ನಿಮ್ಮ ಮಡದಿಗೆ ಹೊಸ ಸ್ಕೂಟರ್ ಕೊಡಿಸಬೇಕೇ.. ಇವು ಬೆಸ್ಟ್, ಕಡಿಮೆ ಬೆಲೆ.. ಉತ್ತಮ ಮೈಲೇಜ್!

ದಿನನಿತ್ಯದ ಬಳಕೆಗೆ ಸ್ಕೂಟರ್‌ಗಳು ತೀರಾ ಅಗತ್ಯವಾಗಿವೆ. ಮೋಟಾರ್‌ಸೈಕಲ್‌ಗಳಿಗೆ ಹೋಲಿಕೆ ಮಾಡಿದರೆ ಸ್ಕೂಟರ್‌ಗಳು 'ಗೇರ್‌ಲೆಸ್' ಆಗಿರುವುದರಿಂದ ಮಹಿಳೆಯರಿಗೆ ಹೆಚ್ಚು ಇಷ್ಟವಾಗುತ್ತವೆ. ಮಕ್ಕಳನ್ನು ಶಾಲೆಗೆ ಬಿಡುವುದು.. ಶಾಪಿಂಗ್ ತೆರಳುವುದು.. ಕೆಲಸಕ್ಕೆ ಹೋಗುವುದು ಸೇರಿದಂತೆ ಸ್ಕೂಟರ್‌ಗಳ ನೆರವಿನಿಂದ ಎಲ್ಲ ಕೆಲಸವನ್ನು ಮಹಿಳೆಯರು ಆದಷ್ಟು ಬೇಗನೆ ಮಾಡಿ ಮುಗಿಸುತ್ತಾರೆ. ಇಲ್ಲಿ ಮಹಿಳೆಯರು ಆರಾಮದಾಯಕವಾಗಿ ಓಡಿಸಬಲ್ಲ.. ಜನಪ್ರಿಯ ಕಂಪನಿಗಳು ಮಾರಾಟಗೊಳಿಸುವ 5 ಪ್ರಮುಖ ಸ್ಕೂಟರ್‌ಗಳ ಬೆಲೆ, ಮೈಲೇಜ್ ಹಾಗೂ ವೈಶಿಷ್ಟ್ಯಗಳ ಬಗ್ಗೆ ಸಂಪೂರ್ಣವಾಗಿ ತಿಳಿಸಿಕೊಟ್ಟಿದ್ದೇವೆ.

ಮೊದಲಿಗೆ ಹೋಂಡಾ ಆಕ್ಟಿವಾ 6ಜಿ (Honda Activa 6G) ಸ್ಕೂಟರ್ ಬಗ್ಗೆ ಮಾತನಾಡೋಣ. ಇದು ರೂ.78,174 ದಿಂದ ರೂ.84,674 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 109.51 ಸಿಸಿ ಸಿಂಗಲ್ ಸಿಲಿಂಡರ್ ಏರ್-ಕೋಲ್ಡ್ ಪೆಟ್ರೋಲ್ ಎಂಜಿನ್ ಪಡೆದಿದ್ದು, 7.8 ಪಿಎಸ್ ಗರಿಷ್ಠ ಶಕ್ತಿ (ಪವರ್) ಹಾಗೂ 8.9 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 55.9 ರಿಂದ 59.5 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ.

Best Scooters 110 CC Segment Honda Activa Hero Pleasure Plus TVS Jupiter Hero Xoom Honda Dio

ಈ ಹೋಂಡಾ ಆಕ್ಟಿವಾ ಎಲ್ಇಡಿ ಹೆಡ್‌ಲ್ಯಾಂಪ್‌, ಅನಲಾಗ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಒಳಗೊಂಡಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಗಾಗಿ ಡ್ರಮ್ ಬ್ರೇಕ್ ಆಯ್ಕೆಯನ್ನು ಹೊಂದಿದೆ. 105 ಕೆಜಿ ತೂಕವಿರುವ ಈ ಸ್ಕೂಟರ್, 5.3 ಲೀಟರ್ ಸಾಮರ್ಥ್ಯದ ಫ್ಯುಯೆಲ್ (ಇಂಧನ) ಟ್ಯಾಂಕ್‌ನ್ನು ಪಡೆದಿದೆ. ಗ್ರೌಂಡ್ ಕ್ಲಿಯರೆನ್ಸ್ 162 ಎಂಎಂ ಇದೆ.

