ಹಳ್ಳಿ - ದಿಲ್ಲಿಗೂ ಬೆಸ್ಟ್.. 70 Km ಮೈಲೇಜ್.. 65,000ಕ್ಕಿಂತ ಕಡಿಮೆ ಬೆಲೆಗೆ ಸಿಗುವ ಟೂ ವೀಲರ್‌ಗಳಿವು!
ನಗರ ಪ್ರದೇಶವೇ ಇರಲಿ.. ಹಳ್ಳಿಗಾಡೇ ಇರಲಿ.. ದಿನನಿತ್ಯದ ಬಳಕೆಗೆ ದ್ವಿಚಕ್ರ ವಾಹನಗಳು ತೀರಾ ಅನಿವಾರ್ಯವಾಗಿವೆ. ಪ್ರತಿಯೊಂದು ಕೆಲಸಕ್ಕೂ ಬೈಕ್ ಹಾಗೂ ಸ್ಕೂಟರ್‌ಗಳು ಬೇಕೇ ಬೇಕು. ಆದರೆ, ಹಲವರ ಬಳಿ ದುಬಾರಿ ಬೆಲೆಯ ದ್ವಿಚಕ್ರ ವಾಹನಗಳನ್ನು ಖರೀದಿಸುವಷ್ಟು ಹಣವಿರುವುದಿಲ್ಲ. ನಾವಿಲ್ಲಿ 65,000ಕ್ಕಿಂತ ಕಡಿಮೆ ಬೆಲೆಗೆ ಲಭ್ಯವಿರುವ ಜನಪ್ರಿಯ ಹೀರೋ ಹೆಚ್ಎಫ್ ಡಿಲಕ್ಸ್, ಟಿವಿಎಸ್ ಸ್ಕೂಟಿ ಪೆಪ್ ಪ್ಲಸ್, ಹೋಂಡಾ ಶೈನ್ 100 ಮತ್ತು ಟಿವಿಎಸ್ ಎಕ್ಸ್ಎಲ್ 100ಗಳ ಬಗ್ಗೆ ಸಂಪಕ್ಷಿಪ್ತವಾಗಿ ವಿವರಿಸಿದ್ದೇವೆ.
ಮೊದಲಿಗೆ ಹೀರೋ ಹೆಚ್ಎಫ್ ಡಿಲಕ್ಸ್ (Hero HF Deluxe) ಕುರಿತಂತೆ ಮಾತನಾಡೋಣ. ಈ ಮೋಟಾರ್‌ಸೈಕಲ್ ರೂ.62,218 ದಿಂದ ರೂ.69,848 ಎಕ್ಸ್ ಶೋರೂಂ ಬೆಲೆಯಲ್ಲಿ ಸಿಗುತ್ತದೆ. ಇದು 97.2 ಸಿಸಿ ಪೆಟ್ರೋಲ್ ಎಂಜಿನ್ ಹೊಂದಿದ್ದು, 8.02 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 8.05 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ 4-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ.

ಈ ಬೈಕ್, 70 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಅನಲಾಗ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಐಡಲ್ ಸ್ಟಾಪ್/ ಸ್ಟಾರ್ಟ್ ಸಿಸ್ಟಮ್ ಸೇರಿದಂತೆ ವೈಶಿಷ್ಟ್ಯಗಳನ್ನು ಹೊಂದಿದೆ. ಸ್ಪೋರ್ಟ್ಸ್ ರೆಡ್ ಬ್ಲ್ಯಾಕ್, ಬ್ಲ್ಯಾಕ್ ನೆಕ್ಸಸ್ ಬ್ಲೂ ಮತ್ತು ಕ್ಯಾಂಡಿ ಬ್ಲೇಜಿಂಗ್ ರೆಡ್ ಒಳಗೊಂಡಂತೆ ಹಲವು ಬಣ್ಣಗಳ (ಕಲರ್) ಆಯ್ಕೆಯಲ್ಲಿಯೂ ಸಿಗುತ್ತದೆ. ಸುರಕ್ಷತೆಗಾಗಿ ಡ್ರಮ್ ಬ್ರೇಕ್‌ಗಳನ್ನು ಪಡೆದಿದೆ.
ಟಿವಿಎಸ್ ಸ್ಕೂಟಿ ಪೆಪ್ ಪ್ಲಸ್ (TVS Scooty Pep Plus) ಜನಪ್ರಿಯ ಸ್ಕೂಟರ್ ಆಗಿದ್ದು, ಮಹಿಳೆಯರಿಗೆ ಹೆಚ್ಚು ಸೂಕ್ತವಾಗಿದೆ. ರೂ.63,060 ದಿಂದ ರೂ.66,160 (ಎಕ್ಸ್ ಶೋರೂಂ) ದರವನ್ನು ಒಳಗೊಂಡಿದೆ. 87.8 ಸಿಸಿ ಪೆಟ್ರೋಲ್ ಎಂಜಿನ್ ಪಡೆದಿದ್ದು, 5.43 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 6.5 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯ ಹೊಂದಿದೆ.

ನೂತನ ಟಿವಿಎಸ್ ಸ್ಕೂಟಿ ಪೆಪ್ ಪ್ಲಸ್ ಸ್ಕೂಟರ್ 50 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಅನಲಾಗ್ ಇನ್ಸ್ಟ್ರುಮೆಂಟ್ ಕನ್ಸೋಲ್, ಸೈಡ್ ಸ್ಟ್ಯಾಂಡ್ ಅಲಾರಾಂ ಮತ್ತು ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಮುಂಭಾಗ (ಫ್ರಂಟ್) & ಹಿಂಭಾಗ (ರೇರ್) ಡ್ರಮ್ ಬ್ರೇಕ್‌ಗಳನ್ನು ಒಳಗೊಂಡಿದೆ.
ಹೋಂಡಾ ಶೈನ್ 100 (Honda Shine 100) ಶ್ರೀಸಾಮಾನ್ಯರ ನೆಚ್ಚಿನ ಬೈಕ್ ಎಂದೇ ಹೆಸರುವಾಸಿಯಾಗಿದೆ. ಇದು ರೂ.66,600 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 98.98 ಸಿಸಿ ಸಾಮರ್ಥ್ಯದ ಪೆಟ್ರೋಲ್ ಎಂಜಿನ್ ಪಡೆದಿದ್ದು, 7.38 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 8.05 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 55 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.

ಕಡೆಯದಾಗಿ ಟಿವಿಎಸ್ ಎಕ್ಸ್ಎಲ್ 100 (TVS XL100) ಬಗ್ಗೆ ಹೇಳುವುದಾದರೆ, ಈ ಮೊಪೆಡ್ ರೂ.44,999 ದಿಂದ ರೂ.59,014 ಎಕ್ಸ್ ಶೋರೂಂ ದರವನ್ನು ಪಡೆದಿದೆ. 99.7 ಸಿಸಿ ಪೆಟ್ರೋಲ್ ಎಂಜಿನ್ ಹೊಂದಿದ್ದು, 4.35 ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 6.5 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. 80 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications