EMotorad: ಧೋನಿ ಬೆಂಬಲಿತ ಕಂಪನಿಯಿಂದ ಹೊಸ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆ.. ಬೆಲೆ ಎಷ್ಟು, ವಿಶೇಷತೆಗಳೇನು?

ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್.ಧೋನಿ ಬೆಂಬಲಿತ ಇಮೊಟೊರಾಡ್ (EMotorad) ಕಂಪನಿ, ಎಲೆಕ್ಟ್ರಿಕ್ ಸೈಕಲ್ ತಯಾರಿಕೆಯಲ್ಲಿ ಮುಂಚೂಣಿಯಲಿದೆ. ದೇಶೀಯ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ನವೀನ ವಿನ್ಯಾಸ ಹಾಗೂ ಆಕರ್ಷಕ ವೈಶಿಷ್ಟ್ಯ ಹೊಂದಿರುವ ಹಲವು ಎಲೆಕ್ಟ್ರಿಕ್ ಸೈಕಲ್‌ಗಳನ್ನು ಮಾರಾಟ ಮಾಡುತ್ತಿದೆ. ಮಂಗಳವಾರ ಹೊಚ್ಚ ಹೊಸ ಟಿ-ರೆಕ್ಸ್ ಪ್ಲಸ್ (T-rex+) ಎಲೆಕ್ಟ್ರಿಕ್ ಸೈಕಲ್‌ನ್ನು ಅದ್ದೂರಿಯಾಗಿ ಬಿಡುಗಡೆ ಮಾಡಿದೆ. ಬನ್ನಿ.. ಈ ನೂತನ ಎಲೆಕ್ಟ್ರಿಕ್ ಸೈಕಲ್‌ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ಮಾಹಿತಿ ತಿಳಿಯೋಣ.

ಹೊಸ ಇಮೊಟೊರಾಡ್ ಟಿ-ರೆಕ್ಸ್ ಪ್ಲಸ್ (EMotorad T-rex+) ಎಲೆಕ್ಟ್ರಿಕ್ ಸೈಕಲ್ ರೂ.44,999 ಬೆಲೆಯನ್ನು ಹೊಂದಿದೆ. ಈಗಾಗಲೇ ಪ್ರಿ-ಬುಕ್ಕಿಂಗ್ ತೆರೆಯಲಾಗಿದೆ. ಆಸಕ್ತ ಗ್ರಾಹಕರು ಕಂಪನಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ರೂ.1,999 ಮುಂಗಡ ಹಣ ಪಾವತಿಸುವ ಮೂಲಕ ಕಾಯ್ದಿರಿಸಬಹುದು. ಆಗಸ್ಟ್ 15ರ ಮೊದಲು ಪ್ರಿ-ಬುಕ್ಕಿಂಗ್ ಮಾಡಿದ ಖರೀದಿದಾರರಿಗೆ ಈ ಎಲೆಕ್ಟ್ರಿಕ್ ಸೈಕಲ್‌ಗೆ ಸಂಬಂಧಿಸಿದಂತೆ ರೂ.2,000 ಮೌಲ್ಯದ ಉಚಿತ ಪರಿಕರ (ಫ್ರೀ ಆಕ್ಸೆಸರೀಸ್)ಗಳು ಲಭ್ಯವಾಗಲಿವೆ.

EMotorad T-rex Launch In India Rs 44 999 Price details

ನೂತನ ಇಮೊಟೊರಾಡ್ ಟಿ-ರೆಕ್ಸ್ ಪ್ಲಸ್ ಎಲೆಕ್ಟ್ರಿಕ್ ಸೈಕಲ್, 36ವಿ 10.2 ಎಹೆಚ್ ಸಾಮರ್ಥ್ಯದ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಹಾಗೂ 50ಡಬ್ಲ್ಯೂ ರೇರ್ ಹಬ್ ಮೋಟಾರ್ ಪಡೆದಿದೆ. ಜೊತೆಗೆ 7 ಶಿಮಾನೋ ಆಲ್ಟಸ್ ಗೇರ್, 7-ಸ್ಪೀಡ್ ಡ್ರೈವ್ ಟ್ರೈನ್‌ನ್ನು ಒಳಗೊಂಡಿದೆ. ಥ್ರೊಟಲ್‌ನಲ್ಲಿ (ಬ್ಯಾಟರಿ ಬಳಕೆ) 35ಕ್ಕೂ ಹೆಚ್ಚು ಕಿಲೋಮೀಟರ್‌ ಮತ್ತು ಪೆಡಲ್ ಅಸಿಸ್ಟ್ ಸಿಸ್ಟಮ್‌ನಲ್ಲಿ (ಪಿಎಎಸ್) 45 ಕಿಲೋಮೀಟರ್‌ಗೂ ಅಧಿಕ ರೇಂಜ್ (ಮೈಲೇಜ್) ನೀಡುತ್ತದೆ.

