ಬಜಾಜ್ ಚೇತಕ್ ಇವಿ ಸ್ಕೂಟರ್ ಬುಕಿಂಗ್ಸ್ ಸುನಾಮಿ: ರಿವರ್ಸ್ ಗೇರ್ ಕೂಡ ಇದೆ!

ಬಜಾಜ್ ಆಟೋ ಲಿಮಿಟೆಡ್‌ನ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಜುಲೈ ತಿಂಗಳಿನಲ್ಲಿ ಬರೋಬ್ಬರಿ 20,000 ಬುಕಿಂಗ್‌ಗಳನ್ನು ಸಾಧಿಸಿ ದಾಖಲೆ ನಿರ್ಮಿಸಿದೆ. ಹೊಸದಾಗಿ ಪರಿಚಯಿಸಲಾದ ಈ ಚೇತಕ್ 2901 ಸ್ಕೂಟರ್ ರೂ. 95,998/- (ಎಕ್ಸ್ ಶೋ ರೂಂ ಬೆಂಗಳೂರು) ಬೆಲೆಯೊಂದಿಗೆ ಗ್ರಾಹಕರಲ್ಲಿ ವಿಶ್ವಾಸಾರ್ಹ ಸ್ಕೂಟರ್ ಎಂದೆನಿಸಿಕೊಂಡಿದೆ. ಜೊತೆಗೆ ಸಣ್ಣ ಪಟ್ಟಣಗಳಲ್ಲಿಯೂ ಚೇತಕ್ ಅನುಭವ ಕೇಂದ್ರಗಳು ಮತ್ತು ಬಜಾಜ್ ಡೀಲರ್‌ಶಿಪ್‌ಗಳ ವಿಸ್ತರಣೆಯು ಸ್ಕೂಟರ್ ಮಾರಾಟದಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ. ಸದ್ಯ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಈಗ ದೇಶದ 2000 ಮಾರಾಟ ಮಳಿಗೆಗಳಲ್ಲಿ ಖರೀದಿಗೆ ಲಭ್ಯವಿದೆ.

ಚೇತಕ್ ಲೈನ್‌ಅಪ್‌ನಲ್ಲಿ ಅತ್ಯಂತ ಕೈಗೆಟುಕುವ ಮಾದರಿಯಾಗಿ, ಚೇತಕ್ 2901 ಸ್ಕೂಟರ್ ಒಮ್ಮೆ ಚಾರ್ಜ್‌ ಮಾಡಿದ್ರೆ 123 ಕಿ.ಮೀಗಳ ಪ್ರಭಾವಶಾಲಿ ರೇಂಜ್ ನೀಡುತ್ತದೆ. ಕಲರ್ ಡಿಜಿಟಲ್ ಕನ್ಸೋಲ್, ಅಲಾಯ್ ವೀಲ್ಸ್ ಮತ್ತು ಬ್ಲೂಟೂತ್ ಕನೆಕ್ಟಿವಿಟಿಯಂತಹ ವೈಶಿಷ್ಟ್ಯಗಳೊಂದಿಗೆ ಸ್ಕೂಟರ್ ಅತ್ಯಾಧುನಿಕವಾಗಿದ್ದು, ಗ್ರಾಹಕರಲ್ಲಿ ಉತ್ತಮ ಬೇಡಿಕೆಯನ್ನು ಪಡೆದುಕೊಳ್ಳುತ್ತಿದೆ.

chetak-electric-scooter-bookings-crossed-20k-milestone-in-july

ರೈಡರ್ ಸೌಕರ್ಯ ಮತ್ತು ಅನುಕೂಲತೆಯನ್ನು ಹೆಚ್ಚಿಸಲು ಹಿಲ್ ಹೋಲ್ಡ್, ರಿವರ್ಸ್ ಗೇರ್, ಸ್ಪೋರ್ಟ್ ಮತ್ತು ಎಕಾನಮಿ ಮೋಡ್‌ಗಳು, ಕರೆ ಮತ್ತು ಮ್ಯೂಸಿಕ್ ಕಂಟ್ರೋಲ್‌, 'ಫಾಲೋ ಮಿ ಹೋಮ್' ಲೈಟ್‌ಗಳು ಮತ್ತು ಬ್ಲೂಟೂತ್ ಅಪ್ಲಿಕೇಶನ್ ಸಂಪರ್ಕದಂತಹ ವೈಶಿಷ್ಟ್ಯಗಳನ್ನು ಸಕ್ರಿಯಗೊಳಿಸಲು ಲೈಫ್‌ಟೈಮ್ ಟೆಕ್ ಪ್ಯಾಕ್‌ನೊಂದಿಗೆ ಗ್ರಾಹಕರು ಅಪ್‌ಗ್ರೇಡ್ ಮಾಡುವ ಆಯ್ಕೆಯನ್ನು ನೀಡಲಾಗಿದೆ.

