Ola: ಮೊದಲ ಓಲಾ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಯಾವಾಗ? ಹೊಸ ಮಾಹಿತಿ ಬಹಿರಂಗ!
ಓಲಾ ಎಲೆಕ್ಟ್ರಿಕ್ (Ola Electric) ಕಂಪನಿಯು ಪ್ರಸ್ತುತ ತನ್ನ ಎಸ್ 1 ಪ್ರೊ, ಎಸ್ 1 ಏರ್ ಮತ್ತು ಎಸ್ 1 ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್‌ಗಳೊಂದಿಗೆ ಭಾರತದಲ್ಲಿ ನಂ.1 ಸ್ಥಾನದಲ್ಲಿದೆ. ಅಲ್ಲದೇ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಶೇಕಡಾ 30 ಕ್ಕಿಂತ ಹೆಚ್ಚು ಮಾರುಕಟ್ಟೆ ಪಾಲನ್ನು ಹೊಂದಿದೆ. ಇದೀಗ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಲು 2026ರ ಮೊದಲಾರ್ಧದ ವೇಳೆಗೆ ಮೊದಲ ಎಲೆಕ್ಟ್ರಿಕ್ ಮೋಟಾರ್ ಸೈಕಲ್ ಅನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಓಲಾ ಎಲೆಕ್ಟ್ರಿಕ್ ಕಂಪನಿಯು ದೀರ್ಘಾವಧಿಯಲ್ಲಿ ತನ್ನ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಪೋರ್ಟ್‌ಫೋಲಿಯೊವನ್ನು ವಿಸ್ತರಿಸುವ ಮಹತ್ವಾಕಾಂಕ್ಷೆಗಳನ್ನು ಹೊಂದಿರುವುದಾಗಿ ಹೇಳಿಕೊಂಡಿದೆ.
"ನಾವು 2025ರ ಆರ್ಥಿಕ ವರ್ಷದ ಮೊದಲಾರ್ಧದ ವೇಳೆಗೆ ಓಲಾ ಎಸ್ 1 ಎಕ್ಸ್ (2 ಕಿಲೋವ್ಯಾಟ್) ಮತ್ತು ಓಲಾ ಎಸ್ 1 ಎಕ್ಸ್ (3 ಕಿಲೋವ್ಯಾಟ್) ಸೇರಿದಂತೆ ಹೊಸ ಮೋಟಾರ್‌ಸೈಕಲ್ ಮಾದರಿಗಳಾದ ಡೈಮಂಡ್‌ಹೆಡ್, ಅಡ್ವೆಂಚರ್, ರೋಡ್‌ಸ್ಟರ್ ಮತ್ತು ಕ್ರೂಸರ್ ಅನ್ನು 2026ರ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ವಿತರಿಸಲು ಯೋಜಿಸಿದ್ದೇವೆ ಎಂದು ಓಲಾ ಎಲೆಕ್ಟ್ರಿಕ್ ಹೇಳಿದೆ.

ಓಲಾ ತನ್ನ ನಾಲ್ಕು ಎಲೆಕ್ಟ್ರಿಕ್ ಮೋಟಾರ್ ಸೈಕಲ್ ಮಾದರಿಗಳಿಗೆ ಸಾಮಾನ್ಯ ಪ್ಲಾಟ್‌ಫಾರ್ಮ್ ಅನ್ನು ಬಳಸಲು ನೋಡುತ್ತಿದೆ. ಇದು ಬ್ಯಾಟರಿ ಮತ್ತು ಮಧ್ಯಮ-ಮೌಂಟೆಡ್ ಮೋಟಾರು ವಿಶೇಷಣಗಳಲ್ಲಿ ಸ್ಥಿರತೆಯನ್ನು ಖಚಿತಪಡಿಸುತ್ತದೆ. ಹಾಗೆಯೇ ಪ್ರತಿ ಮಾದರಿಯು ವೈವಿಧ್ಯಮಯ ರೈಡಿಂಗ್ ಅಗತ್ಯಗಳನ್ನು ಪೂರೈಸಲು ವಿಭಿನ್ನ ಪವರ್ ಮತ್ತು ರೇಂಜ್ ಆಯ್ಕೆಗಳನ್ನು ನೀಡುತ್ತದೆ ಎನ್ನಲಾಗಿದೆ.
ಹಿಂದಿನ ಪ್ರಕಟಣೆಯಲ್ಲಿ, ಓಲಾ ಕ್ರೂಸರ್, ಓಲಾ ಅಡ್ವೆಂಚರ್, ಓಲಾ ರೋಡ್ ಸ್ಟರ್ ಮತ್ತು ಓಲಾ ಡೈಮಂಡ್ ಹೆಡ್ ಎಲೆಕ್ಟ್ರಿಕ್ ಮೋಟಾರ್ ಸೈಕಲ್‌ಗಳ ಯೋಜನೆಗಳನ್ನು ಅನಾವರಣಗೊಳಿಸಿತ್ತು. ಕಳೆದ ವರ್ಷ ಎಂ 1 ಸೈಬರ್ ರೇಸರ್ ಎಂಬ ಪರಿಕಲ್ಪನೆಯನ್ನು ಅನಾವರಣಗೊಳಿಸಿದ ನಂತರ ಓಲಾ ರೋಡ್ ಸ್ಟರ್‌ಗಾಗಿ ಇತ್ತೀಚೆಗೆ ಪೇಟೆಂಟ್ ಫೈಲಿಂಗ್ ಕೂಡ ಮಾಡಿ ಮಹತ್ವದ ಹೆಜ್ಜೆಯಿಟ್ಟಿದೆ.

