200+ Km ರೇಂಜ್.. ನೂತನ ಬ್ರಿಸ್ಕ್ ಒರಿಜಿನ್ ಇ-ಸ್ಕೂಟರ್ ಕುರಿತ ಪ್ರಮುಖಾಂಶಗಳು.. ಯಾರು ಹೇಳಲ್ಲ!

ಹೈದರಾಬಾದ್​ ಮೂಲದ ಎಲೆಕ್ಟ್ರಿಕ್ ವೆಹಿಕಲ್ ಸ್ಟಾರ್ಟ್ಅಪ್ ಬ್ರಿಸ್ಕ್ ಇವಿ ಎನರ್ಜಿ (Brisk EV Energy), ನೂತನ ಇ-ಸ್ಕೂಟರ್‌ನ್ನು ಬಿಡುಗಡೆಗೊಳಿಸಿದೆ. ಬಜೆಟ್ ಬೆಲೆಗೆ 'ಒರಿಜಿನ್' ಎಲೆಕ್ಟ್ರಿಕ್ ಸ್ಕೂಟರ್ ಮಾರಾಟಕ್ಕೆ ಬಂದಿದೆ. ಇದು ಅತ್ಯಾಧುನಿಕ ವಿನ್ಯಾಸ ಮತ್ತು ವೈಶಿಷ್ಟ್ಯಗಳನ್ನು ಹೊಂದಿದೆ. ನೀವು ಹೊಚ್ಚ ಹೊಸ ಇ-ಸ್ಕೂಟರ್‌ನ್ನು ಖರೀದಿಸಲು ಆಲೋಚಿಸಿದ್ದೀರಾ.. ಹಾಗಾದರೆ 'ಬ್ರಿಸ್ಕ್ ಒರಿಜಿನ್' ಉತ್ತಮ ಆಯ್ಕೆಯಾಗಲಿದೆ. ಬನ್ನಿ.. ಈ ನೂತನ ಎಲೆಕ್ಟ್ರಿಕ್ ಸ್ಕೂಟರ್ ಕುರಿತ ಪ್ರಮುಖಾಂಶಗಳನ್ನು ತಿಳಿಯೋಣ.

ಬೆಲೆ (Price): ಹೊಸ ಬ್ರಿಸ್ಕ್ ಒರಿಜಿನ್ (Brisk Origin) ಇ-ಸ್ಕೂಟರ್ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. ಇದು ರೂ.1,39,000 ಎಕ್ಸ್ ಶೋರೂಂ ದರವನ್ನು ಹೊಂದಿದೆ. ಆಸಕ್ತರು, ಕೇವಲ ರೂ.333 ಮುಂಗಡ ಹಣವನ್ನು ಪಾವತಿಸುವ ಮೂಲಕ ಪ್ರೀ-ಬುಕ್ಕಿಂಗ್ ಮಾಡಬಹುದು. ಶೀಘ್ರದಲ್ಲಿ ಡೆಲಿವರಿ ಶುರುವಾಗಲಿದೆ.

Brisk Origin Electric Scooter Top Things You Should Must Know

ವಿನ್ಯಾಸ (Design): ನೂತನ ಎಲೆಕ್ಟ್ರಿಕ್ ಸ್ಕೂಟರ್ ಹೊರಭಾಗದಲ್ಲಿ ನೋಡುಗರನ್ನು ಸೆಳೆಯುವಂತಹ ಆಕರ್ಷಕವಾದ ವಿನ್ಯಾಸವನ್ನು ಒಳಗೊಂಡಿದೆ. ಸ್ಪೋರ್ಟಿ ಹೈಡ್‌ಲೈಟ್, ಎಲ್ಐಡಿ ಟೈಲ್‌ಲೈಟ್, ಫ್ಲಾಟ್ ಫುಟ್ ಬೋರ್ಡ್, ಅಲಾಯ್ ಫ್ರಂಟ್ ಫುಟ್-ಪೆಗ್ಸ್ ಅನ್ನು ಪಡೆದಿದೆ. ಸ್ಟಾರ್ಮ್ ಗ್ರೇ, ಪ್ಯಾಂಥರ್ ಬ್ಯ್ಲಾಕ್, ಮತ್ತು ಓಷನ್ ಗ್ರೀನ್ ಒಳಗೊಂಡಂತೆ ಹಲವು ಬಣ್ಣಗಳೊಂದಿಗೂ ಲಭ್ಯವಿದೆ.

