BGauss RUV350: ಬಿಗಾಸ್ ಆರ್‌ಯುವಿ350 ಎಲೆಕ್ಟ್ರಿಕ್ ಸ್ಕೂಟರ್ ವಿಡಿಯೋ ರಿವ್ಯೂ.. ವಿಶೇಷತೆಗಳೇನು?

ಭಾರತದ ಇವಿ ಸ್ಟಾರ್ಟ್ಅಪ್ ಬಿಗಾಸ್ (BGauss), ಈಚೆಗೆ ನೂತನ ಆರ್‌ಯುವಿ350 (RUV350) ಎಲೆಕ್ಟ್ರಿಕ್ ಸ್ಕೂಟರ್‌ನ್ನು ಬಹಿರಂಗಪಡಿಸಿತ್ತು. ಇದು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯವನ್ನು ಒಳಗೊಂಡಿದ್ದು, ದೇಶದ ಯಾವುದೇ ರಸ್ತೆ ಅಥವಾ ಎಂತಹದ್ದೇ ಹವಾಮಾನ ಪರಿಸ್ಥಿತಿಯಲ್ಲಿ ಬೇಕಾದರೂ ಓಡಿಸಲು ಸಾಧ್ಯವಾಗುವಂತೆ ಈ ಎಲೆಕ್ಟ್ರಿಕ್ ಸ್ಕೂಟರ್‌ನ್ನು ತಯಾರಿಸಲಾಗಿದೆ. ಕೆಲವೇ ದಿನಗಳ ಹಿಂದೆ, ಪುಣೆಯ ಚಕನ್‌ನಲ್ಲಿ ಹೊಸ ಬಿಗಾಸ್ ಆರ್‌ಯುವಿ350 ಇ-ಸ್ಕೂಟರ್‌ನ್ನು ಟೆಸ್ಟ್ ಡ್ರೈವ್ ಮಾಡುವ ಸುವರ್ಣಾವಕಾಶ ನಮ್ಮ ಡ್ರೈವ್‌ಸ್ಪಾರ್ಕ್ ತಂಡದ ಪ್ರತಿನಿಧಿಗೆ ಲಭ್ಯವಾಯಿತು. ಅದರ ವಿಡಿಯೋ ವಿಮರ್ಶೆ ಇಲ್ಲಿದೆ.

ನೂತನ ಬಿಗಾಸ್ ಆರ್‌ಯುವಿ350 (BGauss RUV350) ಇ-ಸ್ಕೂಟರ್‌ನ ಮುಂಭಾಗ (ಫ್ರಂಟ್) ಹ್ಯಾಂಡಲ್‌ಬಾರ್‌ನಲ್ಲಿ ಸ್ಕ್ವೇರ್ ಹೆಡ್‌ಲೈಟ್‌ನ್ನು ಹೊಂದಿದ್ದು, 16-ಇಂಚಿನ ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ. ಇದು ಗ್ರೇ, ಆರೆಂಜ್ ಹಾಗೂ ಯೆಲ್ಲೋ ಬಣ್ಣಗಳ ಆಯ್ಕೆಯನ್ನು ಪಡೆದಿದೆ. ವಿಶಾಲವಾದ ಫ್ಲೋರ್‌ಬೋರ್ಡ್‌ ಇದ್ದು, ಟೈಲ್‌ಲೈಟ್ ಕೂಡ ಹೆಚ್ಚು ಅತ್ಯಾಧುನಿಕವಾಗಿದೆ.

ಈ ಸ್ಕೂಟರ್ ಅತ್ಯುತ್ತಮವಾಗಿರುವ 5-ಇಂಚಿನ ಟಿಎಎಫ್‌ಟಿ ಡಿಸ್ಪ್ಲೇ ಹೊಂದಿದ್ದು, ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಕಾಲ್ ನೋಟಿಫಿಕೇಶನ್, ರೈಡಿಂಗ್ ಹಾಗೂ ಚಾರ್ಜಿಂಗ್ ಅಂಕಿಅಂಶಗಳನ್ನು ವೀಕ್ಷಿಸಬಹುದು. ಸೀಟ್ ಕೆಳ ಭಾಗದಲ್ಲಿರುವ ಬೂಟ್ ಸ್ಪೇಸ್ ಪುಟ್ಟದಾಗಿದ್ದು, ಚಿಕ್ಕ ಗಾತ್ರದ ಹೆಲ್ಮೆಟ್ ಇಡಬಹುದು. ಚಾರ್ಜಿಂಗ್ ಪೋರ್ಟ್ ಹಾಗೂ ಪವರ್‌ಟ್ರೇನ್ ಆನ್/ ಆಫ್ ಸ್ವಿಚ್ ಕೂಡ ಇಲ್ಲಿದೆ.

