ಕೇವಲ 2 ಲಕ್ಷಕ್ಕೆ 250cc ಬೈಕ್‌ನ EMI ನೋಡಿ‌: ಯಾವ ಕಂಪನಿಯೂ ಕೊಡಲ್ಲ ಇಷ್ಟು ಕಡಿಮೆಗೆ!

ಭಾರತದಲ್ಲಿ ಕಾರು ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಕಾರುಗಳು ಹೇಗೋ, ಬೈಕ್‌ ವಿಭಾಗದಲ್ಲಿ ಬಜಾಜ್‌ ಹಾಗೆಯೇ. ಭಾರತೀಯ ಗ್ರಾಹಕರ ಅಭಿರುಚಿಗೆ ತಕ್ಕಂತೆ ಬೈಕ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಾ ಇರುತ್ತಾರೆ. ಬಜಾಜ್‌ನ ಪಲ್ಸರ್ ಸಿರೀಸ್ ಸಾಕಷ್ಟು ಜನಪ್ರೀಯತೆಯನ್ನು ಪಡೆದಿರುವ ಸರಣಿ. ಈ ಸರಣಿಯಲ್ಲಿ ಸಾಕಷ್ಟು ಮಾಡಲ್‌ಗಳು ಲಾಂಚ್‌ ಆಗಿದೆ. ಅದರಲ್ಲಿ ಪಲ್ಸರ್‌ N250 ಸಹ ಒಂದು. ಇಂದಿನ ಈ ಲೇಖನದಲ್ಲಿ ನಾವು, ಪಲ್ಸರ್‌ N250 ಬೈಕ್‌ನ ಇಎಂಐ, ಡೌನ್‌ಪೇಮೆಂಟ್ ಮತ್ತು ಇನ್ನಿತರ ವಿಚಾರಗಳನ್ನು ನೋಡುತ್ತಿದ್ದು, ಹೆಚ್ಚಿನ ಮಾಹಿತಿಗಾಗಿ ಕೊನೆಯವರೆಗೆ ಓದಿ.

ಬಜಾಜ್‌ ಪಲ್ಸರ್‌ ಪಲ್ಸರ್‌ N250 (Bajaj Pulsar N250) ಬೈಕ್‌ನ ಬೆಂಗಳೂರಿನ ಆನ್‌ರೋಡ್‌ ಬೆಲೆಯನ್ನು ನೋಡುವುದಾದರೆ, ಸುಮಾರು 1,82,468 ರೂಗಳು. ಈ ಬೈಕ್‌ನ ಎಕ್ಸ್‌ ಶೋ ರೂಮ್‌ ಬೆಲೆ 1,49,811 ರೂಗಳು. ಇದಕ್ಕೆ ಸುಮಾರು 17,367 ರೂಗಳು ಆರ್‌ಟಿಒ ಟ್ಯಾಕ್ಸ್‌ ಆಗಿಯೂ ಮತ್ತು 12,092 ರೂಗಳು ಇನ್ಸುರೆನ್ಸ್ ರೂಪದಲ್ಲಿ ಸೇರಿಕೊಳ್ಳುತ್ತದೆ.

Bajaj Pulsar N250 EMI Down payment Engine And Other Details

ಇನ್ನು ಈ ಬೈಕ್‌ನ ಡೌನ್‌ಪೇಮೆಂಟ್‌ ಮತ್ತು ಇಎಂಐ ಕುರಿತಾಗಿ ನೋಡುವುದಾದರೆ, ನೀವು ಈ ಬೈಕ್‌ ಅನ್ನು ಸಾಮಾನ್ಯವಾಗಿ 9.30% ಬಡ್ಡಿದರದಲ್ಲಿ ಲೋನ್‌ ಪಡೆದುಕೊಳ್ಳಬಹುದಾಗಿದೆ. ಈ ಬೈಕ್ಗೆ ಕಡಿಮೆ ಎಂದರೂ ಸುಮಾರು 60,000 ರೂ ಡೌನ್‌ಪೇಮೆಂಟ್ ಕಟ್ಟಿದರೆ ೫ ವರ್ಷಕ್ಕೆ ನೀವು 2,584 ರೂಪಾಯಿಗಳನ್ನು ಇಎಂಐ ರೂಪದಲ್ಲಿ ಪಾವತಿಸಬಹುದಾಗಿದೆ. ಲೋನ್‌ ಮುಗಿಯುವಾಗ ಸುಮಾರು 32,572 ರೂಗಳನ್ನು ಹೆಚ್ಚುವರಿಯಾಗಿ ಪಾವತಿಸುತ್ತೀರಿ.

