Mileage bikes: ಫುಲ್‌ಟ್ಯಾಂಕ್ ಮಾಡಿಸಿ ತಿಂಗಳ ಪೂರ್ತಿ ಓಡಿಸಿ: ಅಗ್ಗದ ಬೆಸ್ಟ್ ಮೈಲೇಜ್ ಬೈಕ್‌ಗಳು!
ಭಾರತದಲ್ಲಿ ಕಮ್ಯೂಟರ್ ಸೆಗ್ಮೆಂಟ್ ಮೋಟಾರ್ ಸೈಕಲ್‌ಗಳು ಭಾರತೀಯ ವಾಹನ ತಯಾರಕರಿಗೆ ಪ್ರಮುಖ ಮಾರಾಟವನ್ನು ತಂದುಕೊಡುತ್ತಿವೆ. ಅದರಲ್ಲೂ 100ಸಿಸಿ ಹಾಗೂ 125ಸಿಸಿ ವಿಭಾಗದಲ್ಲಿ ನೀಡಲಾಗುವ ಮೋಟಾರ್ ಸೈಕಲ್‌ಗಳಿಗೆ ಸಖತ್ ಬೇಡಿಕೆ ಇದೆ. ಉತ್ತಮ ಡಿಸೈನ್ ಹಾಗೂ ಅತ್ಯುತ್ತಮ ಮೈಲೇಜ್ (Mileage bikes) ಗೆ ಜನಪ್ರಿಯತೆ ಪಡೆದಿವೆ. ನಿತ್ಯ ಸಾವಿರಾರು ಸಂಖ್ಯಯಲ್ಲಿ ಕಮ್ಯೂಟರ್ ಮೋಟಾರ್‌ಸೈಕಲ್‌ಗಳು ಭಾರತದಲ್ಲಿ ಮಾರಾಟವಾಗುತ್ತಿವೆ. ಹಾಗಾದ್ರೆ ಬನ್ನಿ ಭಾರತದ ಅತ್ಯಂತ ಕೈಗೆಟುಕುವ ಮೋಟಾರ್ ಸೈಕಲ್‌ಗಳ ಬೆಲೆ, ಮೈಲೇಜ್ ಹಾಗೂ ಎಂಜಿನ್ ಸೇರಿದಂತೆ ಅವುಗಳ ವಿಶೇಷತೆಗಳ ಬಗ್ಗೆ ತಿಳಿಯೋಣ.
ಹೀರೋ ಹೆಚ್‌ಎಫ್ ಡೀಲಕ್ಸ್: ಹೀರೋ ಹೆಚ್‌ಎಫ್ ಡೀಲಕ್ಸ್ (Hero HF deluxe) ಭಾರತದ ಅತ್ಯಂತ ಕೈಗೆಟುಕುವ ಮೋಟಾರ್ ಸೈಕಲ್ ಆಗಿದೆ. ಇದರ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.56,674ಗಳಾಗಿದೆ. ಇದು ಐದು ವೇರಿಯೆಂಟ್‌ಗಳು ಮತ್ತು ಏಳು ಬಣ್ಣಗಳ ಆಯ್ಕೆಗಳಲ್ಲಿ ಖರೀದಗೆ ಲಭ್ಯವಿದೆ. ಕಂಪನಿಯ ಪ್ರಕಾರ ಪ್ರತಿ ಲೀಟರ್‌ಗೆ 70 ಕಿ.ಮೀ ಮೈಲೇಜ್ ನೀಡುತ್ತದೆ.

