ಅಗ್ಗದ ಬೆಲೆಯ ಹಾರ್ಲೆ-ಡೇವಿಡ್ಸನ್ ಬೈಕ್ ಮತ್ತಷ್ಟು ಕಲರ್‌ಫುಲ್: ರಾಯಲ್ ಎನ್‌ಫೀಲ್ಡ್‌ಗೆ ಉಳಿಗಾಲವಿಲ್ಲ!
ಬಹುಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹಾರ್ಲೆ-ಡೇವಿಡ್ಸನ್ ತನ್ನ ಬಹುನಿರೀಕ್ಷಿತ ಹೊಸ ಹಾರ್ಲೆ-ಡೇವಿಡ್ಸನ್ X440 (Harley Davidson X440) ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿದೆ. ಈ ಹೊಸ ಹಾರ್ಲೆ-ಡೇವಿಡ್ಸನ್ X440 ಬೈಕ್ ಆಕರ್ಷಕ ಬೆಲೆಯಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡು ಹೊಸ ಸಂಚಲನವನ್ನು ಸೃಷ್ಟಿಸಿದೆ. ಅಲ್ಲದೇ ಹಾರ್ಲೆ-ಡೇವಿಡ್ಸನ್ ಬೈಕ್ ಅನ್ನು ಖರೀದಿಸಲು ಇಷ್ಟಪಡದ ಯುವಕರು ಇರುವುದಿಲ್ಲ. 90s ಕಿಡ್ಸ್ ಮೆಚ್ಚಿನ ಬೈಕ್ ಕೇಳಿದ್ರೆ ಹೆಚ್ಚಿನವರ ಉತ್ತರ ಹಾರ್ಲೆ-ಡೇವಿಡ್ಸನ್ ಬೈಕ್ ಆಗಿರುತ್ತದೆ. ಇದೀಗ ಹಾರ್ಲೆ-ಡೇವಿಡ್ಸನ್ X440 ಬೈಕ್ ಪ್ರಿಯರಿಗೆ X440 ಬೈಕ್ ಉತ್ತಮ ಆಯ್ಕೆಯಾಗಿದೆ.
ಹಾರ್ಲೆ-ಡೇವಿಡ್ಸನ್ X440 ಈಗ ಮೂರು ಹೊಸ ಬಣ್ಣಗಳ ಆಯ್ಕೆಗಳನ್ನು ಪಡೆದುಕೊಂಡಿವೆ. ಈ ಹಾರ್ಲೆ-ಡೇವಿಡ್ಸನ್ X440 ವಿವಿಡ್ ರೂಪಾಂತರವು ಮಸ್ಟರ್ಡ್ ಬಣ್ಣವನ್ನು ಪಡೆಯುತ್ತದೆ. ಇದಕ್ಕೂ ಮೊದಲು ಬೇಸ್ ಡೆನಿಮ್ ರೂಪಾಂತರವನ್ನು ಮಾತ್ರ ನೀಡಲಾಯಿತು. ವಿವಿಡ್ ರೂಪಾಂತರಕ್ಕಾಗಿ ಹೊಸ ಗೋಲ್ಡ್ ಫಿಶ್ ಸಿಲ್ವರ್ ಕಲರ್ ಸ್ಕೀಮ್ ಕೂಡ ಇದೆ. ಇನ್ನು ಹಾರ್ಲೆ-ಡೇವಿಡ್ಸನ್ ಈಗ ಈ ರೂಪಾಂತರದೊಂದಿಗೆ 3D ಟ್ಯಾಂಕ್ ಮೆಡಾಲಿಯನ್ ಅನ್ನು ಸಹ ನೀಡುತ್ತಿದೆ.

