2 ಲಕ್ಷಕ್ಕಿಂತ ಕಡಿಮೆ ಬೆಲೆಯ ಬೆಸ್ಟ್ ಸ್ಪೋರ್ಟಿ ಬೈಕ್‌ಗಳು: 40 ಕಿ.ಮೀ ಮೈಲೇಜ್
ಭಾರತದಲ್ಲಿ 2 ಲಕ್ಷ ರೂ.ಗಿಂತ ಕಡಿಮೆ ಬೆಲೆಯಲ್ಲಿ ಮಾರಾಟವಾಗುತ್ತಿರುವ ಟಾಪ್ - 5 ಕಮ್ಯೂಟರ್ ಬೈಕ್‌ಗಳು ಇಲ್ಲಿವೆ, ಇವು ಉತ್ತಮ ಮೈಲೇಜ್, ಸ್ಪೋರ್ಟಿ ರೈಡ್ ಮತ್ತು ಹ್ಯಾಂಡ್ಲಿಂಗ್ ಅನ್ನು ಹೊಂದಿವೆ. ಹೋಂಡಾ, ಯಮಹಾ, ಟಿವಿಎಸ್ ಮತ್ತು ಬಜಾಜ್‌ನಂತಹ ಜನಪ್ರಿಯ ಬ್ರಾಂಡ್‌ಗಳು ಭಾರತದಲ್ಲಿ ಟಾಪ್ - 5 ಸ್ಪೋರ್ಟಿ ಮತ್ತು ಮಿತವ್ಯಯಕಾರಿ ಕಮ್ಯೂಟರ್ ಮೋಟಾರ್ ಸೈಕಲ್‌ಗಳನ್ನು ನೀಡುತ್ತಿವೆ. ಈ ಮೋಟಾರ್‌ಸೈಕಲ್‌ಗಳ ಬೆಲೆ, ಮೈಲೇಜ್ ಸೇರಿದಂತೆ ವೈಶಿಷ್ಟ್ಯಗಳ ಕುರಿತ ಮಾಹಿತಿಯನ್ನು ಇಲ್ಲಿ ನೋಡೋಣ.
ಹೋಂಡಾ ಹಾರ್ನೆಟ್ 2.0: ಹೊಸ ಹೋಂಡಾ ಹಾರ್ನೆಟ್ 2.0 ಬೈಕ್ ಒಂದು ಲೀಟರ್‌ಗೆ ಬರೋಬ್ಬರಿ 42.3 ಕಿ.ಮೀ ಮೈಲೇಜ್ ನೀಡುವುದಾಗಿ ಕಂಪನಿ ಹೇಳಿದೆ. ಈ ಬೈಕ್ 184 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 17 ಬಿಹೆಚ್ ಪವರ್ ಮತ್ತು 15.9 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಸ್ಲಿಪ್-ಅಂಡ್-ಅಸಿಸ್ಟ್ ಕ್ಲಚ್‌ನೊಂದಿಗೆ ಐದು-ಸ್ಪೀಡ್ ಗೇರ್‌ಬಾಕ್ಸ್ ಹೊಂದಿದೆ.

ಹೋಂಡಾ ಹಾರ್ನೆಟ್ 2.0 ಮುಂಭಾಗದಲ್ಲಿ ಯುಎಸ್‌ಡಿ ಫೋರ್ಕ್, 276 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್, 220 ಎಂಎಂ ಡಿಸ್ಕ್ ಬ್ರೇಕ್ ಹೊಂದಿದೆ. ಹೋಂಡಾ ಈ ಬೈಕಿನಲ್ಲಿ ಸಿಂಗಲ್ - ಚಾನೆಲ್ ಎಬಿಎಸ್ ಅನ್ನು ಮಾತ್ರ ನೀಡುತ್ತದೆ. ಈ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.1.40 ಲಕ್ಷಗಳಾಗಿದೆ.
