ಆಫೀಸ್‌ಗೆ ಹೋಗಲು ಅತ್ಯುತ್ತಮ ಸ್ಕೂಟರ್‌ಗಳಿವು.. ಕೈಗೆಟುಕುವ ಬೆಲೆ, ಭಾರೀ ಮೈಲೇಜ್!

ಪ್ರತಿನಿತ್ಯ ಕೆಲಸಕ್ಕೆ ತೆರಳುವವರಿಗೆ ದ್ವಿಚಕ್ರ ವಾಹನಗಳು ತೀರಾ ಅನಿವಾರ್ಯವಾಗಿವೆ. ಬೈಕ್‌ಗಳಿಗೆ ಹೋಲಿಕೆ ಮಾಡಿದರೆ, ಸ್ಕೂಟರ್‌ಗಳು 'ಗೇರ್ ಲೆಸ್' ಆಗಿರುವುದರಿಂದ ಮಹಿಳೆಯರು ಹಾಗೂ ಪುರುಷರಿಗೆ ಸರಿ ಹೊಂದುತ್ತವೆ. ನೀವು ಕಚೇರಿಗೆ ಹೋಗಲು ಮತ್ತು ದಿನನಿತ್ಯದ ಬಳಕೆಗಾಗಿ ಕೈಗೆಟುಕುವ ಬೆಲೆ.. ಆಕರ್ಷಕ ವೈಶಿಷ್ಟ್ಯ ಹೊಂದಿರುವ ಸ್ಕೂಟರ್‌ವೊಂದನ್ನು ಖರೀದಿಸಲು ಯೋಚಿಸುತ್ತಿದ್ದೀರಾ.. ಹಾಗಾದರೆ ಹೀರೋ ಡೆಸ್ಟಿನಿ 125, ಹೋಂಡಾ ಆಕ್ಟಿವಾ 125 ಮತ್ತು ಸುಜುಕಿ ಆಕ್ಸೆಸ್ 125 ಮಾದರಿಗಳು ಉತ್ತಮ ಆಯ್ಕೆಯಾಗಲಿವೆ. ನಾವಿಲ್ಲಿ ನೂತನ ಸ್ಕೂಟರ್‌ಗಳ ವಿಶೇಷತೆ ಬಗ್ಗೆ ಸಂಪೂರ್ಣವಾಗಿ ತಿಳಿಸಿಕೊಟ್ಟಿದ್ದೇವೆ.

ಮೊದಲಿಗೆ ಹೀರೋ ಡೆಸ್ಟಿನಿ 125 (Hero Destini 125) ಸ್ಕೂಟರ್ ಕುರಿತಂತೆ ಮಾತನಾಡೋಣ. ಇದು ರೂ.81,718 ದಿಂದ ರೂ.87,518 ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಸಿಗುತ್ತದೆ. 124.6 ಸಿಸಿ ಸಿಂಗಲ್ ಸಿಲಿಂಡರ್ ಏರ್-ಕೋಲ್ಡ್ ಪೆಟ್ರೋಲ್ ಎಂಜಿನ್ ಪಡೆದಿದ್ದು, 9.12 ಪಿಎಸ್ ಗರಿಷ್ಠ ಶಕ್ತಿ (ಪವರ್) ಹಾಗೂ 10.4 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ.

Good Scooters For Office Going People Honda Activa 125 Hero Destini 125 Suzuki Access 125

ಈ ಡೆಸ್ಟಿನಿ 125 ಸ್ಕೂಟರ್ 50 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಯುಎಸ್‌‍ಬಿ ಚಾರ್ಜಿಂಗ್ ಪೋರ್ಟ್, ಬೂಟ್ ಲ್ಯಾಂಪ್, ಎಲ್ಇಡಿ ಹೆಡ್‌ಲ್ಯಾಂಪ್ ಮತ್ತು ಸೈಡ್ ಸ್ಟ್ಯಾಂಡ್ ಎಂಜಿನ್ ಕಟ್-ಆಫ್‍ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ ಡಿಸ್ಕ್ & ಡ್ರಮ್ ಬ್ರೇಕ್‌ನ್ನು ಪಡೆದಿದೆ. 10-ಇಂಚಿನ ಅಲಾಯ್ ವೀಲ್‌ಗಳು ಹಾಗೂ ಟ್ಯೂಬ್‌ಲೆಸ್ ಟೈರ್‌ಗಳನ್ನು ಒಳಗೊಂಡಿದೆ.

