ದಿನನಿತ್ಯದ ಬಳಕೆಗೆ ಸಿಗುವ ಅತ್ಯುತ್ತಮ ಎಲೆಕ್ಟ್ರಿಕ್ ಸ್ಕೂಟರ್‌ಗಳಿವು.. ನಿಮ್ಮ ಆಯ್ಕೆ ಯಾವುದು?
ದೇಶದಲ್ಲಿ ಮಧ್ಯಮ ವರ್ಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಅವರ ದಿನನಿತ್ಯದ ಬಳಕೆಗಾಗಿ ದ್ವಿಚಕ್ರ ವಾಹನಗಳು ತೀರಾ ಅನಿವಾರ್ಯವಾಗಿವೆ. ನೀವು ಕೂಡ ಅತ್ಯಾಧುನಿಕ ವಿನ್ಯಾಸ ಹಾಗೂ ವೈಶಿಷ್ಟ್ಯವನ್ನು ಪಡೆದುಕೊಂಡಿರುವ ಹೊಸ ಬೈಕ್ ಅಥವಾ ಸ್ಕೂಟರ್‌ನ್ನು ಖರೀದಿಸಲು ಯೋಚಿಸಿದ್ದೀರಾ... ಹಾಗಾದರೆ, ಎಲೆಕ್ಟ್ರಿಕ್ ಸ್ಕೂಟರ್‌ಗಳು ಉತ್ತಮ ಆಯ್ಕೆಯಾಗಲಿವೆ. ಇಲ್ಲಿ ಬಜೆಟ್ ಬೆಲೆಯಲ್ಲಿ ಸಿಗುವ ಜನಪ್ರಿಯ ಕಂಪನಿಯ ರಿಜ್ಟಾ, ಐಕ್ಯೂಬ್ ಹಾಗೂ ಆರ್‌ಯುವಿ350 ಇ-ಸ್ಕೂಟರ್‌ಗಳ ಕುರಿತಂತೆ ಸಂಪೂರ್ಣವಾಗಿ ವಿವರಿಸಿದ್ದೇವೆ.
ಮೊದಲಿಗೆ ಎಥರ್ ರಿಜ್ಟಾ (Ather Rizta) ಬಗ್ಗೆ ಮಾತನಾಡೋಣ. ಇದೊಂದು ಫ್ಯಾಮಿಲಿ ಎಲೆಕ್ಟ್ರಿಕ್ ಸ್ಕೂಟರ್ ಆಗಿದ್ದು, ರೂ.1.10 ಲಕ್ಷದಿಂದ ರೂ.1.45 ಲಕ್ಷ (ಎಕ್ಸ್ ಶೋರೂಂ) ದರದಲ್ಲಿ ಖರೀದಿಗೆ ಸಿಗುತ್ತದೆ. 2.9 ಕೆಡಬ್ಲ್ಯೂಹೆಚ್ ಮತ್ತು 3.7 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ಹೊಂದಿದ್ದು, ಭರ್ತಿ ಚಾರ್ಜ್‌ನಲ್ಲಿ 123 ರಿಂದ 160 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ. ಜೊತೆಗೆ 80 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಪಡೆದಿದೆ.

ಈ ರಿಜ್ಟಾ ಇ-ಸ್ಕೂಟರ್ ಸ್ಮಾರ್ಟ್, ಇಕೋ ಹಾಗೂ ಜಿಪ್ ಎಂಬ ರೈಡಿಂಗ್ ಮೋಡ್‌ನ್ನುಒಳಗೊಂಡಿದ್ದು, ಸಿಯಾಚಿನ್ ವೈಟ್ ಮೊನೊ, ಡೆಕ್ಕನ್ ಗ್ರೇ ಮೊನೊ, ಪ್ಯಾಂಗೊಂಗ್ ಬ್ಲೂ ಡ್ಯುಯೊ ಸೇರಿದಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿ ಕೂಡ ಸಿಗುತ್ತದೆ. 7-ಇಂಚಿನ ಎಲ್‌ಸಿಡಿ ಸ್ಕ್ರೀನ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಯ ದೃಷ್ಟಿಯಿಂದ ಮುಂಭಾಗ (ಫ್ರಂಟ್) 200 ಎಂಎಂ ಡಿಸ್ಕ್ ಬ್ರೇಕ್ ಹಾಗೂ ಹಿಂಭಾಗ (ರೇರ್) 130 ಎಂಎಂ ಡ್ರಮ್ ಬ್ರೇಕ್‌ನ್ನು ಹೊಂದಿದೆ.
ಟಿವಿಎಸ್ ಐಕ್ಯೂಬ್ (TVS iQube) ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಜನಪ್ರಿಯ ಎಲೆಕ್ಟ್ರಿಕ್ ಸ್ಕೂಟರ್ ಪಟ್ಟಿಯಲ್ಲಿ ಸ್ಥಾನವನ್ನು ಪಡೆದಿದೆ. ಐಕ್ಯೂಬ್, ಐಕ್ಯೂಬ್ ಎಸ್ ಮತ್ತು ಐಕ್ಯೂಬ್ ಎಸ್‌ಟಿ ಎಂಬ ಮೂರು ರೂಪಾಂತರ (ವೇರಿಯೆಂಟ್)ಗಳನ್ನು ಹೊಂದಿದೆ. ರೂ.94,999 ದಿಂದ ರೂ.185,373 ಎಕ್ಸ್ ಶೋರೂಂ ಬೆಲೆಯಲ್ಲಿ ಲಭ್ಯವಿದೆ.