ಇನ್ನು ಈ ಬಜಾಜ್‌ ಪಲ್ಸರ್‌ ಪಲ್ಸರ್‌ N250 ಈ ಬೈಕ್ನಲ್ಲಿ, ಟ್ರಾಕ್ಷನ್‌ ಕಂಟ್ರೋಲ್‌, ಸಂಪೂರ್ಣ ಡಿಜಿಟಲ್‌ ಇನ್ಸ್ಟ್ರುಮೆಂಟ್ ಕ್ಲಸ್ಟರ್‌, ಬ್ಲೂಟೂತ್‌ ಕನೆಕ್ಟಿವಿಟಿ ಮತ್ತು ಎಬಿಎಸ್‌ ಮೋಡ್‌ಗಳು ಸಿಗುತ್ತಿದೆ. ಈ ಬೈಕ್‌ನಲ್ಲಿ ರೈನ್‌, ರೋಡ್‌ ಮತ್ತು ಆಫ್‌ ರೋಡ್‌ ಎಂಬ ಮೂರು ಮೋಡ್‌ನಲ್ಲಿ ಎಬಿಎಸ್‌ ಲಭ್ಯವಿದೆ. ಸವಾರ, ABS ಮೋಡ್ ಬದಲಾಯಿಸಿದಂತೆ ಅದಕ್ಕೆ ತಕ್ಕದಾದ ರೀತಿಯಲ್ಲಿ ಎಬಿಎಸ್‌ ತನ್ನ ಲಕ್ಷಣಗಳನ್ನು ಬದಲಾಯಿಸುತ್ತದೆ.

Bajaj Pulsar N250 EMI Down payment Engine And Other Details

ಇದರ ಜೊತೆಗೆ ಈ ಬೈಕ್‌ ಅಪ್‌ಡೇಟೆಡ್‌ 27mm ನ ಇನ್ವರ್ಟೆಡ್‌ ಫೋರ್ಕ್‌ಗಳನ್ನು ಹೊಂದಿದೆ. ಕಳೆದ ಬಾರಿಯ ಬಜಾಜ್‌ ಪಲ್ಸರ್‌ N250 ಮಾದರಿಯಲ್ಲಿ ಟೆಲಿಸ್ಕೋಪಿಕ್‌ ಫೋರ್ಕ್‌ಗಳನ್ನು ನಾವು ಕಾಣಬಹುದಾಗಿತ್ತು. ಇದು ಬೈಕ್‌ ಸವಾರನಿಗೆ ಹೆಚ್ಚು ಆರಾಮದಾಯಕ ರೈಡಿಂಗ್‌ ಅನುಭವವನ್ನು ನಿಡುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.

ಇನ್ನು ಈ ಬೈಕ್‌ನಲ್ಲಿ ಬದಲಾಗದೇ ಉಳಿದಿರುವ ವಿಷಯಗಳೆಂದರೆ ಅದು ಇದರ ಎಂಜಿನ್‌ ಮತ್ತು ಇತರ ಕಾರ್ಯಗಳು. ಈ ಬೈಕ್‌ನಲ್ಲಿ ಅದೇ 249cc ಸಿಂಗಲ್‌ ಸಿಲಿಂಡರ್‌ ಏರ್‌ ಕೂಲ್ಡ್‌ ಎಂಜಿನ್‌ ಬರುತ್ತಿದ್ದು, ಇದರ ಸಹಾಯದಿಂದ ಈ ಬೈಕ್‌ ಸುಮಾರು 24.5 PS ಪವರ್‌ ಮತ್ತು 21.5 ಎನ್‌ಎಮ್ ಟಾರ್ಕ್‌ ಸಹ ಉತ್ಪಾದಿಸುತ್ತದೆ. 5-ಸ್ಪೀಡ್‌ ಗೇರ್‌ ಬಾಕ್ಸ್‌ ಅನ್ನು ಇದರಲ್ಲಿ ಅಳವಡಿಸಲಾಗಿದ್ದು. ಸ್ಲಿಪರ್‌ ಕ್ಲಚ್‌ ಸಹ ಲಭ್ಯವಿದೆ.

Bajaj Pulsar N250 EMI Down payment Engine And Other Details

ಬಜಾಜ್ ತನ್ನ ಪಲ್ಸರ್‌ N250 ಗೆ ಈ ಎಲ್ಲಾ ಹೊಸ ಫೀಚರ್‌ಗಳು ಸೇರಿಸುವ ಮೂಲಕ, ತನ್ನ ಇತರ ಸ್ಪರ್ಧಿಗಳಿಗೆ ಪ್ರಭಲ ಸ್ಪರ್ಧೆಯೊಡ್ಡಲಿದೆ. ಸಂಪೂರ್ಣ ಇನ್ಸ್ಟ್ರುಮೆಂಟ್‌ ಕ್ಲಸ್ಟರ್‌, ಎಬಿಎಸ್‌ ಮೋಡ್‌ ಮತ್ತು ಟ್ರಾಕ್ಷನ್‌ ಕಂಟ್ರೋಲ್‌ ಇರುವ ಬಜಾಜ್‌ನ ಮೊದಲ ಬೈಕ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದರಿಂದ 250cc ಬೈಕ್‌ ಕೊಳ್ಳಬೇಕು ಎಂದುಕೊಂಡಿರುವವರಿಗೆ ಇದೊಂದು ಉತ್ತಮ ಆಯ್ಕೆಯಾಗಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, June 21, 2024, 18:27 [IST]
English summary
Bajaj pulsar n250 emi down payment engine and other details
Read more on bajaj auto india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+