EMotorad: ಡ್ರೈವಿಂಗ್ ಲೈಸೆನ್ಸ್ ಬೇಕಿಲ್ಲ.. ಹೊಸ ಇ-ಸೈಕಲ್ ಬಿಡುಗಡೆ, ಭಾರೀ ಕಡಿಮೆ ಬೆಲೆ!
ಪುಣೆ ಮೂಲದ ಇಮೊಟೊರಾಡ್ (EMotorad) ಜನಪ್ರಿಯ ಇ-ಸೈಕಲ್ ತಯಾರಕ ಕಂಪನಿಯಾಗಿ ಮನೆ ಮಾತಾಗಿದೆ. ಶೂನ್ಯ ಹೊರಸೂಸುವಿಕೆಯ ವಾಹನಗಳನ್ನು ಬೆಂಬಲಿಸುವ ಹಿನ್ನೆಲೆ, ಟೀಮ್ ಇಂಡಿಯಾ ಮಾಜಿ ನಾಯಕ ಎಂ.ಎಸ್ ಧೋನಿ (M.S.Dhoni) ಅವರು ಕೂಡ ಈ ಕಂಪನಿಯಲ್ಲಿ ಹೂಡಿಕೆ ಮಾಡಿದ್ದಾರೆ. ದೇಶೀಯ ಮಾರುಕಟ್ಟೆಯಲ್ಲಿ ಇಮೊಟೊರಾಡ್ ಮಾರಾಟಗೊಳಿಸುವ ಇ-ಸೈಕಲ್‌ಗಳು ಎಲ್ಲ ವಯೋಮಾನದ ಗ್ರಾಹಕರನ್ನು ಆಕರ್ಷಿಸಿವೆ. ಸದ್ಯ, ಕಂಪನಿಯು ಹೊಚ್ಚ ಹೊಸ ಎಲೆಕ್ಟ್ರಿಕ್ ಸೈಕಲ್‌ವೊಂದನ್ನು ಮಾರಾಟಕ್ಕೆ ತಂದಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ನೂತನ ಇಮೊಟೊರಾಡ್ ಎಸ್‌ಟಿ-ಎಕ್ಸ್ (EMotorad ST-X) ಇ-ಸೈಕಲ್ ಅದ್ದೂರಿಯಾಗಿ ಬುಧವಾರ ಬಿಡುಗಡೆಗೊಂಡಿದ್ದು, ಅತಿಕಡಿಮೆ ಬೆಲೆಯಲ್ಲಿಯೂ ಗ್ರಾಹಕರ ಖರೀದಿಗೆ ದೊರೆಯುತ್ತದೆ. ಇದು ಕೇವಲ ರೂ.29,999 ದರವನ್ನು ಪಡೆದಿದೆ. ಈ ಬೆಲೆಯಲ್ಲಿ ಪ್ರಿ - ಬುಕ್ಕಿಂಗ್ ಮಾಡಿದ ಗ್ರಾಹಕರಿಗೆ ಮಾತ್ರ ನೂತನ 'ಎಸ್‌ಟಿ-ಎಕ್ಸ್' ಇ-ಸೈಕಲ್ ಲಭ್ಯವಾಗಲಿದೆ.

ಆಸಕ್ತ ಗ್ರಾಹಕರು ಈ ಹೊಚ್ಚ ಹೊಸ ಇಮೊಟೊರಾಡ್ ಎಸ್‌ಟಿ-ಎಕ್ಸ್ ಇ-ಸೈಕಲ್‌ನ್ನು ಕಂಪನಿ ಅಧಿಕೃತ ವೆಬ್‌ಸೈಟ್ ಅಥವಾ ಇ-ಕಾಮರ್ಸ್ ತಾಣಗಳಾದ ಅಮೆಜಾನ್ ಹಾಗೂ ಫ್ಲಿಪ್‌ಕಾರ್ಟ್‌ನಲ್ಲಿ ಪ್ರಿ - ಬುಕ್ಕಿಂಗ್ ಮಾಡಬಹುದು. ನೂತನ ಇ-ಸೈಕಲ್, ಹಲವು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮೀರಿಸುವಂತಿದ್ದು, ಜೊತೆಗೆ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ.