ನೂತನ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ 2.2 ಕೆಡಬ್ಲ್ಯೂಹೆಚ್, 3.4 ಕೆಡಬ್ಲ್ಯೂಹೆಚ್ ಹಾಗೂ 5.1 ಕೆಡಬ್ಲ್ಯೂಹೆಚ್ ಬ್ಯಾಟರಿಯನ್ನು ಹೊಂದಿದ್ದು, ಸಂಪೂರ್ಣ ಚಾರ್ಜ್‌ನಲ್ಲಿ 75 ರಿಂದ 150 ಕಿ.ಮೀ ಓಡುತ್ತದೆ. ರೂಪಾಂತರಗಳಿಗೆ ತಕ್ಕಂತೆ ವಿಭಿನ್ನ ವೈಶಿಷ್ಟ್ಯಗಳನ್ನು ಒಳಗೊಂಡಿದ್ದು, 7-ಇಂಚಿನ ಫುಲ್-ಕಲರ್ ಟಿಎಫ್‌ಟಿ ಸ್ಕ್ರೀನ್, ವಾಯ್ಸ್ ಅಸಿಸ್ಟ್-ಅಲೆಕ್ಸಾ ಸ್ಕಿಲ್‌ಸೆಟ್, ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಹಾಗೂ ಡಿಜಿಟಲ್ ಡಾಕ್ಯುಮೆಂಟ್ ಸ್ಟೋರೇಜ್ ಅನ್ನು ಪಡೆದಿದೆ.
ಇತ್ತೀಚೆಗೆ ಬಿಗಾಸ್ ಆರ್‌ಯುವಿ350 (BGauss RUV350) ಎಲೆಕ್ಟ್ರಿಕ್ ಸ್ಕೂಟರ್ ಕೂಡ ಬಿಡುಗಡೆಯಾಗಿತ್ತು. ಇದು ರೂ.1,09,999 ದಿಂದ ರೂ.1,34,999 ಎಕ್ಸ್ ಶೋರೂಂ ಬೆಲೆಯನ್ನು ಪಡೆದಿದೆ. ಆರ್‌ಯುವಿ350ಐ ಇಎಕ್ಸ್, ಆರ್‌ಯುವಿ350 ಇಎಕ್ಸ್ ಮತ್ತು ಆರ್‌ಯುವಿ350 ಮ್ಯಾಕ್ಸ್ ಎಂಬ ರೂಪಾಂತರ (ವೇರಿಯೆಂಟ್)ಗಳ ಆಯ್ಕೆಯಲ್ಲಿ ಸಹ ಖರೀದಿಗೆ ಲಭ್ಯವಿದೆ.

ಈ ಬಿಗಾಸ್ ಆರ್‌ಯುವಿ350 ಎಲೆಕ್ಟ್ರಿಕ್ ಸ್ಕೂಟರ್ 2.3 ಕೆಡಬ್ಲ್ಯೂಹೆಚ್ ಮತ್ತು 3 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ಹೊಂದಿದ್ದು, ಪೂರ್ತಿ ಚಾರ್ಜ್‌ನಲ್ಲಿ 90 ರಿಂದ 120 ಕಿಲೋಮೀಟರ್ ಕ್ರಮಿಸುತ್ತದೆ. 5-ಇಂಚಿನ ಟಿಎಎಫ್‌ಟಿ ಡಿಸ್ಪ್ಲೇ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಯ ದೃಷ್ಟಿಯಿಂದ ಹ್ಯಾಂಡಲ್‌ನ ಎರಡು ತುದಿಯಲ್ಲಿ 130 ಎಂಎಂ ಡ್ರಮ್ ಬ್ರೇಕ್‌ಗಳನ್ನು ಪಡೆದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications