ಯುವಕರ ಹೃದಯ ಕದಿಯಲು ಬಂತು ಹೊಸ ಬ್ರಿಕ್ಸ್‌ಟನ್ ಕ್ರಾಸ್‌ಫೈರ್ 500 ಎಕ್ಸ್ ಬೈಕ್: ಬೆಲೆ ಎಷ್ಟು?

ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಬ್ರಿಕ್ಸ್‌ಟನ್ ಮೋಟಾರ್‌ಸೈಕಲ್ಸ್ ಇತ್ತೀಚೆಗೆ 5 ಹೊಸ ಮಾದರಿಗಳೊಂದಿಗೆ ಭಾರತದಲ್ಲಿ ಪಾದಾರ್ಪಣೆ ಮಾಡಿದೆ. ಇವುಗಳಲ್ಲಿ ಕ್ರಾಸ್‌ಫೈರ್ 500 ಎಕ್ಸ್ ಪ್ರಮುಖವಾಗಿದೆ. ಈ ಬೈಕಿನ ಬಗ್ಗೆ ಹೇಳುವುದಾದರೆ, ಈ ಬ್ರಿಕ್ಸ್‌ಟನ್ ಕ್ರಾಸ್‌ಫೈರ್ 500 ಎಕ್ಸ್ ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.4.74 ಲಕ್ಷವಾಗಿದೆ. ಈ ಮಾದರಿಯು ಕ್ರಾಸ್‌ಫೈರ್ XC ಸ್ಕ್ರಾಂಬ್ಲರ್‌ಗೆ ಹೋಲಿಸಿದರೆ ರಸ್ತೆ ಬಳಕೆಗೆ ಹೆಚ್ಚು ಸೂಕ್ತವಾಗಿದೆ. ಈ ಹೊಸ ಬ್ರಿಕ್ಸ್‌ಟನ್ ಬೈಕ್ ಲಾಂಗ್ ರೈಡ್ ಹೋಗುವ ಬೈಕ್ ಪ್ರಿಯರನ್ನು ಹೆಚ್ಚು ಸೆಳೆಯಬಹುದು.

ಹೊಸ ಬ್ರಿಕ್ಸ್‌ಟನ್ ಕ್ರಾಸ್‌ಫೈರ್ 500 ಎಕ್ಸ್ (Brixton Crossfire 500 X) ಬೈಕಿನಲ್ಲಿ 486cc ಪ್ಯಾರಲಲ್-ಟ್ವಿನ್ ಎಂಜಿನ್‌ ಅನ್ನು ಹೊಂದಿದೆ. ಈ ಲಿಕ್ವಿಡ್ ಕೂಲ್ಡ್ ಎಂಜಿನ್ 8,500rpm ನಲ್ಲಿ ಸರಿಸುಮಾರು 47bhp ಮತ್ತು 6,750rpm ನಲ್ಲಿ 43Nm ಗರಿಷ್ಠ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ.

Brixton Crossfire 500 X

190 ಕೆಜಿ ತೂಕದ ಬ್ರಿಕ್ಸ್‌ಟನ್ ಕ್ರಾಸ್‌ಫೈರ್ 500 ಎಕ್ಸ್ ಮಾದರಿಯು ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಗಿಂತ ಹಗುರವಾಗಿದೆ. ಈ ಹೊಸ ಬ್ರಿಕ್ಸ್‌ಟನ್ ಬೈಕಿನ 13.5 ಲೀಟರ್ ಪೆಟ್ರೋಲ್ ಫ್ಯೂಯಲ್ ಟ್ಯಾಂಕ್ ಅನ್ನು ಹೊಂದಿದೆ. ಈ ಹೊಸ ಬ್ರಿಕ್ಸ್‌ಟನ್ ಕ್ರಾಸ್‌ಫೈರ್ 500 ಎಕ್ಸ್ ಬೈಕಿನಲ್ಲಿ ರಸ್ತೆ-ಕೇಂದ್ರಿತ ಪಿರೆಲ್ಲಿ ಟೈರ್‌ಗಳೊಂದಿಗೆ 17-ಇಂಚಿನ ಸ್ಪೋಕ್ ವ್ಹೀಲ್ ಗಳನ್ನು ಒಳಗೊಂಡಿವೆ.