ಈ ಇಮೊಟೊರಾಡ್ ಎಸ್‌ಟಿ-ಎಕ್ಸ್ ಇ-ಸೈಕಲ್ 36ವಿ 7.65ಎಹೆಚ್ ಸಾಮರ್ಥ್ಯದ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಮತ್ತು 36ವಿ 250ಡಬ್ಲ್ಯೂ ರೇರ್ ಹಬ್ ಮೋಟಾರ್ ಆಯ್ಕೆಯನ್ನು ಹೊಂದಿದೆ. 12 ಮ್ಯಾಗ್ನೆಟ್ ಸೆನ್ಸರ್‌ಗಳೊಂದಿಗೆ 5 ಲೆವೆಲ್ ಪೆಡಲ್ ಅಸಿಸ್ಟ್‌ನ್ನು ಪಡೆದಿದೆ. ಬೀಜ್ & ಟೀಲ್ ಬ್ಲ್ಯೂ ಎಂಬ ಎರಡು ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿಯೂ ಖರೀದಿಗೆ ಲಭ್ಯವಿದೆ.
ನೂತನ ಇ-ಸೈಕಲ್ ಪೆಡಲ್ ಅಸಿಸ್ಟ್ ಸಿಸ್ಟಮ್‌ನಲ್ಲಿ 35 ಕಿಲೋಮೀಟರ್ ಹಾಗೂ ಬ್ಯಾಟರಿ ಪ್ಯಾಕ್ ಬಳಕೆಯಲ್ಲಿ 30 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ. ಇದರ ಬ್ಯಾಟರಿಯು 4 ರಿಂದ 5 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗಿಬಿಡುತ್ತದೆ. ಕ್ಲಸ್ಟರ್ ಸಿ2 ಡಿಸ್‌ಪ್ಲೇಯಂತಹ ವೈಶಿಷ್ಟ್ಯವನ್ನು ಹೊಂದಿದೆ. ಸವಾರರ ಸುರಕ್ಷತೆಗಾಗಿ ಇಂಟಿಗ್ರೇಟೆಡ್ ಹಾರ್ನ್ ಮತ್ತು ಫ್ರಂಟ್ ಲೈಟ್‌ನ್ನು ಒಳಗೊಂಡಿದೆ.
ಇಮೊಟೊರಾಡ್ ಕಂಪನಿ ವಿವಿಧ ಇ-ಸೈಕಲ್‌ಗಳನ್ನು ಮಾರಾಟ ಮಾಡುತ್ತದೆ. ಅವುಗಳಲ್ಲಿ ಟಿ-ರೆಕ್ಸ್ ಪ್ಲಸ್ ವಿ3 (T-Rex+ V3) ಪ್ರಮುಖವಾಗಿದ್ದು, ರೂ.44,999 ಬೆಲೆಯನ್ನು ಹೊಂದಿದೆ. 10.2 ಎಹೆಚ್ ಬ್ಯಾಟರಿ ಆಯ್ಕೆಯನ್ನು ಒಳಗೊಂಡಿದೆ. ಭರ್ತಿ ಚಾರ್ಜ್‌ನಲ್ಲಿ 50 ಕಿಲೋಮೀಟರ್‌ವರೆಗೂ ಕ್ರಮಿಸುತ್ತದೆ. 25 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಪಡೆದಿದೆ.
ಇಮೊಟೊರಾಡ್ ಡೂಡಲ್ ವಿ2 (EMotorad Doodle V2) ಸಹ ಖರೀದಿಗೆ ಲಭ್ಯವಿದೆ. ಇದು ಪ್ರಖ್ಯಾತ ಇ-ಸೈಕಲ್ ಆಗಿದೆ. ರೂ.49,999 ದರವನ್ನು ಪಡೆದಿದೆ. 10.4 ಎಹೆಚ್ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದ್ದು, ಪೂರ್ತಿ ಚಾರ್ಜ್‌ನಲ್ಲಿ 35+ ಕಿಲೋಮೀಟರ್‌ವರೆಗೂ ಓಡುತ್ತದೆ. 25 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ.
ಕಡೆಯದಾಗಿ ಇಮೊಟೊರಾಡ್ ಟಿ-ರೆಕ್ಸ್ ಏರ್ (EMotorad T-Rex Air) ಕುರಿತಂತೆ ಹೇಳುವುದಾದರೆ, ಈ ಹೊಸ ಇ-ಸೈಕಲ್ ರೂ.34,999 ಬೆಲೆಯನ್ನು ಹೊಂದಿದೆ. 10.2 ಎಹೆಚ್ ಬ್ಯಾಟರಿ ಪ್ಯಾಕ್ ಒಳಗೊಂಡಿದ್ದು, ಸಂಪೂರ್ಣ ಚಾರ್ಜ್‌ನಲ್ಲಿ 50 ಕಿಲೋಮೀಟರ್‌ವರೆಗೂ ರೇಂಜ್ (ಮೈಲೇಜ್) ನೀಡುತ್ತದೆ. 25 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








