ಹೊಸ ಸ್ಕೂಟರ್ ಬಿಡುಗಡೆ: 3 ವರ್ಷ ವಾರಂಟಿ.. 110 ಕಿ.ಮೀ ಓಡುತ್ತೆ.. ರಿವರ್ಸ್ ಗೇರ್ ಕೂಡ ಇದೆ!
ಗೋದಾವರಿ ಎಲೆಕ್ಟ್ರಿಕ್ ಮೋಟಾರ್ಸ್ ಇಂದು ಫ್ಯಾಮಿಲಿ ಇ-ಸ್ಕೂಟರ್ ಎಬ್ಲು ಫಿಯೊ ಎಕ್ಸ್ (Eblu Feo X)ನ ಹೊಸ ರೂಪಾಂತರವನ್ನು ಬಿಡುಗಡೆ ಮಾಡಿದೆ. ಇದು ಕಂಪನಿಯ ಎರಡನೇ ಎಲೆಕ್ಟ್ರಿಕ್ ಸ್ಕೂಟರ್ ಆಗಿದ್ದು, ರೂ. 99,999 ಎಕ್ಸ್ ಶೋರೂಂ ಬೆಲೆಯಲ್ಲಿ ಪರಿಚಯಿಸಲಾಗಿದೆ. ಹೊಸ ಎಲೆಕ್ಟ್ರಿಕ್ ಸ್ಕೂಟರ್ 2.36 kW ಬ್ಯಾಟರಿ ಹೊಂದಿದ್ದು, ಒಮ್ಮೆ ಚಾರ್ಜ್ ಮಾಡಿದ್ರೆ 110 ಕಿ.ಮೀ ಓಡಿಸಬಹುದು. ಕಂಪನಿಯು ಸ್ಕೂಟರ್ ಮೇಲೆ 3 ವರ್ಷಗಳು ಅಥವಾ 30,000 ಕಿ.ಮೀ ವಾರಂಟಿ ನೀಡುತ್ತಿರುವುದಾಗಿ ಘೋಷಿಸಿದೆ.
ವಿಶೇಷತಗಳು: ಹೊಸ ಎಬ್ಲು ಫಿಯೊ ಸ್ಕೂಟರ್‌ನಲ್ಲಿ 2.36 kW Li-ion ಬ್ಯಾಟರಿಯನ್ನು ಅಳವಡಿಸಲಾಗಿದ್ದು, ಇದನ್ನು ಚಾರ್ಜ್ ಮಾಡಲು 60V ಸಾಮರ್ಥ್ಯದ ಹೋಮ್ ಚಾರ್ಜರ್ ಅನ್ನು ನೀಡಲಾಗುತ್ತದೆ. ಸಂಪೂರ್ಣ ಚಾರ್ಜ್ ಆಗಲು ಸ್ಕೂಟರ್ 5 ಗಂಟೆ 25 ನಿಮಿಷಗಳಷ್ಟು ಸಮಯ ತೆಗೆದುಕೊಳ್ಳುತ್ತದೆ. ಒಮ್ಮೆ ಚಾರ್ಜ್ ಆದ ಬಳಿಕ 110 ಕಿ.ಮೀ ಓಡಿಸಬಹುದು.

ಸ್ಕೂಟರ್‌ನಲ್ಲಿ ಎಕಾನಮಿ, ನಾರ್ಮಲ್ ಮತ್ತು ಪವರ್ ಎಂಬ ಮೂರು ರೈಡ್ ಮೋಡ್‌ಗಳನ್ನು ಸಹ ನೀಡಲಾಗಿದ್ದು, 60 ಕಿ.ಮೀ ಟಾಪ್ ಸ್ಪೀಡ್ ತಲುಪುವ ಸಾಮರ್ಥ್ಯವನ್ನು ಹೊಂದಿದೆ. ಬ್ಯಾಟರಿ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಮತ್ತು ಡ್ರೈವಿಂಗ್ ರೇಂಜ್ ಹೆಚ್ಚಿಸಲು ಪುನರುತ್ಪಾದಕ ಬ್ರೇಕಿಂಗ್ (regenerative braking) ವ್ಯವಸ್ಥೆಯನ್ನು ನೀಡಲಾಗಿದೆ.
ಬಣ್ಣಗಳು & ಹಾರ್ಡ್‌ವೇರ್: ಸಯಾನ್ ಬ್ಲೂ, ವೈನ್ ರೆಡ್, ಜೆಟ್ ಬ್ಲಾಕ್, ಟೆಲಿ ಗ್ರೇ, ಟ್ರಾಫಿಕ್ ವೈಟ್ ಎಂಬ ಐದು ಬಣ್ಣಗಳ ಆಯ್ಕೆಯನ್ನು ನೀಡಲಾಗಿದೆ. ಟೆಲಿಸ್ಕೋಪಿಕ್ ಫ್ರಂಟ್ ಸಸ್ಪೆನ್ಷನ್ ಮತ್ತು ಡ್ಯುಯಲ್ ಟ್ಯೂಬ್ ಟ್ವಿನ್ ಶಾಕರ್ ನೀಡಲಾಗಿದೆ. ಸುರಕ್ಷತೆಗಾಗಿ ಮುಂಭಾಗ ಮತ್ತು ಹಿಂಭಾಗದಲ್ಲಿ ಸಿಬಿಎಸ್ ಡಿಸ್ಕ್ ಬ್ರೇಕ್ ಸಹ ನೀಡಲಾಗಿದೆ.

