BGauss RUV350: ಬಿಗಾಸ್ ಆರ್‌ಯುವಿ350 ಇ-ಸ್ಕೂಟರ್ ಬಿಡುಗಡೆ.. ರೂ.1,09,999 ಬೆಲೆ, 120 ಕಿ.ಮೀ ಓಡುತ್ತೆ!

ಭಾರತದ ಪ್ರಮುಖ ಇವಿ ಸ್ಟಾರ್ಟ್‌ಅಪ್‌ಗಳಲ್ಲಿ ಬಿಗಾಸ್ (BGauss) ಕೂಡ ಒಂದಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಡಿ15 (D15) ಹಾಗೂ ಸಿ12ಐ (C12i) ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟಗೊಳಿಸುತ್ತಿದೆ. ಮಂಗಳವಾರ ಹೊಚ್ಚ ಹೊಸ ಆರ್‌ಯುವಿ350 (RUV350) ಇ-ಸ್ಕೂಟರ್‌ನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಿದೆ. ಈ ಸ್ಕೂಟರ್‌ ಆಕರ್ಷಕ ವಿನ್ಯಾಸ (Design) ಹಾಗೂ ವೈಶಿಷ್ಟ್ಯ (Feature)ವನ್ನು ಪಡೆದಿದೆ. ಇಲ್ಲಿ ನೂತನ ಸ್ಕೂಟರ್ ಎಕ್ಸ್ ಶೋರೂಂ ಬೆಲೆ (Price) ಹಾಗೂ ವಿಶೇಷತೆ (Specialty)ಗಳ ಬಗ್ಗೆ ಸಂಪೂರ್ಣವಾಗಿ ವಿವರಿಸಿದ್ದೇವೆ.

ನೂತನ ಬಿಗಾಸ್ ಆರ್‌ಯುವಿ350 ಎಲೆಕ್ಟ್ರಿಕ್ ಸ್ಕೂಟರ್ ಮೂರು ರೂಪಾಂತರ (Variants)ಗಳ ಆಯ್ಕೆಯಲ್ಲಿ ಲಭ್ಯವಿದೆ. ಅವುಗಳೆಂದರೆ ಆರ್‌ಯುವಿ350ಐ ಇಎಕ್ಸ್ (RUV 350i EX), ಆರ್‌ಯುವಿ350 ಇಎಕ್ಸ್ (RUV 350 EX) ಮತ್ತು ಆರ್‌ಯುವಿ350 ಮ್ಯಾಕ್ಸ್ (RUV 350 Max). ಕ್ರಮವಾಗಿ ರೂ.1,09,999, ರೂ.1,24,999 ಹಾಗೂ ರೂ.1,34,999 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿವೆ.

BGauss RUV350 Electric Scooter Launch In india RS 1 09 999 Price 120 Km Range

ಈ ಹೊಸ ಸ್ಕೂಟರ್‌ ಮಾದರಿ (Model)ಗಳಿಗೆ ರೂ.10,000 ದಿಂದ ರೂ.20,000 ಪರಿಚಯಾತ್ಮಕ ಪ್ರಯೋಜನಗಳನ್ನು ನೀಡಲಾಗುತ್ತಿದೆ. ಇದರಲ್ಲಿ ಉಚಿತ ವಿಮೆ ಮತ್ತು ಬ್ಯಾಟರಿ ವಾರಂಟಿ ಸೇರಿದಂತೆ ಹಲವು ಸೌಲಭ್ಯಗಳು ಸೇರಿವೆ. ಎಲ್ಲ ರೂಪಾಂತರಗಳು 5 ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿಯೂ ಖರೀದಿಗೆ ಲಭ್ಯವಿದ್ದು, 75 ಕೆಎಂ/ಹೆಚ್ ಟಾಪ್ ಸ್ಪೀಡ್ (ಗರಿಷ್ಠ ವೇಗ) ಹೊಂದಿವೆ. ಜೊತೆಗೆ ಸಂಪೂರ್ಣ ಚಾರ್ಜ್‌ನಲ್ಲಿ 90 ರಿಂದ 120 ಕಿ.ಮೀ ರೇಂಜ್ (ಮೈಲೇಜ್) ನೀಡಬಲ್ಲವು.