ಇದರಲ್ಲಿರುವ ಬ್ಯಾಟರಿ ಪ್ಯಾಕ್ ಕೇವಲ 3.5 ಗಂಟೆಗಳಲ್ಲಿ ಶೇಕಡ 80% ಚಾರ್ಜ್ ಆಗುತ್ತದೆ. ಸ್ಟೆಮ್-ಇಂಟಿಗ್ರೇಟೆಡ್ ಎಂ8 ಎಲ್‌ಸಿಡಿ ಡಿಸ್ಪ್ಲೇ, ಅಲ್ಯೂಮಿನಿಯಂ ಅಲಾಯ್ ವೀಲ್‌ಗಳು, ಆಟೋ ಕಟ್ ಆಫ್ ಡಿಸ್ಕ್ ಬ್ರೇಕ್, ಇಂಟಿಗ್ರೇಟೆಡ್ ಹಾರ್ನ್‌ ಮತ್ತು ಫ್ರಂಟ್ ಲೈಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. 5-ಪೆಡಲ್ ಅಸಿಸ್ಟ್ ಮೋಡ್‌ಗಳನ್ನು ಹೊಂದಿದೆ.

ಈ 'ಇಮೊಟೊರಾಡ್' ಕಂಪನಿ ವಿವಿಧ ಎಲೆಕ್ಟ್ರಿಕ್ ಸೈಕಲ್‌ಗಳನ್ನು ಮಾರಾಟ ಮಾಡುತ್ತಿದೆ. ಅವುಗಳಲ್ಲಿ ಡೂಡಲ್ ವಿ3 (Doodle V3) ಪ್ರಮುಖವಾಗಿದ್ದು, ರೂ.52,499 ದರದಲ್ಲಿ ಖರೀದಿಗೆ ಸಿಗುತ್ತದೆ. 12.75 ಎಹೆಚ್ ಸಾಮರ್ಥ್ಯ ಬ್ಯಾಟರಿ ಪ್ಯಾಕ್ ಒಳಗೊಂಡಿದ್ದು, 60 ಕಿಲೋಮೀಟರ್‌ಗೂ ಹೆಚ್ಚು ರೇಂಜ್ ಕೊಡುತ್ತದೆ. 25 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಪಡೆದಿದೆ.

ಇಮೊಟೊರಾಡ್ ಇಎಂಎಕ್ಸ್ ಪ್ಲಸ್ (EMotorad EMX+) ಎಲೆಕ್ಟ್ರಿಕ್ ಸೈಕಲ್‌ ರೂ.54,999 ಬೆಲೆಯನ್ನು ಹೊಂದಿದೆ. 13 ಎಹೆಚ್ ಬ್ಯಾಟರಿ ಒಳಗೊಂಡಿದ್ದು, 80 ಕಿಲೋಮೀಟರ್‌ಗೂ ಅಧಿಕ ದೂರ ಓಡುತ್ತದೆ. 25 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಪಡೆದಿದೆ. ನಿಯಾನ್ ಗ್ರೀನ್ ಹಾಗೂ ಆಕ್ವಾ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದ್ದು, ಡುಯಲ್ ಸಸ್ಪೆನ್ಷನ್ ಸೆಟಪ್ ಹೊಂದಿದೆ.

ಇಮೊಟೊರಾಡ್ ಟಿ-ರೆಕ್ಸ್ ಏರ್ (EMotorad T-Rex Air) ಎಲೆಕ್ಟ್ರಿಕ್ ಸೈಕಲ್ ಬಗ್ಗೆ ಹೇಳುವುದಾದರೆ, ಇದು ರೂ.34,999 ದರವನ್ನು ಪಡೆದಿದೆ. 10.2 ಎಹೆಚ್ ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದೆ. 50 ಕಿಲೋಮೀಟರ್‌ಗೂ ಹೆಚ್ಚು ರೇಂಜ್ (ಮೈಲೇಜ್) ನೀಡುತ್ತದೆ. 25 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, August 7, 2024, 10:51 [IST]
English summary
Emotorad t rex plus launch in india rs 44999 price details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+