ಐದು ಅತ್ಯಾಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ: ಕೆಂಪು, ಬಿಳಿ, ಕಪ್ಪು, ನಿಂಬೆ ಹಳದಿ ಮತ್ತು ಅಜೂರ್ ನೀಲಿ ಬಣ್ಣಗಳಲ್ಲಿ ಚೇತಕ್ 2901 ಸ್ಕೂಟರ್ ಖರೀದಿಗೆ ಲಭ್ಯವಿದೆ. ವಿಶ್ವಾಸಾರ್ಹ ಸವಾರಿಯನ್ನು ಬಯಸುವ ಆಧುನಿಕ ಭಾರತೀಯ ಕುಟುಂಬಕ್ಕೆ ಈ ಸ್ಕೂಟರ್ ಸೂಕ್ತವಾಗಿದೆ. ನಿಮ್ಮ ಪ್ರಯಾಣದ ನಿರ್ವಹಣಾ ವೆಚ್ಚದಲ್ಲಿ ಉಳಿತಾಯವಾಗಲಿದೆ ಎಂದು ಕಂಪನಿ ಹೇಳಿದೆ.

chetak-electric-scooter-bookings-crossed-20k-milestone-in-july

ಪ್ರಸ್ತುತ ದೇಶೀಯವಾಗಿ ಈ ಸ್ಕೂಟರ್ ಚೇತಕ್ 2901, ಅರ್ಬೇನ್ ಮತ್ತು ಪ್ರೀಮಿಯಂ ಎಂಬ ಮೂರು ವೇರಿಯೆಂಟ್ ಆಯ್ಕೆಗಳಲ್ಲಿ ಸಿಗುತ್ತದೆ. ಬಜಾಜ್ ಚೇತಕ್ 2901 ಎಲೆಕ್ಟ್ರಿಕ್ ಸ್ಕೂಟರ್ ರೂ.95,998 ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. ಇದು 2.88 ಕೆಡಬ್ಲ್ಯೂಹೆಚ್ ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಒಳಗೊಂಡಿದ್ದು, ಭರ್ತಿ ಚಾರ್ಜ್‌ನಲ್ಲಿ 123 ಕಿ.ಮೀ ರೇಂಜ್ (ಮೈಲೇಜ್) ಕೊಡುತ್ತದೆ. 63 ಕೆಎಂಪಿಹೆಚ್ ಟಾಪ್ ಸ್ಪೀಡ್ ಸಹ ಹೊಂದಿದೆ.

ಬಜಾಜ್ ಚೇತಕ್ ಪ್ರೀಮಿಯಂ ಮಾದರಿಯು ರೂ.1.47 ಲಕ್ಷ (ಎಕ್ಸ್ ಶೋರೂಂ) ಬೆಲೆಯನ್ನು ಹೊಂದಿದೆ. 3.2 ಕೆಡಬ್ಲ್ಯೂಹೆಚ್ ಸಾಮರ್ಥ್ಯದ ಬ್ಯಾಟರಿಯನ್ನು ಪಡೆದಿದ್ದು, ಸಂಪೂರ್ಣ ಚಾರ್ಜ್‌ನಲ್ಲಿ 127 ಕಿ.ಮೀ ಕ್ರಮಿಸುತ್ತದೆ. 73 ಕೆಎಂಪಿಹೆಚ್ ಟಾಪ್ ಸ್ಪೀಡ್ ಹೊಂದಿದೆ. ಇದರ ಬ್ಯಾಟರಿ ಪ್ಯಾಕ್ 3.15 ಗಂಟೆಯಲ್ಲಿ ಶೇಕಡ 0-80% ಚಾರ್ಜ್ ಆಗುತ್ತದೆ.

chetak-electric-scooter-bookings-crossed-20k-milestone-in-july

ಬಜಾಜ್ ಚೇತಕ್ ಅರ್ಬೇನ್ ರೂಪಾಂತರವು ರೂ.1.23 ಲಕ್ಷ ಎಕ್ಸ್ ಶೋರೂಂ ದರವನ್ನು ಪಡೆದಿದೆ. 2.9 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ಒಳಗೊಂಡಿದ್ದು, ಪೂರ್ತಿ ಚಾರ್ಜ್‌ನಲ್ಲಿ 113 ರಿಂದ 127 ಕಿ.ಮೀ ಓಡುತ್ತದೆ. ಇದರಲ್ಲಿರುವ ಬ್ಯಾಟರಿಯು ಶೇಕಡ 0-80% ಚಾರ್ಜ್ ಆಗಲು ಸುಮಾರು 3.15 ಗಂಟೆ ತೆಗೆದುಕೊಳ್ಳುತ್ತದೆ. ಮೇಲಿನ ಎರಡು ಸ್ಕೂಟರ್‌ಗಳಿಗೆ ಹೋಲಿಸಿದರೆ ಹೆಚ್ಚುವರಿ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, August 1, 2024, 8:30 [IST]
English summary
Chetak electric scooter bookings crossed 20k milestone in july
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+