ಹೋಂಡಾ ಆಕ್ಟಿವಾ 125 (Honda Activa 125) ಜನಪ್ರಿಯ ಸ್ಕೂಟರ್ ಆಗಿದೆ. ರೂ.83,084 ದಿಂದ ರೂ.92,257 ಎಕ್ಸ್ ಶೋರೂಂ ದರವನ್ನು ಹೊಂದಿದೆ. 124 ಸಿಸಿ ಏರ್-ಕೋಲ್ಡ್ ಸಿಂಗಲ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 8.3 ಪಿಎಸ್ ಗರಿಷ್ಠ ಶಕ್ತಿ (ಪವರ್) ಮತ್ತು 10.4 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ.

Good Scooters For Office Going People Honda Activa 125 Hero Destini 125 Suzuki Access 125

ಹೊಚ್ಚ ಹೊಸ ಹೋಂಡಾ ಆಕ್ಟಿವಾ 60 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಎಲ್‌ಇಡಿ ಹೆಡ್‌ಲೈಟ್, ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಒಳಗೊಂಡಂತೆ ಹಲವು ಗಳು ಇದರಲ್ಲಿವೆ. ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆ ಒದಗಿಸಲು ಡಿಸ್ಕ್ ಬ್ರೇಕ್‌ನ್ನು ಹೊಂದಿದೆ. 109 ಕೆಜಿ ತೂಕವಿರುವ ಈ ಸ್ಕೂಟರ್, 5.3 ಲೀಟರ್ ಸಾಮರ್ಥ್ಯದ ಫ್ಯುಯೆಲ್ (ಇಂಧನ) ಟ್ಯಾಂಕ್‌ನ್ನು ಪಡೆದಿದೆ.

ಸುಜುಕಿ ಆಕ್ಸೆಸ್ 125 (Suzuki Access 125) ಸ್ಕೂಟರ್ ಕುರಿತಂತೆ ಹೇಳುವುದಾದರೆ, ಇದು ರೂ.82,586 ದಿಂದ ರೂ.94,082 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 124 ಸಿಸಿ ಸಿಂಗಲ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಪಡೆದಿದ್ದು, 8.7 ಪಿಎಸ್ ಗರಿಷ್ಠ ಶಕ್ತಿ (ಪವರ್) ಹಾಗೂ 10 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ.

Good Scooters For Office Going People Honda Activa 125 Hero Destini 125 Suzuki Access 125

ಈ ಸ್ಕೂಟರ್ 45 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಎಲ್ಇಡಿ ಹೆಡ್ ಲೈಟ್, ಸೆಮಿ-ಡಿಜಿಟಲ್ ಇನ್ಫಾರ್ಮಶನ್ ಪ್ಯಾನೆಲ್, ಸುಜುಕಿ ರೈಡ್ ಕನೆಕ್ಟ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಫ್ರಂಟ್ (ಮುಂಭಾಗ) ಟೆಲಿಸ್ಕೋಪಿಕ್ ಫೋರ್ಕ್ ಸಸ್ಪೆನ್ಷನ್ ಸೆಟಪ್ ಪಡೆದಿದ್ದು, ಸುರಕ್ಷತೆಗಾಗಿ ಡಿಸ್ಕ್/ ಡ್ರಮ್ ಬ್ರೇಕ್ ಆಯ್ಕೆಯನ್ನು ಒಳಗೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, July 23, 2024, 9:31 [IST]
English summary
Good scooters for office going people honda activa 125 hero destini 125 suzuki access 125
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+