ಮೊದಲೇ ಅಗ್ಗದ ಬೆಲೆ... ಮತ್ತೇ ರಿಯಾಯಿತಿ ಘೋಷಣೆ... ಖರ್ಚಿಲ್ಲದೇ 110 ಕಿ.ಮೀ ಓಡಿಸಬಹುದು!
ಎಲೆಕ್ಟ್ರಿಕ್ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ತಯಾರಕರಾದ ಗೋದಾವರಿ ಎಲೆಕ್ಟ್ರಿಕ್ ಮೋಟಾರ್ಸ್, ಇಂದು ತನ್ನ EV ದ್ವಿಚಕ್ರ ವಾಹನ ಶ್ರೇಣಿಯಲ್ಲಿ ಬರುವ eblu Feo ಮತ್ತು eblu Feo X ಮೇಲೆ ವಿಶೇಷ ಮಾನ್ಸೂನ್ ಕೊಡುಗೆಯನ್ನು ಘೋಷಿಸಿದೆ. ಗ್ರಾಹಕರು ಈಗ ಈ ಎರಡೂ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಯ ಮೇಲೆ ರೂ. 10,000 ವಿಶೇಷ ರಿಯಾಯಿತಿಯನ್ನು ಪಡೆಯಬಹುದು. ರಿಯಾಯಿತಿಯ ಬಳಿಕ eblu Feo X & eblu Feo ಕೇವಲ ರೂ. 89,999 (ಎಕ್ಸ್ ಶೋರೂಂ)ಬೆಲೆಗೆ ಲಭ್ಯವಿದೆ. ಈ ಮೊದಲು ಸ್ಕೂಟರ್‌ಗಳ ಬೆಲೆಯು ರೂ. 99,999(ಎಕ್ಸ್ ಶೋರೂಂ)ಇತ್ತು.
ಮಾನ್ಸೂನ್ ಕೊಡುಗೆಯು 31 ಆಗಸ್ಟ್ ವರೆಗೆ ಮಾನ್ಯವಾಗಿರುತ್ತದೆ. ಈ ಸೀಮಿತ-ಸಮಯದ ಕೊಡುಗೆಯು ಪರಿಸರ ಸ್ನೇಹಿ ಪ್ರಯಾಣವನ್ನು ಹೆಚ್ಚು ಸುಲಭವಾಗಿ ಮತ್ತು ವ್ಯಾಪಕ ಗ್ರಾಹಕರಿಗೆ ಕೈಗೆಟುಕುವಂತೆ ಮಾಡುವ ಗುರಿಯನ್ನು ಹೊಂದಿದೆ. eblu Feo ಮತ್ತು eblu Feo X ದೀರ್ಘಾವಧಿಯ ಬ್ಯಾಟರಿಗಳು, ದಕ್ಷ ಮೋಟಾರ್‌ಗಳು ಮತ್ತು ಒಟ್ಟಾರೆ ಸವಾರಿ ಅನುಭವವನ್ನು ಹೆಚ್ಚಿಸುವ ಸ್ಮಾರ್ಟ್ ವೈಶಿಷ್ಟ್ಯಗಳನ್ನು ಒಳಗೊಂಡಂತೆ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದೆ.

ಈ ಮಾದರಿಗಳನ್ನು ಎಲ್ಲಾ ವಯೋಮಾನದ ಪ್ರಯಾಣಿಕರ ಅಗತ್ಯತೆಗಳನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ. ಅನುಕೂಲತೆ, ಕಾರ್ಯಕ್ಷಮತೆ ಮತ್ತು ಸಮರ್ಥನೀಯತೆಯ ತಡೆರಹಿತ ಮಿಶ್ರಣವನ್ನು ನೀಡುತ್ತದೆ. ಈ ಉತ್ತೇಜಕ ಕೊಡುಗೆಯ ಲಾಭವನ್ನು ಪಡೆಯಲು ಗ್ರಾಹಕರು ದೇಶದಾದ್ಯಂತ ಹತ್ತಿರದ ಗೋದಾವರಿ ಎಲೆಕ್ಟ್ರಿಕ್ ಮೋಟಾರ್ಸ್ ಡೀಲರ್‌ಶಿಪ್‌ಗೆ ಭೇಟಿ ನೀಡಬಹುದು ಎಂದು ಕಂಪನಿ ಹೇಳಿದೆ.
ಸ್ಕೂಟರ್ ವಿಶೇಷತೆಗಳು: ಇದನ್ನು ಒಮ್ಮೆ ಚಾರ್ಜ್ ಮಾಡಿದ್ರೆ 110 ಕಿ.ಮೀ ಓಡಿಸಬಹುದು ಎಂದು ಕಂಪನಿ ಹೇಳಿದೆ. ಸ್ಕೂಟರ್‌ನಲ್ಲಿ 2.36 kW Li-ion ಬ್ಯಾಟರಿಯನ್ನು ಅಳವಡಿಸಲಾಗಿದ್ದು, ಸಂಪೂರ್ಣ ಚಾರ್ಜ್ ಆಗಲು 5 ಗಂಟೆ 25 ನಿಮಿಷ ತೆಗೆದುಕೊಳ್ಳುತ್ತದೆ. ಇದನ್ನು ಚಾರ್ಜ್ ಮಾಡಲು 60V ಸಾಮರ್ಥ್ಯದ ಹೋಮ್ ಚಾರ್ಜರ್ ಅನ್ನು ನೀಡಲಾಗುತ್ತದೆ. ಸ್ಕೂಟರ್ ಮೇಲೆ 3 ವರ್ಷಗಳು ಅಥವಾ 30,000 ಕಿ.ಮೀ ವಾರಂಟಿ ನೀಡಲಾಗುತ್ತಿದೆ.

