ನಿತ್ಯ ಬಳಕೆಗೆ ಬೆಸ್ಟ್ ಮೈಲೇಜ್ ನೀಡುವ ಟಾಪ್-5 ಸ್ಕೂಟರ್‌ಗಳಿವು!
ಭಾರತೀಯ ದ್ವಿಚಕ್ರ ವಾಹನ ವಿಭಾಗದಲ್ಲಿ ಸ್ಕೂಟರ್‌ಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ. ದ್ವಿಚಕ್ರ ವಾಹನ ಮಾರುಕಟ್ಟೆಯ ಬೆಳವಣಿಗೆಗೆ ಸ್ಕೂಟರ್‌ಗಳು ಗಮನಾರ್ಹ ಕೊಡುಗೆ ನೀಡಿವೆ. ಕಾರು, ಬೈಕ್ ಅಥವಾ ಸ್ಕೂಟರ್ ಯಾವುದೇ ವಾಹನವಾಗಿರಲಿ ಮೈಲೇಜ್ ಎಂಬ ಅಂಶ ಭಾರತೀಯ ಖರೀದಿದಾರರಿಗೆ ಪ್ರಮುಖ ಪರಿಗಣನೆಯಾಗಿದೆ. ಇದರ ಜೊತೆಗೆ ಸುಧಾರಿತ ತಂತ್ರಜ್ಞಾನದೊಂದಿಗೆ ಹೊಸ ಮಾದರಿಗಳ ಪರಿಚಯ, ಮಹಿಳಾ ಖರೀದಿದಾರರ ಹೆಚ್ಚಳ, ಗ್ರಾಮೀಣ ಆರ್ಥಿಕ ಬೆಳವಣಿಗೆ ಇವೆಲ್ಲವೂ ಸದ್ಯ ಸ್ಕೂಟರ್ ಮಾರಾಟದಲ್ಲಿನ ಏರಿಕೆಗೆ ಕಾರಣವಾಗಿವೆ ಎಂದು ಹೇಳಬಹುದು. ಹಾಗಾದ್ರೆ ಸ್ಕೂಟರ್ ವಿಭಾಗದಲ್ಲಿ ಅತೀ ಹೆಚ್ಚು ಮೈಲೇಜ್ ನೀಡುವ ಸ್ಕೂಟರ್‌ಗಳನ್ನು ಇಲ್ಲಿ ನೋಡೋಣ.
ಯಮಹಾ ಫ್ಯಾಸಿನೊ 125: ಯಮಹಾ ಫ್ಯಾಸಿನೊ 125 ಸ್ಕೂಟರ್ ಪ್ರತಿ ಲೀಟರ್‌ಗೆ 68 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಮೂಲಕ 125 ಸ್ಕೂಟರ್ ವಿಭಾಗದಲ್ಲಿ ಮೈಲೇಜ್ ವಿಷಯದಲ್ಲಿ ಅಗ್ರಸ್ಥಾನದಲ್ಲಿದೆ. ಬೆಂಗಳೂರಿನಲ್ಲಿ ಇದರ ಆನ್ ರೋಡ್ ಬೆಲೆಯು ರೂ. 1,04,179 ನಿಂದ ಆರಂಭವಾಗುತ್ತದೆ.

ಸುಜುಕಿ ಆಕ್ಸೆಸ್ 125: ಸುಜುಕಿ ಆಕ್ಸಿಸ್ ಸ್ಕೂಟರ್ ತನ್ನ ಸ್ಟೈಲಿಶ್ ವಿನ್ಯಾಸದೊಂದಿಗೆ 125 ಸಿಸಿ ವಿಭಾಗದಲ್ಲಿ ಉತ್ತಮ ಪರ್ಫಾಮೆನ್ಸ್ ಸ್ಕೂಟರ್ ಎಂಬ ಖ್ಯಾತಿ ಪಡೆದಿದೆ. ಈ ಸ್ಕೂಟರ್ ಪ್ರತಿ ಲೀಟರ್‌ಗೆ 64 ಕಿ.ಮೀ ಮೈಲೇಜ್ ನೀಡುವುದಾಗಿ ಕಂಪನಿ ತಿಳಿಸಿದೆ. ಬೆಂಗಳೂರಿನಲ್ಲಿ ಇದರ ಆನ್ ರೋಡ್ ಬೆಲೆಯು ರೂ. 1,03,929 ನಿಂದ ಆರಂಭವಾಗುತ್ತದೆ.
ಹೋಂಡಾ ಆಕ್ಟಿವಾ 6ಜಿ: ಹೋಂಡಾ ಆಕ್ಟಿವಾ 6ಜಿ ಸ್ಕೂಟರ್ ಪ್ರತಿ ಲೀಟರ್‌ಗೆ 60 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಹೋಂಡಾ ಹೇಳಿಕೊಂಡಿದೆ. ಪ್ರಸ್ತುತ ಭಾರತದಲ್ಲಿ ಮಾರಾಟದಲ್ಲಿ ಹೋಂಡಾ ಆಕ್ಟೀವಾ ಅಗ್ರಸ್ಥಾನದಲ್ಲಿದೆ. ಬೆಂಗಳೂರಿನಲ್ಲಿ ಇದರ ಆನ್ ರೋಡ್ ಬೆಲೆಯು ರೂ. 97,558 ದಿಂದ ಆರಂಭವಾಗುತ್ತದೆ.

