ಫಲಾನುಭವಿಗಳಿಗೆ ಅಗ್ಗದ ಬೆಲೆಗೆ ಹೊಸ ಚೇತಕ್ ಸ್ಕೂಟರ್ ಖರೀದಿಗೆ ಲಭ್ಯ
ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಚೇತಕ್, ಭಾರತದಾದ್ಯಂತ KPKB ಫಲಾನುಭವಿಗಳಿಗೆ ತನ್ನ ಚೇತಕ್ 2903 ಸ್ಕೂಟರ್ ನೀಡಲು ಸಜ್ಜಾಗಿದೆ. ಹೌದು, ಚೇತಕ್ ಎಲೆಕ್ಟ್ರಿಕ್ ಕಂಪನಿಯು' ಗೃಹ ವ್ಯವಹಾರಗಳ ಸಚಿವಾಲಯದ ಕೇಂದ್ರೀಯ ಪೊಲೀಸ್ ಕಲ್ಯಾಣ್ ಭಂಡಾರ್ (KPKB)ನೊಂದಿಗೆ ಪಾಲುದಾರಿಕೆಯನ್ನು ಘೋಷಿಸಿದೆ. ಸೆಪ್ಟೆಂಬರ್ 18, 2024 ರಿಂದ ಜಾರಿಗೆ ಬರುವಂತೆ ಚೇತಕ್ ಅರ್ಬನೈಟ್ ಬ್ಯುಸಿನೆಸ್ ಯುನಿಟ್, KPKB ನಲ್ಲಿ ಚೇತಕ್ 2903 ಎಂಬ ಇವಿ ಸ್ಕೂಟರ್ ಅನ್ನು ಯಶಸ್ವಿಯಾಗಿ ಪಟ್ಟಿಮಾಡಿದೆ. ಈ ಸ್ಕೂಟರ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ವರ್ಗದಲ್ಲಿ ಜನಪ್ರಿಯ ಇವಿಗಳಲ್ಲಿ ಒಂದಾಗಿದೆ.
ಈ ಪಾಲುದಾರಿಕೆಯ ಭಾಗವಾಗಿ, ಭಾರತದಾದ್ಯಂತ ಚೇತಕ್ ಅನುಭವ ಕೇಂದ್ರಗಳು (CECs) ಈಗ ಚೇತಕ್ 2903 ಸ್ಕೂಟರ್ ಅನ್ನು KPKB ಫಲಾನುಭವಿಗಳಿಗೆ ವಿಶೇಷ ದರಗಳಲ್ಲಿ ಮಾರಾಟ ಮಾಡಲು ಅಧಿಕಾರ ಹೊಂದಿವೆ. ಈ ವಿಶೇಷ ಕೊಡುಗೆಯನ್ನು ಪಡೆಯಲು, ಫಲಾನುಭವಿಗಳು ಮಾನ್ಯವಾದ ತಮ್ಮ ಇಲಾಖೆಯ ಗುರುತಿನ ಚೀಟಿಯನ್ನು ಹೊಂದಿರಬೇಕು.

KPKB ಫಲಾನುಭವಿಗಳು ತಮ್ಮ ಇಲಾಖೆಯ ಗುರುತಿನ ಚೀಟಿಯೊಂದಿಗೆ ಹತ್ತಿರದ 'ಮಾಸ್ಟರ್ ಭಂಡಾರ್' ಅಥವಾ 'ಅನುಬಂಧ ಭಂಡಾರ್' ನಿಂದ ಪಡೆದ ಅಧಿಕೃತ ಪತ್ರವನ್ನು ಪ್ರಸ್ತುತಪಡಿಸುವ ಅಗತ್ಯವಿದೆ. ದೃಢೀಕರಣವನ್ನು ಪಡೆದುಕೊಂಡ ನಂತರ, ಯಾವುದೇ ಸ್ಥಳೀಯ ಚೇತಕ್ ಡೀಲರ್ ಮೂಲಕ ಹೊಸ ಚೇತಕ್ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಬಹುದು.
