ಸೂಪರ್ ಬೈಕ್ ಖರೀದಿಸಲು ಬಜೆಟ್ ಇಲ್ಲವೇ: ಡ್ರ್ಯಾಗ್‌ರೇಸನ್ನೇ ಗೆಲ್ಲಬಹುದಾದ ಬಜೆಟ್ ಬೈಕ್‌ಗಳು ನಿಮಗಾಗಿ!
ಭಾರತದಲ್ಲಿ ಕಾರುಗಳು ಮಾರಾಟವಾಗುವುದಕ್ಕಿಂತ ಬಹುಪಾಲು ಅಧಿಕ ಮಾರಾಟವಾಗುವುದು ಬೈಕ್‌ಗಳು. ಎಲ್ಲರಿಗೂ ಸಾಕಷ್ಟು ದುಡ್ಡು ಕೊಟ್ಟು ಸೂಪರ್ ಬೈಕ್‌ಗಳನ್ನು ಖರೀದಿಸುವ ಅವಕಾಶವಿರುವುದಿಲ್ಲ. ಆದರೂ ಸಹ ತಮ್ಮ ಬೈಕ್ ಇತರರ ಬೈಕ್‌ಗಿಂತಲೂ ಅಧಿಕ ಪರ್ಫಾಮೆನ್ಸ್ ಅಥವಾ ಸುಂದರವಾಗಿರಬೇಕು ಎಂಬುದು ಎಲ್ಲರ ಆಸೆ. ಅದಕ್ಕಾಗಿಯೇ ನಾವಿಂದು ಒಂದಷ್ಟು ಬೈಕ್‌ಗಳನ್ನು ನಿಮಗೆ ತಿಳಿಸುತ್ತಿದ್ದೇವೆ. ಇದನ್ನು ಖರೀದಿಸಿಲು ನಿಮ್ಮಲ್ಲಿ ಸೂಪರ್ ಬೈಕ್ ಖರೀದಿಸುವ ಬಜೆಟ್ ಇರಬೇಕೆಂದೇನು ಇಲ್ಲ. ಆದರೆ ಈ ಬೈಕ್‌ನಲ್ಲಿ ನೀವೊಂದು ಸಾಮಾನ್ಯ ಡ್ರ್ಯಾಗ್ ರೇಸ್ ಅನ್ನು ಸಹ ಗೆಲ್ಲಬಹುದು ಎಂದರೆ ನೀವು ನಂಬಲೇಬೇಕು.
ಎಪ್ರಿಲಿಯಾ RS457: ಪ್ರಿಲಿಯಾ RS 457 (Aprilia RS457) ಸ್ಪೋರ್ಟ್ಸ್ ಬೈಕ್ ಪ್ರಿಸ್ಮಾಟಿಕ್ ಡಾರ್ಕ್, ಓಪಲೆಸೆಂಟ್ ವೈಟ್ ಮತ್ತು ರೇಸಿಂಗ್ ಸ್ಟ್ರೈಪ್ಸ್ ಎಂಬ ಮೂರು ಬಣ್ಣ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಇನ್ನು ಎಪ್ರಿಲಿಯಾ RS 457 ಬೈಕ್ ಹಲವು ತಂತ್ರಜ್ಞಾನದೊಂದಿಗೆ ಲೋಡ್ ಆದ ಸ್ಪೋರ್ಟ್ಸ್ ಬೈಕ್ ಆಗಿದೆ. ಈ ಬೈಕ್ ಸುಮಾರು 4.1 ಲಕ್ಷ ರೂಪಾಯಿ ಎಕ್ಸ್ ಶೋ ರೂಮ್‌ನಲ್ಲಿ ಆರಂಭವಾಗುತ್ತದೆ.

