಸ ಬಜಾಜ್ ಪಲ್ಸರ್ ಎನ್125 ಮೋಟಾರ್‌ಸೈಕಲ್, 125 ಸಿಸಿ ಸಿಂಗಲ್-ಸಿಲಿಂಡರ್ ಪೆಟ್ರೋಲ್ ಎಂಜಿನ್ ಹಾಗೂ 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿರಲಿದೆ. ಜೊತೆಗೆ ಹೆಚ್ಚಿನ ಮೈಲೇಜ್ ಕೂಡ ನೀಡಲಿದೆ ಎಂದು ಅಂದಾಜಿಸಲಾಗಿದ್ದು, ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು (ಫೀಚರ್) ಪಡೆದುಕೊಂಡಿರುವ ನಿರೀಕ್ಷೆಯಿದೆ.

Bajaj Pulsar N125 Launch Tomorrow Official Teaser Out Expected Price Details

ಸಸ್ಪೆನ್ಷನ್ ಸೆಟಪ್, ಬ್ರೇಕಿಂಗ್ ಸಿಸ್ಟಮ್: ಈ ಬೈಕ್ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಪೋರ್ಕ್ ಹಾಗೂ ಹಿಂಭಾಗ (ರೇರ್) ಮೊನೊಶಾಕ್ ಸಸ್ಪೆಷನ್ ಸೆಟಪ್‌ನ್ನು ಪಡೆದುಕೊಂಡಿರಲಿದೆ. ಪ್ರಯಾಣಿಕರ ರಕ್ಷಣೆಗಾಗಿ ಡಿಸ್ಕ್/ ಡ್ರಮ್ ಬ್ರೇಕ್ ಆಯ್ಕೆಯನ್ನು ಹೊಂದಿರಲಿದೆ. ಇದರೊಂದಿಗೆ ಸಿಂಗಲ್-ಚಾನೆಲ್ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಸಹ ಒಳಗೊಂಡಿರಲಿದೆ ಎನ್ನಲಾಗಿದೆ.

ಬೆಲೆ ಹಾಗೂ ಪ್ರತಿಸ್ಪರ್ಧಿ ಮೋಟಾರ್‌ಸೈಕಲ್‌ಗಳು: ಹೊಸ ಬಜಾಜ್ ಪಲ್ಸರ್ ಎನ್125 ಬೈಕ್ ರೂ.90,000 ರಿಂದ ರೂ.95,000 ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಮೋಟಾರ್‌ಸೈಕಲ್‌ಗೆ ಟಿವಿಎಸ್ ರೈಡರ್ 125 (TVS Raider 125) ಹಾಗೂ ಹೀರೋ ಎಕ್ಸ್‌ಟ್ರೀಮ್ 125ಆರ್ (Hero Xtreme 125R) ಬೈಕ್‌ಗಳು ದೊಡ್ಡ ಎದುರಾಳಿಯಾಗಲಿವೆ.

ಇನ್ನು, ನಾಳೆ ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಜಾಜ್ ಪಲ್ಸರ್ ಎನ್125 ಬೈಕ್ ಮೇಲೆ ಗ್ರಾಹಕರು ಭಾರಿ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಅದಕ್ಕೆ ತಕ್ಕಂತೆ ಈ ಮೋಟಾರ್‌ಸೈಕಲ್‌ ಅತ್ಯಾಧುನಿಕ ವಿನ್ಯಾಸ ಹಾಗೂ ವೈಶಿಷ್ಟ್ಯದೊಂದಿಗೆ ಮಾರಾಟಕ್ಕೆ ಬರಲಿದ್ದು, ಖರೀದಿದಾರರಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, October 16, 2024, 18:06 [IST]
English summary
Bajaj pulsar n125 launch tomorrow official teaser out expected price details
Read more on bajaj auto india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+