ಹೀರೋ ಪ್ಲೆಷರ್ ಪ್ಲಸ್ (Hero Pleasure Plus) ಸ್ಕೂಟರ್ ಕೂಡ ಅಗ್ಗದ ದರದಲ್ಲಿ ಖರೀದಿಗೆ ಲಭ್ಯವಿದೆ. ರೂ.72,163 ದಿಂದ 83,918 (ಎಕ್ಸ್ ಶೋರೂಂ) ಬೆಲೆಯನ್ನು ಹೊಂದಿದೆ. 110.9 ಸಿಸಿ ಪೆಟ್ರೋಲ್ ಎಂಜಿನ್ ಪಡೆದಿದ್ದು, 8.1 ಪಿಎಸ್ ಪವರ್ ಮತ್ತು 8.7 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. 50 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.

Best Scooters 110 CC Segment Honda Activa Hero Pleasure Plus TVS Jupiter Hero Xoom Honda Dio

ನೂತನ ಹೀರೋ ಪ್ಲೆಷರ್ ಪ್ಲಸ್ ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಕ್ರೋಮ್ ರೇರ್‌ವ್ಯೂ ವ್ಯೂ ಮಿರರ್‌ಗಳು, ಎಲ್‌ಸಿಡಿ ಸ್ಕ್ರೀನ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಯ ದೃಷ್ಟಿಯಿಂದ ಡ್ರಮ್ ಬ್ರೇಕ್ ಪಡೆದಿದೆ. 106 ಕೆಜಿ ತೂಕವಿರುವ ಈ ಸ್ಕೂಟರ್, 4.8 ಲೀಟರ್ ಸಾಮರ್ಥ್ಯದ ಫ್ಯುಯೆಲ್ (ಇಂಧನ) ಟ್ಯಾಂಕ್‌ನ್ನು ಹೊಂದಿದೆ.

ಟಿವಿಎಸ್ ಜುಪಿಟರ್ (TVS Jupiter) ಕುರಿತಂತೆ ಹೇಳುವುದಾದರೆ, ಇದು ರೂ.77,121 ದಿಂದ ರೂ.92,201 ಎಕ್ಸ್ ಶೋರೂಂ ದರವನ್ನು ಪಡೆದಿದೆ. 109.7 ಸಿಂಗಲ್ ಸಿಲಿಂಡರ್ ಏರ್ ಕೋಲ್ಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 7.9 ಪಿಎಸ್ ಗರಿಷ್ಠ ಶಕ್ತಿ (ಪವರ್) ಹಾಗೂ 8.8 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಒಳಗೊಂಡಿದೆ. 52 ರಿಂದ 64 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ.

Best Scooters 110 CC Segment Honda Activa Hero Pleasure Plus TVS Jupiter Hero Xoom Honda Dio

ಹೀರೋ ಜೂಮ್ (Hero Xoom) ರೂ.75,761 ದಿಂದ ರೂ.84,400 (ಎಕ್ಸ್ ಶೋರೂಂ) ಬೆಲೆಯನ್ನು ಹೊಂದಿದೆ. 110.9 ಸಿಸಿ ಪೆಟ್ರೋಲ್ ಎಂಜಿನ್ ಪಡೆದಿದ್ದು, 8.15 ಪಿಎಸ್ ಪವರ್ ಮತ್ತು 8.70 ಪೀಕ್ ಟಾರ್ಕ್ ಹೊರಹಾಕುತ್ತದೆ. 45 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಪ್ರೊಜೆಕ್ಟರ್ ಎಲ್ಇಡಿ ಹೆಡ್‌ಲ್ಯಾಂಪ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಹೋಂಡಾ ಡಿಯೋ (Honda Dio) ರೂ.74,629 ದಿಂದ ರೂ.82,130 ಎಕ್ಸ್ ಶೋರೂಂ ದರವನ್ನು ಪಡೆದಿದೆ. 109.51 ಸಿಸಿ ಏರ್ ಕೋಲ್ಡ್ ಸಿಂಗಲ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 7.85 ಪಿಎಸ್ ಗರಿಷ್ಠ ಶಕ್ತಿ (ಪವರ್) ಹಾಗೂ 9.03 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. 50 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, June 28, 2024, 10:48 [IST]
English summary
Best scooters 110 cc segment honda activa hero pleasure plus tvs jupiter hero xoom honda dio
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+