ಅಗ್ಗದ ಬೆಲೆಯಲ್ಲಿ ಲಭ್ಯವಿರುವ ಬೆಸ್ಟ್ ಇವಿ ಸ್ಕೂಟರ್! ಒಮ್ಮೆ ಚಾರ್ಜ್... 110 ಕಿ.ಮೀ ರೇಂಜ್!

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕರಾದ ಫ್ಯೂಜಿಯಾಮಾ ಇವಿ (Fujiyama EV), ಇತ್ತೀಚೆಗೆ ತನ್ನ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಆದ 'ಕ್ಲಾಸಿಕ್' ಅನ್ನು ಬಿಡುಗಡೆ ಮಾಡಿದೆ. ಕಸ್ಟಮೈಸ್ ಮಾಡಬಹುದಾದ ರೈಡ್‌ ಮೋಡ್‌ಗಳು ಮತ್ತು ಆಧುನಿಕ ತಂತ್ರಜ್ಞಾನವನ್ನು ಒಳಗೊಂಡು ಅಗ್ಗದ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದು 79,999 ರೂ.ಗಳ ಎಕ್ಸ್ ಶೋರೂಂ ಬೆಲಯಲ್ಲಿ ಖರೀದಿಗೆ ಲಭ್ಯವಿದೆ. ಫ್ಯೂಜಿಯಾಮಾ ಕ್ಲಾಸಿಕ್ ಎಲೆಕ್ಟ್ರಿಕ್ ಸ್ಕೂಟರ್ ಪವರ್‌ಫುಲ್ ಎಲೆಕ್ಟ್ರಿಕ್ ಮೋಟಾರ್ ಅನ್ನು ಒಳಗೊಂಡಿದ್ದು, ಓಡಿಸುವವರು ಉತ್ಸಾಹಭರಿತ ಸವಾರಿ ಅನುಭವ ಪಡೆಯಬಹುದು ಎಂದು ಕಂಪನಿ ಭರವಸೆ ನೀಡಿದೆ.

ಹೊಸ ಫ್ಯೂಜಿಯಾಮಾ ಕ್ಲಾಸಿಕ್ ಎಲೆಕ್ಟ್ರಿಕ್ ಸ್ಕೂಟರ್ ನಗರ ಪ್ರಯಾಣಕ್ಕೆ ಅತ್ಯುತ್ತಮ ಆಯ್ಕೆಯಾಗಿದೆ. ಇತರ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಹೋಲಿಸಿಕೊಂಡರೆ ಭಿನ್ನವಾಗಿದ್ದು, ಅತ್ಯುತ್ತಮ ಪ್ರಯಾಣ ಅನುಭವವನ್ನು ಒದಗಿಸುತ್ತದೆ ಎಂದು ಕಂಪನಿ ಹೇಳಿದೆ. ಫ್ಯೂಜಿಯಾಮಾ ಕ್ಲಾಸಿಕ್ ಅನ್ನು ಕೇವಲ 1,999 ರೂ.ಗಳ ಶುಲ್ಕದೊಂದಿಗೆ ಬುಕ್‌ ಮಾಡಿಕೊಳ್ಳಬಹುದು.

fujiyama-classic-ev-scooter-price-features-booking-details

ಸುರಕ್ಷತೆ ಮತ್ತು ಅನುಕೂಲತೆ: ಟ್ವಿನ್ - ಬ್ಯಾರೆಲ್ ಎಲ್ಇಡಿ ಲೈಟ್‌ಗಳು ಮತ್ತು ಸುರಕ್ಷಿತ ಮತ್ತು ಸ್ಪಂದಿಸುವ ಬ್ರೇಕಿಂಗ್ ಸಿಸ್ಟಮ್‌ಗಾಗಿ ಕಾಂಬಿ-ಡ್ರಮ್ ಬ್ರೇಕ್‌ಗಳನ್ನು ಹೊಂದಿರುವ ಫ್ಯುಜಿಯಾಮಾ ಇವಿ ಕ್ಲಾಸಿಕ್, ಪ್ರತಿ ಸವಾರಿಯಲ್ಲಿ ಸುರಕ್ಷತೆಯನ್ನು ಖಚಿತಪಡಿಸುತ್ತದೆ. ಜೊತೆಗೆ, ಕೇವಲ 4 ಗಂಟೆಗಳ ತ್ವರಿತ ಚಾರ್ಜಿಂಗ್ ಸಮಯವನ್ನು ಹೊಂದಿದೆ ಎಂದು ಕಂಪನಿ ತಿಳಿಸಿದೆ.

ಈ ಕ್ಲಾಸಿಕ್ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ದೃಢವಾದ 3000-ವ್ಯಾಟ್ ಪೀಕ್ ಪವರ್‌ಮೋಟರ್ ಉತ್ತಮ ಕಾರ್ಯಕ್ಷಮತೆಯನ್ನು ಒದಗಿಸುತ್ತದೆ. ಈ ಮೋಟರ್ 60 ಕಿ.ಮೀ ಗರಿಷ್ಟ ವೇಗವನ್ನು ಹೊಂದಿದ್ದು, ಪ್ರತಿ ಚಾರ್ಜ್‌ಗೆ 110 ಕಿ.ಮೀ ವರೆಗೆ ರೇಂಜ್ ಅನ್ನು ಪಡೆಯಬಹುದು. ಹಾಗೆಯೇ ಸ್ಕೂಟರ್ ಅನ್ನು ಸಂಪೂರ್ಣ ಚಾರ್ಜ್ ಮಾಡಲು ನಾಲ್ಕು ಗಂಟೆ ತೆದುಕೊಳ್ಳುತ್ತದೆ.

ಹೊಸ ಫ್ಯೂಜಿಯಾದ ಕ್ಲಾಸಿಕ್ ಎಲೆಕ್ಟ್ರಿಕ್ ಸ್ಕೂಟರ್, ಐಒಟಿ-ಸಕ್ರಿಯಗೊಳಿಸಿದ ಲಿಥಿಯಂ ಐರನ್ ಫಾಸ್ಫೇಟ್ (ಎಲ್ಎಲ್‌ಪಿ) ಬ್ಯಾಟರಿಯನ್ನು ಒಳಗೊಂಡಿದೆ. ಈ ಬ್ಯಾಟರಿಯು ಧೀರ್ಘ ಬ್ಯಾಟರಿ ಪವರ್ ಅನ್ನು ನೀಡಲಿದ್ದು, ಸವಾರರು ರೀಚಾರ್ಜ್ ಬಗ್ಗೆ ಚಿಂತಿಸದೆ ದೀರ್ಘ ಪ್ರಯಾಣವನ್ನು ಆನಂದಿಸಬಹುದು ಎಂದು ಫ್ಯೂಜಿಯಾಮಾ ಹೇಳಿಕೊಂಡಿದೆ.

ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಬೇಡಿಕೆ ಹೆಚ್ಚಾಗಿದೆಯಾದ್ರೂ ಸದ್ಯ ಹೈಸ್ಪೀಡ್ ಇವಿಗಳ ಬೆಲೆ ಏರಿಕೆಯಾಗಿದೆ. ಕಳೆದ ವರ್ಷ ಇವಿ ಸ್ಕೂಟರ್‌ಗಳ ಬೆಲೆ ಏರಿಗೆಯಾಗಿರುವುದರಿಂದ ಗ್ರಾಹಕರು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಇಂತಹ ಸಂಧರ್ಭದಲ್ಲಿ ಫ್ಯೂಜಿಯಾಮಾ ಕಡಿಮೆ ಬೆಲೆಯಲ್ಲಿ ಕ್ಲಾಸಿಕ್ ಇವಿ ಸ್ಕೂಟರ್ ನೀಡುವ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ.

ಕ್ಲಾಸಿಕ್‌ ಇವಿ ಸ್ಕೂಟರ್ ಹಣಕ್ಕೆ ಮೌಲ್ಯ ನೀಡುವ ಭಾರತೀಯ ಗ್ರಾಹಕರಿಗೆ ಉತ್ತಮ ಆಯ್ಕೆಯಾಗಿದೆ. ಗುಣಮಟ್ಟದ ಉತ್ಪನ್ನಗಳು ಸ್ಪರ್ಧಾತ್ಮಕ ಬೆಲೆಗಳಲ್ಲಿ ಲಭ್ಯವಿರುವುದನ್ನು ಖಚಿತಪಡಿಸಿಕೊಳ್ಳುವ ಮೂಲಕ ಹಸಿರು ಭಾರತಕ್ಕೆ ಕೊಡುಗೆ ನೀಡುವುದು ನಮ್ಮ ದೃಷ್ಟಿಕೋನವಾಗಿದೆ, ಈ ಭರವಸೆಯನ್ನು ಕ್ಲಾಸಿಕ್ ಮೂಲಕ ಪೂರೈಸುವ ಗುರಿಯನ್ನು ಹೊಂದಿದ್ದೇವೆ ಎಂದು ಕಂಪನಿ ಹೇಳಿಕೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, July 3, 2024, 20:23 [IST]
English summary
Fujiyama classic ev scooter price features booking details
Read more on electric vehicles india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+