125ಸಿಸಿ ವಿಭಾಗದ ಮೊದಲ ಸ್ಪೋರ್ಟಿ ಬೈಕ್: ಕಡಿಮೆ ಬೆಲೆಯ ಪಲ್ಸರ್ N125 ವಿಶೇಷತೆಗಳು!

ಬಜಾಜ್ ಇತ್ತೀಚೆಗೆ ತನ್ನ ಹೊಸ ಪಲ್ಸರ್ ಶ್ರೇಣಿಗೆ ಹೊಸ N125 ಅನ್ನು ಸೇರಿಸಿದೆ. ಹೊಸ-ಯುಗದ ನೇಕೆಡ್ ಸ್ಟ್ರೀಟ್‌ಫೈಟರ್ ವಿನ್ಯಾಸವನ್ನು ಹೊಂದಿರುವ ಪಲ್ಸರ್ N125 ಬೈಕ್ ಅನ್ನು (ಎಕ್ಸ್‌ ಶೋರೂಂ) ರೂ.94,707 ಕ್ಕೆ ಬಿಡುಗಡೆ ಮಾಡಿದೆ. ಇದು ಹೊಸ ವಿನ್ಯಾಸ ಮತ್ತು ಸ್ಪೋರ್ಟಿ ಪರ್ಫಾಮೆನ್ಸ್ ಒಳಗೊಂಡ ಸಿಟಿ ಮೋಟಾರ್‌ಸೈಕಲ್ ಆಗಿದ್ದು, ಯುವಕರಿಗೆ ಅಗ್ಗದ ಬೆಲೆಯಲ್ಲಿ ಉತ್ಸಾಹಭರಿತ ಸವಾರಿ ಅನುಭವವನ್ನು ನೀಡಲು ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿ ಹೇಳಿದೆ. ಹೊಸ ಬೈಕ್ ಕುರಿತ ಹೆಚ್ಚಿನ ವಿವರಗಳನ್ನು ಇಲ್ಲಿ ನೋಡೋಣ.

ವೇರಿಯೆಂಟ್‌ಗಳು: ಎಲ್ಇಡಿ ಡಿಸ್ಕ್ ರೂಪಾಂತರಗಳಲ್ಲಿ ಕೆರಿಬಿಯನ್ ಬ್ಲೂ, ಕಾಕ್ಟೈಲ್ ವೈನ್ ರೆಡ್, ಪರ್ಲ್ ಮೆಟಾಲಿಕ್ ವೈಟ್, ಎಬೊನಿ ಬ್ಲಾಕ್ ಸಿಗುತ್ತವೆ. ಎಲ್ಇಡಿ ಡಿಸ್ಕ್ ಬಿಟಿ ರೂಪಾಂತರಗಳಲ್ಲಿ ಎಬೊನಿ ಬ್ಲಾಕ್ + ಕಾಕ್ಟೈಲ್ ವೈನ್ ರೆಡ್, ಎಬೊನಿ ಬ್ಲಾಕ್ + ಪರ್ಪಲ್ ಫ್ಯೂರಿ, ಪ್ಯೂಟರ್ ಗ್ರೇ + ಸಿಟ್ರಸ್ ರಶ್ ವೇರಿಯೆಂಟ್‌ಗಳು ಸಿಗುತ್ತವೆ.

bajaj-pulsar-n125-price-features-design-details

ವಿನ್ಯಾಸ: ಮಸ್ಕುಲರ್ ಲೈನ್‌ಗಳು ಮತ್ತು ಆಕ್ರಮಣಕಾರಿ ಡಿಸೈನ್‌ನೊಂದಿಗೆ ಪಲ್ಸರ್ N125 ಸೂಪರ್‌ಮೋಟಾರ್ಡ್ ಡಿಸೈನ್ ಪ್ರೇರಿತವಾದ ವಿನ್ಯಾಸವನ್ನು ಹೊಂದಿದೆ. ಆಕರ್ಷಕ ಫ್ಯೂಲ್ ಟ್ಯಾಂಕ್ ಸವಾರರ ತೊಡೆಗೆ ಉತ್ತಮ ಸಪೋರ್ಟ್ ನೀಡುವಂತೆ ಡಿಸೈನ್ ಮಾಡಲಾಗಿದೆ. ಜೊತೆಗೆ ಏರೋಡೈನಾಮಿಕ್ ಫ್ಲೋಟಿಂಗ್ ಫ್ರಂಟ್ ಮತ್ತು ರಿಯರ್ ಪ್ಯಾನೆಲ್‌ಗಳನ್ನು ವೇಗಕ್ಕೆ ತಕ್ಕಂತೆ ವಿನ್ಯಾಸಗೊಳಿಸಲಾಗಿದೆ. ಒಟ್ಟಾರೆ ಪರಿಪೂರ್ಣ ಸಿಟಿ ಬೈಕ್ ಆಗಿ ವಿನ್ಯಾಸಗೊಳಿಸಲಾಗಿದೆ.