ಟಿವಿಎಸ್ ಜುಪಿಟರ್: ಟಿವಿಎಸ್ ಜೂಪಿಟರ್ ಪ್ರತಿ ಲೀಟರ್‌ಗೆ 62 ಕಿ.ಮೀ ಮೈಲೇಜ್ ನೀಡುವುದಾಗಿ ಟಿವಿಎಸ್ ಮೋಟಾರ್ಸ್ ಕ್ಲೈಮ್ ಮಾಡಿದೆ. ಸ್ಕೂಟರ್ ವಿಭಾಗದಲ್ಲಿ ಇತರ ಬ್ರಾಂಡ್‌ಗಳಂತೆಯೇ ಟಿವಿಎಸ್ ಕೂಡ ಜುಪಿಟರ್‌ನೊಂದಿಗೆ ಉತ್ತಮ ಮಾರಾಟವನ್ನು ಕಾಣುತ್ತಿದೆ. ಬೆಂಗಳೂರಿನಲ್ಲಿ ಇದರ ಆನ್ ರೋಡ್ ಬೆಲೆಯು ರೂ. 96,757 ನಿಂದ ಆರಂಭವಾಗುತ್ತದೆ.
ಹೀರೋ ಪ್ಲೆಷರ್ ಪ್ಲಸ್: ಈ ಸ್ಕೂಟರ್ ಹೀರೋನ ಪ್ರಮುಖ ಸ್ಕೂಟರ್ ಆಗಿದ್ದು, ಗ್ರಾಹಕರಿಗೆ ಮತ್ತೊಂದು ಜನಪ್ರಿಯ ಆಯ್ಕೆಯಾಗಿದೆ. ಇದು ಪ್ರತಿ ಲೀಟರ್‌ಗೆ ಸರಿಸುಮಾರು 63 ಕಿ.ಮೀ ಮೈಲೇಜ್ ಒದಗಿಸುತ್ತದೆ ಎಂದು ಕಂಪನಿ ಹೇಳಿದೆ. ಬೆಂಗಳೂರಿನಲ್ಲಿ ಇದರ ಆನ್‌ರೋಡ್ ಬೆಲೆಯು ರೂ. 1,00,082 ನಿಂದ ಆರಂಬವಾಗುತ್ತದೆ.

ಸ್ಕೂಟರ್‌ಗಳು ತಮ್ಮ ಅನುಕೂಲತೆ ಮತ್ತು ಮೈಲೇಜ್‌ನಿಂದಾಗಿ ಅನೇಕರಿಗೆ ಆದ್ಯತೆಯ ಆಯ್ಕೆಯಾಗಿ ಮುಂದುವರೆದಿವೆ. ತಂತ್ರಜ್ಞಾನದ ಪ್ರಗತಿ ಮತ್ತು ಕಠಿಣ ಹೊರಸೂಸುವಿಕೆಯ ಮಾನದಂಡಗಳೊಂದಿಗೆ, ಗ್ರಾಹಕರು ಭವಿಷ್ಯದ ಮಾದರಿಗಳಿಂದ ಇನ್ನೂ ಉತ್ತಮ ಕಾರ್ಯಕ್ಷಮತೆಯನ್ನು ನಿರೀಕ್ಷಿಸಬಹುದು. ಈ ಸ್ಕೂಟರ್‌ಗಳನ್ನು ನೀವು ಬಳಸಿದ್ದರೆ ಅವುಗಳ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಮೆಂಟ್‌ನಲ್ಲಿ ತಿಳಿಸಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications