ಟಿವಿಎಸ್-ಬಜಾಜ್ ಬೈಕ್‌ಗಳ ಜಟಾಪಟಿ: ಅಗ್ಗದ ಬೆಲೆಯ ಬೆಸ್ಟ್‌ ಬೈಕ್ ಯಾವುದು?

ಭಾರತೀಯ ದ್ವಿಚಕ್ರ ವಾಹನ ಉದ್ಯಮದಲ್ಲಿ 125ಸಿಸಿ ವಿಭಾಗದಲ್ಲಿ ಅತ್ಯಂತ ಸ್ಟೈಲಿಷ್ ಬೈಕ್ ಎಂದು ಜನಪ್ರಿಯತೆ ಪಡೆದಿರುವ ಟಿವಿಎಸ್ ರೈಡರ್ 125 ಬೈಕ್‌ಗೆ ಇದೀಗ ಪ್ರತಿಸ್ಪರ್ಧಿಯಾಗಿ ಬಜಾಜ್ ಪಲ್ಸರ್ ಎನ್ 125 ಬೈಕ್ ಬಿಡುಗಡೆಯಾಗಿದೆ. ಬೆಲೆ, ಆರಾಮ, ಮೈಲೇಜ್, ಪರ್ಫಾಮೆನ್ಸ್ ವಿಷಯದಲ್ಲಿ ಎರಡೂ ಬೈಕ್‌ಗಳು ಒಂದಕ್ಕೊಂದು ಸರಿಯಾದ ಪೈಪೋಟಿ ನೀಡಬಲ್ಲ ಸಾಮರ್ಥ್ಯವನ್ನು ಹೊಂದಿವೆ. ಒಂದು ವೇಳೆ ನೀವು 125ಸಿಸಿ ಬೈಕ್ ಖರೀದಿಸುವ ಆಲೋಚನೆಯಲ್ಲಿದ್ದರೇ ಯಾವುದನ್ನು ಖರೀದಿಸಬಹುದು ಎಂಬ ಪ್ರಶ್ನೆಗೆ ಈ ಲೇಖನ ನಿಮಗೆ ಉತ್ತರವಾಗಬಹುದು. ಬನ್ನಿ ಈ ಬೈಕ್‌ಗಳ ನಡುವಿನ ಹೋಲಿಕೆಯನ್ನು ನೋಡೋಣ.

ಬೆಲೆ: ಬಜಾಜ್ ಪಲ್ಸರ್ ಎನ್ 125 ಬೈಕಿನ ಆನ್ ರೋಡ್ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ. 94,707 ಗಳಾಗಿದೆ. ಇತ್ತ ಟಿವಿಎಸ್ ರೈಡರ್ 125 ಬೈಕಿನ ಬೆಲೆಯು ಎಕ್ಸ್‌ ಶೋರೂಂ ಪ್ರಕಾರ ರೂ.84,869 ಗಳಾಗಿದೆ. ಬಜಾಜ್ ಪಲ್ಸರ್ ಎನ್ 125 ಪ್ರಸ್ತುತ 4 ಬಣ್ಣಗಳು ಮತ್ತು 2 ವೆರಿಯೆಂಟ್ ಗಳನ್ನು ಹೊಂದಿದ್ದು, ಟಿವಿಎಸ್ ರೈಡರ್ 125 ಪ್ರಸ್ತುತ 2 ಬಣ್ಣಗಳು ಮತ್ತು 5 ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ.