ಪಲ್ಸರ್ ಎನ್ಎಸ್200: ಹೊಸ ಪಲ್ಸರ್ ಎನ್‌ಎಸ್ 200 ಬೈಕ್ ಪ್ರತಿ ಲೀಟರ್‌ಗೆ 40.36 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿದೆ. ಇದರ 199.5 ಸಿಸಿ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್, 24 ಬಿಹೆಚ್ ಪವರ್ ಮತ್ತು 18.74 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಈ ಸ್ಪೋರ್ಟಿ ಕಮ್ಯೂಟರ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.1.54 ಲಕ್ಷಗಳಾಗಿದೆ. ಬೈಕ್ ಮುಂಭಾಗದಲ್ಲಿ ಯುಎಸ್‌ಡಿ ಫೋರ್ಕ್, 300 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ನೈಟ್ರಾಕ್ಸ್ ಮೊನೊಶಾಕ್, 230 ಎಂಎಂ ಡಿಸ್ಕ್ ಬ್ರೇಕ್ ಹೊಂದಿದೆ. ಹಾಗೆಯೇ ಡ್ಯುಯಲ್ ಚಾನೆಲ್ ಎಬಿಎಸ್ ಒದಗಿಸಲಾಗಿದೆ.
ಟಿವಿಎಸ್ ಅಪಾಚೆ ಆರ್ಟಿಆರ್ 200 4ವಿ: ಈ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.1.48 ಲಕ್ಷಗಳಾಗಿದೆ. ಪ್ರತಿ ಲೀಟರ್‌ಗೆ 41.9 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಟಿವಿಎಸ್ ಪ್ರಮಾಣೀಕರಿಸಿದೆ. ಆರ್ ಟಿಆರ್ 200 4ವಿ ಬೈಕಿನಲ್ಲಿ 5 ಸ್ಪೀಡ್ ಗೇರ್ ಬಾಕ್ಸ್ ಅಳವಡಿಸಲಾಗಿದೆ. ಈ ಬೈಕ್ 197.8 ಸಿಸಿ ಆಯಿಲ್ ಕೂಲ್ಡ್ ಎಂಜಿನ್ ಹೊಂದಿದ್ದು, 20 ಬಿಹೆಚ್ ಪವರ್ ಮತ್ತು 17.25 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಯಮಹಾ ಎಂಟಿ-15 2.0: ಇದರ ಆರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.1.68 ಲಕ್ಷಗಳಾಗಿದೆ. ಪ್ರತಿ ಲೀಟರ್‌ಗೆ 47.94 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ARAI ಪ್ರಮಾಣೀಕರಿಸಿದೆ. 155 ಸಿಸಿ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಸಹಾಯದಿಂದ 18 ಬಿಹೆಚ್ ಪಿ ಮತ್ತು 14.1 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6 ಸ್ಪೀಡಿನ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ.
ಕೆಟಿಎಂ 200 ಡ್ಯೂಕ್: ಇದು ARAI ಪ್ರಮಾಣೀಕೃತ ಇಂಧನ ಮಿತವ್ಯಯವನ್ನು ಹೊಂದಿದ್ದು, ಪ್ರತಿ ಲೀಟರ್‌ಗೆ 35 ಕಿ.ಮೀ. ಮೈಲೇಜ್ ನೀಡುತ್ತದೆ. 199.5 ಸಿಸಿ ಲಿಕ್ವಿಡ್ ಕೂಲ್ಡ್ ಎಂಜಿನ್ ಸಹಾಯದಿಂದ 24 ಬಿಹೆಚ್ ಪಿ ಮತ್ತು 19.3 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.1.98 ಲಕ್ಷಗಳಾಗಿದೆ. 6 ಸ್ಪೀಡಿನ ಗೇರ್ ಬಾಕ್ಸ್ ಅಳವಡಿಸಲಾಗಿದೆ.


Click it and Unblock the Notifications