ಒಂದು ರೂ. ಖರ್ಚಿಲ್ಲದೇ ದಿನಕ್ಕೆ 100 ಕಿ.ಮೀ ಓಡಿಸಬಹುದಾದ ಹೊಸ ಸ್ಕೂಟರ್ ಬಿಡುಗಡೆ

ಭಾರತದಲ್ಲಿ ಸದ್ಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯು ವೇಗವಾಗಿ ಬೆಳೆಯುತ್ತಿದೆ. ಇದಕ್ಕೆ ಮುಖ್ಯ ಕಾರಣ ಇಂಧನ ಬೆಲೆಗಳ ಏರಿಕೆ ಸೇರಿದಂತೆ ಪೆಟ್ರೋಲ್ ಚಾಲಿತ ವಾಹನಗಳ ನಿರ್ವಹಣಾ ವೆಚ್ಚವೆಂದು ಹೇಳಬಹುದು. ಎಲೆಕ್ಟ್ರಿಕ್ ಸ್ಕೂಟರ್‌ಗಳಾದರೇ ಒಮ್ಮೆ ಚಾರ್ಜ್‌ ಮಾಡಿ ದಿನವೆಲ್ಲಾ ಓಡಾಡಬಹುದು ಎಂದು ಗ್ರಾಹಕರು ಖರೀದಿಗೆ ಮುಂದಾಗುತ್ತಿದ್ದಾರೆ. ಬೇಡಿಕೆ ಹೆಚ್ಚಾದಂತೆ ಎಲೆಕ್ಟ್ರಿಕ್ ವಾಹನ ತಯಾರಕಾ ಕಂಪನಿಗಳು ಕೂಡ ಹೆಚ್ಚಾಗುತ್ತಿವೆ. ಇದೀಗ ಹೊಸ ಎಲೆಕ್ಟ್ರಿಕ್ ವಾಹನ ಕಂಪನಿಯೊಂದು ಅಗ್ಗದ ಬೆಲೆಯ ಇವಿ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಸ್ಕೂಟರ್ ಕುರಿತ ಹೆಚ್ಚಿನ ವಿವರಗಳನ್ನು ಇಲ್ಲಿ ನೋಡೋಣ.

BattRE ಎಂಬ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯು 'ಸ್ಟೋರಿ ಎಪಿಕ್' ಎಂಬ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಇದರ ಬೆಲೆ ರೂ.84,999 ಎಕ್ಸ್ ಶೋರೂಂ ಆಗಿದೆ. ಗ್ರಾಹಕರಿಗೆ ಕೈಗೆಟುಕುವ ಬೆಲೆ, ಶೈಲಿ ಮತ್ತು ಕಾರ್ಯಕ್ಷಮತೆಯ ಮಿಶ್ರಣವನ್ನು ನೀಡಬೇಕೆಂದು ನಿರ್ಮಿಸಲಾಗಿದೆ ಎಂದು ಕಂಪನಿ ಹೇಳಿದೆ.

battre-storie-epic-electric-scooter-launched-in-india

ಹೊಸ ಸ್ಕೂಟರ್‌ನಲ್ಲಿ ಅಳವಡಿಸಿರುವ ಬ್ಯಾಟರಿಯು 2.3 kWh ಸಾಮರ್ಥ್ಯವನ್ನು ಹೊಂದಿದ್ದು, ಕಂಪನಿಯು ಇದರ ಮೇಲೆ 3 ವರ್ಷಗಳ ಅಥವಾ 30,000 ಕಿ.ಮೀ ವಾರಂಟಿಯನ್ನು ನೀಡುತ್ತಿದೆ. ಇದಲ್ಲದೆ, ಲಿಥಿಯಂ-ಐಯಾನ್ ಬ್ಯಾಟರಿಯನ್ನು ಬಳಸಿರುವುದರಿಂದ ಹೆಚ್ಚಿನ ಸುರಕ್ಷತೆ ಇರುತ್ತದೆ. ಇದರಲ್ಲಿ ನೀಡಿರುವ ಡಿಜಿಟಲ್ ಇನ್‌ಸ್ಟ್ರೂಮೆಂಟ್ ಕಲ್ಸ್ಟರ್ ದೂರ, ಬ್ಯಾಟರಿ ತಾಪಮಾನ ಮತ್ತು ಚಾರ್ಜ್ ಮಾಡುವ ಸಮಯದಂತಹ ಮಾಹಿತಿಯನ್ನು ತೋರಿಸುತ್ತದೆ.