ಹೊಸ ಎಬ್ಲು ಫಿಯೊ ಸ್ಕೂಟರ್ ರಾತ್ರಿ ಚಾಲನೆಗಾಗಿ ಹೈ - ರೆಸಲ್ಯೂಶನ್ AHO LED ಹೆಡ್‌ಲ್ಯಾಂಪ್‌ಗಳು ಮತ್ತು LED ಟೈಲ್ ಲ್ಯಾಂಪ್‌ಗಳು, ಸೈಡ್ ಸ್ಟ್ಯಾಂಡ್ ಸೆನ್ಸಾರ್ ಇಂಡಿಕೇಟರ್ ಸಹ ಹೊಂದಿದೆ. ಮುಂಭಾಗ ಮತ್ತು ಹಿಂಭಾಗದಲ್ಲಿ 12 - ಇಂಚಿನ ಬದಲಾಯಿಸಬಹುದಾದ ಟ್ಯೂಬ್‌ಲೆಸ್ ಟೈರ್‌ಗಳನ್ನು ನೀಡಲಾಗಿದೆ.
ವೈಶಿಷ್ಟ್ಯಗಳು ಮತ್ತು ಸೌಕರ್ಯ: ಸೀಟ್ ಸ್ಟೋರೇಜ್ ಜಾಗದ ಅಡಿಯಲ್ಲಿ 28 ಲೀಟರ್ ಶೇಕರಣಾ ಸ್ಥಳ, ವಿಶ್ರಾಂತಿ ಮತ್ತು ಸುರಕ್ಷಿತ ಪ್ರಯಾಣಕ್ಕಾಗಿ ಆರಾಮವಾದ ಸೀಟ್, ನ್ಯಾವಿಗೇಶನ್‌ಗಾಗಿ ಬ್ಲೂಟೂತ್ ಸಂಪರ್ಕ, ಗ್ಯಾಸ್ ಸಿಲಿಂಡರ್ ಅನ್ನು ಸಾಗಿಸಲು ಸಾಕಷ್ಟು ವಿಶಾಲವಾದ ಫ್ಲೋರ್ಬೋರ್ಡ್, ಅನುಕೂಲಕರ ಪೆಟ್ಟಿಗೆಯೊಂದಿಗೆ ಸಂಗ್ರಹಣೆಯ ಜಾಗವನ್ನು ಸ್ಕೂಟರ್ ಹೊಂದಿದೆ.

ಇವಿಷ್ಟೇ ಅಲ್ಲದೇ 7.4 ಇಂಚುಗಳ ಡಿಜಿಟಲ್ ಕಲರ್ ಡಿಸ್ಪ್ಲೇ ನೀಡಿದ್ದು, ಇದರಲ್ಲಿ ವಾಹನದ ಮಾಹಿತಿಯೊಂದಿಗೆ ಸರ್ವೀಸ್ ಅಲರ್ಟ್, ಸೈಡ್ ಸ್ಟ್ಯಾಂಡ್ ಸೆನ್ಸರ್, ಬ್ಲೂಟೂತ್ ಕನೆಕ್ಟಿವಿಟಿ, ನ್ಯಾವಿಗೇಷನ್ ಅಸಿಸ್ಟೆಂಟ್, ಇನ್‌ಕಮಿಂಗ್ ಮೆಸೇಜ್ ಅಲರ್ಟ್, ಕಾಲ್ ಅಲರ್ಟ್, ಮೋಡ್‌ನ ಡಿಸ್ಪ್ಲೇ, ರಿವರ್ಸ್ ಇಂಡಿಕೇಟರ್, ಬ್ಯಾಟರಿ SOC ಇಂಡಿಕೇಟರ್, ಥ್ರೊಟಲ್ ಫಾಲ್ಟ್ ಸೆನ್ಸರ್, ಮೋಟಾರ್ ಫಾಲ್ಟ್ ಸೆನ್ಸರ್, ಬ್ಯಾಟರಿ ಎಚ್ಚರಿಕೆಯಂತಹ ಮಾಹಿತಿಯನ್ನು ಪಡೆಯಬಹುದು.
ಕಂಪನಿಯು ದೇಶಾದ್ಯಂತ 74 ಡೀಲರ್‌ಶಿಪ್‌ಗಳೊಂದಿಗೆ ನೆಟ್‌ವರ್ಕ್ ವಿಸ್ತರಣೆಯಲ್ಲಿ ಗಮನಾರ್ಹವಾಗಿ ಹೂಡಿಕೆ ಮಾಡಿದೆ. ಈ ಆರ್ಥಿಕ ವರ್ಷದ ಅಂತ್ಯದ ವೇಳೆಗೆ 100 ಡೀಲರ್‌ಗಳನ್ನು ಹೊಂದುವ ಗುರಿ ಹೊಂದಿದೆ. ಕಂಪನಿಯು ಪ್ರಸ್ತುತ ದೇಶದಲ್ಲಿ Eblu Feo (EV ದ್ವಿಚಕ್ರ ವಾಹನ), Eblu Rozee (EV ಮೂರು-ಚಕ್ರ ವಾಹನ- L5M), Eblu Spin ಮತ್ತು Eblu Thrill (e-bicycle) ಸೈಕಲ್‌ಗಳನ್ನು ಮಾರಾಟ ಮಾಡುತ್ತಿದೆ.


Click it and Unblock the Notifications