ಹೀರೋ ಹೆಚ್‌ಎಫ್ ಡೀಲಕ್ಸ್ ಎಂಜಿನ್ ಬಗ್ಗೆ ಹೇಳುವುದಾದ್ರೆ, 97 ಸಿಸಿ ಸಿಂಗಲ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 7.91 ಬಿಹೆಚ್ ಪವರ್ ಮತ್ತು 8.05 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ತನ್ನ ಹೈ ಸ್ಪೆಕ್ ವೇರಿಯೆಂಟ್‌ನಲ್ಲಿ ಮಾಡಲ್ ಸ್ಟಾರ್ಟ್ / ಸ್ಟಾಪ್ ವ್ಯವಸ್ಥೆಯನ್ನು ಹೊಂದಿದೆ.
ಹೋಂಡಾ ಶೈನ್: 'ಹೋಂಡಾ ಶೈನ್' (Honda Shine) ಎರಡು ರೂಪಾಂತರಗಳು ಮತ್ತು ಐದು ಬಣ್ಣಗಳ ಆಯ್ಕೆಗಳಲ್ಲಿ ಸಿಗುತ್ತದೆ. ಇದರ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.62,990ಗಳಾಗಿದೆ. ಈ ಬೈಕ್ 124 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 10.59 ಬಿಹೆಚ್ ಪವರ್ ಮತ್ತು 11 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಕಂಪನಿಯ ಪ್ರಕಾರ ಪ್ರತಿ ಲೀಟರ್‌ಗೆ 55 ಕಿ.ಮೀ ಮೈಲೇಜ್ ನೀಡುತ್ತದೆ.

ಟಿವಿಎಸ್ ಸ್ಪೋರ್ಟ್: ಟಿವಿಎಸ್ ಸ್ಪೋರ್ಟ್ (TVS Sport) ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.64,410ಗಳಾಗಿದೆ. ಇದು ಎರಡು ರೂಪಾಂತರಗಳು ಮತ್ತು ಎಂಟು ಬಣ್ಣಗಳಲ್ಲಿ ಲಭ್ಯವಿದೆ. ಈ ಬೈಕ್ 109 ಸಿಸಿ ಸಿಂಗಲ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಸಹಾಯದಿಂದ 8.18 ಬಿಹೆಚ್ ಪಿ ಮತ್ತು 8.7 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಕಂಪನಿಯ ಪ್ರಕಾರ ಪ್ರತಿ ಲೀಟರ್‌ಗೆ 70 ಕಿ.ಮೀ ಮೈಲೇಜ್ ನೀಡುತ್ತದೆ.
ಬಜಾಜ್ ಪ್ಲಾಟಿನಾ: ಬಜಾಜ್ ಪ್ಲಾಟಿನಾ (Bajaj Platina) 100ಸಿಸಿ ಮತ್ತು 110ಸಿಸಿ ಮೋಟಾರ್ ಸೈಕಲ್‌ಗಳಲ್ಲಿ ಲಭ್ಯವಿದೆ. ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.66,840ಗಳಾಗಿದೆ. ಸಿಂಗಲ್ ವೇರಿಯಂಟ್ ಮತ್ತು ನಾಲ್ಕು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ. 102ಸಿಸಿ ಸಿಂಗಲ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 7.79 ಬಿಹೆಚ್ ಪವರ್ ಮತ್ತು 8.34 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಪ್ರತಿ ಲೀಟರ್‌ಗೆ 70 ಕಿ.ಮೀ ಮೈಲೇಜ್ ನೀಡುತ್ತದೆ.

ಯಮಹಾ FZ Fi: ಯಮಹಾ ಎಫ್‌ಝಡ್ ಎಫ್‌ಐ (Yamaha FZ Fi) ನೇಕೆಡ್ ಬೈಕ್ ಆಗಿದ್ದು, ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.1.16 ಲಕ್ಷಗಳಾಗಿದೆ. ಇದು ಎರಡು ರೂಪಾಂತರಗಳು ಮತ್ತು ಎರಡು ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ. ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು ಉತ್ತಮ ಬ್ರೇಕಿಂಗ್ ಗಾಗಿ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ.
ಹೊಸ ಯಮಹಾ ಎಫ್‌ಝಡ್ ಎಫ್‌ಐ ನೇಕೆಡ್ ಬೈಕ್ 149 ಸಿಸಿ ಸಿಂಗಲ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಸಹಾಯದಿಂದ 12.2 ಬಿಹೆಚ್ ಪವರ್ ಮತ್ತು 13.3 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹೊಸ ಯಮಹಾ ಎಫ್‌ಝಡ್ ಎಫ್‌ಐ ಬೈಕಿನ ಮೈಲೇಜ್ ವಿಷಯಕ್ಕೆ ಬಂದರೆ ಕಂಪನಿಯ ಪ್ರಕಾರ ಪ್ರತಿ ಲೀಟರ್‌ಗೆ 49.31 ಕಿ.ಮೀ ಮೈಲೇಜ್ ನೀಡುತ್ತದೆ.


Click it and Unblock the Notifications