bajaj-pulsar-n125-vs-tvs-raider-125-price-features-design-comparison

ವಿನ್ಯಾಸ: ಪಲ್ಸರ್ N125 ಸೂಪರ್‌ಮೋಟಾರ್ಡ್ ಡಿಸೈನ್ ಪ್ರೇರಿತವಾದ ವಿನ್ಯಾಸವನ್ನು ಹೊಂದಿದೆ, ಮಸ್ಕುಲರ್ ಲೈನ್‌ಗಳು ಮತ್ತು ಆಕ್ರಮಣಕಾರಿ ಡಿಸೈನ್‌ನೊಂದಿಗೆ ಪರಿಪೂರ್ಣ ಸಿಟಿ ಬೈಕ್ ಆಗಿ ವಿನ್ಯಾಸಗೊಳಿಸಲಾಗಿದೆ. ಬೈಕು ಹೆಚ್ಚು ಮಸ್ಕುಲರ್ ಕಾಣುವುದಕ್ಕೆ ಪೂರಕವಾಗಿ ಏರೋಡೈನಾಮಿಕ್ ಫ್ಲೋಟಿಂಗ್ ಫ್ರಂಟ್ ಮತ್ತು ರಿಯರ್ ಪ್ಯಾನೆಲ್‌ಗಳನ್ನು ವೇಗಕ್ಕೆ ತಕ್ಕಂತೆ ವಿನ್ಯಾಸಗೊಳಿಸಲಾಗಿದೆ. ಆಕರ್ಷಕ ಫ್ಯೂಲ್ ಟ್ಯಾಂಕ್ ಸವಾರರ ತೊಡೆಗೆ ಉತ್ತಮ ಸಪೋರ್ಟ್ ನೀಡುವಂತೆ ಡಿಸೈನ್ ಮಾಡಲಾಗಿದೆ.

ಟಿವಿಎಸ್ ರೈಡರ್ ಒಂದು ಹೊಸ ಪ್ಲಾಟ್‌ಫಾರಂ ಆಧರಿಸಿದ ಬೈಕ್ ಆಗಿದ್ದರೂ, ವಿನ್ಯಾಸ ಸ್ಫೂರ್ತಿಯನ್ನು TVS Apache RTR 160 4 V ಬೈಕಿನಿಂದಪಡೆಯಲಾಗಿದೆ. ಸೈಡ್ ಪ್ರೊಫೈಲ್‌ನಿಂದ TVS Rider ಅನ್ನು ವೀಕ್ಷಿಸಿದರೆ ಬೃಹತ್ ಗಾತ್ರದ ಫ್ಯೂಯಲ್ ಟ್ಯಾಂಕ್ ಕಡೆಗೆ ನಿಮ್ಮ ಗಮನ ಸೆಳೆಯುತ್ತದೆ. ಈ ಬೈಕ್ ಮಸ್ಕ್ಯುಲರ್ ಆಗಿದ್ದು, ಆಕರ್ಷಕವಾಗಿದೆ. ಎಂಜಿನ್ ಅಡಿಯಲ್ಲಿರುವ ಬ್ಯಾಷ್‌ಪ್ಲೇಟ್ ಮತ್ತಷ್ಟು ಸ್ಪೋರ್ಟಿ ವಿನ್ಯಾಸವನ್ನು ನೀಡುತ್ತದೆ.

bajaj-pulsar-n125-vs-tvs-raider-125-price-features-design-comparison

ಪರ್ಫಾರ್ಮೆನ್ಸ್: ಪಲ್ಸರ್ N125 ತನ್ನ 124.58 cc ಇಂಜಿನ್‌ನೊಂದಿಗೆ 12 PS ಪವರ್ ಮತ್ತು 11 Nm ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಬರುತ್ತದೆ. ಇಂಟಿಗ್ರೇಟೆಡ್ ಸ್ಟಾರ್ಟರ್ ಜನರೇಟರ್ (ISG) ಅನ್ನು ಪಡೆದ ಮೊದಲ ಪಲ್ಸರ್ ಆಗಿದೆ ಎಂದು ಬಜಾಜ್ ಕಂಪನಿ ತಿಳಿಸಿದೆ. ಇದರಲ್ಲಿ 9.5 ಲೀ. ಇಂಧನ ಟ್ಯಾಂಕ್ ನೀಡಲಾಗಿದೆ. ಮೈಲೇಜ್ ಮಾಹಿತಿಯಲ್ಲವಾದರೂ 55-60 ಕಿ.ಮೀ ಇರಬಹುದು ಎಂದು ಅಂದಾಜಿಸಲಾಗಿದೆ.