ಕಾರ್ಯಕ್ಷಮತೆ (Performance): ಈ ಬ್ರಿಸ್ಕ್ ಒರಿಜಿನ್ ಇ-ಸ್ಕೂಟರ್ 4.5 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ಪಡೆದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 200+ ಕಿಲೋಮೀಟರ್‌ಗೂ ಹೆಚ್ಚಿನ ರೇಂಜ್ (ಮೈಲೇಜ್) ಕೊಡುತ್ತದೆ. 94 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದ್ದು, 3.6 ಸೆಕೆಂಡುಗಳಲ್ಲಿ 0 ರಿಂದ 40 ಕೆಎಂಪಿಹೆಚ್ ವೇಗವನ್ನು ಹೊಂದಲಿದೆ.

Brisk Origin Electric Scooter Top Things You Should Must Know

ಇದರಲ್ಲಿರುವ ಎಲೆಕ್ಟ್ರಿಕ್ ಮೋಟಾರ್ 5.5 ಕೆಡಬ್ಲ್ಯೂ ಪೀಕ್ ಪವರ್ & 22 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. ಈ ಸ್ಕೂಟರ್‌ನ ಬ್ಯಾಟರಿಯು ಕೇವಲ 7 ಗಂಟೆಯಲ್ಲಿ ಭರ್ತಿ ಚಾರ್ಜ್ ಆಗುತ್ತದೆ. ಇಕೋ, ರೈಡ್ ಹಾಗೂ ಬ್ರಿಸ್ಕ್ ಎಂಬ 3 ರೈಡಿಂಗ್ ಮೋಡ್‌ಗಳನ್ನು ಒಳಗೊಂಡಿದೆ.

ವೈಶಿಷ್ಟ್ಯಗಳು (Features): ನೂತನ ಬ್ರಿಸ್ಕ್ ಒರಿಜಿನ್ ಸ್ಕೂಟರ್ ಹಲವು ಅತ್ಯುತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ. 7-ಇಂಚಿನ ಟಚ್ ಸ್ಕ್ರೀನ್, ಯುಎಸ್‌ಬಿ ಚಾರ್ಜರ್‌, 30-ಲೀಟರ್‌ ಸಾಮರ್ಥ್ಯದ ಅಂಡರ್ ಸೀಟ್ ಸ್ಟೋರೇಜ್, ಕಾಲ್ ಮೈ ಸ್ಕೂಟರ್ ಹಾಗೂ ರಿವರ್ಸ್ ಮೋಡ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ.

ಸಸ್ಪೆನ್ಷನ್ ಸೆಟಪ್ & ಬ್ರೇಕಿಂಗ್ ಸಿಸ್ಟಮ್ (Suspension Setup & Braking System): ಇದು ಮೊನೊ ಶಾಕ್ ಸಸ್ಪೆನ್ಷನ್ ಸೆಟಪ್ ಹೊಂದಿದೆ. ಮುಂಭಾಗ (ಫ್ರಂಟ್) & ಹಿಂಭಾಗ (ರೇರ್) ಡಿಸ್ಕ್ ಬ್ರೇಕ್ ಆಯ್ಕೆಯನ್ನು ಪಡೆದಿದೆ. ಜೊತೆಗೆ ಕಾಂಬಿ - ಬ್ರೇಕ್ ಸಿಸ್ಟಮ್ ಅನ್ನು ಒಳಗೊಂಡಿದೆ.

ಇನ್ನು, ಜನಪ್ರಿಯ ಓಲಾ ಹಾಗೂ ಎಥರ್‌ಗೆ ಪ್ರಬಲವಾದ ಸ್ಪರ್ಧೆಯೊಡ್ಡಲು ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ನ್ನು ಬ್ರಿಸ್ಕ್ ಇವಿ ಎನರ್ಜಿ ಮಾರಾಟಕ್ಕೆ ತಂದಿದೆ. ವಿಶೇಷವಾಗಿ ಇದು ಗರಿಷ್ಠ ರೇಂಜ್ ನೀಡಲಿದ್ದು, ಕಡಿಮೆ ಬೆಲೆಗೆ ಬಿಡುಗಡೆಯಾಗಿರುವುದು ಗ್ರಾಹಕರಿಗೆ ಖುಷಿ ನೀಡಿದೆ. ಮುಂಬರುವ ದಿನಗಳಲ್ಲಿ ನೂತನ ಇ-ಸ್ಕೂಟರ್‌ಗೆ ಖರೀದಿದಾರರಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Sunday, December 29, 2024, 9:00 [IST]
English summary
Brisk origin electric scooter top things you should must know
Read more on electric scooter india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+