ಈ ಸ್ಕೂಟರ್‌ನಲ್ಲಿನ 60V 40Ah ಬ್ಯಾಟರಿ ಪ್ಯಾಕ್ IP67-ರೇಟೆಡ್ ಆಗಿರುವುದರಿಂದ ಇದು ಧೂಳು ಮತ್ತು ಜಲನಿರೋಧಕವಾಗಿದೆ. BattRE ಸ್ಟೋರಿ ಎಪಿಕ್ ಒಂದೇ ಚಾರ್ಜ್‌ನಲ್ಲಿ 103 ಕಿ.ಮೀ ರೇಂಜ್ ನೀಡುತ್ತದೆ. ಇದು ದೈನಂದಿನ ನಗರ ಪ್ರಯಾಣಕ್ಕೆ ಸಾಕಾಗುತ್ತದೆ. ಎಲೆಕ್ಟ್ರಿಕ್ ಸ್ಕೂಟರ್‌ನ ಗರಿಷ್ಠ ವೇಗ ಗಂಟೆಗೆ 65 ಕಿ.ಮೀ. ಇದೆ.

battre-storie-epic-electric-scooter-launched-in-india

ಬ್ಯಾಟರಿ ಪ್ಯಾಕ್ ಸ್ವತಃ ಡಿಟ್ಯಾಚೇಬಲ್ ಆಗಿದ್ದು, ಪಾರ್ಕಿಂಗ್ ಜಾಗದಲ್ಲಿ ಚಾರ್ಜ್ ಮಾಡಲು ಗ್ರಾಹಕರು ಎಲೆಕ್ಟ್ರಿಕ್ ಸಾಕೆಟ್ ಹೊಂದಿಲ್ಲದಿದ್ದರೂ ಚಾರ್ಜ್ ಮಾಡಲು ಪರದಾಡುವ ಅವಶ್ಯಕತೆ ಇಲ್ಲ. ಬ್ಯಾಟರಿ ಪ್ಯಾಕ್ ಅನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು ಐದು ಗಂಟೆಗಳನ್ನು ತೆಗೆದುಕೊಳ್ಳುತ್ತದೆ ಎಂದು BattRE ಕಂಪನಿ ಹೇಳಿದೆ.

ಮಿಡ್‌ನೈಟ್ ಬ್ಲ್ಯಾಕ್, ಕ್ಯಾಂಡಿ ರೆಡ್, ಐಸ್ ಬ್ಲೂ, ಪರ್ಲ್ ವೈಟ್, ಎಕ್ರು ಯೆಲ್ಲೋ, ಸ್ಟಾರ್ಮಿ ಗ್ರೇ, ಸ್ಟಾರ್‌ಲೈಟ್ ಬ್ಲೂ, ಬ್ಲೇಜಿಂಗ್ ಬ್ರೋಂಜ್, ಹಂಟರ್ ಗ್ರೀನ್, ಕಾಸ್ಮಿಕ್ ಬ್ಲೂ, ಗನ್‌ಮೆಟಲ್ ಬ್ಲಾಕ್ ಮತ್ತು ಗೋಲ್ಡ್ ರಶ್ ಸೇರಿದಂತೆ ಸ್ಕೂಟರ್ 12 ಬಣ್ಣಗಳ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. ಸ್ಕೂಟರ್‌ನ ಬಾಳಿಕೆ ಹೆಚ್ಚಿಸಲು, ಬಾಡಿಯನ್ನು ಲೋಹದಿಂದ ತಯಾರಿಸಲಾಗಿದೆ.

BattRE ಎಲೆಕ್ಟ್ರಿಕ್ ಮೊಬಿಲಿಟಿ ಸಂಸ್ಥಾಪಕ ನಿಶ್ಚಲ್ ಚೌಧರಿ ಮಾತನಾಡಿ, ಸ್ಟೋರಿ EPIC ಅನ್ನು ಮಾರುಕಟ್ಟೆಗೆ ಪರಿಚಯಿಸಲು ನಾವು ರೋಮಾಂಚನಗೊಂಡಿದ್ದೇವೆ. ಈ ಸ್ಕೂಟರ್ ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ಧಿಪಡಿಸುವ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ, ಅದು ಪರಿಸರ ಸ್ನೇಹಿ ಮಾತ್ರವಲ್ಲದೆ ಪ್ರಾಯೋಗಿಕ, ವಿಶ್ವಾಸಾರ್ಹ ಸವಾರಿಯನ್ನು ಒದಗಿಸುತ್ತದೆ ಎಂದರು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, August 14, 2024, 11:57 [IST]
English summary
Battre storie epic electric scooter launched in india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+