ಟಿವಿಎಸ್ ರೈಡರ್ ಮೋಟಾರ್‌ಸೈಕಲ್‌ 124.8 ಸಿಸಿ ಸಿಂಗಲ್ - ಸಿಲಿಂಡರ್ ಏರ್ - ಕೋಲ್ಡ್ ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. 11.12 ಪಿಎಸ್ ಪವರ್ ಹಾಗೂ 11.2 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೂ ಸಿಗುತ್ತದೆ. 67 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ ಎಂದು ಅಂದಾಜಿಸಲಾಗಿದೆ. ಈ ಬೈಕ್ 123 ಕೆಜಿ ತೂಕವಿದ್ದು, 10 ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್‌ನ್ನು ಪಡೆದಿದೆ.

bajaj-pulsar-n125-vs-tvs-raider-125-price-features-design-comparison

ವೈಶಿಷ್ಟ್ಯಗಳು: ಹೊಸ ಪಲ್ಸರ್ N125ನ ಸಂಪೂರ್ಣ ಡಿಜಿಟಲ್ LCD ಕನ್ಸೋಲ್ ಬ್ಲೂಟೂತ್ ಸಂಪರ್ಕವನ್ನು ಹೊಂದಿದೆ. ಫ್ಯೂಲ್ ಎಕಾನಮಿ ರೀಡಿಂಗ್‌ಗಳ ಜೊತೆಗೆ ಕಾಲ್ ರಿಸೀವ್/ಕಟ್, ಮಿಸ್ಡ್ ಕಾಲ್ ಮತ್ತು ಮೆಸೇಜ್ ನೋಟಿಫಿಕೇಷನ್‌ಗಳಂತಹ ವೈಶಿಷ್ಟ್ಯಗಳನ್ನು ಒದಗಿಸುತ್ತದೆ. ಎಲ್‌ಇಡಿ ಹೆಡ್‌ಲ್ಯಾಂಪ್, ಹಿಂದಿನ ಮೊನೊ-ಶಾಕ್ ಸಸ್ಪೆನ್ಷನ್ ಮತ್ತು ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ದೈನಂದಿನ ಸವಾರರಿಗೆ ಪ್ರಾಯೋಗಿಕವಾಗಿದೆ.

ಟಿವಿಎಸ್ ರೈಡರ್ ಬೈಕ್, ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಕಾಲ್ / ಎಸ್ಎಂಎಸ್ ನೋಟಿಫಿಕೇಷನ್, ಟರ್ನ್-ಬೈ-ಟರ್ನ್ ನ್ಯಾವಿಗೇಷನ್‌ನೊಂದಿಗೆ ಸ್ಮಾರ್ಟ್ಫೋನ್ ಸಂಪರ್ಕವನ್ನು ನೀಡುತ್ತದೆ. ಇದು ಸೀಟಿನ ಕೆಳಗೆ ಸಣ್ಣ ಕಂಪಾರ್ಟ್ಮೆಂಟ್ ಅನ್ನು ಸಹ ಹೊಂದಿದೆ, ನಿಮ್ಮ ಫೋನ್ ಅನ್ನು ಚಾರ್ಜ್ ಮಾಡಲು ಯುಎಸ್‌ಬಿ ಪೋರ್ಟ್ ಹೊಂದಿದೆ. ಸೈಲೆಂಟ್ ಸ್ಟಾರ್ಟರ್, ಸ್ಟಾರ್ಟ್-ಸ್ಟಾಪ್ ಸಿಸ್ಟಮ್ ಮತ್ತು ಎಂಜಿನ್ ಕಟ್-ಆಫ್ ಕಾರ್ಯದೊಂದಿಗೆ ಸೈಡ್-ಸ್ಟ್ಯಾಂಡ್ ಇಂಡಿಕೇಟರ್ ಇದೆ.

Article Published On: Friday, October 25, 2024, 10:00 [IST]
English summary
Bajaj pulsar n125 vs tvs raider 125 price features design comparison
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+