ಹೊಸ ಬಿಗಾಸ್ ಆರ್‌ಯುವಿ350 ಎಲೆಕ್ಟ್ರಿಕ್ ಸ್ಕೂಟರ್ ಅತ್ಯಾಧುನಿಕ ವಿನ್ಯಾಸವನ್ನು ಹೊಂದಿದ್ದು, ಮುಂಭಾಗದ (ಫ್ರಂಟ್) ಹ್ಯಾಂಡಲ್‌ಬಾರ್‌ನಲ್ಲಿ ಸ್ಕ್ವೇರ್ ಹೆಡ್‌ಲೈಟ್‌ನ್ನು ಹೊಂದಿದೆ. ಇದು ಟರ್ನ್ ಸಿಗ್ನಲ್‌ಗಳಿಂದ ಎರಡು ಬದಿಯಲ್ಲಿ ಸುತ್ತುವರಿಯಲ್ಪಟ್ಟಿದೆ. 16-ಇಂಚಿನ ಅಲಾಯ್ ವೀಲ್‌ಗಳನ್ನು ಒಳಗೊಂಡಿದ್ದು, ಗ್ರೇ, ಆರೆಂಜ್ ಹಾಗೂ ಯೆಲ್ಲೋ ಎಂಬ ಮೂರು ಬಣ್ಣ (ಕಲರ್)ಗಳೊಂದಿಗೂ ಸಿಗುತ್ತದೆ.

BGauss RUV350 Electric Scooter Launch In india RS 1 09 999 Price 120 Km Range

ಬಿಗಾಸ್ ಆರ್‌ಯುವಿ350ಐ ಇಎಕ್ಸ್ ಮಾದರಿಯು ಸೆಗ್ಮೆಂಟ್ ಡಿಸ್ಪ್ಲೇಯನ್ನು ಹೊಂದಿದ್ದು, ಉಳಿದ ಆರ್‌ಯುವಿ350 ಇಎಕ್ಸ್ ಹಾಗೂ ಆರ್‌ಯುವಿ350 ಮ್ಯಾಕ್ಸ್ ರೂಪಾಂತರಗಳು 5-ಇಂಚಿನ ಟಿಎಎಫ್‌ಟಿ ಡಿಸ್ಪ್ಲೇಯನ್ನು ಪಡೆದಿವೆ. ಇದರಲ್ಲಿ ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಕಾಲ್ ನೋಟಿಫಿಕೇಶನ್, ರೈಡಿಂಗ್ ಹಾಗೂ ಚಾರ್ಜಿಂಗ್ ಅಂಕಿಅಂಶಗಳನ್ನು ವೀಕ್ಷಿಸಬಹುದು.

ಈ ಬಿಗಾಸ್ ಆರ್‌ಯುವಿ350 ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿ ಪ್ಯಾಕ್ 35ಕೆಡಬ್ಲ್ಯೂ ಆಫ್-ಬೋರ್ಡ್ ಚಾರ್ಜರ್‌ ಬಳಕೆಯಲ್ಲಿ 0 - 80% ಚಾರ್ಜ್ ಆಗಲು 1 ಗಂಟೆ 55 ನಿಮಿಷ ತೆಗೆದುಕೊಳ್ಳುತ್ತದೆ. ಅದು ಭರ್ತಿ ಚಾರ್ಜ್ ಆಗುವುದಕ್ಕೆ 55 ನಿಮಿಷ ಹೆಚ್ಚುವರಿಯಾಗಿ ಸಮಯಾವಕಾಶ ಬೇಕಾಗುತ್ತದೆ. ಹೊಸ ಇ-ಸ್ಕೂಟರ್ ವೀಲ್‌ಬೇಸ್ 1,335 ಎಂಎಂ ಅಳತೆಯಲಿದ್ದು, ಗ್ರೌಂಡ್ ಕ್ಲಿಯರೆನ್ಸ್ 160 ಎಂಎಂ ಹಾಗೂ ಸೀಟ್ ಹೈಟ್ 785 ಎಂಎಂ ಇದೆ.

BGauss RUV350 Electric Scooter Launch In india RS 1 09 999 Price 120 Km Range

ನೂತನ ಎಲೆಕ್ಟ್ರಿಕ್ ಸ್ಕೂಟರ್ ಸಸ್ಪೆನ್ಷನ್ ಸೆಟಪ್ ಬಗ್ಗೆ ಮಾತನಾಡುವುದಾದರೆ, ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್‌ ಮತ್ತು ಹಿಂಭಾಗ (ರೇರ್) ಮೊನೊಶಾಕ್ ಸಸ್ಪೆನ್ಷನ್ ಸೆಟಪ್ ಪಡೆದಿದೆ. ಮುಂದೆ 80/80 ಮತ್ತು ಹಿಂದೆ 90/80 ಅಳತೆಯ ಟೈರ್‌ಗಳನ್ನು ಹೊಂದಿದ್ದು. ಸುರಕ್ಷತೆಯ ದೃಷ್ಟಿಯಿಂದ ಎರಡು ತುದಿಗಳಲ್ಲಿ 130 ಎಂಎಂ ಡ್ರಮ್ ಬ್ರೇಕ್‌ನ್ನು ಒಳಗೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, June 25, 2024, 20:38 [IST]
English summary
Bgauss ruv350 electric scooter launch in india rs 109999 price 120 km range
Read more on electric scooter india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+