ಬ್ಯಾಟರಿ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಮತ್ತು ಡ್ರೈವಿಂಗ್ ರೇಂಜ್ ಹೆಚ್ಚಿಸಲು ಪುನರುತ್ಪಾದಕ ಬ್ರೇಕಿಂಗ್ (regenerative braking) ವ್ಯವಸ್ಥೆಯನ್ನು ನೀಡಲಾಗಿದೆ. ಹಾಗೆಯೇ ಸ್ಕೂಟರ್‌ನಲ್ಲಿ ಎಕಾನಮಿ, ನಾರ್ಮಲ್ ಮತ್ತು ಪವರ್ ಎಂಬ ಮೂರು ರೈಡ್ ಮೋಡ್‌ಗಳನ್ನು ಸಹ ನೀಡಲಾಗಿದ್ದು, 60 ಕಿ.ಮೀ ಟಾಪ್ ಸ್ಪೀಡ್ ತಲುಪುವ ಸಾಮರ್ಥ್ಯವನ್ನು ಹೊಂದಿದೆ.
ವೈಶಿಷ್ಟ್ಯಗಳು: ಹೊಸ ಸ್ಕೂಟರ್‌ನಲ್ಲಿ 7.4 ಇಂಚುಗಳ ಡಿಜಿಟಲ್ ಕಲರ್ ಡಿಸ್ಪ್ಲೇ ನೀಡಿದ್ದು, ಇದರಲ್ಲಿ ವಾಹನದ ಮಾಹಿತಿಯೊಂದಿಗೆ ನ್ಯಾವಿಗೇಷನ್ ಅಸಿಸ್ಟೆಂಟ್, ಇನ್‌ಕಮಿಂಗ್ ಮೆಸೇಜ್ ಅಲರ್ಟ್, ಸರ್ವೀಸ್ ಅಲರ್ಟ್, ಸೈಡ್ ಸ್ಟ್ಯಾಂಡ್ ಸೆನ್ಸರ್, ಬ್ಲೂಟೂತ್ ಕನೆಕ್ಟಿವಿಟಿ, ಕಾಲ್ ಅಲರ್ಟ್, ಬ್ಯಾಟರಿ SOC ಇಂಡಿಕೇಟರ್, ಮೋಡ್‌ನ ಡಿಸ್ಪ್ಲೇ, ರಿವರ್ಸ್ ಇಂಡಿಕೇಟರ್, ಥ್ರೊಟಲ್ ಫಾಲ್ಟ್ ಸೆನ್ಸರ್, ಮೋಟಾರ್ ಫಾಲ್ಟ್ ಸೆನ್ಸರ್‌ನಂತಹ ಮಾಹಿತಿಯನ್ನು ಪಡೆಯಬಹುದು.

ಸೀಟ್ ಸ್ಟೋರೇಜ್ ಜಾಗದ ಅಡಿಯಲ್ಲಿ 28 ಲೀಟರ್ ಶೇಕರಣಾ ಸ್ಥಳ, ನ್ಯಾವಿಗೇಶನ್‌ಗಾಗಿ ಬ್ಲೂಟೂತ್ ಸಂಪರ್ಕ, ವಿಶ್ರಾಂತಿ ಮತ್ತು ಸುರಕ್ಷಿತ ಪ್ರಯಾಣಕ್ಕಾಗಿ ಆರಾಮವಾದ ಸೀಟ್, ಅನುಕೂಲಕರ ಪೆಟ್ಟಿಗೆಯೊಂದಿಗೆ ಸಂಗ್ರಹಣೆಯ ಜಾಗ, ಗ್ಯಾಸ್ ಸಿಲಿಂಡರ್ ಅನ್ನು ಸಾಗಿಸಲು ಸಾಕಷ್ಟು ವಿಶಾಲವಾದ ಫ್ಲೋರ್ಬೋರ್ಡ್ ಅನ್ನು ಸ್ಕೂಟರ್ ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