ರೋಡ್ ಸ್ಟರ್‌ಗೆ ಪೇಟೆಂಟ್ ಮಾಡಲಾದ ಬೈಕ್ ವಿನ್ಯಾಸವು ಬೋಲ್ಡ್ ಮತ್ತು ಸ್ಪೋರ್ಟಿ ಡಿಸೈನ್ ಹೊಂದಿದೆ. ಈ ಬೈಕಿನಲ್ಲಿ ಅಲಾಯ್ ವ್ಹೀಲ್‌ಗಳಲ್ಲಿ ಅಳವಡಿಸಲಾಗಿರುವ ಆಕರ್ಷಕ ಟೈರ್‌ಗಳು, ಯುಎಸ್‌ಡಿ ಫೋರ್ಕ್‌ಗಳು ಮತ್ತು ಟ್ವಿನ್ ಡಿಸ್ಕ್ ಬ್ರೇಕ್ ಸೆಟಪ್ ಜೊತೆಗೆ ರೌಂಡ್ ಎಲ್ಇಡಿ ಹೆಡ್ ಲ್ಯಾಂಪ್ ಮತ್ತು ಟ್ಯಾಂಕ್ ಕವರ್‌ಗಳ ಮೇಲೆ ಇಂಟಿಗ್ರೇಟೆಡ್ ಎಲ್ಇಡಿ ವಿಂಕರ್‌ಗಳು ಸ್ಪೋರ್ಟಿ ಲುಕ್ ನೀಡಿವೆ.
ಇದರ ಜೊತೆಗೆ ಎಂ 1 ಸೈಬರ್ ರೇಸರ್ ವಿವರಗಳು ರಹಸ್ಯವಾಗಿದ್ದರೂ, ಅತ್ಯಾಕರ್ಷಕ ವೈಶಿಷ್ಟ್ಯಗಳೊಂದಿಗೆ ಬರುವ ಬಗ್ಗೆ ಕಂಪನಿ ಸುಳಿವು ನೀಡಿದೆ. ಫ್ಯೂಚರಿಸ್ಟಿಕ್ ಡಿಜಿಟಲ್ ಇನ್ಸ್ ಟ್ರೂಮೆಂಟ್ ಪ್ಯಾನಲ್ ಮತ್ತು ಚಾರ್ಜಿಂಗ್ ಪಾಡ್ ಹೊಂದಿರುವ ವಿಶಿಷ್ಟವಾದ ಮೂರು-ಹಂತದ ಸೀಟ್ ವಿನ್ಯಾಸವನ್ನು ಹೊಂದಿರಲಿದೆ. ಫ್ಲಶ್-ಫಿಟ್ ಟೈಲ್ ಲೈಟ್ ಘಟಕವು ಆಧುನಿಕ ವಿನ್ಯಾಸವನ್ನು ಹೊಂದಿರುವ ನಿರೀಕ್ಷೆಗಳಿವೆ.

ಓಲಾ ಎಲೆಕ್ಟ್ರಿಕ್ ಇ-ಬೈಕ್‌ಗಳು ಭಾರತದಲ್ಲಿ ಇದುವರೆಗೆ ಕಂಡಿರದ ಅತ್ಯಂತ ಪವರ್‌ಫುಲ್ ಎಲೆಕ್ಟ್ರಿಕ್ ಮೋಟರ್ ಅನ್ನು ಹೊಂದಿರುತ್ತವೆ. ಜೊತೆಗೆ ಸ್ಕೂಟರ್‌ಗಳಿಗೆ ಹೋಲಿಸಿದರೆ ದೊಡ್ಡ ಬ್ಯಾಟರಿ ಪ್ಯಾಕ್‌ಗಳನ್ನು ಹೊಂದಿರುತ್ತವೆ. ಕಂಪನಿಯು ತನ್ನ ಅಸ್ತಿತ್ವದಲ್ಲಿರುವ ಸ್ಕೂಟರ್ ಶ್ರೇಣಿಯೊಂದಿಗೆ ಕನಿಷ್ಠ ಭಾಗಗಳ ಹಂಚಿಕೆಗೆ ಒತ್ತು ನೀಡುತ್ತದೆ, ನಾವೀನ್ಯತೆಗೆ ತನ್ನ ಬದ್ಧತೆಯನ್ನು ಒತ್ತಿಹೇಳುತ್ತದೆ ಎಂದು ಓಲಾ ಸಿಇಒ ಭವಿಷ್ ಅಗರ್ವಾಲ್ ಹೇಳಿದ್ದರು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








