Royal Enfield: ಅತ್ಯುತ್ತಮ ರಾಯಲ್ ಎನ್‌ಫೀಲ್ಡ್ ಮೋಟಾರ್‌ಸೈಕಲ್‌ಗಳಿವು.. ನಿಮಗೆ ಯಾವುದು ಇಷ್ಟ?

ಯುವಕರಿಗೆ ನಿಮ್ಮ ನೆಚ್ಚಿನ ಬೈಕ್ ಯಾವುದೆಂದು ಕೇಳಿದರೆ ತಕ್ಷಣ ಬರುವ ಒಂದೇ ಒಂದು ಉತ್ತರ 'ರಾಯಲ್ ಎನ್‌ಫೀಲ್ಡ್' ಮೋಟಾರ್‌ಸೈಕಲ್‌ಗಳು ಎಂದು.. ಅಷ್ಟರಮಟ್ಟಿಗೆ ಈ ಬೈಕ್‌ಗಳು ಯುವ ಜನರ ಮನಸ್ಸನ್ನು ಗೆದ್ದಿವೆ. ನೀವು ಹೊಚ್ಚ ಹೊಸ ರಾಯಲ್ ಎನ್‌ಫೀಲ್ಡ್ ಮೋಟಾರ್‌ಸೈಕಲ್‌ ಖರೀದಿಸಲು ಆಲೋಚಿಸಿದ್ದೀರಾ.. ಹಾಗಾದರೆ ಬುಲೆಟ್ 350, ಹಂಟರ್ 350 ಮತ್ತು ಗೆರಿಲ್ಲಾ 450ಗಳು ಉತ್ತಮ ಆಯ್ಕೆಯಾಗಬಲ್ಲವು. ಇಲ್ಲಿ ನೂತನ ಬೈಕ್‌ಗಳ ಬೆಲೆ (Price), ಕಾರ್ಯಕ್ಷಮತೆ (Performance) ಹಾಗೂ ವೈಶಿಷ್ಟ್ಯಗಳ (Features) ಬಗ್ಗೆ ಸಂಪೂರ್ಣವಾಗಿ ತಿಳಿಸಿಕೊಟ್ಟಿದ್ದೇವೆ.

ಮೊದಲಿಗೆ ರಾಯಲ್ ಎನ್‌ಫೀಲ್ಡ್ ಬುಲೆಟ್ 350 (Royal Enfield Bullet 350) ಮೋಟಾರ್‌ಸೈಕಲ್‌ ಕುರಿತಂತೆ ಮಾತನಾಡುವುದಾದರೆ, ಇದು ರೂ.1.74 ಲಕ್ಷದಿಂದ ರೂ.2.16 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 349 ಸಿಸಿ ಏರ್-ಕೋಲ್ಡ್ ಸಿಂಗಲ್-ಸಿಲಿಂಡರ್ ಜೆ-ಸೀರಿಯಸ್ ಪೆಟ್ರೋಲ್ ಎಂಜಿನ್ ಪಡೆದಿದ್ದು, 20.4 ಪಿಎಸ್ ಗರಿಷ್ಠ ಶಕ್ತಿ (ಪವರ್) ಮತ್ತು 27 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

Best Royal Enfield Bikes Bullet 350 Hunter 350 and Guerrilla 450

ಈ ಬುಲೆಟ್ 350 ಬೈಕ್ 5-ಸ್ಪೀಡ್ ಗೇರ್‌ಬಾಕ್ಸ್ ಆಯ್ಕೆಯನ್ನು ಹೊಂದಿದ್ದು, 37 ಕೆಎಂಪಿಎಲ್ ಮೈಲೇಜ್ ನೀಡುತ್ತದೆ. ಹ್ಯಾಲೊಜೆನ್ ಹೆಡ್‌ಲೈಟ್, ಟೈಲ್ ಲೈಟ್, ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಒಳಗೊಂಡಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. 195 ಕೆಜಿ ತೂಕವಿದ್ದು, 13 ಲೀಟರ್ ಸಾಮರ್ಥ್ಯದ ಫ್ಯುಯೆಲ್ (ಇಂಧನ) ಟ್ಯಾಂಕ್‌ನ್ನು ಹೊಂದಿದೆ.

ರಾಯಲ್ ಎನ್‌ಫೀಲ್ಡ್ ಹಂಟರ್ 350 (Royal Enfield Hunter 350) ಬಗ್ಗೆ ಹೇಳುವುದಾದರೆ, ಈ ಬೈಕ್ ರೂ.1.50 ಲಕ್ಷದಿಂದ ರೂ.1.75 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ಲಭ್ಯವಿದೆ. 349 ಸಿಸಿ ಏರ್ ಕೋಲ್ಡ್ ಪೆಟ್ರೋಲ್ ಎಂಜಿನ್ ಒಳಗೊಂಡಿದ್ದು, 20.4 ಪಿಎಸ್ ಗರಿಷ್ಠ ಶಕ್ತಿ ಮತ್ತು 27 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ.

Best Royal Enfield Bikes Bullet 350 Hunter 350 and Guerrilla 450

ನೂತನ ಹಂಟರ್ 350, 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಪಡೆದಿದ್ದು, 36.2 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. 17-ಇಂಚಿನ ವೀಲ್‌ಗಳನ್ನು ಹೊಂದಿದೆ. ಸುರಕ್ಷತೆಯ ಸಲುವಾಗಿ ಡಬಲ್ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಹೊಂದಿದೆ. 181 ಕೆಜಿ ತೂಕವಿರುವ ಈ ಬೈಕ್, 13 ಲೀಟರ್ ಸಾಮರ್ಥ್ಯದ ಫ್ಯುಯೆಲ್ (ಇಂಧನ) ಟ್ಯಾಂಕ್‌ನ್ನು ಪಡೆದಿದೆ.

ರಾಯಲ್ ಎನ್‌ಫೀಲ್ಡ್ ಗೆರಿಲ್ಲಾ 450 (Royal Enfield Guerrilla 450) ಮೋಟಾರ್‌ಸೈಕಲ್‌ ಕುರಿತಂತೆ ಮಾತನಾಡುವುದಾದರೆ, ಇದು ರೂ.2.39 ಲಕ್ಷದಿಂದ ರೂ.2.54 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 452 ಸಿಂಗಲ್-ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಪೆಟ್ರೋಲ್ ಎಂಜಿನ್ ಪಡೆದಿದ್ದು, 39.50 ಪಿಎಸ್ ಗರಿಷ್ಠ ಶಕ್ತಿ (ಪವರ್) ಹಾಗೂ 40 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

Best Royal Enfield Bikes Bullet 350 Hunter 350 and Guerrilla 450

ಈ ಗೆರಿಲ್ಲಾ 450 ಬೈಕ್ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. ಜೊತೆಗೆ 29.5 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಎಲ್‌ಇಡಿ ಹೆಡ್‌ಲೈಟ್, ಟೈಲ್ ಲೈಟ್, ಟರ್ನ್ ಇಂಡಿಕೇಟರ್‌ಗಳು, ಡುಯಲ್-ಚಾನೆಲ್ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಹ್ಯಾಂಡಲ್‌ಬಾರ್‌ನಲ್ಲಿ ಯುಎಸ್‌ಬಿ-ಸಿ ಚಾರ್ಜಿಂಗ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, September 7, 2024, 11:00 [IST]
English summary
Best royal enfield bikes bullet 350 hunter 350 and guerrilla 450
Read more on royal enfield india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+