ಸ್ಕೂಟರ್ ವಿಶೇಷತೆಗಳು: ಚೇತಕ್ 2903 ಎಲೆಕ್ಟ್ರಿಕ್ ಸ್ಕೂಟರ್ ಬಾಳಿಕೆ ಬರುವ, ಉತ್ತಮ-ಗುಣಮಟ್ಟದ ಫ್ರೇಮ್ ಮತ್ತು ದೀರ್ಘಕಾಲೀನ ಪರ್ಫಾಮೆನ್ಸ್ ನೀಡುವ ವಸ್ತುಗಳೊಂದಿಗೆ ವಿನ್ಯಾಸಗೊಳಿಸಲಾಗಿದೆ. ಇದರ ಗಟ್ಟಿಮುಟ್ಟಾದ ನಿರ್ಮಾಣವು ಕಠಿಣ ನಗರ ಪರಿಸರದಲ್ಲಿಯೂ ದೈನಂದಿನ ಪ್ರಯಾಣಿಕರಿಗೆ ಸೂಕ್ತವಾದ ಆಯ್ಕೆಯಾಗಿದೆ ಎಂದು ಚೇತಕ್ ಎಲೆಕ್ಟ್ರಿಕ್ ಹೇಳಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಅರ್ಬನೈಟ್ ಬ್ಯುಸಿನೆಸ್ ಘಟಕದ ಅಧ್ಯಕ್ಷ ಎರಿಕ್ ವಾಸ್, "ದೇಶಾದ್ಯಂತ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕೆಚ್ಚೆದೆಯ ಸಿಬ್ಬಂದಿಗೆ ಚೇತಕ್ 2903 ನೀಡಲು ಕೇಂದ್ರೀಯ ಪೊಲೀಸ್ ಕಲ್ಯಾಣ್ ಭಂಡಾರ್‌ನೊಂದಿಗೆ ಪಾಲುದಾರಿಕೆ ಹೊಂದಲು ನಮಗೆ ಸಂತೋಷವಾಗಿದೆ. ಹಸಿರು ಭವಿಷ್ಯಕ್ಕೆ ಕೊಡುಗೆ ನೀಡುವ ಧ್ಯೇಯವನ್ನು ಹೊಂದಿರುವುದಾಗಿ ಹೇಳಿದರು.
ನಮ್ಮ ಸುಧಾರಿತ ಎಲೆಕ್ಟ್ರಿಕ್ ಸ್ಕೂಟರ್ ಹಲವು ಪ್ರಯೋಜನಗಳು ನೀಡಲಿದ್ದು, ವಿಶಾಲವಾದ ಪ್ರೇಕ್ಷಕರಿಗೆ ಚೇತಕ್ 2903, ಅದರ ದೃಢವಾದ ವಿನ್ಯಾಸ ಮತ್ತು ಉತ್ಕೃಷ್ಟ ವೈಶಿಷ್ಟ್ಯಗಳೊಂದಿಗೆ, ಪ್ರತಿ ಗ್ರಾಹಕರು ಮತ್ತು ಅವರ ಕುಟುಂಬಗಳಿಗೆ ಅನುಕೂಲವಾಗುವುದನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಗುರಿಯಾಗಿದೆ. ವಿಶ್ವಾಸಾರ್ಹತೆ ಮತ್ತು ಪರಿಸರ ಸ್ನೇಹಪರತೆಗೆ ಚೇತಕ್ ಹೆಸರುವಾಸಿಯಾಗಿದೆ.

KPKB ಬಗ್ಗೆ: ಕೇಂದ್ರೀಯ ಪೊಲೀಸ್ ಕಲ್ಯಾಣ್ ಭಂಡಾರ್ ಅನ್ನು 2006 ರಲ್ಲಿ ಕೇಂದ್ರ ಗೃಹ ಸಚಿವಾಲಯದ ಕಲ್ಯಾಣ ಉಪಕ್ರಮವಾಗಿ ಸ್ಥಾಪಿಸಲಾಯಿತು. ಇದು BSF, CRPF, CISF, ITBP, SSB ಮತ್ತು ಅಸ್ಸಾಂ ರೈಫಲ್ಸ್ ಅನ್ನು ಒಳಗೊಂಡಿರುವ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಅಗತ್ಯತೆಗಳನ್ನು ಪೂರೈಸುತ್ತದೆ. ಜೊತೆಗೆ IB, BPRD, ಮತ್ತು NCRB ನಂತಹ ವಿವಿಧ ಕೇಂದ್ರೀಯ ಪೊಲೀಸ್ ಸಂಸ್ಥೆಗಳಿಗೆ ವಿಸ್ತರಿಸುತ್ತವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