ಬಿಗಾಸ್ ಆರ್‌ಯುವಿ350 ಎಲೆಕ್ಟ್ರಿಕ್ ಸ್ಕೂಟರ್ 3 ಕೆಡಬ್ಲ್ಯೂಹೆಚ್ ಲಿಥಿಯಂ-ಐಯಾನ್ ಬ್ಯಾಟರಿ ಆಯ್ಕೆಯನ್ನು ಹೊಂದಿದ್ದು, ಹೊಸದಾಗಿರುವ ಹೈಪರ್‌ಡ್ರೈವ್ ಇನ್-ವೀಲ್ ಮೋಟಾರ್‌ನಿಂದ ಕಾರ್ಯನಿರ್ವಹಿಸಲಿದ್ದು, 4.69 ಪಿಎಸ್ ಗರಿಷ್ಠ ಶಕ್ತಿ (ಪವರ್) ಮತ್ತು 165 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. ಸಂಪೂರ್ಣ ಚಾರ್ಜ್‌ನಲ್ಲಿ 135 ಕಿ.ಮೀ (ARAI) ಕ್ರಮಿಸಲಿದೆ ಎನ್ನಲಾಗಿದೆ.

BGauss RUV350 Electric Scooter Review Video Details

ಈ ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿಯು 35ಕೆಡಬ್ಲ್ಯೂ ಆಫ್-ಬೋರ್ಡ್ ಚಾರ್ಜರ್‌ ಬಳಕೆಯಲ್ಲಿ 0-80% ಚಾರ್ಜ್ ಆಗಲು 1 ಗಂಟೆ 55 ನಿಮಿಷ ತೆಗೆದುಕೊಳ್ಳುತ್ತದೆ. ಅದು ಪೂರ್ತಿ ಚಾರ್ಜ್ ಆಗುವುದಕ್ಕೆ ಹೆಚ್ಚುವರಿಯಾಗಿ 55 ನಿಮಿಷಗಳು ಬೇಕಾಗುತ್ತದೆ. ಇಕೋ, ರೈಡ್ & ಸ್ಪೋರ್ಟ್ ಎಂಬ ರೈಡಿಂಗ್ ಮೋಡ್ ಆಯ್ಕೆಯನ್ನು ಪಡೆದಿದ್ದು, ಕೇವಲ 5.4 ಸೆಕೆಂಡುಗಳಲ್ಲಿ 0-40 ಕೆಎಂ/ಹೆಚ್ ವೇಗವನ್ನು ಹೊಂದಲಿದೆ.

ಈ ಎಲೆಕ್ಟ್ರಿಕ್ ಸ್ಕೂಟರ್ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್‌ ಮತ್ತು ಹಿಂಭಾಗ (ರೇರ್) ಮೊನೊಶಾಕ್ ಸಸ್ಪೆನ್ಷನ್ ಸೆಟಪ್ ಹೊಂದಿದೆ. ಮುಂದೆ 80/80 ಮತ್ತು ಹಿಂದೆ 90/80 ಅಳತೆಯ ಟೈರ್‌ಗಳನ್ನು ಒಳಗೊಂಡಿದೆ. ಸುರಕ್ಷತೆಗಾಗಿ 130 ಎಂಎಂ ಡ್ರಮ್ ಬ್ರೇಕ್‌ಗಳನ್ನು ತನ್ನದಾಗಿಸಿಕೊಂಡಿದೆ. ವೀಲ್‌ಬೇಸ್ 1,335 ಎಂಎಂ ಹಾಗೂ ಗ್ರೌಂಡ್ ಕ್ಲಿಯರೆನ್ಸ್ 160 ಎಂಎಂ ಇದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, June 25, 2024, 19:15 [IST]
English summary
Bgauss ruv350 electric scooter review video details
Read more on electric scooter india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+