ಹೊಸ ಎಪ್ರಿಲಿಯಾ RS 457 ಸ್ಪೋರ್ಟ್ಸ್ ಬೈಕ್ ಹೊಸ 457cc ಪ್ಯಾರಲಲ್ ಟ್ವಿನ್ ಎಂಜಿನ್‌ನಿಂದ ಚಾಲಿತವಾಗಿದೆ. ಲಿಕ್ವಿಡ್-ಕೂಲ್ಡ್, ನಾಲ್ಕು-ವಾಲ್ವ್ ಎಂಜಿನ್ ಡ್ಯುಯಲ್-ಓವರ್‌ಹೆಡ್ ಕ್ಯಾಮ್‌ಶಾಫ್ಟ್‌ಗಳು ಮತ್ತು ಫಾರ್ವರ್ಡ್-ಫೇಸಿಂಗ್ ಸಿಲಿಂಡರ್‌ಗಳನ್ನು ಒಳಗೊಂಡಿದೆ. ಈ ಎಪ್ರಿಲಿಯಾ RS 457 ಬೈಕಿನಲ್ಲಿ ಪ್ಯಾರಲಲ್ ಟ್ವಿನ್ ಎಂಜಿನ್ 9,400rpm ನಲ್ಲಿ 46.93bhp ಮತ್ತು 6,700rpm ನಲ್ಲಿ 43.5Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಕೆಟಿಎಂ ಡ್ಯೂಕ್ 390: ಹೊಚ್ಚ ಹೊಸ 2024ರ ಕೆಟಿಎಂ 390 ಡ್ಯೂಕ್ ಬೈಕ್ ಈಗ ದೊಡ್ಡ 399cc, ಸಿಂಗಲ್-ಸಿಲಿಂಡರ್, DOHC, ಲಿಕ್ವಿಡ್-ಕೂಲ್ಡ್ ಎಂಜಿನ್ ಹೊಂದಿದೆ. ಈ ಹೊಸ 399cc ಎಂಜಿನ್ 64mm ನಲ್ಲಿ ದೀರ್ಘವಾದ ಸ್ಟ್ರೋಕ್ ಅನ್ನು ಹೊಂದಿದೆ. ಬೋರ್ ಅದರ ಹಿಂದಿನ 89mm ನಲ್ಲಿ ಹೋಲುತ್ತದೆ. ಹೊಸ ಎಂಜಿನ್ ಕಡಿಮೆ ಆರ್‌ಪಿಎಂನಲ್ಲಿ ಹೆಚ್ಚು ಶಕ್ತಿ ಮತ್ತು ಟಾರ್ಕ್ ಅನ್ನು ಉತ್ಪಾದಿಸುವ ಸಮಾರ್ಥ್ಯವನ್ನು ಹೊಂದಿದೆ.

ಅಂಕಿಅಂಶಗಳ ಪ್ರಕಾರ, 2024 KTM 390 ಡ್ಯೂಕ್‌ನಲ್ಲಿನ ಹೊಸ 399cc ಎಂಜಿನ್ 8,500rpm ನಲ್ಲಿ 45.37bhp ಮತ್ತು 6,500rpm ನಲ್ಲಿ 39Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹಳೆಯ 390 ಡ್ಯೂಕ್ 42.9bhp @9,000rpm ಮತ್ತು 7,000rpm ನಲ್ಲಿ 37Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಕಾಂಟಿನೆಂಟಲ್ ಜಿಟಿ 650: ಭಾರತದಲ್ಲಿ ಕಾಂಟಿನೆಂಟಲ್ ಜಿಟಿ 650 ಬೆಲೆ ₹3.19 ಲಕ್ಷದಿಂದ ₹3.45 ಲಕ್ಷದವರೆಗೆ ಎಕ್ಸ್ ಶೋರೂಂನಲ್ಲಿದೆ. ಈ ಮಾದರಿಯು ಇಂಟರ್‌ಸೆಪ್ಟರ್ 650 ಗಿಂತ ಮೇಲಿದ್ದು, ಇದರ ಬೆಲೆ ₹3.03 ಲಕ್ಷದಿಂದ ₹3.31 ಲಕ್ಷದವರೆಗೆ ಇರುತ್ತದೆ. ಮೋಟಾರ್‌ಸೈಕಲ್‌ಗಳು 270-ಡಿಗ್ರಿ ಫೈರಿಂಗ್ ಆರ್ಡರ್‌ನೊಂದಿಗೆ 648 ಸಿಸಿ ಪ್ಯಾರಲಲ್-ಟ್ವಿನ್ ಎಂಜಿನ್‌ನಿಂದ ಚಾಲಿತವಾಗಿವೆ. ಈ ಎಂಜಿನ್ 47 bhp ಮತ್ತು 52 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಅಲ್ಟ್ರಾವೈಲೆಟ್ F77 ಮ್ಯಾಕ್ 2: ಅಲ್ಟ್ರಾವೈಲೆಟ್ ಆಟೋಮೋಟಿವ್ ತನ್ನ ಅಲ್ಟ್ರಾವೈಲೆಟ್ ಹೊಸ F77 ಮ್ಯಾಕ್ 2 (Ultraviolette F77 Mach 2) ಎಲೆಕ್ಟ್ರಿಕ್ ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗಷ್ಟೇ ಬಿಡುಗಡೆಗೊಳಿಸಿದೆ. ಈ ಹೊಸ ಅಲ್ಟ್ರಾವೈಲೆಟ್ F77 ಮ್ಯಾಕ್ 2 (Ultraviolette F77 Mach 2) ಎಲೆಕ್ಟ್ರಿಕ್ ಬೈಕಿನ ಪರಿಚಯಾತ್ಮಕ ಬೆಲೆಯ ಎಕ್ಸ್ ಶೋರೂಂ ಪ್ರಕಾರ ರೂ.2,99,999 ಆಗಿದೆ.
ಅಲ್ಟ್ರಾವೈಲೆಟ್ F77 ಮ್ಯಾಕ್ 2 ಎಲೆಕ್ಟ್ರಿಕ್ ಬೈಕಿನ ಸ್ಟ್ಯಾಂಡರ್ಡ್ ರೂಪಾಂತರದಲ್ಲಿ 27kW ಮೋಟಾರ್ ಹೊಂದಿದ್ದರೆ, ರೆಕಾನ್ ರೂಪಾಂತರದಲ್ಲಿ 30kW ಮೋಟಾರ್ ಅನ್ನು ನೀಡಿದೆ. ಈ ಬೈಕಿನ ಸ್ಟ್ಯಾಂಡರ್ಡ್ ರೂಪಾಂತರವು 7.1kWh ಬ್ಯಾಟರಿ ಪ್ಯಾಕ್ ನೊಂದಿಗೆ 211 ಕಿ.ಮೀ ರೇಂಜ್ ಅನ್ನು ನೀಡಿದರೆ, ರೆಕಾನ್ ರೂಪಾಂತರದಲ್ಲಿ 10.3kWh ಬ್ಯಾಟರಿ ಪ್ಯಾಕ್ ಅನ್ನು ನೊಂದಿಗೆ 323 ಕಿ.ಮೀ ರೆಂಜ್ ಅನ್ನು ನೀಡುತ್ತದೆ.
ಬಜಾಜ್ ಪಲ್ಸರ್ NS400Z: ಹೊಸ ಬಜಾಜ್ ಪಲ್ಸರ್ ಎನ್ಎಸ್400ಝಡ್ ಮೋಟಾರ್‌ಸೈಕಲ್, 373.3 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಪೆಟ್ರೋಲ್ ಎಂಜಿನ್ ಪಡೆದಿದ್ದು, 39.45 ಬಿಹೆಚ್‍ಪಿ ಗರಿಷ್ಠ ಪವರ್ (ಶಕ್ತಿ) ಮತ್ತು 35 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ ನೊಟ್ಟಿಗೆ ಅಸಿಸ್ಟ್ & ಸ್ಲಿಪ್ಪರ್ ಕ್ಲಚ್‌ನ್ನು ಒಳಗೊಂಡಿದೆ.


Click it and Unblock the Notifications