ಸಸ್ಪೆಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಈ ಹೊಸ ಹೊಸ ಬ್ರಿಕ್ಸ್‌ಟನ್ ಕ್ರಾಸ್‌ಫೈರ್ 500 ಎಕ್ಸ್ ಬೈಕಿನ ಮುಂಭಾಗದಲ್ಲಿ ಅಪ್ ಸೈಡ್ ಡೌನ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಕಯಾಬಾದಿಂದ ಮೊನೊಶಾಕ್ ಸೆಟಪ್ ಅನ್ನು ಹೊಂದಿದೆ. ಇದು ವಿವಿಧ ರಸ್ತೆ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ಮೂಲಕ ಆರಾಮದಾಯಕ ಸವಾರಿಯನ್ನು ಒದಗಿಸುತ್ತವೆ.

Brixton Crossfire 500 X

ಇನ್ನು ಈ ಬೈಕಿನಲ್ಲಿ ಸುರಕ್ಷತೆಯಲ್ಲಿ ಪ್ರಮುಖ ಪಾತ್ರವಹಿಸುವ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಈ ಬ್ರಿಕ್ಸ್‌ಟನ್ ಬೈಕಿನ ಮುಂಭಾಗ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಗಳನ್ನು ಹೊಂದಿದೆ. ಇದರೊಂದಿಗೆ ಈ ಬೈಕಿನಲ್ಲಿ ಹೆಚ್ಚಿನ ಸುರಕ್ಷತೆಗಾಗಿ J. ಜುವಾನ್ ಕ್ಯಾಲಿಪರ್‌ಗಳು ಮತ್ತು ಬಾಷ್ ABS ಅನ್ನು ಅಳವಡಿಸಲಾಗಿದೆ.

ಈ ಹೊಸ ಬ್ರಿಕ್ಸ್‌ಟನ್ ಕ್ರಾಸ್‌ಫೈರ್ 500 ಎಕ್ಸ್ ಬೈಕಿನಲ್ಲಿರುವ ಪ್ರಮುಖ ಫೀಚರ್ಸ್ ಗಳು, ಈ ಬ್ರಿಕ್ಸ್‌ಟನ್ ಬೈಕ್ ಲೋ-ಲೈಟಿಂಗ್ ಪರಿಸ್ಥಿತಿಗಳಲ್ಲಿ ಗೋಚರತೆಯನ್ನು ಖಾತ್ರಿಪಡಿಸುವ ಎಲ್‌ಇಡಿ ಲೈಟಿಂಗ್ ಸಿಸ್ಟಮ್‌ನೊಂದಿಗೆ ಬರುತ್ತದೆ. ಹೆಚ್ಚುವರಿಯಾಗಿ ಈ ಬೈಕಿನಲ್ಲಿ ಅಪ್ ಸೈಡ್ ಡೌನ್ LCD ಡ್ಯಾಶ್‌ಬೋರ್ಡ್ ಅನ್ನು ಹೊಂದಿದ್ದು, ಇದು ಸವಾರನಿಗೆ ಅಗತ್ಯ ಮಾಹಿತಿಗಳನ್ನು ನೀಡುತ್ತದೆ.

Brixton Crossfire 500 X

ಬ್ರಿಕ್ಸ್‌ಟನ್ ಕಂಪನಿಯ ಮತ್ತೊಂದು ಕ್ರಾಸ್‌ಫೈರ್ 500 XC ಕೆಫೆ ರೇಸರ್ ಬೈಕ್ ಬಗ್ಗೆ ಹೇಳುವುದುದಾದರೆ, ಇದು ಸ್ಕ್ರ್ಯಾಂಬ್ಲರ್ ಪುನರಾವರ್ತನೆ ಆಗಿದೆ. ಈ ಕ್ರಾಸ್‌ಫೈರ್ 500 XC ಅದೇ ಎರಡು-ಸಿಲಿಂಡರ್ ಎಂಜಿನ್‌ನಿಂದ ಚಾಲಿತವಾಗಿದೆ. ಇದು ದೀರ್ಘವಾದ ಸಸ್ಪೆಕ್ಷನ್ ಸೆಟಪ್, ಎತ್ತರದ ಮುಂಭಾಗದ ಕೊಕ್ಕಿನ ಫೆಂಡರ್, ಒರಟಾದ ಟೈರ್‌ಗಳು ಮತ್ತು ಹೆಚ್ಚಿನ-ಸೆಟ್ ಹ್ಯಾಂಡಲ್‌ಬಾರ್‌ಗಳೊಂದಿಗೆ ಬರುತ್ತಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, November 20, 2024, 11:39 [IST]
English summary
Brixton crossfire 500 x launched in india price features details
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+