ಇನ್ನು ಟಾಪ್-ಎಂಡ್ ಎಸ್ ರೂಪಾಂತರವು ಹೊಸ ಬಜಾಜ್ ಆರೆಂಜ್ ಬಣ್ಣದ ಸ್ಕೀಮ್ ಅನ್ನು ಸಹ ಪಡೆಯುತ್ತದೆ. ಇದನ್ನು ಹೊರತುಪಡಿಸಿ ಹಾರ್ಲೆ-ಡೇವಿಡ್ಸನ್ X440 ಬೈಕಿನಲ್ಲಿ ಯಾವುದೇ ಬದಲಾವಣೆಗಳಿಲ್ಲ. ಹೊಸ ಹಾರ್ಲೆ-ಡೇವಿಡ್ಸನ್ X440 (Harley-Davidson X440) ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.2.39 ಲಕ್ಷವನ್ನು ಹೊಂದಿದೆ. ಹಾರ್ಲೆ-ಡೇವಿಡ್ಸನ್ X440 ಬೈಕ್ 3 ವಿಭಿನ್ನ ರೂಪಾಂತರಗಳಲ್ಲಿ ಲಭ್ಯವಿದ್ದು, ಇದು ಡೆನಿಮ್, ವಿವಿಡ್ ಮತ್ತು ಎಸ್ ಆಗಿದೆ.
ಇದರಲ್ಲಿ ಈ ರೂಪಾಂತರಗಳಲ್ಲಿ, 'ಡೆನಿಮ್' ಮೂಲ ರೂಪಾಂತರವಾಗಿದೆ, ಆದರೆ 'S' ಟಾಪ್ ರೂಪಾಂತರವಾಗಿದೆ. ಈ ದ್ವಿಚಕ್ರ ವಾಹನದ ಪ್ರಮುಖ ಹೀರೋ ಮೋಟೋಕಾರ್ಪ್ ತನ್ನ ಮೊದಲ ಸಹ-ಅಭಿವೃದ್ಧಿಪಡಿಸಿದ ಪ್ರೀಮಿಯಂ ಬೈಕ್ ಹಾರ್ಲೆ-ಡೇವಿಡ್ಸನ್ X440 ಆಗಿದೆ. ಈ ಬೈಕ್ ಅನ್ನು ಈಗಾಗಲೇ ಬೈಕ್ ಪ್ರಿಯರ ಗಮನ ಸೆಳೆದಿದೆ. ಈ ಹಾರ್ಲೆ-ಡೇವಿಡ್ಸನ್ X440 ಬೈಕಿನಲ್ಲಿ ಸಿಂಗಲ್-ಸಿಲಿಂಡರ್, ಆಯಿಲ್-ಕೂಲ್ಡ್, 440cc ಎಂಜಿನ್ ಅನ್ನು ಹೊಂದಿದೆ.

ಈ ಎಂಜಿನ್ ಸರಿಸುಮಾರು 27 bhp ಪವರ್ ಮತ್ತು 38 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಇನ್ನು ಹಾರ್ಲೆ-ಡೇವಿಡ್ಸನ್ X440 ಬೈಕ್ ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಹಾರ್ಲೆ-ಡೇವಿಡ್ಸನ್ X440 ಬೈಕಿನಲ್ಲಿ ದೊಡ್ಡ ಮಸ್ಕಲರ್ ಫ್ಯೂಯಲ್ ಟ್ಯಾಂಕ್ ಮತ್ತು ನಯವಾದ ಟೇಲ್ ವಿಭಾಗದೊಂದಿಗೆ ಸುಂದರವಾಗಿ ಕಾಣುತ್ತದೆ.
ಹೆಚ್ಚುವರಿಯಾಗಿ, ಈ ಬೈಕ್ ನ್ಯೂ-ರೆಟ್ರೊ ಲುಕ್ ನೀಡಲು ವೃತ್ತಾಕಾರದ ವಿನ್ಯಾಸದ ಅಂಶಗಳನ್ನು ಕೂಡಿದೆ. ಹಾರ್ಲೆ-ಡೇವಿಡ್ಸನ್ X440ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಎಲ್‌ಇಡಿ ಟೈಲ್‌ಲ್ಯಾಂಪ್ ಗಳನ್ನು ಒಳಗೊಂಡಿವೆ. ಇದರೊಂದಿಗೆ ಹೊಸ ಹಾರ್ಲೆ-ಡೇವಿಡ್ಸನ್ X440 ಬೈಕಿನ LED ಲೈಟಿಂಗ್, ಆಂಬಿಯೆಂಟ್ ಲೈಟ್ ಸೆನ್ಸರ್‌ನೊಂದಿಗೆ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಬ್ಲೂಟೂತ್ ಕನೆಕ್ಟಿವಿಟಿ ಮತ್ತು ಹೆಚ್ಚಿನ ಫೀಚರ್ಸ್ ಗಳನ್ನು ಹೊಂದಿವೆ.

ಇತರ ಗಮನಾರ್ಹ ಫೀಚರ್ಸ್ ಗಳು ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಕಾಲ್, ಮ್ಯೂಸಿಕ್ ಕಂಟ್ರೋಲ್ ಮತ್ತು ಗೇರ್ ಸ್ಥಾನವನ್ನು ಪ್ರದರ್ಶಿಸಲಾಗುತ್ತದೆ.ಇನ್ನು ಹೊಸ ರಾಯಲ್ ಎನ್‌ಫೀಲ್ಡ್ ಗೆರಿಲ್ಲಾ 450 ಬಿಡುಗಡೆಯೊಂದಿಗೆ, ಹಾರ್ಲೆ-ಡೇವಿಡ್‌ಸನ್‌ನ ಮಾರಾಟವು ಇನ್ನಷ್ಟು ಕುಸಿಯುತ್ತದೆ ಎಂದು ಬ್ರ್ಯಾಂಡ್ ಡಿಸ್ಕೌಂಟ್ ಅನ್ನು ಇತ್ತೀಚೆಗೆ ಘೋಷಿಸಿದ್ದರು. ಇದೀಗ ಹೆಚ್ಚಿನ ಬಣ್ಣಗಳ ಆಯ್ಕೆ ಮೂಲಕ ಗ್ರಾಹರಕರನ್ನು ಸೆಳೆಯುತ್ತಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಲು ಮರೆಯದಿರಿ.


Click it and Unblock the Notifications