ವೈಶಿಷ್ಟ್ಯಗಳು ಮತ್ತು ತಂತ್ರಜ್ಞಾನ: ಎಲ್‌ಇಡಿ ಹೆಡ್‌ಲ್ಯಾಂಪ್, ಹಿಂದಿನ ಮೊನೊ-ಶಾಕ್ ಸಸ್ಪೆನ್ಷನ್ ಮತ್ತು ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ದೈನಂದಿನ ಸವಾರರಿಗೆ ಪ್ರಾಯೋಗಿಕವಾಗಿ ನೀಡಲಾಗಿದೆ. ಫ್ಯೂಲ್ ಎಕಾನಮಿ ರೀಡಿಂಗ್‌ಗಳ ಜೊತೆಗೆ ಕಾಲ್ ರಿಸೀವ್/ಕಟ್, ಮಿಸ್ಡ್ ಕಾಲ್ ಮತ್ತು ಮೆಸೇಜ್ ನೋಟಿಫಿಕೇಷನ್‌ಗಳಂತಹ ವೈಶಿಷ್ಟ್ಯಗಳನ್ನು ಒದಗಿಸುತ್ತದೆ. ಜೊತೆಗೆ ಸಂಪೂರ್ಣ ಡಿಜಿಟಲ್ LCD ಕನ್ಸೋಲ್ ಬ್ಲೂಟೂತ್ ಸಂಪರ್ಕವನ್ನು ಹೊಂದಿದೆ.

bajaj-pulsar-n125-price-features-design-details

ಇದರ 795 ಮಿ.ಮೀ ಕಡಿಮೆ ಸೀಟ್ ಎತ್ತರವು ಸವಾರರಿಗೆ ಕಾಲುಗಳನ್ನು ನೆಲಕ್ಕೆ ಸುಲಭವಾಗಿ ತಲುಪಲು ಅನುವು ಮಾಡಿಕೊಡುತ್ತದೆ. ಈ ಮೋಟಾರ್‌ಸೈಕಲ್‌ನ 125 ಕೆ.ಜಿ ತೂಕ ಮತ್ತು ಕಾಂಪ್ಯಾಕ್ಟ್ ವಿನ್ಯಾಸವು ದೈನಂದಿನ ಪ್ರಯಾಣಕ್ಕೆ ಸೂಕ್ತವಾದ ಬೈಕ್ ಎನಿಸುತ್ತದೆ. ಸ್ಪೀಡ್ ಬ್ರೇಕರ್‌ಗಳ ಮೇಲೆ ಗ್ಲೈಡ್ ಮಾಡಲು 198 ಎಂಎಂ ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್‌ನೊಂದಿಗೆ ಬರುತ್ತದೆ.

ಪರ್ಫಾರ್ಮೆನ್ಸ್: ಪಲ್ಸರ್ N125 ತನ್ನ 124.58 cc ಇಂಜಿನ್‌ನೊಂದಿಗೆ 12 PS ಪವರ್ ಮತ್ತು 11 Nm ಟಾರ್ಕ್ ಉತ್ಪಾದಿಸುತ್ತದೆ. ಇದು ಇಂಟಿಗ್ರೇಟೆಡ್ ಸ್ಟಾರ್ಟರ್ ಜನರೇಟರ್ (ISG) ಅನ್ನು ಪಡೆಯುವ ಮೊದಲ ಪಲ್ಸರ್ ಆಗಿದೆ. ಇದು 0 ಯಿಂದ 60 km/h ವೇಗವನ್ನು ಇತರ 125ಸಿಸಿ ಮೋಟಾರ್‌ಸೈಕಲ್‌ಗಳಿಗಿಂತ ವೇಗವಾಗಿ ತಲುಪಬಲ್ಲದು ಎಂದು ಬಜಾಜ್ ಕಂಪನಿ ತಿಳಿಸಿದೆ.

bajaj-pulsar-n125-price-features-design-details

2001 ರಲ್ಲಿ ತನ್ನ ಪಲ್ಸರ್ ಸಿರೀಸ್ ಅನ್ನು ಆರಂಭಿಸಿದ ಬಜಾಜ್ ಇಂದಿಗೂ ಭರ್ಜರಿ ಮಾರಾಟದೊಂದಿಗೆ ಮುನ್ನುಗ್ಗುತ್ತಿದೆ. ಇದೀಗ ಈ ಹೊಸ ಮೋಟಾರ್‌ಸೈಕಲ್ ಟ್ರೆಂಡಿ ಗ್ರಾಫಿಕ್ಸ್, ಮಸ್ಕುಲರ್ ಫ್ಯೂಲ್ ಟ್ಯಾಂಕ್, ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ಬ್ಲೂಟೂತ್ ಸಂಪರ್ಕದೊಂದಿಗೆ ಬಿಡುಗಡೆಯಾಗಿದೆ. ಪಲ್ಸರ್ ಪರಂಪರೆಯನ್ನು ಹೊಸ ಪಲ್ಸರ್ N125 ಮುಂದುವರಿಸುತ್ತಾ ಕಾದುನೋಡಬೇಕಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, October 24, 2024, 14:00 [IST]
English summary
Bajaj pulsar n125 price features design details
Read more on bajaj auto india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+